ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗ್ರಾಮೀಣ ಬಡತನ ಇಳಿಕೆ

ದೇಶದಲ್ಲಿ ಬಡತನ ಪ್ರಮಾಣ ಕಡಿಮೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಬಡತನವು ಹೆಚ್ಚು ವೇಗವಾಗಿ ಕಡಿಮೆಯಾಗುತ್ತಿದೆ ಎಂಬುದಾಗಿ ವರದಿಯೊಂದು ತಿಳಿಸಿರುವುದು ಚೇತೋಹಾರಿ ವಿಷಯವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡೆಸಿರುವ ಸಮೀಕ್ಷೆಯೊಂದು ಈ ಅಂಶವನ್ನು ತಿಳಿಸಿದ್ದು, ೨೦೨೩-೨೪ರಲ್ಲಿ ಗ್ರಾಮೀಣ ಬಡತನವು ಶೇ. ೪.೮೬ ಕ್ಕೆ ಕುಸಿದಿದ್ದು, ಇದು ಅದಕ್ಕಿಂತ ಹಿಂದಿನ ವರ್ಷ ಶೇ.

Image

ಸಾವಿತ್ರಿಬಾಯಿ ಪುಲೆ ಮತ್ತು ಲೂಯಿಸ್ ಬ್ರೈಲ್

ಬಾಳ ಬೆಳಕಿನ ಕಿರಣಗಳನ್ನು ಸೃಷ್ಟಿಸಿದ ಸಾಧಕ ವ್ಯಕ್ತಿತ್ವಗಳಾದ ಶ್ರೀಮತಿ ಸಾವಿತ್ರಿಬಾಯಿ ಪುಲೆ ಮತ್ತು ಲೂಯಿಸ್ ಬ್ರೈಲ್ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಅದನ್ನು ಎಲ್ಲರಿಗೂ ನೆನಪಿಸುತ್ತಾ.........

Image

ಸ್ಟೇಟಸ್ ಕತೆಗಳು (ಭಾಗ ೧೧೯೧) - ಒಣ ಮಹೋತ್ಸವ

ಶಾಲೆಯಲ್ಲಿ ವನಮಹೋತ್ಸವಕ್ಕೆ ತುಂಬಾ ಅದ್ಭುತವಾಗಿ ನಡೆಯಲು ತಯಾರಾಗ್ತಾ ಇದೆ. ಹೊರಗಡೆ ಪರಿಸರವನ್ನ ಉಳಿಸುವ ದೊಡ್ಡ ದೊಡ್ಡ ಘೋಷ ವಾಕ್ಯಗಳು, ಎಲ್ಲರಿಗೂ ಉಡುಗೊರೆಯಾಗಿ ನೀಡಲು ತಂದಿರುವ ತರೇವಾರಿ ಗಿಡಗಳು, ಈ ಕಾರ್ಯಕ್ರಮವನ್ನು ಉದ್ಘಾಟಿಸಲೆಂದೇ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ದೊಡ್ಡ ದೊಡ್ಡ ಗಣ್ಯರು, ಹಸಿರುಡಿಗೆ ತೊಟ್ಟ ಎಲ್ಲ ಮಕ್ಕಳು. ಎಲ್ಲರೂ ಕಾರ್ಯಕ್ರಮಕ್ಕೆ ಎದುರು ನೋಡುತ್ತಿದ್ದಾರೆ.

Image

ನಾಮದ ನೀರು ಕೋಳಿ

ಕಳೆದ ವಾರದ ಹಕ್ಕಿ ಕಥೆಯಲ್ಲಿ ನಾವು ಬಾತುಕೋಳಿಗಳ ಬಗ್ಗೆ ಮಾತನಾಡಿದ್ದೆವು. ಒಮ್ಮೆ ಹೀಗೇ ನನ್ನ ಬೈನಾಕುಲಾರ್‌ ಹಿಡಿದುಕೊಂಡು ಬೆಳಗ್ಗಿನ ವಾಕಿಂಗ್‌ ಹೊರಟಿದ್ದೆ. ಅಕ್ಟೋಬರ್‌ ತಿಂಗಳು ದಸರಾ ರಜೆ ಸಿಕ್ಕಿತ್ತು. ದಸರಾ ರಜೆಗೆಂದು ನನ್ನ ಮಡದಿಯ ಊರಾದ ಸಾಗರಕ್ಕೆ ಬಂದಿದ್ದೆ. ಆಗತಾನೇ ಮಳೆಗಾಲ ಮುಗಿದು ಚಳಿ ಪ್ರಾರಂಭವಾಗಿತ್ತು.

Image

ಕಂಡದ್ದು ಕಾಣದ್ದು

ಪುಸ್ತಕದ ಲೇಖಕ/ಕವಿಯ ಹೆಸರು
ಸುಭಾಷ್ ರಾಜಮಾನೆ
ಪ್ರಕಾಶಕರು
ಆಕೃತಿ ಪುಸ್ತಕ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ಸುಭಾಷ್ ರಾಜಮಾನೆಯವರ ಲೇಖನಗಳ ಸಂಗ್ರಹವು ‘ಕಂಡದ್ದು ಕಾಣದ್ದು’ ಎನ್ನುವ ಹೆಸರಿನಿಂದ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಡಾ. ಕೆ ವಿ ನಾರಾಯಣ. ಇವರು ತಮ್ಮ ಬೆನ್ನುಡಿಯಲ್ಲಿ “ಕಿರಿಯ ಗೆಳೆಯ ಸುಭಾಷ್ ರಾಜಮಾನೆ ಈ ದಿನಮಾನಗಳಲ್ಲಿ ಕಾಣೆಯಾಗುತ್ತಿರುವ ಪುಸ್ತಕಮೋಹಿಗಳ ಪರಂಪರೆಗೆ ಸೇರಿದವರು. ರಾಶಿ ರಾಶಿ ಹೊತ್ತಗೆಗಳನ್ನು ಕೂಡಿಡುವುದರ ಜೊತೆಗೆ ಓದುವ ಹೊಣೆಯನ್ನೂ ಹೊತ್ತಿರುವವರು.