ಎಲ್ಲ ಪುಟಗಳು

ಲೇಖಕರು: msprasad
ವಿಧ: Basic page
April 09, 2008
ಖ್ಯಾತ ಅಮೇರಿಕನ್ ಮಾಡೆಲ್ "ನವೋಮಿ ಕ್ಯಾಂಪ್ಬೆಲ್ (Naomi Campbell)"ಳನ್ನು ಲಂಡನ್ ಹೀಥ್ರೋ ವಿಮಾನ ನಿಲ್ದಾಣದ ಅತ್ಯಂತ ಬ್ಯುಸಿಯಾಗಿರುವ 5ನೇ ಟರ್ಮಿನಲ್ ನಲ್ಲಿ ಅರೆಸ್ಟ್ ಮಾಡಲಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಆಕೆಯು ಲಂಡನ್ನಿಂದ ಅಮೇರಿಕಾದ ಲಾಸ್ ಏಂಜಲೀಸ್ ನಗರಕ್ಕೆ ಹಾರುವರಿದ್ದಳು. ತನ್ನ ಒಂದು ಬ್ಯಾಗನ್ನು ವಿಮಾನಕ್ಕೆ ಲೋಡ್ ಮಾಡಲಿಲ್ಲ ಎಂದು ಕೋಪ ಮಾಡಿಕೊಂಡು, ಬ್ರಿಟಿಷ್ ಏರ್ ವೇಸ್ ಉದ್ಯೋಗಿಗಳನ್ನು ಹೀನಾಮಾನ ಬಯ್ದು, ರೇಗಾಡಿ, ಕೂಗಾಡಿ ರಂಪ ಮಾಡಿದಳು ಎಂದು ಹೇಳಲಾಗಿದೆ.…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
April 09, 2008
ಬಿ.ಜೆ.ಪಿ ಯ ಯಡ್ಡಿಯವರು ಹೊಗೇನಕಲ್ ಯೋಜನೆಯನ್ನು ಪ್ರತಿಭಟಿಸಿ ತಾವು ಕನ್ನಡಿಗರ ಹಿತಕ್ಕೆ ಬದ್ಧ ಎಂದು ಸಾಬೀತು ಪಡಿಸಿದ್ದಾರೆ. ಅವರ ಒಂದು ಸಣ್ಣ ಪ್ರತಿಭಟನೆಯಿಂದಲೇ ಕಿಡಿಎದ್ದು ಯೋಜನೆಗೆ ತಾತ್ಕಾಲಿಕೆ ಅಡಚಣೆಯಾಗಿದೆಯೇ? ಬೇರೆ ಪಕ್ಷದವರು ಬರೀ ಹೇಳಿಕೆಗಳನ್ನು ಕೊಡುವುದರಲ್ಲೇ ಕಾಲ ಕಳೆದರೇ ಹೊರತು ಇನ್ನೇನೂ ಮಾಡಲಿಲ್ಲ. ಒಂದು ಸಾಂಕೇತಿಕ ಪ್ರತಿಭಟನೆಯನ್ನೂ ಮಾಡಲಿಲ್ಲ. ಯಡ್ಡಿಯವರ ಕರ್ನಾಟಕ ನಿಷ್ಠೆ ಹೀಗೇ ಮುಂದುವರೆಯಲಿ ಎಂದು ಆಶಿಸುತ್ತೇನೆ.
ಲೇಖಕರು: vinayudupa
ವಿಧ: ಬ್ಲಾಗ್ ಬರಹ
April 09, 2008
ಈ ಸಿನಿಮಾ ನೋಡಿದ್ದೂ ಒಂದು ಆಕ್ಸಿಡೆಂಟ್. ಮೊನ್ನೆ ಯುಗಾದಿಯಂದು ರಜೆ ಇದ್ದಿದ್ರಿಂದ ಹಾಗೆ ಒಂದು ಪ್ರವಾಸ ಅಂತ ಹೋಗಿದ್ವಿ. ಚಿಕ್ಕಮಗಳೂರು ತಲುಪಿದಾಗ ಸಂಜೆ ೫.೩೦. ಕಳಸಕ್ಕೆ ರಾತ್ರಿ ೧೨.೩೦ರ  ವರೆಗೂ ಬಸ್ ಇರ್ಲಿಲ್ಲ. ಯಾವ್ದದ್ರು ಲಾಡ್ಜ್ಅಲ್ಲಿ ಕೋಣೆ ಮಾಡಿದ್ರೆ, ನಮಗೆ ರವಿ ಹುಟ್ಟಿದ್ದು ಗೊತ್ತಾಗಿ ಎದ್ದು ಹೊರಡೋದು ತಡ ಆಗೋದು ಗ್ಯಾರಂಟಿ.  ಅದಕ್ಕೆ ೧೨.೩೦ ಬಸ್ಸಿಗೆ ಹೊರದೊದಂತ ತೀರ್ಮಾನ ಆಯ್ತು. ಇನ್ನು ಅಲ್ಲಿವರೆಗೆ ಏನ ಮಾಡೋದು ಅಂತ ಯೋಚಿಸಿ, ಒಂದು ಸಿನಿಮಾ ನೋಡೋಕೆ ಹೊರಟ್ವಿ. ಸರಿ.. "…
ಲೇಖಕರು: keshav
ವಿಧ: ಬ್ಲಾಗ್ ಬರಹ
April 09, 2008
"ಮುಂದಿನ ಜನ್ಮ ಅಂತ ಒಂದಿದ್ದರೆ ಗಂಡಿನ ಚಪಲ ಇರುವ ಹೆಣ್ಣಾಗಿ ಹುಟ್ಟಿಸಯ್ಯಾ" ಅಂತ ಗಂಡ ಬರೆದ ಪದ್ಯ ಸಿಕ್ಕು ಮದುವೆ ರ್ರೇಷ್ಮಸೀರೆಗಳ ನಡುವೆ ಅಡಿಗಿಸಿಟ್ಟ ನೂರಾರು ಗ್ರೀಟಿಂಗ್ ಕಾರ್ಡುಗಳನ್ನು ನೆನೆಸಿಕೊಂಡು ಮುಸಿ ಮುಸಿ ನಕ್ಕಳು ----------------------------------------------------------- ಪಾಂಡಿತ್ಯದ ಭಾರದಿಂದ ಹತ್ತು ಓದಿಗೂ ದಕ್ಕದ ಕವಿತೆ ಬಿ.ಎಫ್.ಗಳಲ್ಲಿ ಗಂಟೆಗಟ್ಟಲೇ ನಡೆಯುವ ನೀರಸ ಸಂಭೋಗದಂತೆ ಎಂದು ಇನ್ನೂ ಹಲ್ಲುಜ್ಜಿರದ ನನ್ನ ಬಾಯಿಗೆ ಗಟ್ಟಿ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
April 08, 2008
ನಮ್ಮ ಕನ್ನಡದಲ್ಲಿ 'ಪು' ತುಂಬ ಮುಕ್ಯವಾದುದು. ಇದರಿಂದ ನಾವು ಕೆಲಸದೊರೆ/ಕ್ರಿಯಾಪದವನ್ನ ಹೆಸರೊರೆ/ನಾಮಪದವನ್ನಾಗಿಸುವಾಗ ತುಂಬ ಬಳಕೆಗೆ ಬರುತ್ತೆ. ಗಮನಿಸಿ. ಕನ್ನಡ ಕೆಲಸದೊರೆಗೆ ಬೆಲೆ ಕೊಡುವ ನುಡಿ(ಇದರ ಬಗ್ಗೆ ತಿಳಿದುಕೊಳ್ಳಲು ಶಂಕರಬಟ್ಟರ ಹೊತ್ತಿಗೆಗಳನ್ನು ಓದಿ). ನಮಗೆ ಆಗಾಗ ನಾಮಪದಿಸುವಿಕೆ ಮಾಡುವಾಗ ತಬ್ಬಿಬ್ಬಾಗುತ್ತೇವೆ. ಈ ಕೊರತೆಯನ್ನು ನೀಗಿಕೊಳ್ಳಲು ನಾವು ಕೆಲಸದೊರೆಗೆ ಕೊನೆಯಲ್ಲಿ 'ಪು' ಸೇರಿಸಿ ಸಲೀಸಾಗಿ ಹೆಸರೊರೆಯ ರೂಪಕ್ಕೆ ಇಳಿಸಬಹುದು.  ಇದಕ್ಕೆ ಈಗಾಗಲೆ ಇರುವ ಹಲವು…
ಲೇಖಕರು: agilenag
ವಿಧ: Basic page
April 08, 2008
ನಮ್ಮದು ಬನಶಂಕರಿ ಮೂರನೆ ಹಂತದ ಶ್ವಾನ ಕ್ಷೇಮಾಭಿವೃದ್ಧಿ ಸಂಘ. ನಾವಿಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದು, ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಅದನ್ನು ವಿವರವಾಗಿ ಚರ್ಚಿಸಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲು ಈ ಸಭೆಯನ್ನು ಕರೆದಿದ್ದೇವೆ. ಸಮಯ: ಮಧ್ಯರಾತ್ರಿ, ಎಂದರೆ ಸುಮಾರು ಹನ್ನೆರಡು ಗಂಟೆ ಸ್ಥಳ: ಬನಶಂಕರಿ ಮೂರನೆ ಹಂತದ ಯಾವುದಾದರೊಂದು ಬೀದಿ ಕಾರ್ಯಕ್ರಮ ವಿವರ: ಮೊಟ್ಟ ಮೊದಲಾಗಿ ನಮ್ಮ ಅತಿ ಚಿಕ್ಕ ಸದಸ್ಯರೊಬ್ಬರಿಂದ ಪ್ರಾರ್ಥನಾ ಗೀತೆ. (ಸದಸ್ಯರು ಅತಿ ಆರೋಹಣದಲ್ಲಿ…
ಲೇಖಕರು: vinayaka
ವಿಧ: ಬ್ಲಾಗ್ ಬರಹ
April 08, 2008
(ಈ ಲೇಖನ ಆರಂಭಿಸುವ ಮುನ್ನವೇ ಒಂದಿಷ್ಟು ಸಂಗತಿಗಳನ್ನು ಹೇಳಿಬಿಡುತ್ತೇನೆ. ಈ ಲೇಖನಕ್ಕೆ ಕೊಟ್ಟಿರುವ ಶಿರ್ಷಿಕೆ ಅಥವಾ ತಲೆ ಬರಹ ತೀರಾ ಕೆಟ್ಟದಾಗಿದೆ ಅಂತಾ ನಾನು ಬಲ್ಲೆ. ಹಾಗಂತ ಇದು ಯಾವುದೋ ಒಂದು ವರ್ಗವನ್ನು ಕುರಿತಾಗಿ ಅವಹೇಳನ ಮಾಡುವ ಅಥವಾ ಯಾವುದೋ ಒಂದು ವರ್ಗದ ದ್ವೇಷಿಯಾಗಿ ಏಕಮುಖಿ ಚಿಂತನೆಯೊಂದಿಗೆ ಬರೆಯುತ್ತಿರುವ ಬರಹವಲ್ಲ. ಪ್ರಸ್ತುತದ ಒಂದು ಸಮಸ್ಯೆಯೊಂದನ್ನು ಕೈಗೆತ್ತಿಕೊಂಡು ಅದರ ಎಡ ಬಲಗಳ ಸುತ್ತ ಅವಲೋಕಿಸಲು ಹೊರಟ್ಟಿದ್ದೇನೆ . ಇಲ್ಲಿ ಪರ ವಿರೋದಗಳ ದ್ವಂದ ಮಿಶ್ರಣದ ಎರಡು…
ಲೇಖಕರು: roopablrao
ವಿಧ: ಚರ್ಚೆಯ ವಿಷಯ
April 08, 2008
ಇತ್ತೀಚಿಗೆ ನಾನು ನನ್ನ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಗೆ ಬದಲಾಗಿ ಏರ್ ಟೆಲ್ ನ ವೈರ್ ಲೆಸ್ ಇಂಟರ್ ನೆಟ್ ಗೆ ಬದಲಾಯಿಸಿಕೊಳ್ಳಲು ಯೋಚಿಸುತ್ತಿದ್ದೇನೆ. ಏರ್ ಟೆಲ್ ನ ವೈರ್ ಲೆಸ್ ಇಂಟರ್ ನೆಟ್ ಸ್ಪೀಡ್ ಹೇಗೆ ಉಪಯೋಗಿಸಿ ತಿಳಿದವರು ಹೇಳಿ ಉಪಕರಿಸಿ ತಾಂತ್ರಿಕ ವಿವರಗಳು http://www.airtel.in/level2_t7.aspx?path=1/106 ರೂಪ
ಲೇಖಕರು: srinivasc
ವಿಧ: ಬ್ಲಾಗ್ ಬರಹ
April 08, 2008
ಅದೊಂದು ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಹೆಚ್ಚುಕಡಿಮೆ ಸಮುದ್ರವೇ ಎನ್ನಬಹುದಾದಂಥ, ಆ ಪುಟ್ಟ ಹಳ್ಳಿಯನ್ನೂ ಮೀರಿಸುವಂತ ಒಂದು ಬೃಹದಾಕಾರದ ಕೆರೆ. ಅದು ಹಳ್ಳಿಯಾದರೂ ತಿರುಪತಿ ತಿಮ್ಮಪ್ಪನಿಗೆ ದಿನನಿತ್ಯ ಬರುವ ವರಮಾನಕ್ಕಿಂತ ದ್ವಿಗುಣವಾಗಿ ಸುರಿಯುವ ಹಣದ ಮಳೆ. ಕೆರೆಯ ತುಂಬಾ ತೆಪ್ಪಗಳು, ತೆಪ್ಪಗಳ ತುಂಬಾ ನಾವಿಕರು ಅಥವಾ ಬೆಸ್ತರು. ಅವರ ಕಾಲಕೆಳಗೆ ವಿಲಿವಿಲಿ ಒದ್ದಾಡುವ ಲೆಖ್ಖಕ್ಕೆ ಸಿಗದಷ್ಟು ಮೀನುಗಳು. ಆ ಬೆಸ್ತರು ಸದಾ ಕೆರೆಯೊಳಗೆ ಮನೆ ಮಾಡಿದ್ದಾರೇನೋ ಎಂಬಂತೆ ಭಾಸವಾಗುತ್ತಿತ್ತು.…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
April 08, 2008
ಈಗಿನ ಕೆಲ ಹಾಡುಗಳ ಸಾಹಿತ್ಯ ಹೀಗಿವೆ ನೋಡಿ.. ’ಚಿಂದಿ ಮಾಡೆ ಚಂದ್ರಿಕಾ’ ’ಕೊಡೆ ಕೊಡೆ ಕೊಡೆ ಕೊಬ್ರಿ ಮಿಠಾಯಿ’.. ’ಜಲ ಜಲ ಜಲ ಜಲಜಾಕ್ಷಿ, ಮಿನ ಮಿನ ಮಿನ ಮೀನಾಕ್ಷಿ’.. ಆಹಾ ಎಂಥ ಅದ್ಬುತ ಸಾಹಿತ್ಯ ! :-) ಕುವೆಂಪು ಬದ್ಕಿರ್ಬೇಕಾಗಿತ್ತು ಇದನ್ನೆಲ್ಲಾ ನೋಡ್ಲಿಕ್ಕೆ !