ಎಲ್ಲಾ ಸಂಪದಿಗರಿಗೂ ’ಶ್ರೀ ಸರ್ವಜಿತ್ ಸಂವತ್ಸರ” ದ ಹಾರ್ದಿಕ ಶುಭಾಶಯಗಳು !

ಎಲ್ಲಾ ಸಂಪದಿಗರಿಗೂ ’ಶ್ರೀ ಸರ್ವಜಿತ್ ಸಂವತ್ಸರ” ದ ಹಾರ್ದಿಕ ಶುಭಾಶಯಗಳು !

ಬರಹ

ಆತ್ಮೀಯ ಸಂಪದಿಗರೆ,

"ಶ್ರೀ ಸರ್ವಜಿತ್ ಸಂವತ್ಸರ"ವು ನಿಮ್ಮ ಬಾಳಿನಲ್ಲಿ ನವಉತ್ಸಾಹ, ಸಂತೋಷ, ಸಮಾಧಾನ ಸಂತೃಪ್ತಿಯನ್ನು ತಂದುಕೊಡಲಿ. ಈ ವರ್ಷ ಚಾಂದ್ರಮಾನ ರೀತಿ ಚೈತ್ರ ಶುಕ್ಲ ಪ್ರತಿಪತ್ ತಾ. ೧೯-೦೩-೨೦೦೭ ನೇ ಸೋಮವಾರದ ದಿನ ಆಚರಿಸಲಾಗುವುದು.

ಸೌರಮಾನ ರೀತಿ, ಸೂರ್ಯನು ನಿರಯಣ ಮೇಷ ರಾಶಿ ಪ್ರವೇಶಿಸುವ ಪುಣ್ಯ ಕಾಲದ ದಿನ, ತಾ. ೧೪-೦೪-೨೦೦೭ ನೇ ಶನಿವಾರವೂ ಯುಗಾದಿಹಬ್ಬವನ್ನು ಆಚರಿಸಬಹುದು.

ಪ್ರಾತಃಕಾಲದಲ್ಲಿ ಅಭ್ಯಂಜನದ ನಂತರ, ಹೊಸ ವರ್ಷದ ಪಂಚಾಂಗವನ್ನು ಪರಮಾತ್ಮನ ಬಳಿ ಇಟ್ಟು ಶ್ರೀ ಮಹಾಗಣಪತಿಯ ಪೂಜೆಯಿಂದ ಪ್ರಾರಂಭಿಸಿ, ಕುಲದೇವತಾರ್ಚನೆಯನ್ನು ನಡೆಸಬೇಕು.
ಬೇವು-ಬೆಲ್ಲಗಳ ಸೇವನೆ, ಮತ್ತು ’ಪಂಚಾಂಗ ಶ್ರವಣ” ಈ ದಿನದ ಪ್ರಮುಖ ಕಾರ್ಯಗಳು. ಇದನ್ನು ಇಷ್ಟ ಜನರ ಸಮ್ಮುಖದಲ್ಲಿ ಮಾಡಬೇಕು.

ಸಾಯಂಕಾಲ ದೇವಸ್ಥಾನಕ್ಕೆ ಹೋಗಿ ಬಂದನಂತರ, ’ಪಾಡ್ಯ” ದ ಚಂದ್ರನ ದರ್ಶನಮಾಡಿ ಹಿರಿಯರಿಗೆ ನಮಸ್ಕಾರಮಾಡಿ ಅವರ ಆಶೀರ್ವಾದ ಪಡೆಯಬೇಕು. ಚಿಕ್ಕ ರೇಖೆಯಂತಿರುವ ಚಂದ್ರನ ದರ್ಶನ ಕೆಲವೊಮ್ಮೆ ಕಷ್ಟವಾದರೆ, ಅದರ ಮುಂದಿನ ದಿನವಾದರೂ ’ಚಂದ್ರನ ದರ್ಶನ” ಅತ್ಯಾವಶ್ಯಕ. ಒಂದು ವೇಳೆ ’ಗಣೇಶನ ಹಬ್”ದ ದಿನದಂದು ಅಚಾತುರ್ಯದಿಂದ ಚಂದ್ರನ ದರ್ಶನವಾಗಿದ್ದರೆ, "ಉಗಾದಿಯ ಚಂದ್ರ ದರ್ಶನ" ದಿಂದ ’ಮಿಥ್ಯಾಪವಾದ’ದ ಪರಿಹಾರ ಸಿಗುತ್ತದೆ.

ಸರ್ವರಿಗೂ ಮಂಗಳವಾಗಲಿ. ಶುಭಮಸ್ತು.