ಶಾಲೆಗೆ ಆಟೋ ಗಳಲ್ಲಿ ಹೋಗುವ ನಮ್ಮ ಮಕ್ಕಳು ಎಷ್ಟು ಸೇಫ್?

ಶಾಲೆಗೆ ಆಟೋ ಗಳಲ್ಲಿ ಹೋಗುವ ನಮ್ಮ ಮಕ್ಕಳು ಎಷ್ಟು ಸೇಫ್?

ಬರಹ

ನೀವೆಲ್ಲಾ ಇಂದಿನ ಪತ್ರಿಕೆಯಲ್ಲಿ ಸುದ್ದಿ ನೋಡಿದಿರಾ? ನೋಡಿಯೇ ಇರುತ್ತೀರಿ. ಚನ್ನರಾಯಪಟ್ಣದಲ್ಲಿ ಗೂಡ್ಸ್ ವಾಹನದಲ್ಲಿ ತುಂಬಿದ್ದ ೧೫೦ ಶಾಲಾ ಮಕ್ಕಳಲ್ಲಿ ಉಸಿರುಕಟ್ಟಿ ಒಂದು ಮಗು ಸಾವು. ನೂರಾರು ಮಕ್ಕಳಿಗೆ ಮಾನಸಿಕ ಆಘಾತ. ಗೂಡ್ಸ್ ಟೆಂಪೋನಲ್ಲಿ ತುಂಬಿರುವ ಮಕ್ಕಳ ಸಂಖ್ಯೆ ೧೫೦. ಬಸ್ಸಿನಲ್ಲಿ ಪ್ರಯಾಣಿಸಬಹುದಾದ ಪ್ರಯಾಣಿಕರ ಸಂಖ್ಯೆ ಎಷ್ಟು? - ೫೦ ಜನ ಕುಳಿತುಕೊಳ್ಳಲು, ೧೦ ಜನ ನಿಲ್ಲಲು. ಬಸ್ಸಿನ ಅರ್ಧದಷ್ಟು ಇರುತ್ತದೋ ಇಲ್ಲವೋ ಅದರಲ್ಲಿ ಬಸ್ಸಿನಲ್ಲಿ ಪ್ರಯಾಣಿಸಲು ಸಾಧ್ಯವಾಗುವ ಪ್ರಯಾಣಿಕರ ಮೂರು ಪಟ್ಟು ಮಕ್ಕಳನ್ನು ತುಂಬಿರುವ ಇವರು ಮನುಷ್ಯರೋ? ರಾಕ್ಷಸರೋ? ಕುರಿತುಂಬಿದಂತೆ ಎಂದೂ ಹೇಳುವಂತಿಲ್ಲ. ಕುರಿಗಳಿಗೂ ಜೀವವಿದೆ, ಸರಕು ತುಂಬಿದಂತೆ. ಛೇ! ಈ ಘಟನೆ ಬಗ್ಗೆ ಏನು ಹೇಳುವುದು? ಇಂತಹಾ ಘಟನೆಗಳು ನಡೆಯುತ್ತಲೇ ಇರುತ್ತವೆ. ಒಂದು ಮಾತು ನಿಜ. public memori is short. ಮರೆತು ಬಿಡುತ್ತೇವೆ, ಬೇಗ ಮರೆತು ಬಿಡುತ್ತೇವೆ. ಕಾರಣ ನಾಳೆ ಇದಕ್ಕಿಂತ ಕೆಟ್ಟಸುದ್ದಿ ಕೇಳುತ್ತೇವೆ. ಅಂದು ಆ ಮಾತು ಎಲ್ಲೆಡೆ ಕೇಳಿ ಬರುತ್ತೆ. ನಾಡಿದ್ದು ಅದಕ್ಕಿಂತ ಕೆಟ್ಟ ಸುದ್ದಿ. ಹೀಗೆ........ಎಲ್ಲಾ ಮರೆತೇ ಹೋಗುತ್ತೆ. ಮುಂಬೈ ಉಗ್ರರ ಅಟ್ಟಹಾಸವೂ ಕೂಡ ಕಾಲದಲ್ಲಿ ಮರೆಯಾಗಿ ಹೋಗುತ್ತೆ. ಇದೇನು ಭಾರತೀಯರಿಗೆ ಶಾಪವೇ? ಅಥವಾ ನಮ್ಮ ಮೈ ಮರೆವೇ? ಏನು?...ಏನು?... ಏನು? ಉತ್ತರ ಯಾರಿಗೂ ಗೊತ್ತಿಲ್ಲ.

ಕನಿಷ್ಟ ಪಕ್ಷ ನಮ್ಮ ಮಕ್ಕಳೂ ನಮಗೆ ಬೇಡವೇ?

ನಮ್ಮ ಮಕ್ಕಳಿಗಾಗಿ ನಾನು ಏನು ಮಾಡಿದೆನೆಂದು ತಿಳಿಸಿ ಬಿಡುವೆ.ನೋಡಿ, ನೀವೂ ಮಾಡಬಹುದಾ? ನಿಮ್ಮ ಹತ್ತಿರದವರಿಗೆ ತಿಳಿಸ ಬಹುದಾ?

೧. ನನ್ನ ಮಕ್ಕಳು ಪ್ರೈಮರಿ ಶಾಲೆಗೆ ಹೋಗುವಾಗ ಈಗ್ಗೆ ೧೫-೧೬ ವರ್ಷಗಳ ಹಿಂದೆಯೇ ಒಂದು ಆಟೋದಲ್ಲಿ ೧೫ ಕ್ಕೂ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಹೋಗುವುದನ್ನು ಕಂಡೆ.ಅಂದೇ ಮೊದಲು ಅಂದೇ ಕಡೆ. ನಾನು ಒಂದು ನಿರ್ಧಾರಕ್ಕೆ ಬಂದೆ. ಶಾಲೆಯ ಸಮೀಪದಲ್ಲೇ ಮನೆ ಮಾಡುವುದು. ಪತ್ನಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುವುದು. ಸರಿ ಒಂದು ವಾರ ನಾನೇ ಆಟೋ ದಲ್ಲಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿಬಂದೆ. ಅದೇ ಸಮಯದಲ್ಲಿ ಶಾಲೆಹತ್ತಿರವೇ ಬಾಡಿಗೆ ಮನೆಯನ್ನೂ ಹುಡುಕುತ್ತಿದ್ದೆ. ಶಾಲೆಯ ಹತ್ತಿರಕ್ಕೇ ನಾನೇ ಮನೆ ಬದಲಾಯಿಸಿದೆ. ನಂತರ ಮಕ್ಕಳು ಎಲ್ಲಿ ಓದುತ್ತಾರೋ ಅದರ ಸಮೀಪ ಮನೆ ಮಾಡುತ್ತಾ ಬಂದು ಈಗ ಮಕ್ಕಳು ಬಿ.ಇ. ಮುಗಿಸಿ ಕೆಲಸದಲ್ಲಿದ್ದರೂ ಅವರು ಓದಿದ ಶಾಲೆಯ ಸಮೀಪವೇ  ಸ್ವಂತಮನೆ ಕಟ್ಟಿದೆ.ಅಲ್ಲೇ ಈಗಲೂ ವಾಸ.

೨. ಮಕ್ಕಳ ವಿದ್ಯಾಭ್ಯಾಸ ಮುಗಿಯುವವರೆಗೂ ಟಿವಿ ಯ ಡಿಶ್ ಕನೆಕ್ಷನ್ ತೆಗೆದುಕೊಳ್ಳಲೇ ಇಲ್ಲ. ಡಿ.ಡಿ-೧ ರಲ್ಲಿ ಬರುವ ಒಳ್ಳೆಯ ಕಾರ್ಯಕ್ರಮ ಗಳನ್ನು ಮಾತ್ರ ಒಟ್ಟಿಗೆ ಕುಳಿತು ನೋಡುತ್ತಿದ್ದೆವು.

ನಾನೇನೋ ಬಹುದೊಡ್ದ ಕೆಲಸ ಮಾಡಿದೆ ಎಂದಲ್ಲ. ಇಂದು ಗೂಡ್ಸ್ ವಾಹನದಲ್ಲಿ ಆಗಿರುವ ಮಗುವಿನ ಸಾವನ್ನು ನಾನು ಅಂದೇ ಊಹಿಸಿದ್ದೆ. ಇದನ್ನು ಮನುಷ್ಯತ್ವ ಇರುವ ಯಾರೂ ಊಹಿಸ ಬಹುದು.

ಮಖ್ಕಳನ್ನು ಸೇಫ್ ಆಗಿ ಶಾಲೆಗೆ ಹೋಗಿಬರುವಂತೆ ಮಾಡಲು ಏನು ಬೇಕಾದರೂ ಪ್ಲಾನ್ ರೂಪಿಸ ಬಹುದು ಆದರೆ ನಮ್ಮಲ್ಲಿ ಒಂದು ವಿಪರೀತ ಕಲ್ಪನೆ ಇದೆ" ನಮ್ಮ ಮಕ್ಕಳು ಮಾಡ್ರನ್ ಕಾನ್ವೆಂಟ್ ನಲ್ಲೇ ಓದಬೇಕೆನ್ನುವ ಕೆಟ್ಟ ಹಂಬಲ. ಇದರ ಮುಂದೆ ನಮ್ಮ ತಲೆ ಕೆಲಸ ನಿಲ್ಲಿಸಿ ಬಿಡುತ್ತದೆ. ನಾನೂ ಬರವಣಿಗೆ ನಿಲ್ಲಿಸಲೇ ಬೇಕು.. ಕರ್ತವ್ಯದ ಕರೆ ಎಚ್ಚರಿಸಿದೆ...[ಈಗ ಬೆಳಿಗ್ಗೆ ೯:೧೫]