ಬಿಂದುಗಳನ್ನು ಜೋಡಿಸುವುದಕ್ಕೆ ಒಂದಷ್ಟು ಸಮಯ ಕಾಯಬೇಕು. ಕೆಲವೊಂದು ಸಲ ಸಂಬಂಧದ ಬಿಂದುಗಳನ್ನು ನಾವೇ ನಮಗನ್ನಿಸಿದ ಹಾಗೆ ಜೋಡಿಸಿ ಬಿಡುತ್ತೇವೆ. ಆನಂತರ ನಮಗೆ ಬೇಕಾದ ರೇಖಾಚಿತ್ರಗಳನ್ನು ಚಿತ್ರಿಸಿಕೊಳ್ಳುತ್ತೇವೆ. ಆದರೆ ಆ ಚಿತ್ರ ನಿಜವೋ ಸುಳ್ಳೋ…
ಇದುವರೆಗೂ ಯಮ ಮತ್ತು ನಿಯಮದ ಉಪ ಅಂಗಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಇದರ ಅನುಷ್ಠಾನದಿಂದಾಗುವ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಈ ದಿನ ಯಮದ ಉಪಾಂಗಗಳ ಅನುಷ್ಠಾನದಿಂದ ಆಗುವ ಅಹಿಂಸೆ, ಸತ್ಯ ಮತ್ತು ಅಸ್ತೇಯ ಫಲಗಳ ಬಗ್ಗೆ ತಿಳಿದುಕೊಳ್ಳೋಣ. …
ಮೌನ
ಹೀಗೆಯೇ ಎಂದೂ ಹೇಳಬರುವುದಿಲ್ಲ
ಒಳಗಿನ ಗೂಡಾರ್ಥ ಅರಿವಾಗುವುದೂ ಇಲ್ಲ !
ಹಲ ಕೆಲವರ ನಡೆ ನುಡಿಗಳೇ
ಮೌನಕೂ ನಿಲುಕದ ಉತ್ತರಗಳು
ಶಬ್ದ ಅರ್ಥಗಳ ನಡುವೆ
ಹುದುಗಿರುವ ನಿಶಬ್ದಗಳು !
ಬಯಸಿದಾಗ ಹತ್ತಿರ ಬರುವ ಮನುಜರು,
ಕೆಲಸವಾಯಿತೋ ದೂರ…
"ಬಸವಣ್ಣನವರಿಗೂ ಪುರುಷ ಅಹಂಕಾರ ಮೀರಲು ಸಾಧ್ಯವಾಗಲಿಲ್ಲ ..." ಎಂಬ ಲೇಖಕಿಯೊಬ್ಬರ ಭಾಷಣದ ಮಾತುಗಳು ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾವುದೇ ವ್ಯಕ್ತಿಯೂ ಪರಿಪೂರ್ಣರಲ್ಲ, ಯಾವುದೇ ಸಿದ್ಧಾಂತವೂ ಪರಿಪೂರ್ಣವಲ್ಲ. ಕಾಲದ ಪರಿಸ್ಥಿತಿಗೆ…
ಟೊಮೇಟೋ ಹೆಚ್ಚಿ ಬೇಯಿಸಿಕೊಳ್ಳಿ, ಇದಕ್ಕೆ ಸ್ವಲ್ಪ ಎಣ್ಣೆಯಲ್ಲಿ ಹುರಿದ ಉದ್ದಿನ ಬೇಳೆ, ಮೆಣಸು, ಎಳ್ಳು, ಸಾಸಿವೆ ೧/೪ ಚಮಚ ಹಾಕಿ ಕಾಯಿತುರಿ ಉಪ್ಪು ಸೇರಿಸಿ ನೀರು ಹಾಕದೇ ರುಬ್ಬಿಕೊಳ್ಳಿ. ಇದಕ್ಕೆ ಎಣ್ಣೆ ಉದ್ದಿನ ಬೇಳೆ, ಸಾಸಿವೆ ಬೆಳ್ಳುಳ್ಳಿ,…
ಹಣತೆಗಳೆಲ್ಲ ಮನೆಯಿಂದ ಹೊರ ಬಂದವು. ಇಷ್ಟು ದಿನದವರೆಗೆ ತಮ್ಮ ಆಗಮನಕ್ಕಾಗಿ ಎದುರು ನೋಡುತ್ತಿದ್ದ ದಿನ ಬಂದಿರಲಿಲ್ಲ. ವರ್ಷವಾಯಿತೋ ಏನು ಮನೆಯಿಂದ ಹೊರ ಬರದೆ. ಬರಿಯ ಕತ್ತಲೆಯೊಳಗೆ ಕುಳಿತಿದ್ದವರಿಗೆ ಬೆಳಕನ್ನು ಬೀರುವ ಸಂತಸದ ಗಳಿಗೆ ಕೂಡಿ ಬಂತು…
ತರಗತಿಯಲ್ಲಿ ಬರೆಸುವಾಗ, "ಮಕ್ಕಳೇ, ಹೇಳಿಕೊಂಡು ಬರೆಯಿರಿ, ತಪ್ಪಿಲ್ಲದೇ ಬರೆಯಿರಿ, ದುಂಡಾಗಿ ಬರೆಯಿರಿ," ಎಂದು ಸಾರಿ ಸಾರಿ ಹೇಳುವುದು, ಶಿಕ್ಷಕರಿಗೆ ಬಾಯಿಪಾಠವೇ ಸರಿ. ಅಂತೆಯೇ ನಾನೂ ಕೂಡ ಹೀಗೆ ಹೇಳಿ ಬರೆಸಿ, ನಂತರ ಪುಸ್ತಕ ತಿದ್ದುವಾಗ, ಒಂದು…
ಮೂತ್ರೀ ಮನೆ
ಮುಸ್ಸಂಜೆ ಸಮಯ. ಅಜ್ಜ, ಅಜ್ಜಿ ತಮ್ಮ ಎರಡು ವರ್ಷದ ಮೊಮ್ಮಗನೊಂದಿಗೆ ಮನೆಯ ಜಗುಲಿ ಮೇಲೆ ಕುಳಿತಿದ್ದರು. ಆಗ ಪಕ್ಕದ ಮನೆಯಲ್ಲಿದ್ದ ಮತ್ತೊಂದು ಅಜ್ಜಿ, ಈ ಅಜ್ಜಿಯನ್ನು ಕರೆದರು. ಮೊಮ್ಮಗನಿಗೆ ‘ಪುಟ್ಟಾ, ಇಲ್ಲೇ ಅಜ್ಜನ ಜೊತೆ ಆಡ್ತಿರು…
ಬೆಳಕಿನ ಹಬ್ಬ ದೀಪಾವಳಿಯ ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹೂವು-ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳ ಬೆಲೆ ಮುಗಿಲು ಮುಟ್ಟಿರುವುದರ ಬಗೆಗಿನ ವರದಿಗಳನ್ನು ನೀವು ಈಗಾಗಲೇ ಓದಿರಬಹುದು. ಬೇಡಿಕೆ ಮತ್ತು ಪೂರೈಕೆಗಳ ನಡುವೆ ಅಂತರ ಹೆಚ್ಚಾದಾಗ,…
ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕದ ಜನ ಬಹಳ ಬುದ್ದಿವಂತರು - ಒಳ್ಳೆಯವರು, ಕನ್ನಡ ಭಾಷೆ ವಿಶ್ವ ಶ್ರೇಷ್ಠ, ಕನ್ನಡ ಇತಿಹಾಸ ಅದ್ಬುತ, ಕನ್ನಡ ಸಂಸ್ಕೃತಿ ವಿಶ್ವ ಮಾನ್ಯ, ಕನ್ನಡ ನೆಲದಲ್ಲಿ ಬಸವಣ್ಣ, ಕುವೆಂಪು, ಕೆಂಪೇಗೌಡ, ಕನಕ, ಪುರಂದರ…
ಮೋಡ ಮತ್ತು ಗಾಳಿಗೆ ಮಾತುಕತೆ ಶುರುವಾಗಿತ್ತು. ಸರಸದ ಮಾತುಕತೆ ವಿರಸದ ಕಡೆಗೆ ತಿರುಗಿತ್ತು. ಈ ಇಬ್ಬರಿಗೂ ಒಂದಷ್ಟು ಅಹಂ ತುಂಬಿಕೊಂಡಿತ್ತು. ಜನ ನೆಮ್ಮದಿಯಲ್ಲಿದ್ದಾರೆ ಊರು ಬದುಕಿದೆ ಭೂಮಿ ಉಸಿರಾಡುತ್ತಿದೆ ಇದಕ್ಕೆಲ್ಲಾ ನಾನೇ ಕಾರಣ ಅನ್ನೋದು…
ಬೆಂಗಳೂರು ಪೊಲೀಸರು ಬಳಸುತ್ತಿರುವ ಫೇಶಿಯಲ್ ರೆಕಗ್ನಿಷನ್ ಸಾಫ್ಟ್ ವೇರ್ [Facial Recognition Software] ಕಳೆದ 90 ದಿನಗಳಲ್ಲಿ ನಗರದಾದ್ಯಂತ 2.5 ಲಕ್ಷ ಅಪರಾಧ ಹಿನ್ನೆಲೆಯುಳ್ಳ ಚಹರೆಗಳನ್ನು ಗುರುತಿಸಿ, ಕನಿಷ್ಠ 10 ಅಪರಾಧಿಗಳನ್ನು…
ಬಿರು ಬೇಸಗೆಯ ಎಪ್ರಿಲ್, ಮೇ ತಿಂಗಳಿನಲ್ಲಿ ಗರಿಬಿಚ್ಚಿ ಕುಣಿಯುವ ನೀಲವರ್ಣದ ನವಿಲನ್ನು ನೀವೆಲ್ಲ ನೋಡಿರುತ್ತೀರಿ.. ನೀಲ ಗಗನದಲಿ ಮೇಘಗಳಾ ಕಂಡಾಗಲೆ ನಾಟ್ಯವ, ನವಿಲು ಕುಣಿಯುತಿದೆ ನೋಡ... ಎಂಬ ಸುಂದರವಾದ ಹಾಡನ್ನು ನೀವೆಲ್ಲ ಕೇಳಿರಬಹುದು.…
ಬೆಂಕಿಯಿಂದ ದೇಹ, ಮನಸ್ಸು ಮತ್ತು ಪರಿಸರ ಸುಡಬಾರದು. ಪಟಾಕಿ… ಎಲ್ಲಾ ರೀತಿಯ ಎಲ್ಲಾ ಸಂದರ್ಭದ ಪರಿಸರಕ್ಕೆ ಹಾನಿಯಾಗುವ ಪಟಾಕಿ ನಿಷೇಧಿಸಬೇಕು. ಇದು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ ವರ್ಷದ ಎಲ್ಲಾ ಹಬ್ಬಗಳಿಗೂ, ಎಲ್ಲಾ ಧಾರ್ಮಿಕ, ರಾಜಕೀಯ,…
ಪೊರಕೆ ಹುಡುಕುತ್ತಿದ್ದೇನೆ, ಎಲ್ಲಿಯೂ ಸಿಗುತ್ತಿಲ್ಲ. ಎಲ್ಲಾ ಅಂಗಡಿಯ ಮುಂದೆ ನಿಂತು ಅಲ್ಲಿದ್ದ ಮುಖ್ಯಸ್ಥರಲ್ಲಿ ವಿಚಾರಿಸಿದ್ದೇನೆ. ಅವರಿಗೂ ಅದರ ಬಗ್ಗೆ ತಿಳಿದಿಲ್ಲ. ಪೊರಕೆ ಸಿಗುವ ದೊಡ್ಡ ಅಂಗಡಿಯ ಒಳಗೆ ಹೋಗಿ ನನಗೆ ಬೇಕಾದ ಪೊರಕೆಯನ್ನು ಎಷ್ಟು…
ಆಗರ್ಭ ಶ್ರೀಮಂತ ತಂದೆ, ಮಗನ ಮೇಲೆ ಕೇಸೊಂದು ಹಾಕಿ, ತನಗೆ ತನ್ನ ಮಗನಿಂದ ಮಾಶಾಸನ ಬೇಕೆಂದು ಕೊರ್ಟ್ ನ್ನು ಕೇಳಿಕೊಂಡ.
ನ್ಯಾಯದೀಶರು " ತಾವೇ ಇಷ್ಟೊಂದು ಶ್ರೀಮಂತರಿದ್ದೀರಿ, ಮತ್ತೇಕೆ ಬೇಕು ". ಎಂದರು..
ತಂದೆ, "ಇಲ್ಲಾ ಸ್ವಾಮಿ, ನನಗೆ ನನ್ನ ಮಗನ…