ಒಂದು ಗಝಲ್

ಒಂದು ಗಝಲ್

ಕವನ

ಅಲೆಯ ರೂಪದಿ ನಿನ್ನ ಸೆಳೆಯುತ ಮಡಿಲಿನಾಸರೆ ಪಡೆದೆನು

ಚಂದ್ರನಂತೆಯೆ ತಂಪನೀಯುತ ಒಲವಿನಾಸರೆ ಪಡೆದೆನು

 

ಸವಿಯ ಚುಂಬನ ಸೋರಿ ಹೋಗದೆ ಇರಲು ಏನನು ಮಾಡಲಿ

ಕನಸು ಕಳೆಯುತ ಚೆಲುವಿನಾಟದಿ ನನಸಿನಾಸರೆ ಪಡೆದೆನು

 

ಬಾನು ಹೊಳೆಯಲು ಕಣ್ಣಿನೊಳಗಡೆ ಚೆಲುವ ಸಂಭ್ರಮ ಕಂಡಿತೆ 

ಮನಸಿನೊಳಗಡೆ ಖುಷಿಯು ಕಾಣಲು ಉಸಿರಿನಾಸರೆ ಪಡೆದೆನು

 

ಚಿಂತೆ ಮಾಡುತ ಕುಳಿತುಕೊಂಡರೆ ಮೋಹ ಹುಟ್ಟಲು ಸಾಧ್ಯವೆ 

ತನುವಿನಾಳದಿ ಸೇಲೆಯು ಉಕ್ಕಲು ಬೆಸುಗೆಯಾಸರೆ ಪಡೆದೆನು 

 

ಹೃದಯದಿ ಸ್ನೇಹವುಕ್ಕಲು ಸಪ್ನ ಮಂದಿರ ಮುರಿಯದು ಈಶಾ

ಜೀವ ನದಿಯೊಳು ತಮವು ಕಳೆಯಲು ಪ್ರೀತಿಯಾಸರೆ ಪಡೆದೆನು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್