ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!
ಒಂದೊಮ್ಮೆ ಆರಾಮಾಗಿ ಹೊದ್ದುಕೊಳ್ಳಬಹುದಾದ ಅಗಲ ಕೌದಿಯಂತಿದ್ದ ಕರುನಾಡು, ಇಂದು ಹಳೆಯ ಹರಕಲು ಬಟ್ಟೆಯಂತೆ ಕಾಣುತ್ತದೆ. ಬೇಕಾಬಿಟ್ಟಿ ಕಟಿಂಗ್ ಮಾಡಿದ ತಲೆ, ಯಾರೋ ಜೋರಾಗಿ ಗುದ್ದಿದಂತ ಹೊಟ್ಟೆ. ಮಹಾರಾಸ್ಟ್ರಾ, ಏ.ಪಿಗಳು ನೋಡಿ ಕೊಬ್ಬಿದ ಕೋಣಗಳಂತಿವೆ.
ಮಹರಾಸ್ಟ್ರ ಅಂತು ದಿನೆ ದಿನೆ ಇಂಚಿಂಚಾಗಿ ಕರುನಾಡನ್ನು ಕಬಳಿಸುತ್ತಿದೆ. ಕನ್ನಡ ಮನಸ್ಸುಗಳನ್ನು ತಿರುಚಿ ಮಹಾರಸ್ಟ್ರಕ್ಕೆ ಹೋಗಲು ರಚ್ಚೆ ಹಿಡಿಯುವಂತೆ ಮಾಡುತ್ತಿದೆ. ದೆವ್ವ ಮೆಟ್ಟಿದವ ದೇವರನ್ನು ಬಯ್ಯುವ ಹಾಗೆ!!
http://maps.live.com/default.aspx?v=2&cp=15.013769~77.678833&style=r&lvl=6&tilt=-90&dir=0&alt=-1000&sp=Point.mc9yqvq7txxh_Kannada_A%20place%20name%20in%20maharastra.__~Point.kzc3xdqd9wfz_Basavakalyan_Once%20center%20of%20Karunadu.__&encType=1
ಇಲ್ಲಿ ನಾನು ಎರಡು ಊರುಗಳನ್ನು ಪಿನ್ ಮಾಡಿದ್ದೇನೆ ನೋಡಿ, ಮಹಾರಸ್ಟ್ರದ ಗೋದಾವರಿ ಹೊಳೆಗೂ ಆಚೆ ಕನ್ನಡ ಎನ್ನುವ ಊರಿದೆ. ಮತ್ತು ಬಸವಕಲ್ಯಾಣ, ಅಲ್ಲಿ ಪಿನ್ ಮಾಡಲಾದ ಎರಡನೆ ಊರು.
ವರ್ಚುಅಲ್ ಮರಾಟಿಗರು
ಇಲ್ಲಿ ನೋಡಿ,
http://www.dailypioneer.com/indexn12.asp?main_variable=VOTE_2004&file_name=vote364.txt&counter_img=364
ಎಲ್ಲೂರು ಅಪ್ಪಟ ಕನ್ನಡ ಹೆಸರು, ಇಲ್ಲಿ ೯೫% ಮಂದಿ ಮರಾಟಿಯಂತೆ. ಇವರು ಕನ್ನಡವನ್ನೇ ಮರೆತ ಕನ್ನಡಿಗರು, ಅದಕ್ಕೇ ಇವರನ್ನು ವರ್ಚುಅಲ್ ಮರಾಟಿಗರು ಅಂದಿದ್ದು. ಮರಾಟಿಗರಲ್ಲಿ ಒಂದು ನಂಬಿಕೆ ಇದೆ, ಅದೆಂದರೆ ಕನ್ನಡಿಗರು ಅಂದರೆ ಹಿಂದುಳಿದವರು, ಮರುಳರು ಅಂತೆ :D
ಗಡಿಗಳಲ್ಲಿ ಪರಿಸ್ತಿತಿ ಇದಕ್ಕೆ ಪೂರಕವಾಗಿಯೇ ಇದೆ, ನಮ್ಮ ಸ್ಟೇಟ್ ಸಿಲೆಬಸ್ ತುಂಬಾ ಸರಳವಾಗಿದೆ. ನಮ್ಮ ಸಿಲೆಬಸ್‍ನ್ನು ಬಿಗುಗೊಳಿಸಬೇಕಿದೆ. ಗಡಿಗಳಲ್ಲಿ ಕನ್ನಡ ಮೀಡಿಯಮ್ ಸಾಲೆಗಳಿಗೆ ಒತ್ತು ಕೊಡಬೇಕಿದೆ.
ನನ್ನ ಗೆಳೆಯನೊಬ್ಬ ಸೊಲ್ಲಾಪುದವ, ಅಪ್ಪಟ ಕನ್ನಡಿಗರ ಕುಟುಂಬ. ಅವರ ತಾಯಿಗೆ ಕನ್ನಡದ ಬಗ್ಗೆ ಬಲು ಹೆಮ್ಮೆ. ಅವಂದು ಮರಾಟಿ ಮೀಡಿಯಮ್, ಅವನಿಗೆ ಕನ್ನಡ ಸರಿಯಾಗಿ ಆಡೋಕೆ ಬರುತ್ತಿರಲಿಲ್ಲ, ನಮ್ಮ ಜೋಡಿ ಕೂಡಿ ಕಲಿತ ಅನ್ನಿ :) ಅವನಿಗೆ ಕನ್ನಡಿಗ ಅಂತ ಹೇಳಿಕೊಳ್ಳಲು ಹಿಂಜರಿಕೆ, ತಾನು ಮಹಾರಾಸ್ಟ್ರಿಯನ್ ಅಂತ ಹೇಳಿಕೊಳ್ಳುತ್ತಿದ್ದ.
ಬಸವಕಲ್ಯಾಣ, ಒಂದೊಮ್ಮೆ ವಚನ ಕ್ರಾಂತಿಯಿಂದ ಕನ್ನಡಕ್ಕೆ ಬರಹಗಳ ಹೊಳೆಯನ್ನೇ ಹರಿಸಿದ ಕನ್ನಡದ ನೆಲ. ಇಂದು ಅಲ್ಲಿಗೆ ಹೋದರೆ ಎಲ್ಲಾ ಕಡೆ ಹಿಂದಿ, ಮರಾಟಿನೇ ರಾಚುತ್ತದೆ. ಅಲ್ಲಿಯ ಹೆಚ್ಚಿನವರಿಗೆ ಕನ್ನಡಾನೇ ಬರಲ್ಲ. ಬಸವಣ್ಣನವರು ಬದುಕಿದ್ದು ಇಲ್ಲೇನಾ ಅನ್ನಿಸಬೇಕು.
ವರ್ಚುಅಲ್ ತೆಲುಗರು
ಕರುನಾಡಲ್ಲಿ ಕನ್ನಡಿಗರನ್ನು ಬಿಟ್ಟರೆ ತೆಲುಗರ ಸಂಕೆಯದೇ ಮೇಲುಗೈ. ಎ.ಪಿ.ಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ತೆಲುಗರು ಹೆಚ್ಚಿನ ಸಂಕೆಯಲ್ಲಿದ್ದಾರೆ. ತೆಲುಗು ಸನಿಮಾಗಳನ್ನು ಕನ್ನಡಿಗರು ಮುಗಿ ಬಿದ್ದು ನೋಡುತ್ತಿದ್ದಾರೆ. ಆ ರೀತಿ ಕನ್ನಡಿಗರು ತೆಲುಗು ಕಲಿಯುತ್ತಿದಾರೆ, ಆದರೆ ತೆಲುಗರು ಕನ್ನಡ ಕಲಿಯುವ ಪ್ರಮೇಯವೇ ಬರಲ್ಲಾ.
ಏ.ಪಿ ಗಡಿಗಳಲ್ಲಿ ಕನ್ನಡ ಬರದೇ ಇರೋರು ಬಹಳ ಇದಾರೆ. ಮಹಾರಸ್ಟ್ರದಂತೆ ಎ.ಪಿ. ನಮ್ಮ ನೆಲೆ ಕೇಳುತ್ತಿಲ್ಲವಾದರೂ ಗಡಿಗಳಲ್ಲಿ ಅಸ್ಟೇ ಅಲ್ಲ ಇಡೀ ಕರುನಾಡಲ್ಲಿ ಸಿನಿಮಾ ಮೂಲಕ ತೆಲುಗು ನುಗ್ಗುತ್ತಿದೆ. ನಾನು ಡಬ್ಬಿಂಗ್‍ಗೆ ಅವಕಾಸ ಕೊಡಬೇಕು ಅಂತ ಬಡಕೋತಿರುವದು ಇದಕ್ಕಾಗೇ.
ಟಿ.ವಿ9 ನಲ್ಲಿ ತೆಲುಗಿನ ಹೀರೋಗಳಾದ ಚಿರಂಜೀವಿಯಿಂದ ಹಿಡಿದು, ಅರುಣ್ ಪಾಂಡ್ಯಾವರೆಗೆ, ಅವರಿಗೆ ನಗಡಿಯಾದರೂ ಇಲ್ಲಿ ಅದು ಹೆಡ್ ಲೈನ್ಸ್ ಸುದ್ದಿ. ಇದೊಂದು ವರ್ಚುಅಲ್ ತೆಲುಗು ಚಾನೆಲ್!!
ಏನು ಮಾಡಬೇಕು?
೧) ಗಡಿಗಳಲ್ಲಿ ಕನ್ನಡವನ್ನು ಉಳಿಸಬೇಕು, ಕನ್ನಡ ಮೀಡಿಯಮ್ ಸಾಲೆಗಳಿಗೆ ಸರಿಯಾದ ಟೀಚರ್‍ಗಳನ್ನು ನೇಮಿಸಬೇಕು.
೨) ಸ್ಟೇಟ್ ಸಿಲಾಬಸ್ ನ್ನು ರಿವೈಸ್ ಮಾಡಬೇಕು, ಸಿ.ಬಿ.ಎಸ್.ಸಿ ಸಿಲೆಬಸ್‍ಗೆ ಕೊಂಚ ಮಟ್ಟಿಗಾದರು ಸಾಟಿಯಾಗುವಂತಿರಬೇಕು.
೩) ಡಬ್ಬಿಂಗ್ ಸಿನಿಮಾಗೆ ಅವಕಾಸ ನೀಡಬೇಕು, ಇದರಿಂದ ಒಳ್ಳೊಳ್ಳೆ ಇಂಗ್ಲೀಶ್ ಸಿನಿಮಾಗಳು ಕನ್ನಡದಲ್ಲಿ ಬರತೊಡಗಿದರೆ ಆ ನೆಪದಲ್ಲಿ ಮರಾಟಿಗರು, ತೆಲುಗರು ಕನ್ನಡ ಕಲಿತಾರೆ.
೪) ಒಳ್ಳೊಳ್ಳೇ ಕನ್ನಡ ಸಿನಿಮಾಗಳನ್ನು ಮಾಡಬೇಕು, ಗಡಿಗಳಲ್ಲಿ ಬಿಡುಗಡೆ ಮಾಡಬೇಕು.
ಏನು ಮಾಡಬಹುದು ಅಂತ ನಿಮ್ಮ ಅನಿಸಿಕೆಗಳನ್ನು ತಿಳಿಸಿ.
ನನ್ನಿ.
Comments
ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!
In reply to ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! by gc
ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!
In reply to ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! by hamsanandi

In reply to ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! by muralihr
ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!
In reply to ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! by gc
ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!
In reply to ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!! by ಸಂಗನಗೌಡ
ಉ: ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!