ಮಾತಿನಲ್ಲಿ ಹೇಳಲಾರೆನು-"ಬೊಂಬಾಟ್’ ಚಿತ್ರದ ಹಾಡು

ಮಾತಿನಲ್ಲಿ ಹೇಳಲಾರೆನು-"ಬೊಂಬಾಟ್’ ಚಿತ್ರದ ಹಾಡು

ಬರಹ

ಮಾತಿನಲ್ಲಿ ಹೇಳಲಾರೆನು ..
ರೇಖೆಯಲ್ಲಿ ಗೀಚಲಾರೆನು
ಆದರುನೂ ಹಾಡದೆನೆ ಉಳಿಯಲಾರೆನು
ಅಂತ ರೂಪಸಿ.. ನನ್ನ ಪ್ರೇಯಸಿ ..
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂತ ರೂಪಸಿ.. ನನ್ನ ಪ್ರೇಯಸಿ ..
ಒಮ್ಮೆ ಅವಳಿಗೆ ನನ್ನ ತೋರಿಸಿ ..
ಕಣ್ಣಲ್ಲಿದೆ ಆ ಕಣ್ಣಲ್ಲಿದೆ ..
ಹೊಂಬೆಳಕಿನ ನವ ನೀಲಾಂಜನ .
ಇನ್ನೆಲ್ಲಿದೆ ಹಹಾ ಇನ್ನೆಲ್ಲಿದೆ
ಹೂ ಮನಸಿನ ಆ ಮಧುಗುಂಜನ.
ಬೇರೆ ಏನು ಕಾಣಲಾರೆ
ಯಾರ ನಾನು ದೂರಲಾರೆ
ಸಾಕು ಇನ್ನು ದೂರವನ್ನು ತಾಳಲಾರೆನು
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ
ಅಂತ ರೂಪಸಿ.. ನನ್ನ ಪ್ರೇಯಸಿ ..
ಒಮ್ಮೆ ಅವಳಿಗೆ ನನ್ನ ತೋರಿಸಿ ..
ಮಾತಿನಲ್ಲಿ ಹೇಳಲಾರೆನು ..
ರೇಖೆಯಲ್ಲಿ ಗೀಚಲಾರೆನು
ಆದರುನೂ ಹಾಡದೆನೆ ಉಳಿಯಲಾರೆನು
ನಗೆಯಲ್ಲಿದೆ ಆ ಬಗೆಯಲ್ಲಿದೆ
ಬಗೆಹರಿಯದ ಆ ಅವಲೋಕನ
ನಡೆಯಲ್ಲಿದೆ ಆ ನುಡಿಯಲ್ಲಿದೆ
ತಲೆಕೆಡಿಸುವ ಆ ಆಮಂತ್ರಣ
ಕನಸಿಗಿಂತ ಚೆಂದವಾಗಿ
ಅಡಿಸದಂತ ಗಂಧವಾಗಿ
ಮೊದಲ ಬಾರಿ ಕಂಡ ಕ್ಷಣವೇ ಬಂಧಿ ಯಾದೆನು
ಹೋದೆ ನಾನು ಕಳೆದು ದಯಮಾಡಿ ಪತ್ತೆ ಮಾಡಬೇಡಿ
ಅಂತ ರೂಪಸಿ.. ನನ್ನ ಪ್ರೇಯಸಿ ..
ಒಮ್ಮೆ ಅವಳಿಗೆ ನನ್ನ ತೋರಿಸಿ ..