ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ?

ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ?

Comments

ಬರಹ

http://www.kannadaprabha.com/NewsItems.asp?ID=KPH20070820220514&Title=Headlines+Page&lTitle=%AE%DA%C3%C8%DA%DF%DFR%D1%DA%DF%A6%A7&Topic=0&Dist=0

ಸೆಂಟ್ರಲ್ ಗೊರ್ಮೆಂಟ್ ನಮಗೆ ಈ ಇಚಾರದಲ್ಲಿ ಅಣ್ಣೆ ಮಾಡುತ್ತಿದೆ. ಇದು ಸರಿನಾ? ನಮ್ಮ ಕಡೆ ನಾವು ಕನ್ನಡಿಗರು ಬೆಳಗಾವಿಯನ್ನು  ಬೆಳಗಾವಿ ಅಂತನೇ ಕರಿತೀವಿ. ನಮ್ಮ ನಾಡಿನ ಪಟ್ಟಣವನ್ನು ನಮ್ಮದೇ ಹೆಸರಿಟ್ಟು ಕರೆಯಲು ಈ ದೊಣ್ಣೇ ನಾಯಕರ ಅಪ್ಪಣೆ ಬೇಕಾ?

ಬೆಳಗಾವಿ ನಮ್ಮದೇ ನಾಡು. ಅಪ್ಪಟ ಕನ್ನಡ ನೆಲ. ತುಂಬಾ ಸಂಕಟವಾಗುತ್ತದೆ ಈ ಇಚಾರ ನೆನೆದು, ಮರಾಟಿಗರು ನಮ್ಮದೇ ನೆಲೆಗಳಾದ ಸೊಲ್ಲಾಪುರ, ಕೊಲ್ಲಾಪುರ ಇನ್ನೂ ಎಸ್ಟೋ ಊರುಗಳನ್ನು ಕಿತ್ತುಕೊಂಡು ಅಲ್ಲಿನ ಕನ್ನಡಿಗರ ಬಾಯಲ್ಲಿ ಮರಾಟಿಯನ್ನು ತುರುಕುತ್ತಿರುವದು ಸಾಲದೇ, ನಮ್ಮ ಅಳಿದುಳಿದ ನೆಲೆಗಳನ್ನೂ ಕಿತ್ತುಕೊಳ್ಳಲು ಹವಣಿಸುತ್ತಿದ್ದಾರೆ. ಈ ಅಣ್ಣೆಗಳನ್ನು ತಾಳಿಕೊಂಡಿರಬೇಕೇ ನಾವು?

ನಾವು ಮೂಗರಂತೆ ಸುಮ್ಮನಿದ್ದರೆ ಆಗದು. ನಮ್ಮ ಸರಕಾರ ಸರಕಾರಿ ವೆವಹಾರಗಳಲ್ಲಿ ಬೆಳಗಾವಿ ಅಂತವೇ ಬಳಸಲು ಮೊದಲು ಮಾಡಬೇಕು. ಅದ್ಯಾವನು ಬಂದು ತಡಿತಾನೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet