ಅಕ್ಷರದ ಮಹಿಮೆ!

ಅಕ್ಷರದ ಮಹಿಮೆ!

ಬರಹ

ಶುಭಾಷಯ/ಶ ದ ಚರ್ಚೆಯನ್ನು ಗಮನಿಸಿದಾಗ ನಾನು ಇನ್ನೂ ಕೆಲವೆಡೆ ನೋಡಿದ ಕೆಲವೊಂದು ಬರಹಗಳು ನೆನಪಿಗೆ ಬಂದವು. ಈ ಬರಹಗಳಲ್ಲಿ ಕೆಲವು ಪ್ರಯೋಗಗಳು ಆಯಾ ಪ್ರದೇಶದ ಶಬ್ದಬಳಕೆಯಿಂದಲೇ ಒಡಮೂಡಿದ್ದರೆ, ಕೆಲವೊಂದು ಗೊಂದಲದಿಂದ ಆದಂಥವುಗಳು. ಕೆಲವು ಅಕ್ಷರಗಳೆಂದರೇನು ಎನ್ನುವುದೇ ಗೊತ್ತಿಲ್ಲದವರು ಬರೆದಂತಹವು. ಆದರೂ ಒಳ್ಳೆಯ ತಮಾಶೆ ಎನಿಸುವುವು.

ಇವುಗಳು ನನಗೆ ಕಂಡಿದ್ದು ನಮ್ಮೂರಿನ ಗೋಡೆಗಳ ಮೇಲೆ.

೧) ಸಾರ್ವಜನಿಕರೆಲ್ಲರಿಗೂ "ದಿವಾಳಿ"ಯ "ಆರ್ಥಿಕ" ಶುಭಾಶಯಗಳು!

೨) ಬಸವಣ್ಣನಗುಡಿಬೀದಿಯ ನಿವಾಸಿಗಳಿಗೆ ದೀಪಾವಳಿಯ "ಆರ್ತಿಕ" ಶುಭಾಶಯಗಳು!

೩) ಹೊಸವರುಷ ನಿಮಗೆ ತರಲಿ "ಹರುಸ"!

ಹರಪನಹಳ್ಳಿಯ ಕಾಲೇಜುಶಿಕ್ಷಕರೊಮ್ಮೆ ವಿದೇಶಪ್ರವಾಸಕೈಗೊಂಡಾಗ ಬರೆದ ಅಭಿನಂದನಾ ಲೇಖನದಲ್ಲಿ ಈ ರೀತಿ ಇತ್ತು.

ನಗರದ ಖ್ಯಾತಿವೆತ್ತ ಶಿಕ್ಷಕರಾದ ಪಟ್ಟಣಶೆಟ್ಟಿಯವರು ಇಂದು "ಮುಂಜಾನೆ" "ಬೆಳಗಿನ ಜಾವ" ವಿದೇಶ ಯಾನ ಕೈಗೊಂಡರು. ಅವರು ದಿಲ್ಲೀ ರೋಮದ ಮುಖಾಂತರ ಅಮೇರಿಕಾವನ್ನು ತಲುಪಲಿದ್ದಾರೆ. ಇವರಿಗೆ ಶುಭಹಾರೈಕೆಗಳು.

ಯೋಚಿಸಿ ನೋಡಿ ಏನಿರಬಹುದೆಂದು?

ಪರವೂರಿನಲ್ಲೊಮ್ಮೆ ನೋಡಿದ ಅಂಗಡಿಯ ಬೋರ್ಡಿನ ಮೇಲೆ ಬರೆದಿದ್ದು ಹೀಗೆ.
ದಗದಗ ಸೈಕಲ ಶಾಪ! ಇದೇನೆಂದು ಗೊತ್ತಾದರೆ ಸುಸ್ತು!

ಚಾಮರಾಜಪೇಟೆಯಲ್ಲಿ ಚುನಾವಣೆಗೆ ನಿಂತು ಗೆದ್ದ ನಂತರ ಎಸ್.ಎಮ್. ಕೃಷ್ಣರು ರಾಯನ್ ಸರ್ಕಲ್ಲಿನಲ್ಲಿ ಹಾಕಿಸಿದ್ದ ಬೋರ್ಡಿನಲ್ಲಿ ಚಾಮರಾಜಪೇಟೆಯ ಮತದಾರರಿಗೆ ಕೃತಘ್ನತೆಗಳು ಎಂದಿತ್ತು.! ಅದೂ ದೊಡ್ಡದಾಗಿ ಹಾಕಿಸಿದ್ದ ಹೋರ್ಡಿಂಗಿನಲ್ಲಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet