ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಸರಿಯಾದ ಪದ ಯಾವುದು?
ಕನ್ನಡದಲ್ಲಿ `ಶುಭಾಶಯ' ಮತ್ತು `ಶುಭಾಷಯ' ಇವೆರಡು ಪದಪ್ರಯೋಗಗಳಲ್ಲಿ ಯಾವುದು ಸರಿ?
ನನ್ನ ಪ್ರಕಾರ `ಶುಭಾಶಯ' ಪದವೇ ಸರಿ. ಏಕೆಂದರೆ, `ಆಶಯ' ವನ್ನು `ಆಷಯ' ಎಂದು ಬರೆಯುವುದಿಲ್ಲ, ಅಲ್ಲವೆ?
ಬಿ.ಎಚ್.ಸಿ.ಎಸ್.ಬಿ.
- Read more about ಸರಿಯಾದ ಪದ ಯಾವುದು?
- 8 comments
- Log in or register to post comments
ಯುಗಾದಿ ೨೦೦೭
ಸರ್ವಜಿತು ನಾಮ ಸಂವತ್ಸರದ ಶುಭಾಶಯಗಳು.
ಸರ್ವರಿಗೂ ಸರ್ವ ವಿಧದಲ್ಲಿಯೂ ಸರ್ವಕಾಲದಲ್ಲಿಯೂ ಸರ್ವಜಿತುವು ವಿಜಯವನ್ನು/ಶುಭವನ್ನು ನೀಡಲಿ ಎಂದು ಉಗಾದಿಯನ್ನು ಬರಮಾಡಿಕೊಳ್ಳೋಣ.
ಚಂದ್ರಶೇಖರ ಬಿ.ಎಚ್.
ಮಾರ್ಚ್ ೧೬, ೨೦೦೭
- Read more about ಯುಗಾದಿ ೨೦೦೭
- Log in or register to post comments
ಕನ್ನಡ ಬರಹವನ್ನು ಸರಿಪಡಿಸೋಣ - ಶಂಕರಭಟ್ಟರ ಪುಸ್ತಕ
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ , ಕನ್ನಡ ಪದರಚನೆ , ಕನ್ನಡ ವಾಕ್ಯರಚನೆ ಈ ಪುಸ್ತಕಗಳನ್ನು ಹಿಂದೊಮ್ಮೆ ಓದಿದ್ದೆ . ( ಈ ಪುಸ್ತಕಗಳನ್ನು ನನ್ನ ಕಯ್ಯಲ್ಲಿ ನೋಡಿದವರು 'ಸರ್ , ನೀವು ಪ್ರೊಫೆಸರ್ರಾ?' ಅಂತ ಕೇಳಿದರು! ' ಅಲ್ಲ ' ಅಂದಾಗ ' ಪಿ ಎಚ್ ಡಿ ಮಾಡ್ತಿದ್ದೀರಾ ? ' ಅಂದ್ರು . ಅದಕ್ಕೂ ಅಲ್ಲ ಎಂದಾಗ ಸುಮ್ಮನಾದರು ! ಏನು ಯೋಚಿಸಿದರೋ ಗೊತ್ತಿಲ್ಲ !)
- Read more about ಕನ್ನಡ ಬರಹವನ್ನು ಸರಿಪಡಿಸೋಣ - ಶಂಕರಭಟ್ಟರ ಪುಸ್ತಕ
- 1 comment
- Log in or register to post comments
ಜಡಭರತನ ಕನಸುಗಳು- ಜಿ.ಬಿ.ಜೋಷಿಯವರ ಪುಸ್ತಕ.-- ನಮ್ಮ ಕನಸುಗಳಿಗೆ ಏನು ಅರ್ಥ ?
ನಮ್ಮ ಕನಸುಗಳಿಗೆ ಏನು ಅರ್ಥ ?
ಜಿ.ಬಿ.ಜೋಶಿಯವರಿಗೆ ೧೯೨೭ ಮತ್ತು ೧೯೩೧ ರ ನಡುವಿನ ಅವಧಿಯಲ್ಲಿ ಅನೇಕ ಕನಸುಗಳು ಬಿದ್ದವು . ಅವುಗಳನ್ನು ಒಂದು ಕ್ರಮದಲ್ಲಿ ( ಬಿದ್ದ ಅನುಕ್ರಮದಲ್ಲಿ ಅಲ್ಲ )ಜೋಡಿಸಿ ಈ ಪುಸ್ತಕ ಸಿದ್ಧಪಡಿಸಿರುವರು.
ಇಂಗ್‌ಮಾರ್ ಎಂಬ ಕುನ್ನಿಯ ಬದುಕು
ನಾಯಿಮರಿಯಾಗಿ ನನ್ನ ಬದುಕು (my life as a dog --1985) ಸ್ವೀಡಿಶ್ ನಿರ್ದೇಶಕ ಲಾಸ್ ಹಾಲ್‌ಸ್ಟ್ರಾಮ್ ಎಂಬವನ ಚಿತ್ರವನ್ನು ಈವತ್ತು ನೋಡಿದೆ. ಮನಸ್ಸಿಗೆ ತುಂಬಾ ಹತ್ತಿಕೊಂಡಿತು.
- Read more about ಇಂಗ್‌ಮಾರ್ ಎಂಬ ಕುನ್ನಿಯ ಬದುಕು
- Log in or register to post comments
ಪದ್ಮಭೂಷಣ ಶ್ರೀ ಡಿ.ವಿ.ಜಿ ಯವರ ಜಯಂತಿ .. ನಾಳೆಯ ದಿನ....
Programs all round the day:
1. Gokhale institute, DVG road
2. ADA, opp. Ravindra Kalakshetra, JC road
ಕ್ಷಮಿಸಿ.. ಸಮಯದ ಮಾಹಿತಿ ನನಗೂ ತಿಳಿದಿಲ್ಲ. ಗೊತ್ತಾದಲ್ಲಿ ದಯೆ ಇಟ್ಟು ತಿಳಿಸಿ.
ಕಾಡುತ್ತಿರುವ ಒ೦ದು ವಚನ
ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ-
ಕಳೆಯರೆತ ದೀಪದಲಿ ಬೆಳಕನರಸಲಿಲ್ಲ-
ಕುರುಹಳಿದ ಮೂರ್ತಿಯಲಿ ರೂಪವರಸಲಿಲ್ಲ-
ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ.
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.
ಈ ಸು೦ದರವಾದ ವಚನದ ಕವಿ ನೀಲಾಂಬಿಕೆ. ನೀಲಾಂಬಿಕೆ ಸಾವಿರಾರು ವಚನಗಳನ್ನು ಬರೆದಂತೆ ಕಾಣುವುದಿಲ್ಲ. ಅಥವಾ ಬರೆದಿರುವುದೂ ತು೦ಬಾ ಜನಪ್ರಿಯವಾದ೦ತೆ ಕಾಣುವುದಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ನನಗೆ ತು೦ಬಾ ಕುತೂಹಲ ಕೆರಳಿಸಿದ್ದು ಈ ಪದ್ಯದೊಳಗೆ ನೇತ್ಯಾತ್ಮಕ ಅಂದರೆ ನೆಗೆಟಿವ್ ಅನ್ನಿಸಬಹುದಾದ ಭಾವಗಳ ಮೂಲಕ ಮತ್ತೊ೦ದು ನೆಲೆಗೆ ಜಿಗಿಯುವ ಶಕ್ತಿ ಕಾಣುವುದರಿ೦ದ. ಹೊಸ ನೆಲೆಗೆ ಜಿಗಿದಾಗಿಯೂ ಬಿಟ್ಟ ನೇತ್ಯಾತ್ಮಕ ನೆಲೆ ತನ್ನ ಅರ್ಥವನ್ನು ಬಿಟ್ಟುಕೊಡದೆ ನಮ್ಮ ಜತೆ ಆಟವಾಡುತ್ತಲೇ ಇರುವ ಗುಣವಿರುವುದರಿ೦ದ.
- Read more about ಕಾಡುತ್ತಿರುವ ಒ೦ದು ವಚನ
- 10 comments
- Log in or register to post comments
ಈ ಕೊಂಡಿಗೆ ಮತ್ತೆ ಮತ್ತೆ ಭೇಟಿ ಕೊಡಿ
ಈ ತಾಣಕ್ಕೆ ಮತ್ತೆ ಮತ್ತೆ ಭೇಟಿ ಕೊಡಿ: http://www.google.com/intl/kn/
ಇದು google ಕನ್ನಡ. ಈ ತಾಣದ ಬಳಕೆ ಹೆಚ್ಚಾದರೆ ಇದರ ಕೊಂಡಿಯನ್ನು http://www.google.co.in ಅಲ್ಲಿ ಸೇರಿಸಲಾಗುವುದಂತೆ. ಈಗಾಗಲೇ ಹಿಂದಿ, ಬಂಗ್ಲಾ, ಮರಾಠಿ, ತಮಿಳು ಹಾಗೂ ತೆಲುಗು ನುಡಿಗಳ ಕೊಂಡಿಗಳ ಸೇರ್ಪಡೆಯಾಗಿದೆ.
- Read more about ಈ ಕೊಂಡಿಗೆ ಮತ್ತೆ ಮತ್ತೆ ಭೇಟಿ ಕೊಡಿ
- Log in or register to post comments
ಏಕ ದೂರವಾಣಿ ಸಂಖ್ಯೆ ವ್ರತ ಈಗ ಸಾಧ್ಯ!
ಇ-ಲೋಕ-14 ( 16/3/2007)
- Read more about ಏಕ ದೂರವಾಣಿ ಸಂಖ್ಯೆ ವ್ರತ ಈಗ ಸಾಧ್ಯ!
- Log in or register to post comments