ಒಂದು ಗಝಲ್
ಕವನ
ಹವ್ಯಕರು ಜಾತ್ಯಾತೀತರು ಖುಷಿಯ ವಿಚಾರ ಗೆಳೆಯ
ಸಮ್ಮೇಳನದ ಮೂಲಕ ತೋರಿಸಿದ್ದು ಸುವಿಚಾರ ಗೆಳೆಯ
ತಪ್ಪುಗಳನ್ನು ಹುಡುಕುವರಿಗೆ ಮೊಸರಲ್ಲೂ ಕಲ್ಲಂತೆ ಹೌದೆ
ಜೀವನದ ಜಾತ್ರೆಯಲ್ಲಿ ಹೀಗೆಯೇ ಎಲ್ಲವೂ ವಿಕಾರ ಗೆಳೆಯ
ಸತ್ಯ ಇರುವಲ್ಲಿ ಮಿಥ್ಯವೂ ಯಾವತ್ತೂ ಹತ್ತಿರದಲ್ಲಿ ಇರುತ್ತದೆ
ಚಿತ್ತವನ್ನು ಕೆಡಿಸುವಂತ ಮಂದಿಯೇ ಶ್ರೇಷ್ಠರು ಬೇಸರ ಗೆಳೆಯ
ಸಾಧನೆಯ ಉತ್ತುಂಗದಲ್ಲಿಹ ಸಾಧಕರು ಮೌನವಾಗಿರುವರು
ಛಲವಿದ್ದರೂ ಅವರ ಮೇಲೇರಲು ಬಿಡದಂತ ಪರಿಸರ ಗೆಳೆಯ
ಸೋಲಾದರೂ ಗೆಲುವೊಂದು ಸಿಗಬಹುದು ಎಂಬ ಆಸೆ ಈಶಾ
ಜೀವನದಲ್ಲಿಯ ಪಾಠಗಳ ನಡುವೆ ನಿರೀಕ್ಷೆಯ ಕಾತರ ಗೆಳೆಯ
-ಹಾ ಮ ಸತೀಶ ಬೆಂಗಳೂರು, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
