ಇವನಾ ಅವನು

ಇವನಾ ಅವನು

ಬರಹ

ಇವನಾ ಅವನು
ಅವನಾ ಇವನು |ಪ|
ಕದಗೊಲನು ಪಿಡಿದು
ಚಿನ್ನಾಟವಾಡಿದವನು
ತಾಯಿ ದೇವಕಿಯ
ತೊಡೆಯೇರಿದವನು ||ಪ||

ತನ್ನ ಪುಟ್ಟ ಬಾಯಲ್ಲಿ
ಬ್ರಹ್ಮಾಂಡ ತೋರಿದವನು
ವಿಷಕನ್ಯೆ ಪೂತನಿಗೆ
ಮೋಕ್ಷವನಿತ್ತವನು ||ಪ||

ಗೋವರ್ಧನ ಗಿರಿಯೆತ್ತಿ
ಯಾದವರ ಕಾಯ್ದವನು
ಮಾವ ಕಂಸನ ತುಳಿದು
ತಾಯ್ತ೦ದೆಯರುಳಿಸಿದವನು ||ಪ||

ಪಾಂಡವರೈವರಿಗೆ
ಅಭಯವನಿತ್ತವನು
ಪಾರ್ಥಗೆ ಗೀತೆಯ
ಒಲವಿಂದೆ ಬೋಧಿಸಿದವನು ||ಪ||

ಜಗದೊಳಗೆ ತಾನೊಂದೆ
ಬ್ರಹ್ಮರೂಪನೆಂದವನು
ಶ್ರೀ ಗುರು ಶಂಕರನ
ಭಜ ಗೋವಿಂದನಿವನು ||ಪ||