ಶ್ರೀ ತುಳಸಿ

ಶ್ರೀ ತುಳಸಿ

ಬರಹ

ಎದೆಯ ಬೃ೦ದಾವನದೆ
ಕಂಡೆ ಶ್ರೀ ತುಳಸಿಯ
ಮೋಹನ ಮುರಳಿಯ
ಪಿಡಿದ ಚೆಲ್ವ ಶ್ರೀ ಹರಿಯ

ಕಣ್ಣಲಿ ತುಂಬಿಹ
ತುಳಸಿಯ ಗೀತಡಿ
ಶ್ರೀರಂಗನು ಲೀನ
ಗೀತ ಪ್ರೀತಿಯ
ಕಂಡ ತುಳಸಿಯು
ಅವನಾತ್ಮದಿ ಲೀನ

ಭಕ್ತಿ ಭಾವದಿ
ಕರಗಳ ಜೋಡಿಸಿ
ನಿಂತಳು ಶ್ರೀ ತುಳಸಿ
'ಸಖಿಯರ ನಡುವೆ
ಎಲ್ಲಿಯ ನಾನು
ಸ್ಥಳವೆಲ್ಲಿಹುದೆನಗೆ'
ಮಾಲೆಯ ಮಾಡಿ
ಕೊರಳೊಳು ಧರಿಸಿ
ಶ್ರೀ ಹರಿ ನಕ್ಕನು ಚೆಲ್ವ ನಗೆ
ಧನ್ಯಳು ತುಳಸಿ
ವಿಠಲನ ಜಯಿಸಿ
ನಿಂದಳು ಕೊರಳಿನಲಿ
ಹರಿಯ ರೂಪ
ಶ್ರೀ ಗುರು ಶಂಕರ ಜ್ಞಾನವ
ಕಂಡಳು ಒಲವಿನಲಿ