ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸತ್ಯವು ಇನ್ನೆಲ್ಲಿ?

ಕಾಲನ ಬಂಡಿಯನೇರಿ
ಜ್ಞಾನದ ಜ್ಯೋತಿಯ ಬೆಳಗಿಸಿ
ಪ್ರೀತಿಯ ಬಳಗವ ಕಟ್ಟಿ
ಸತ್ಯದೂರಿನೆಡೆಗೆ ಪಯಣ

ಹೊಸದೀ ದಾರಿ
ಹೊಸದೀ ತಿರುವು
ಸತ್ಯದ ಸುಳಿವಿಲ್ಲ

ದ್ವೇಷವ ಬಿತ್ತುತ
ಅನ್ಯಾಯವ ಬೆಳದಿಹರಿಲ್ಲಿ

ಕಲ್ಲ ನಾಗರಕೆ ಹಾಲೆರೆಯುತ
ನಿಜ ನಾಗರವ ಕಲ್ಲಲಿ ಜಜ್ಜಿಹರಿಲ್ಲಿ

ಸ್ವಾರ್ಥದ ಸಂತೆಯಲಿ
ಧರ್ಮವ ಮಾರಿಹರು

ಅನ್ಯಾಯದ ಅರ್ಭಟಕೆ
ನ್ಯಾಯವು ನಡುಗಿಹುದು

ನಿಲ್ಲಿ, ನಾವು ನಿಮ್ಮಂತಲ್ಲ....

ಸುಮಾರು ಎರಡು ವರ್ಷಗಳ ಹಿಂದಿರಬೇಕು. ನಮ್ಮ ವಿಶ್ವವಿದ್ಯಾನಿಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದು ನಡೆಯುತ್ತಿತು. ಯುವಜನರೇ ಇರುವ ಕಾರ್ಯಕ್ರಮ ಹೇಗಿರುತ್ತದೆ ಎಂದು ಹೇಳುವ ಅಗತ್ಯವಿಲ್ಲ. ಇಡೀ ಸಭಾಂಗಣವೇ ಬೊಬ್ಬೆ, ಸಿನಿಮಾ ಸಂಗೀತದಬ್ಬರ, ಉತ್ಸಾಹ, ಮೋಜುನಿಂದ ಕೂಡಿತ್ತು.

ಶ್ರೀ ತುಳಸಿ

ಎದೆಯ ಬೃ೦ದಾವನದೆ
ಕಂಡೆ ಶ್ರೀ ತುಳಸಿಯ
ಮೋಹನ ಮುರಳಿಯ
ಪಿಡಿದ ಚೆಲ್ವ ಶ್ರೀ ಹರಿಯ

ಕಣ್ಣಲಿ ತುಂಬಿಹ
ತುಳಸಿಯ ಗೀತಡಿ
ಶ್ರೀರಂಗನು ಲೀನ
ಗೀತ ಪ್ರೀತಿಯ
ಕಂಡ ತುಳಸಿಯು
ಅವನಾತ್ಮದಿ ಲೀನ

ಭಕ್ತಿ ಭಾವದಿ
ಕರಗಳ ಜೋಡಿಸಿ
ನಿಂತಳು ಶ್ರೀ ತುಳಸಿ
'ಸಖಿಯರ ನಡುವೆ
ಎಲ್ಲಿಯ ನಾನು
ಸ್ಥಳವೆಲ್ಲಿಹುದೆನಗೆ'
ಮಾಲೆಯ ಮಾಡಿ
ಕೊರಳೊಳು ಧರಿಸಿ
ಶ್ರೀ ಹರಿ ನಕ್ಕನು ಚೆಲ್ವ ನಗೆ

ಕೆಂಡಸಂಪಿಗೆಯಲ್ಲಿ ಪಾಲಚಂದ್ರ!

ಸಂಪದದ ಚಿತ್ರಾಂಕಣಕಾರ ಪಾಲಚಂದ್ರರಿಂದು "ಕೆಂಡಸಂಪಿಗೆ" ಜಾಲತಾಣದಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಅವರ ಬ್ಲಾಗನ್ನು ದಿನದ ಬ್ಲಾಗು ಎಂದು ಅಲ್ಲಿಯ ಅಂಕಣಕಾರ ಜಿತೇಂದ್ರ ಪರಿಚಯಿಸಿದ್ದಾರೆ. ದಿನಾಲೂ ಬ್ಲಾಗನ್ನಲ್ಲಿ ಪರಿಚಯಿಸಲಾಗುತ್ತಿದೆ.
ಅಭಿನಂದನೆಗಳು ಪಾಲಚಂದ್ರರೇ.
ಸಂಪದದಲ್ಲಿ ಇನ್ನೂ ಹೆಚ್ಚು ಬರೆಯಿರಿ. :)

ಕೃಷ್ಣ ಕಂಡನು ಕೇಳಿರೆ

ಕೃಷ್ಣ ಕಂಡನು ಕೇಳಿರೆ
ಗೋಪಿಯರೆಲ್ಲಾ |ಪ|

ಹೊಳೆವ ಕಿರೀಟವಿಲ್ಲ
ಶಂಖ ಚಕ್ರಗಳಿಲ್ಲ
ಯಾದವರ ಬಳಗವಿಲ್ಲ
ಭಾಮೆ ರುಕ್ಮಿಣಿಯರಿಲ್ಲ ||ಪ||

ಕಪಟ ನಾಟಕಿಯಲ್ಲ
ಮೋಹನ ರೂಪನಲ್ಲ
ಕೊಳಲ ಪಿಡಿದವನಲ್ಲ
ಪಾರ್ಥ ಸಾರಥಿಯಲ್ಲ ||ಪ||

ಅರಿ ಭಯಂಕರನಲ್ಲ
ವ್ಯೋಮಕಣನಿವನಲ್ಲ
ಗಂಭೀರ ವದನವ ಪೊತ್ತು
ನೀತಿ ಹೇಳುವನಲ್ಲ ||ಪ||

ಅಂಕೆಗೆ ಸಿಗದವನು
ಶಂಕೆಯ ಬಿಡಿಸುವವನು
ಮಂಕು ದಿಣ್ಣೆಯಿವನು

ಇವನಾ ಅವನು

ಇವನಾ ಅವನು
ಅವನಾ ಇವನು |ಪ|
ಕದಗೊಲನು ಪಿಡಿದು
ಚಿನ್ನಾಟವಾಡಿದವನು
ತಾಯಿ ದೇವಕಿಯ
ತೊಡೆಯೇರಿದವನು ||ಪ||

ತನ್ನ ಪುಟ್ಟ ಬಾಯಲ್ಲಿ
ಬ್ರಹ್ಮಾಂಡ ತೋರಿದವನು
ವಿಷಕನ್ಯೆ ಪೂತನಿಗೆ
ಮೋಕ್ಷವನಿತ್ತವನು ||ಪ||

ಗೋವರ್ಧನ ಗಿರಿಯೆತ್ತಿ
ಯಾದವರ ಕಾಯ್ದವನು
ಮಾವ ಕಂಸನ ತುಳಿದು
ತಾಯ್ತ೦ದೆಯರುಳಿಸಿದವನು ||ಪ||

ಪಾಂಡವರೈವರಿಗೆ
ಅಭಯವನಿತ್ತವನು
ಪಾರ್ಥಗೆ ಗೀತೆಯ

ಇಂದು ಓದಿದ ವಚನ: ಯಾವ ಮಾದರಿಯೂ ಇಲ್ಲ: ಸಿದ್ಧರಾಮ

ಗುರುವಿಂಗೆ ಗುರುವಿಲ್ಲ

ಲಿಂಗಕ್ಕೆ ಲಿಂಗವಿಲ್ಲ

ಜಂಗಮಕ್ಕೆ ಜಂಗಮವಿಲ್ಲ

ನನಗೆ ನಾನಿಲ್ಲ

ಕಣ್ದೆರೆದು ನೋಡುವಡೆ ಆರಿಗೆ ಆರೂ ಇಲ್ಲ

ಕಪಿಲಸಿದ್ಧಮಲ್ಲಿಕಾರ್ಜುನಾ

ಸಿದ್ಧರಾಮನ ವಚನ ಇದು.

ಮಾದರಿಗಳನ್ನು ಅನುಸರಿಸುವವರು ಹೇಳಹೆಸರಿಲ್ಲದಾಗುತ್ತಾರೆ

ಪದವೊಂದೇ ....

ಹಲವಾರು ಬಾರಿ ಪದವೊಂದೇ ಆದರೂ ಅವುಗಳ ಅರ್ಥ ಬೇರೆ ಇರುತ್ತದೆ. ಅಂತಹ ಕೆಲವು ಪದಗಳನ್ನು ತೆಗೆದುಕೊಂಡು ಕವನ ರೂಪದಲ್ಲಿ ಭವ ಬಂಧನದ ಬಗೆಗಿನ ಒಂದು ಸನ್ನಿವೇಶವನ್ನು ಹೆಣೆದಿದ್ದೇನೆ. ಕವನದಲ್ಲಿ ಅಕ್ಕ-ತಂಗಿಯರ ಬಾಂಧವ್ಯವಿದೆ. ತಂದೆಯ ಸ್ಥಾನದಲ್ಲಿ ನಿಲ್ಲುವ ಭಾವನ ಚಿತ್ರಣವಿದೆ.