ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತೀ ನಂ ಶ್ರೀ

Ti Nam Shri
ಫೋಟೋ ಕೃಪೆ: [:http://prajavani.net|ಪ್ರಜಾವಾಣಿ]

ತೀ ನಂ ಶ್ರೀ ಸ್ಮರಣಾರ್ಥ ಪ್ರಜಾವಾಣಿಯ ಇಂದಿನ ಸಾಪ್ತಾಹಿಕ ಪುರವಣಿಯಲ್ಲಿ ಅವರ ಶಿಷ್ಯರಾಗಿದ್ದ ಡಾ|| ಎಂ ಚಿದಾನಂದಮೂರ್ತಿಯವರ ತೀ ನಂ ಶ್ರೀ ಕುರಿತ ಲೇಖನ [:http://prajavani.net/nov272005/35792200501127.php|ಪ್ರಕಟವಾಗಿದೆ, ಓದಿ].

ಲೇಖನದಿಂದ:

ಕನ್ನಡ ನಿಘಂಟು ಸಂಪಾದಕ ಸಮಿತಿಯ ಅಧ್ಯಕ್ಷರಾಗಿ ಆ ಪ್ರತಿಷ್ಠಿತ ಯೋಜನೆಗೆ ಒಂದು ಭದ್ರ ಅಸ್ತಿಭಾರ ಹಾಕಿದರು. ಅದರ ಸಂಪುಟಗಳು ಬಂದು ಹಲವು ವರ್ಷಗಳೇ ಆದರೂ ನಿಘಂಟಿನ ತಿದ್ದುಪಡಿ ಯೋಜನೆ ಸ್ಥಗಿತಗೊಂಡಿರುವುದು ಒಂದು ದುರಂತ.

ಈ ಪುಟಗಳನ್ನೂ ನೋಡಿ:
* [kn:ತೀ ನಂ ಶ್ರೀ|ತೀ ನಂ ಶ್ರೀ ಬಗ್ಗೆ ವಿಕಿಪೀಡಿಯ ಪುಟ].

ಕೆ ಎಸ್ ನ ಸ್ಮರಣೆ

Ke Es Na
ಫೋಟೋ ಕೃಪೆ: [:http://prajavani.net|ಪ್ರಜಾವಾಣಿ]

ಕೆ ಎಸ್ ನ ರವರನ್ನು ಸ್ಮರಿಸಿಕೊಳ್ಳುತ್ತ ಅವರ ಮಗ ಕೆ ಎನ್ ಹರಿಹರ ಬರೆದಿರುವ ಲೇಖನ [:http://prajavani.net/nov272005/35794200501127.php|ಪ್ರಜಾವಾಣಿಯಲ್ಲಿಂದು ಪ್ರಕಟವಾಗಿದೆ], ಓದಿ.

ಲೇಖನದಿಂದ:
ನನ್ನ ತಂದೆ ಕವಿ ಕೆ ಎಸ್ ನರಸಿಂಹಸ್ವಾಮಿ ಅವರು ವಿಧಿವಶರಾಗಿ ಇದೇ ಡಿಸೆಂಬರ್ ೨೮ನೇ ತಾರೀಖಿಗೆ ಎರಡು ವರ್ಷಗಳಾಗುತ್ತವೆ. ಕವಿ ಚೇತನ ಕಣ್ಮರೆಯಾದರೂ ಅವರ ಕಾವ್ಯ ಜನಮನದಲ್ಲಿ ಶಾಶ್ವತವಾಗಿ ಬೇರೂರಿದೆ.

ಈ ಪುಟಗಳನ್ನೂ ನೋಡಿ:
* [kn:ಕೆ.ಎಸ್. ನರಸಿಂಹಸ್ವಾಮಿ|ಕೆ ಎಸ್ ನ ಬಗ್ಗೆ ವಿಕಿಪೀಡಿಯ ಪುಟ].

ನನ್ನ ಮಗುವಿಗೊಂದು ಹೆಸರು ಕೊಡಿ

-ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿದಂತೆ ಎಂಬ ಗಾದೆ ಮಾತನ್ನು ನೀವು ಕೇಳಿದ್ದೀರಿ. ಅದರ ಸಾಕ್ಷಾತ್ ಅನುಭವ ಆಗಬೇಕೆಂದರೆ ನೀವು ಅಪ್ಪನೋ ಅಮ್ಮನೋ ಆಗಿರಬೇಕು. ಅದರಲ್ಲೂ ಮೊದಲ ಮಗುವಿನ ನಿರೀಕ್ಷೆ ಇದಕ್ಕೆಲ್ಲ ಸುಸಂದರ್ಭ. ನಾನೀಗ ಆ ಕಾಲಘಟ್ಟದಲ್ಲಿದ್ದೇನೆ ಅನ್ನೋದನ್ನ ಬೇರೆ ಹೇಳೊಲ್ಲ ಬಿಡಿ.

ಸಂಚಿಕೆ ೧: ಅಂತರಜಾಲದ ಜಾಹಿರಾತುಗಳನ್ನು ದೂರವಿಡುವುದು...

illustration

ಅಂತರಜಾಲದಲ್ಲಿ ಏನೆಲ್ಲ ಮಾಹಿತಿ ಉಂಟು! ಆದರದನ್ನು ಸರಿಯಾಗಿ ಬಳಸುವುದು, ಸರಿಯಾಗಿ ತಲುಪುವುದು ತಿಳಿಯದೆಯೇ ಅದರ ಸಂಪೂರ್ಣ ಉಪಯೋಗ ಪಡೆಯುವುದು ಸಾಧ್ಯವಾಗದು. ಅಂತದ್ದೇ ಒಂದು ತಿಳುವಳಿಕೆ ಇತ್ತೀಚೆಗೆ ಹೆಚ್ಚಾಗಿರುವ ಜಾಹಿರಾತುಗಳನ್ನು ದೂರವಿಡುವುದರ ಗುಟ್ಟು. ಇದನ್ನರಿಯಲು ಹರಸಾಹಸವೇನೂ ಮಾಡಬೇಕಿಲ್ಲ, ಸರಿಯಾದ ತಂತ್ರಾಂಶಗಳನ್ನು ಸ್ವಲ್ಪ ಸಮಯೋಜಿತವಾಗಿ ಬಳಸಿರುವಿರಾದರೆ ನಿಮಗೆ ಈಗಾಗಲೇ ಇದರ ಬಗ್ಗೆ ಗೊತ್ತಿರುವ ಸಾಧ್ಯತೆಗಳೂ ಉಂಟು. ಈ ಗುಟ್ಟು ಈಗ ಗುಟ್ಟಾಗದೆ, ಹಲವರ ಬಳಕೆಯಲ್ಲಾಗಲೇ ಇರುವುದು ಒಳ್ಳೆಯ ಬೆಳವಣಿಗೆ. ಇದನ್ನೋದುತ್ತಿರುವ ಹಲವರಿಗೆ ಇವೆಲ್ಲದರ ಬಗ್ಗೆ ತಿಳಿದಿರೋದಿಲ್ಲವೆಂದು ಊಹೆ ಮಾಡಿ ಕೆಳಗಿನದ್ದನ್ನು ಬರೆದಿದ್ದೇನೆ. ಗೊತ್ತಿರುವವರು ಕೆಳಗೆ ನೀಡಿರುವ ಮಾಹಿತಿಯಲ್ಲಿ ತಪ್ಪುಗಳಿದ್ದಲ್ಲಿ ತಿದ್ದಿ. ಗೊತ್ತಿಲ್ಲದವರು ತಪ್ಪದೇ ಓದಿ, ಈ ಲೇಖನದಲ್ಲಿ ಮೂಡಿಬರುವ ತಂತ್ರಾಂಶಗಳನ್ನು ಒಮ್ಮೆ ಬಳಸಿ ನೋಡುವ ಸಾಹಸ ಮಾಡಿ. ಈ ತಿಳುವಳಿಕೆ ಬಹಳ ಉಪಯೋಗವುಳ್ಳದ್ದು. ನಿಮ್ಮ ಬ್ಯಾಂಡ್ವಿಡ್ತ್ ಕೂಡ ಉಳಿಯತ್ತೆ, ಜಾಹಿರಾತುಗಳ ಕಾಟವೂ ತಪ್ಪತ್ತೆ.

ಲೇಖನವನ್ನು ಹಲವು ಅಧ್ಯಾಯಗಳಂತೆ ಪ್ರತಿ ವಿಧಾನವನ್ನೂ ಒಂದೊಂದು ಸಂಚಿಕೆಯಾಗಿ 'ಸಂಪದ'ದಲ್ಲಿ ಹಾಕುತ್ತ ಬರುವೆ. ಇದರ ಉಪಯೋಗ ಪಡೆದವರು, ಲೇಖನ ಮೆಚ್ಚಿಕೊಂಡವರು, ಮೆಚ್ಚಿಕೊಳ್ಳದವರು - ಎಲ್ಲರೂ ತಪ್ಪದೇ ನಿಮ್ಮ ಕಾಮೆಂಟುಗಳನ್ನು ಸೇರಿಸಿ. ಇದ್ದ ಸಮಯದಲ್ಲಿ ಒಂದಷ್ಟನ್ನು ಇದಕ್ಕೆ ತೆರವುಗೊಳಿಸಿ ಬರೆದಿರುವೆ - ಅದು ಎಷ್ಟರಮಟ್ಟಿಗೆ ಸಾಕಾರವಾಗಿದೆಯೆಂಬುದು ಲೇಖನ ಪಡೆದ ಪ್ರತಿಕ್ರಿಯೆಯಿಂದ ತಿಳಿದುಬರುವುದು. ಧನ್ಯವಾದಗಳು.

ಕೃತಜ್ಞತಾ ದಿನಾಚರಣೆ

೧೬೧೯ರ ಡಿಸೆಂಬರ್ ತಿಂಗಳು. ಹೊಸ ಬದುಕನ್ನರಸುತ್ತ ಇಂಗ್ಲೆಂಡಿನಿಂದ ಹೊರಟ ಕೆಲವು ಕುಟುಂಬಗಳನ್ನು ಹೊತ್ತ ನಾವೆಯೊಂದು ಅಮೇರಿಕೆಯ ದಡ ಮುಟ್ಟಿತು. ಛಳಿಗಾಲ. ನೂರಾರು ತಲೆಮಾರುಗಳಿಂದ ಅಲ್ಲಿಯೆ ಬಾಳಿ ಬದುಕಿದ್ದ ವಾಂಪನೊಅಗ್ ಜನಾಂಗದ ಅಮೇರಿಕೆಯ ಆದಿವಾಸಿಗಳು ಬಿಳಿಯರನ್ನು ಬರಮಾಡಿಕೊಂಡು ಅವರ ನೆರವಿಗೆ ಬಂದರು. ತಾವು ಬೆಳೆದ ಜೋಳ ಕೊಟ್ಟರು. ಜೊತೆಯಲ್ಲಿ ಬೇಟೆಯಾಡಿದರು. ಬಿಳಿಯರ ಧಾನ್ಯ ಇಲ್ಲಿ ಬೆಳೆಯದು. ವಾಂಪನೊಅಗ್ ಬಿತ್ತಲು ಬೀಜ ಕೊಟ್ಟರು, ಜಾಗ ಮಾಡಿಕೊಟ್ಟರು. ಹೊಸ ನೆಲದಲ್ಲಿ ಬದುಕುವ ಬಗೆ ಕಲಿಸಿಕೊಟ್ಟರು. ೧೬೨೧ರ ಕುಯ್ಲಿನಲಿ ಬಿಳಿಯರಿಗೆ ಕೈತುಂಬ ಬೆಳೆ ಬಂದಿತು. ಹೊಸ ನಾಡಿನಲ್ಲಿ ಬದುಕುವ ಜಾಡು ತಿಳಿದಿತ್ತು. ಇನ್ನು ಯಾವ ಭಯವೂ ಇಲ್ಲ. ಬಿಳಿಯರು ನಿಜವಾಗಿ ದಡ ಮುಟ್ಟಿದರು. ದೇವರಿಗೆ ಕೃತಜ್ಞತೆ ಹೇಳಿಕೊಳ್ಳಲು ಹಬ್ಬ ಮಾಡಿದರು.

ಪೆಂಗ್ವಿನಾಸನ

ಪಾತಾಂಜಲಿಯವರ ಸೂತ್ರಗಳಲ್ಲಿ ಇಲ್ಲದಿರುವು ಕೆಲವು ಆಸನಗಳು ಈ ಕಡಲ ಕೋಳಿ ವ್ಯಕ್ತಪಡಿಸುತ್ತಿದ್ದಂಗಿದೆ... ;-)

ಪ್ರಾರಂಭದಲ್ಲಿ ಗಂಭೀರವಾಗಿ ನಿಂತ್ಕೊಳಿ...