ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಲ್ಲು ಕಿತ್ತ ಹಾವು

ನಂಜಿರುವ ಹಾವಿನಲಿ
ತಾಳ್ಮೆ ಮನ್ನಿಪೆಂಬುದು
ಅಗ್ಗಳವು ಅದಕೆ ನೀ
ಕಟ್ಟಲಾಗದು ಬೆಲೆಯ!

ಹಲ್ಲಳಿದು ವಿಷವುಡುಗಿ
ಪಳಗಿಸಿದ ಹಾವಿಗಿಹ
ತಾಳುಮೆ  ಔದಾರಿಯಕೆ
ಇಹುದೇನು ಬೆಲೆಯು?

 

Tech ಸಂಪದ

(ಸವಿತೃ [:forum/11998|"Tech ಸಂಪದ - ಏನಿದು?" ಅಂತ ಕೇಳಿದ್ದರು]. ಸೋಮವಾರ ಈ ಬಗ್ಗೆ ಬರೆಯೋಣ ಎಂದು ಹೊರಟವ ಮತ್ತೇನೋ ಕೆಲಸದಲ್ಲಿ ಸಿಕ್ಕಿಹಾಕಿಕೊಂಡು ಬರಹವನ್ನು ಅರ್ಧಕ್ಕೇ ಬಿಟ್ಟುಬಿಟ್ಟಿದ್ದೆ. ಹೀಗಾಗಿ ಲಿಂಕ್ ಮಾಡಬೇಕು ಅಂದುಕೊಂಡ ಈ ಕುರಿತ ಸೈಟ್ ನೋಟಿಫಿಕೇಶನ್ ಲಿಂಕ್ ಇಲ್ಲದೇ ಉಳಿದುಕೊಂಡುಬಿಟ್ಟಿತು.)

ಪ್ರತಿ ವಾರ ಎಲ್ಲ ಕನ್ನಡ ಪೇಪರುಗಳಲ್ಲೂ ಬರುವ ವಿಜ್ಞಾನ ಹಾಗು ಟೆಕ್ನಾಲಜಿ ಕುರಿತ ನೀರಸ ಪುಟಗಳಲ್ಲಿ ಏನೂ ಹೊಸತಿಲ್ಲದ ವಿಷಯಗಳು ತಂತ್ರಜ್ಞಾನದ ಸುತ್ತಲೇ ಇರುವವರಿಗೆ ಅಚ್ಚರಿ ಮೂಡಿಸದೇ ಇರದು. ಜಾಗತಿಕ ಮಾರುಕಟ್ಟೆಯಲ್ಲಿ Innovation ಬಹುಮುಖ್ಯವಾದದ್ದು. ಒಂದು ರೀತಿಯಲ್ಲಿ ಉಳಿವಿನ ಹಾದಿ. ಅದಕ್ಕೆ ತಂತ್ರಜ್ಞಾನದ ಅರಿವು ಮುಖ್ಯ. ಹೊಸತೇನು ಬರುತ್ತಿದೆ ಎಂಬುದರ ಬಗ್ಗೆ ಸಾಮಾನ್ಯ ಅರಿವು ಬಹು ಮುಖ್ಯ.

ತಂತ್ರಜ್ಞಾನದ ಬಗ್ಗೆ ನಿತ್ಯ ಓದುತ್ತಿರುವವರಿಗೆ ಈ ವಿಷಯ ಚೆನ್ನಾಗಿ ಅರ್ಥವಾಗುವುದು. ಈಗಿನಂತೆ ತಂತ್ರಜ್ಞಾನದ ಕುರಿತು ಏನೇ ಹೊಸತಿರಲಿ ೯೯.೯% ಮಾಹಿತಿ ಸಿಗುವುದು ಇಂಗ್ಲೀಷಿನಲ್ಲೇ. ನಾವುಗಳು ಕನ್ನಡವನ್ನು ಕಥೆ, ಕವನ ಇತ್ಯಾದಿಗಳಿಗೆ ಮಾತ್ರ ಮೀಸಲಿಟ್ಟು ಇಂಗ್ಲೀಷಿನಲ್ಲಿ ತಂತ್ರಜ್ಞಾನವನ್ನು ಓದಿಕೊಳ್ಳುತ್ತ ಸದ್ಯಕ್ಕೆ ದಿನಗಳನ್ನು ದಬ್ಬುತ್ತಿದ್ದೇವೆ. ಆದರೆ ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ಕನ್ನಡದಲ್ಲೇ ಲಭ್ಯವಾದರೆ ಹೇಗಿರುತ್ತದೆ? ತಂತ್ರಜ್ಞಾನ ಕುರಿತ ಸುದ್ದಿಯೊಂದು ಅಥವ ಮಾಹಿತಿಯೊಂದು ಇಂಗ್ಲಿಷ್ ನಲ್ಲಿ ಬಂದ ದಿನವೇ ಕನ್ನಡದಲ್ಲೂ ಬರುವ ಹಾಗಿದ್ದರೆ?

ಮೈಸೂರಿನ ಹಬ್ಬ

ಸಂಪದ ಬಳಗಕ್ಕೆ ಧನ್ಯ ವಾದಗಳು. ನಾನು ಬಹು ನಿರೀಕ್ಷೆಯಲ್ಲಿದ್ದೆ. ಮೈಸೂರಿನಲ್ಲಿ ಹಬ್ಬ ನಿಜಕ್ಕೂ ಸಂತಸ ತಂದಿದೆ. ನಾನು ಗಣಕ ಯಂತ್ರದ ಭಾಷೆ ಗೊತ್ತಿಲ್ಲದವನು ಆದರೆ ನನಗೆ ಲಿನೆಕ್ಸ್ ನ ಬಗ್ಗೆ ಆಸಕ್ತಿ ಮೂಡಿಸಿದ್ದು ಸಂಪದ ಬಳಗ. ನಾನು ನನ್ನ ಲ್ಯಾಪ್ ಟಾಪ್ ನಲ್ಲಿ ಮಿಂಟ್ ಅನ್ನು ಹಾಕಿಕೊಳ್ಳಲು ಬಹಳ ಇಷ್ಟ ಪಟ್ಟಿದ್ದೆ. ನನ್ನ ಕೋರಿಕೆ ಈ ಡೇರಿದೆ. ನಾನು ವಕೀಲ.

ಫೈರ್ ಫಾಕ್ಸ್ (Firefox) 3.0.2 ಕನ್ನಡದಲ್ಲಿ

ಕನ್ನಡದ ಆವೃತ್ತಿಯನ್ನ ಡೌನ್ಲೋಡ್ ಮಾಡಿ ಉಪಯೋಗಿಸಿ ನೋಡಿ. ಡೌನ್ಲೋಡ್ ಕೊಂಡಿ ಇಲ್ಲಿದೆ.

ಅನುವಾದಗಳಲ್ಲಿ ಏನಾದರೂ ತಪ್ಪು ಕಂಡು ಬಂದರೆ, ಅದನ್ನ ಸರಿ ಪಡಿಸಲಿಕ್ಕೆ ನೆರವಾಗಿ. 

ಗೂಗಲ್ ನಿಂದ ಹೊಸ ಇನ್-ಕೋಟ್ಸ್

ಗೂಗಲ್ ಹೊಸದಾಗಿ "ಇನ್-ಕೋಟ್ಸ್" ಬಿಡುಗಡೆ ಮಾಡಿದೆ. ಇದರಲ್ಲಿ ಒಂದು ವಿಷಯಕ್ಕೆ ವಿವಿಧ ಮುಖಂಡರ ಹೇಳಿಕೆಗಳನ್ನು ಒಂದೇ ಪುಟದಲ್ಲಿ ವೀಕ್ಷಿಸಬಹುದು. ಇದರಲ್ಲಿ ಸಧ್ಯಕ್ಕೆ ಅಮೇರಿಕಾ, ಕೆನಡ, ಯು.ಕೆ ಮತ್ತು ಭಾರತವನ್ನು ಸೇರಿಸಲಾಗಿದೆ. ಕೆಳಗಿನ ಕೊಂಡಿಯಲ್ಲಿ ನೋಡಿ.

http://labs.google.com/inquotes/

ನೀವೂ ಪ್ರಯತ್ನಿಸಿ ನೋಡಿ.

ಧನ್ಯವಾದಗಳು
ರಾಘವೇಂದ್ರ

ಮಾತಿನಲ್ಲಿ ಹೇಳಲಾರೆನು-"ಬೊಂಬಾಟ್’ ಚಿತ್ರದ ಹಾಡು

ಮಾತಿನಲ್ಲಿ ಹೇಳಲಾರೆನು ..
ರೇಖೆಯಲ್ಲಿ ಗೀಚಲಾರೆನು
ಆದರುನೂ ಹಾಡದೆನೆ ಉಳಿಯಲಾರೆನು
ಅಂತ ರೂಪಸಿ.. ನನ್ನ ಪ್ರೇಯಸಿ ..
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂತ ರೂಪಸಿ.. ನನ್ನ ಪ್ರೇಯಸಿ ..
ಒಮ್ಮೆ ಅವಳಿಗೆ ನನ್ನ ತೋರಿಸಿ ..
ಕಣ್ಣಲ್ಲಿದೆ ಆ ಕಣ್ಣಲ್ಲಿದೆ ..
ಹೊಂಬೆಳಕಿನ ನವ ನೀಲಾಂಜನ .
ಇನ್ನೆಲ್ಲಿದೆ ಹಹಾ ಇನ್ನೆಲ್ಲಿದೆ

ವಿಘ್ನಸಂತೋಷಿಗಳ ಉಪಟಳ; ಪ್ರಜ್ವಲಿಸದ ದೀಪಗಳು!

ಭಾರತೀಯರು ಜಗತ್ತಿನ ಅತ್ಯುತ್ತಮ ಯೋಜಕರು; ಆದರೆ, ಅತೀ ಕಳಪೆ ಅನುಷ್ಠಾನಕ್ಕೆ ಹೆಸರಾದವರು. ಹಾಗೆಯೇ ಇತ್ತ ಪರಿಸರ ಸ್ನೇಹಿ ಅಭಿವೃದ್ದಿಯತ್ತ ಕೆಲವರು ಹೆಚ್ಚು ಗಮನವಹಿಸಿ ದುಡಿಯುತ್ತಿದರೆ, ಅತ್ತ ಅದನ್ನು ಹಾಳುಗೆಡವಲು ವ್ಯವಸ್ಥಿತವಾಗಿ ಪ್ರಯತ್ನ ಜಾರಿಯಲ್ಲಿ ಇಟ್ಟವರು ಕೆಲವರು! ಹಾಗೆಯೇ ನವೀಕರಿಸಬಹುದಾದ ಇಂಧನ ಮೂಲಗಳ ವಿವಿಧ ರೀತಿಯ ಬಳಕೆಯ ಕುರಿತು ನಿರಂತರ ಅನ್ವೇಷಣೆಯಲ್ಲಿ ತೊಡಗಿಕೊಂಡವರು ಮತ್ತಷ್ಟು ಜನ.

ಈ ಎಲ್ಲ ಸಾಧಕರ ಸಂಶೋಧನೆ, ಅನ್ವೇಷಣೆಗಳ ಫಲವಾಗಿ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬಂದಿವೆ. ಆ ಅನ್ವೇಷಣೆಗಳನ್ನು ಆರ್ಥಿಕವಾಗಿ ಹೊರೆಯಾಗದಂತೆ ಮೇಲ್ ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ ಹಾಗು ಕೆಳವರ್ಗದ ಫಲಾನುಭವಿಗಳಿಗೆ ತಲುಪಿಸಲು ಸರಕಾರ, ಸ್ಥಳೀಯ ಸರಕಾರಗಳು ಹಾಗು ಕೆಲ ಸ್ವಯಂ ಸೇವಾ ಸಂಸ್ಥೆಗಳು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿವೆ. ‘ಕಾರ್ಪೋರೇಟ್ ಸೋಸಿಯಲ್ ರೆಸ್ಪಾನ್ಸಿಬಿಲಿಟಿ’ ಹೆಸರಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಮ್ಮ ಅವಳಿ ನಗರದಲ್ಲಿ ನಡೆಯುತ್ತಿವೆ.