ವಿಧ: ಬ್ಲಾಗ್ ಬರಹ
April 07, 2008
ಇಗೋ ಬಂತು ಯುಗಾದಿ
ನವ ವರುಷದ ನಾಂದಿಗೆ
ಬೇವು ಬೆಲ್ಲ ಹಂಚಿ ತಿನ್ನಿರೆಲ್ಲ
ಮರಳಿ ಬರಲಿ ಚಿತ್ತ ಶಕ್ತಿ ಬಾಳಿಗೆ.
ಮರಗಳಲ್ಲಿ ಎಲೆಗಳುದುರಿ
ಕುಳಿರ್ಗಾಳಿ ತೊಲಗಿದೆ
ಎದೆಗಳಲ್ಲಿ ಹೂಗಳರಳಿ
ಮಧುರ ಭಾವ ಮೊಡಿದೆ.
ಮಾಂದಳಿರಿನ ತೋರಣದಲಿ
ಹಸಿರು ಹೊನ್ನು ಕರೆದಿದೆ
ಮನೆ ಮನಗಳ ಓರಣದಲಿ
ಪ್ರೀತಿ ಪ್ರೇಮ ಮೆರೆದಿದೆ.
ಪಂಚಾಗದ ಶ್ರವಣದಲಿ
ಗ್ರಹಗತಿ ವಿಶ್ಲೇಷಣೆ ನಡೆದಿದೆ
ಅಷ್ಟಾಂಗ ಯೋಗದಲಿ
ನೆಮ್ಮದಿಗೆ ಸಾಧನೆಯೆ ಕಾದಿದೆ.
ಹರೆಯದ ಮಧು ಪಲ್ಲವದಲಿ
ಹೊಸ ಹರುಷವೆ ತೇಲಿದೆ
ಚಂದ್ರಮನ ಡೊಂಕಿನಲ್ಲೂ…
ವಿಧ: Basic page
April 07, 2008
(ಇ-ಲೋಕ-69)(07/4/2008)
ಕಂಪ್ಯೂಟರೀಕರಣಗೊಂಡ ಬ್ಯಾಂಕುಗಳ ವ್ಯವಹಾರ ಪಾರದರ್ಶಕವಾಗಿರುತ್ತವೆ,ಸಾಲದ ಮೇಲಿನ ಬಡ್ಡಿ ಲೆಕ್ಕಾಚಾರ ಸರಿಯಿರುತ್ತದೆ ಎಂಬ ತಿಳುವಳಿಕೆ ಹೊಂದಿದ ಬ್ಯಾಂಕು ಗ್ರಾಹಕರು ನೀವಾಗಿದ್ದರೆ,ಎಚ್ಚೆತ್ತು ಕೊಳ್ಳಿ.ಸರಿಯಾಗಿ ಅಭಿವೃದ್ಧಿ ಪಡಿಸದ ತಂತ್ರಾಂಶ ಕಾರಣ,ಬ್ಯಾಂಕು ಸಾಲದ ಮೇಲೆ ಬೀಳುತ್ತಿರುವ ಬಡ್ಡಿಯೇ ತಪ್ಪಾಗಿರಬಹುದು!
ಉಡುಪಿ ಜಿಲ್ಲೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಬ್ಯಾಂಕಿನಲ್ಲಿ ಮನೆ ಕಟ್ಟಲು ಸಾಲ ತೆಗೆದು ಕೊಂಡ ಈ ಬರಹಗಾರನ ಅನುಭವವನ್ನೇ ಕೇಳಿ.ಸಾಲ…
ವಿಧ: Basic page
April 07, 2008
ಇತ್ತೀಚೆಗೆ ಅಂದರೆ ೦೪-೦೪-೨೦೦೮ರಂದು ಮೈಸೂರಿನಲ್ಲಿ ಮೈಸೂರು ರಮಾನಂದ್ ಮತ್ತು ಮೈಸೂರಿನ ವಿ. ಉದಯಕುಮಾರ್ ಅವರ ಜಂಟಿ ಲೇಖನದಲ್ಲಿ ತಯಾರಾಗಿರುವ ’ನಾನಿನ್ನೂ ಸತ್ತಿಲ್ಲ’ ಎಂಬ ಸಾಮಾಜಿಕ ಕಳಕಳಿಯ ನಾಟಕದ ಪುಸ್ತಕದ ಬಿಡುಗಡೆಯಾಯಿತು. ೧೯೮೪ರಲ್ಲಿ ಮೊದಲು ಪ್ರದರ್ಶನ ಕಂಡ ಈ ಸ್ವಯಂ ರಚನೆಯ ನಾಟಕವನ್ನು ಇದುವರೆಗೂ ಸಾವಿರದ ಮೇಲೆ ಪ್ರದರ್ಶನ ನೀಡಿರುವ ಈ ಇಬ್ಬರು ನಟರು ೨೫ವರ್ಷದ ನಂತರ ನಾಟಕವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ತತ್ಸಂಬಂಧವಾಗಿ ಮೈಸೂರಿನ ಕಲಾಮಂದಿರ, ಇಲ್ಲಿ ಏರ್ಪಡಿಸಿದ್ದ…
ವಿಧ: ಬ್ಲಾಗ್ ಬರಹ
April 07, 2008
ಹೊಗೇನಕಲ್ ನೀರಾವರಿ ಕಾಮಗಾರಿಯ ಕುರಿತಾಗಿ ನಟ ಶ್ರೀ ರಜನಿಕಾಂತ್ ಅವರು ಐದು ಕೋಟಿ ಜನ ಕನ್ನಡಿಗರಿಗೆ ಒದೆಯಬೇಕು ಎಂದು ಹೇಳಿದ್ದಾರೆ ಎಂದು ನಮ್ಮ ಸೋ ಕಾಲ್ಡ್ ರಾಜಕಾರಣಿಗಳು ಮತ್ತು ಹಿರಿಯರೆನಿಸಿಕೊಂಡ ಮೇಧಾವಿ ಚಲನಚಿತ್ರ ನಟರು ರಜನಿಕಾಂತ್ ಅವರನ್ನು ಕನ್ನಡಿಗರ ಕ್ಷಮೆ ಕೇಳಬೇಕೆಂದು ಕೇಳುತ್ತಿರುವುದು ಹೇಸಿಗೆಯ ಸಂಗತಿಯಾಗಿದೆ. ರಜನಿಕಾಂತ್ ಅವರು ಹಾಗೆ ಹೇಳಿರುವುದು ಸಾಧವೇ ಇಲ್ಲ ಆದರೂ ಕ್ಷಮೆ ಕೇಳಬೇಕೆಂಬ ಹೀನಾಯ ರಾಜಕೀಯ ಪ್ರಚಾರ ನಮ್ಮ ಕಳಪೆ ರಾಜಕಾರಣಿಗಳಿಗೆ ಯಾಕೆ ಬೇಕು?
ಕರ್ನಾಟಕದಲ್ಲಿ ಜನಪರ…
ವಿಧ: ಚರ್ಚೆಯ ವಿಷಯ
April 07, 2008
ಕನ್ನಡದ ಜನಪ್ರಿಯ ನಟಿಯೊಬ್ಬರು ಅತ್ತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಗೆದ್ದ ಮಾತ್ರಕ್ಕೆ ಅವರು ರಜನಿಕಾಂತ್ ಅವರು ಕ್ಷಮೆ ಕೇಳಲಿ, ನಾವು ಕ್ಷಮಿಸಿ ದೊಡ್ಡವರಾಗೋಣ ಏಂಬ ಆಸೆ ನನ್ನದು ಎಂದು ಟಿ ವಿ ೯ ಚಾನೆಲ್‍ನಲ್ಲಿ ಬಹಿರಂಗವಾಗಿ ಹೇಳಿದ್ದರು. ಅಂದರೆ ಅವರೆಂದಿಗೂ ದೊಡ್ಡವರೇ ಅಲ್ಲ ಎಂದೇ ಅರ್ಥ. ಇಂಥ ದುರಾಸೆಗಳಿಗೆ ಬಿದ್ದಿರುವ ನಟರಿಗೆ ಅದ್ಯಾರು ರಾಷ್ಟ್ರ ಪ್ರಶಸ್ತಿ ಕೊಟ್ಟರೋ ಏನೋ?
ಹಾಗೂ ರಜನಿಕಾಂತ್ ಅವರು ಹೇಳಿರುವುದು ಐದು ಕೋಟಿ ಕನ್ನಡಿಗರಿಗೆ ಒದೆಯಿರಿ ಎಂದಲ್ಲ. ಸಾಮಾನ್ಯ ಜನರ ಜೀವನ…
ವಿಧ: ಬ್ಲಾಗ್ ಬರಹ
April 07, 2008
ಯುಗಾದಿ ಮರಳಿ ಬರುತಿದೆ...................
ಕತ್ತಲು ಸರಿದು..
ಬೆಳಕು ಹರಿದು
ಕನಸು ಮುಗಿದು
ಮನಸು ಜಿಗಿದು
ನೋವು ಮಂಜಿನ ಹಾಗೆ ಕರಗಿ
ನಲಿವು ಬೆಳಕಿನ ಹಾಗೆ ಹರಿದು
ಈ ಯುಗಾದಿಯು ನಿಮಗೆಲ್ಲಾ ವರ್ಷಪೂರ್ತಿ ಹರ್ಷ ತರಲೆಂದು ಆ ದೇವರನ್ನು ಪ್ರಾರ್ತಿಸುವೆ!!!!!!
ನಿಮಗೆಲ್ಲಾ ಯುಗಾದಿ ಹಬ್ಬದ ಹಾರ್ಥಿಕ ಶುಭಾಶಯಗಳು
ವಿಧ: ಬ್ಲಾಗ್ ಬರಹ
April 06, 2008
ಆತ್ಮೀಯರೇ,
ಇಂಥದೊಂದು ಬ್ಲಾಗ್ ಪ್ರಾರಂಭಿಸಲು ಕನಸು ಕಾಣುತ್ತಿದ್ದ ನನಗೆ, ಬರೆದ ಬರಹಗಳನ್ನು ಅಂತರ್ಜಾಲ ತಾಣಕ್ಕೆ ತರುವುದು ಹೇಗೆ ಎಂಬ ಸಮಸ್ಯೆ ಕಾಡುತ್ತಿತ್ತು. ಯಾರ ಸಹಾಯವೂ ಇಲ್ಲದೆ, ಇದ್ದ ಸ್ವಲ್ಪ ಸಮಯದಲ್ಲಿ ಉತ್ತಮವಾದ ಬರಹಗಳನ್ನು, ನಿಧಾನಗತಿಯಲ್ಲಿ, ಬರಹ ತಂತ್ರಾಂಶದಲ್ಲಿ ಟ್ಯೆಪ್ ಮಾಡುವುದು ಸುಲಭವಾಗಿರಲಿಲ್ಲ.
ಈ ಸಂದರ್ಭದಲ್ಲಿ ಸಮಾನ ಮನಸ್ಕರಾದ ನಾವೊಂದಿಷ್ತು ಜನ ನಿತ್ಯ ಸ್ವಲ್ಪ ಸಮಯ ಬರೆದು ’ಬ್ಲಾಗ್ ಬ್ಯಾಗ’ ತುಂಬುವುದು ಎಂದು ನಿರ್ಧರಿಸಿದೆವು. ಹಾಗೆ ಶುರುವಾಗಿದ್ದು ಚಾಮರಾಜ ಸವಡಿ…
ವಿಧ: ಬ್ಲಾಗ್ ಬರಹ
April 06, 2008
ಇತ್ತೀಚೆಗೆ ಪುಸ್ತಕವೊಂದನ್ನು ಓದುತ್ತಿದ್ದಾಗ, ಸುಮಾರು ಹತ್ತು ವರ್ಷಗಳ ಹಿಂದೆ ಅನಾಮಿಕ ಸಾಧುವೊಬ್ಬ ಹೇಳಿದ ಮಾತು ನೆನಪಾಯ್ತು.
’ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಅಪಾರ ಶಕ್ತಿ ಇರುತ್ತದೆ. ವಿಶಿಷ್ಟ ಪ್ರತಿಭೆ ಇರುತ್ತದೆ. ತನ್ನ ಸುತ್ತಮುತ್ತಲಿನ ಸಂದರ್ಭಗಳನ್ನು ಬಳಸಿಕೊಂಡು ಬೆಳೆಯುವಂತಹ ಅವಕಾಶಗಳು ಎಲ್ಲರಿಗೂ ಇದ್ದೇ ಇರುತ್ತವೆ.
ಆದರೆ, ತುಂಬ ಜನರು ತಮ್ಮಲ್ಲಿ ಅಡಗಿರುವ ಸಾಮರ್ಥ್ಯದ ಬಗ್ಗೆ ಯೋಚಿಸುವುದೇ ಇಲ್ಲ. ತಮಗೆ ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಳ್ಳುವುದೇ ಇಲ್ಲ. ಅವರ…
ವಿಧ: ಬ್ಲಾಗ್ ಬರಹ
April 06, 2008
ಬಹುತೇಕ ಭಾರತೀಯರ ಸಂಕುಚಿತ ಮನಃಸ್ಥಿತಿಯನ್ನು ಎರಡು ಪ್ರಮುಖ ಬೆಳವಣಿಗೆಗಳು ಬಹಿರಂಗಪಡಿಸಿವೆ.
ಮೊದಲನೆಯದು, ಕಳೆದ ಒಂದೆರಡು ತಿಂಗಳುಗಳಿಂದ ನಡೆದಿರುವ ಉಡುಪಿ ಪರ್ಯಾಯ ವಿವಾದ. ಎರಡನೆಯದು, ವಾರಾಂತ್ಯದಲ್ಲಿ ಪ್ರದರ್ಶಿಸಲ್ಪಟ್ಟ ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ’ನ್ಯಾನೊ’.
ಪರ್ಯಾಯ ಪೀಠ, ಕೃಷ್ಣ ಪೂಜೆ ಹಾಗೂ ಪುತ್ತಿಗೆ ಶ್ರೀಗಳ ವಿದೇಶಿ ಪಯಣದ ಕಥೆಯನ್ನು ಓದುತ್ತಿದ್ದರೆ ನಗೆ ಬರುತ್ತದೆ, ವಿಷಾದವೂ ಆಗುತ್ತದೆ. ಏಕೆಂದರೆ, ಕೃಷ್ಣ ಅತ್ಯಂತ ಮುಕ್ತ ಮನಸ್ಸಿನಿಂದ ಬದುಕಿದ ವ್ಯಕ್ತಿ. ಜೀವನ…
ವಿಧ: ಬ್ಲಾಗ್ ಬರಹ
April 06, 2008
ಹಲವಾರು ಬಾರಿ ಹಾಗನ್ನಿಸಿದೆ.
ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ.
ಏಕೆ ಹಾಗಾಗುತ್ತದೆ?
ನಾನು ಸತ್ಯ ಹೇಳಿದರೆ ನಮ್ಮ ಇದ್ದಬದ್ದ ಸಂಬಂಧ ಅಲ್ಲಿಗೇ ಮುಕ್ತಾಯವಾಗುತ್ತದೆ ಎಂಬುದು ನನಗೆ ಗೊತ್ತು. ಅದು ವೃತ್ತಿಪರ ಆಗಿರಬಹುದು ಅಥವಾ ವೈಯಕ್ತಿಕವಾಗಿರಬಹುದು- ಒಟ್ಟಿನಲ್ಲಿ ನಮ್ಮ ಸಂಬಂಧ ಅಂತ್ಯಗೊಳ್ಳುತ್ತದೆ.
ತುಂಬ ಸಾರಿ ನೋಡಿದ್ದೇನೆ:…