ಎಲ್ಲ ಪುಟಗಳು

ಲೇಖಕರು: kalpana
ವಿಧ: ಬ್ಲಾಗ್ ಬರಹ
April 08, 2008
ಜಗಳ ಮರಳಿ ಬರುತಿದೆ ಹೊಸ ವರುಷಕೆ ಹಳೆ ವಿರಸವ ಕೆದಕಿ ಕಲಕಿ ತರುತಿದೆ, ಕೆದಕಿ ಕಲಕಿ ತರುತಿದೆ! ಇಲ್ಲಿ ಕೆಲವು ಬ್ಲಾಗಿಗರು ಕನ್ನಡಿಗರ ಮೇಲಿನ ತಮಿಳರ ಪುರಾತನ ಕ್ರೌರ್ಯಗಳನ್ನು ಪಟ್ಟಿ ಮಾಡಿದ್ದಾರೆ. ಮತ್ತೊಬ್ಬರು ತಮಿಳರ ದತ್ತು ಪುತ್ರ ರಜನಿಯನ್ನು ಬೆಂಬಲಿಸಿದ್ದಾರೆ. ಇದೆಲ್ಲ ಸರಿ, ಆದರೆ ಕನ್ನಡ-ತಮಿಳು ಜಗಳದಲ್ಲಿ ಇಬ್ಬರ ಕೂಸುಗಳೂ ಬಡವಾಗುವುದಿಲ್ಲವೆ? ಅದರ ಬಗ್ಗೆ ಯಾರು ಯೋಚಿಸಿತ್ತಿದ್ದಾರೆ? ದಿನನಿತ್ಯ ಕುಡಿಯುವ ನೀರಿಗೆ ಮೈಲಿಗಟ್ಟಲೆ ನಡೆಯುವ ಜನರಿಗೆ ಗಡಿ ವಿವಾದ ಕಟ್ಕೊಂಡು ಏನಾಗಬೇಕು…
ಲೇಖಕರು: kalpana
ವಿಧ: ಬ್ಲಾಗ್ ಬರಹ
April 08, 2008
ಜಗಳ ಮರಳಿ ಬರುತಿದೆ ಹೊಸ ವರುಷಕೆ ಹಳೆ ವಿರಸವ ಕೆದಕಿ ಕಲಕಿ ತರುತಿದೆ, ಕೆದಕಿ ಕಲಕಿ ತರುತಿದೆ! ಇಲ್ಲಿ ಕೆಲವು ಬ್ಲಾಗಿಗರು ಕನ್ನಡಿಗರ ಮೇಲಿನ ತಮಿಳರ ಪುರಾತನ ಕ್ರೌರ್ಯಗಳನ್ನು ಪಟ್ಟಿ ಮಾಡಿದ್ದಾರೆ. ಮತ್ತೊಬ್ಬರು ತಮಿಳರ ದತ್ತು ಪುತ್ರ ರಜನಿಯನ್ನು ಬೆಂಬಲಿಸಿದ್ದಾರೆ. ಇದೆಲ್ಲ ಸರಿ, ಆದರೆ ಕನ್ನಡ-ತಮಿಳು ಜಗಳದಲ್ಲಿ ಇಬ್ಬರ ಕೂಸುಗಳೂ ಬಡವಾಗುವುದಿಲ್ಲವೆ? ಅದರ ಬಗ್ಗೆ ಯಾರು ಯೋಚಿಸಿತ್ತಿದ್ದಾರೆ? ದಿನನಿತ್ಯ ಕುಡಿಯುವ ನೀರಿಗೆ ಮೈಲಿಗಟ್ಟಲೆ ನಡೆಯುವ ಜನರಿಗೆ ಗಡಿ ವಿವಾದ ಕಟ್ಕೊಂಡು ಏನಾಗಬೇಕು…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
April 07, 2008
ನಮ್ಮ ನಯಸೇನ ಯಾವ ಮಾರಿತೊತ್ತಿಗನಿಗಿಂತ(ಕಾಳಿದಾಸ) ಏನೂ ಕಮ್ಮಿಯಿಲ್ಲ ಅನ್ನುವುದಕ್ಕೆ ಕೆಳಗಿನ ಪದ್ಯವೆ ಪುರಾವೆ  ಅಲುಗೆ ಕುರುಳ್ ತೊಡವು ಪಳಂ ಚಲೆಯೆ ತಳತ್ತಳಿಸಿ ಪೊಳೆಯೆ ತನುರುಚಿಯೊರ್ವಳ್ ಕಳಹಂಸಗಮನೆ ಕಾಮನ ತೊಳಗುವ ಕೂರಂಬಿನಂತೆ ಪದಪಿಂ ಬಂದಳ್ ಪಳಂಚಲೆ = ಎದುರಿಸಿ ಹೊಡೆದಲುಗಿಸು, ತಾಗು ಕುರುಳ್  = ಹೆಣೆದ ಕೂದಲು, ನವಿರ್ಗೂದಲು ಅಲುಗು = ಮೆತ್ತಗೆ ಅಲ್ಲಾಡು ಪೊಳೆಯೆ = ಹೊಳೆವ ತೊಳಗುವ = ಮಿನುಗುವ ಕೂರಂಬು = ಕೂರ್+ಅಂಬು= ಬೇಟರಾಯನ/ಕಾಮನ/ಮನ್ಮತನ  ಬಾಣ (ನಮ್ಮ ಸುನಿಲನ 'ಕೂರ್ ಬೇಕೆ…
ಲೇಖಕರು: chandana
ವಿಧ: ಬ್ಲಾಗ್ ಬರಹ
April 07, 2008
ಇವತ್ತು ಉಗಾದಿ ಅಂತ ನೆನ್ನೇ ನನ್ನ ಸಂಭಂದಿ ಜೊತೆಗೆ Columbus ನ ದೇವಸ್ಥಾನಕ್ಕೆ ಹೋಗಿದ್ದೆ. ಇಲ್ಲೆಲ್ಲಾ weekend ಹಬ್ಬ ಮತ್ತೆ weekend ದೇವರ ದರ್ಶನ!! Bharatiya Hindu Temple ಅಂತ ಕಾಣಿಸಿತ್ತು. ಅಭ ಅಂತು ಸಿಕ್ತು ಅಂತ ನೋಡುದ್ರೆ ದೇವಸ್ಥಾನ ನಂಗೆ ಕಾಣಿಸಲೇ ಇಲ್ಲ. ನಮ್ಮೂರು ದೇವಸ್ಥಾನ ನೋಡಿರೋ ನಂಗೆ, ಈ ಗೋಪುರ ಇಲ್ಲದೆ ಇರೋದೇ ದೇವಸ್ಥಾನ ಅಂತ ನಂಗೆ ಹೇಗೆ ಗೊತ್ತಾಗಬೇಕು! ಯಾಕೋ ಬೋಳು ಬೋಳಾಗಿ ಕಾಣಿಸುತ್ತಿತು. ಒಳಗಡೆ ದೇವಸ್ಥಾನ ಚೆನ್ನಾಗೇ ಇತ್ತು. ಎಲ್ಲ ದೇವರ ದರ್ಶಣಾನು ಮಾಡಬಹುದು…
ಲೇಖಕರು: poornimas
ವಿಧ: Basic page
April 07, 2008
**** ಎಲ್ಲರಿಗೂ ಸರ್ವಧಾರಿ ಸಂವತ್ಸರ ಯುಗಾದಿ ಶುಭಾಶಯಗಳು. **** ವಸಂತ ಗೀತ ----------- ವಸಂತ ಋತುರಾಜ ಒಲಿದು ಬರುತಿಹನೆಂದು ಚೆಲುವ ಚಪ್ಪರವಾಯ್ತು ಭೂರಮೆಯ ಒಡಲು. ಹೊಸ ಚಿಗುರ ಹಸೆಯಿಟ್ಟು ಹೊಸ್ತಿಲಲಿ ಕಾದಿಹಳು. ನಸುಗೆಂಪು ಹೂಬಳೆ ತೊಟ್ಟು ಆರತಿಯ ಬೆಳಗುವಳು. ಉಷೆಯ ಓಕುಳಿಯಲ್ಲಿ ಎಳೆಬಿಸಿಲ ಹಣತೆ. ಮಿಡಿಯರಳಿ ನಾಚಿದ ಮಾವು ಹೂವಿನ ಅಕ್ಷತೆ. ಹೊಸಯುಗದ ಹೊಸಗೀತ ಹಾಡಿ ನಲಿದಿರೆ ವಸುಂಧರೆ; ಚೆಲುವ ಚಂದ್ರಮ, ಚುಕ್ಕಿಯ ಬಾನಲಿ - ಬೆಳಕಿನ ಬೆಳ್ಳಿಗೆರೆ. - ೦ -
ಲೇಖಕರು: ಹಿರಣ್ಯಾಕ್ಷ
ವಿಧ: ಚರ್ಚೆಯ ವಿಷಯ
April 07, 2008
ಹೊಗೇನಕಲ್ನಲ್ಲಿ ತಮಿಳುನಾಡು ಸರ್ಕಾರ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ, ಕಾವೇರಿ ನದಿ ನೀರಿನ ಹಂಚಿಕೆ ಇತ್ಯರ್ಥವಾಗಿದೆಯೇ? ನಾವು ಯಾವುದೇ ಯೋಜನೆಯನ್ನು, ಕಾವೇರಿ ಜಲನಯನ ಪ್ರದೇಶದಲ್ಲಿ ಶುರು ಮಾಡಿದರೆ ವಿರೋಧಿಸುವ ತಮಿಳುನಾಡು, ಕನ್ನಡಿಗರು ಹೊಗೇನಕಲ್ ಯೋಜನೆ ವಿರೋಧಿಸಿದಾಗ ಮಾತ್ರ "ಅಮಾನವೀಯ ಕೃತ್ಯ" ಎಂದು ತೀರ್ಪು ನೀಡುವುದು ಎಷ್ಟು ಸರಿ? ಇದನ್ನು ಓದಿ - http://karnatakarakshanavedike.org/modes/view/17/adhyakshara_nudi.html
ಲೇಖಕರು: cmariejoseph
ವಿಧ: Basic page
April 07, 2008
ಯುಗಯುಗಾದಿ ಕಳೆದರೂ ಮಾಸದ ಸವಿಗಂಪಿನೊಂದಿಗೆ ಹೊಸಹೊಸದಾಗಿರುವ ದ ರಾ ಬೇಂದ್ರೆಯವರ ಈ ಕವನವನ್ನು ಮರೆಯಲು ಸಾಧ್ಯವೇ ಇಲ್ಲ. ಮರೆತವರಿಗಾಗಿ ಇಲ್ಲಿ ಮತ್ತೊಮ್ಮೆ ಹಾಕಲಾಗಿದೆ.   ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ   ಹೊಂಗೆ ಹೂವ ತೊಟ್ಟಿಲಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ   ವರುಷಕೊಂದು ಹೊಸತು ಜನುಮ ಹರುಷಕೊಂದು ಹೊಸತು…
ಲೇಖಕರು: sprasad
ವಿಧ: ಚರ್ಚೆಯ ವಿಷಯ
April 07, 2008
Value-added ಅನ್ನೋದಿಕ್ಕೆ "ಮೌಲ್ಯ ವರ್ಧಿತ" ಎಂದು ಇಂದಿನ ಹೆಚ್ಚಿನ ಮೊಬೈಲ್ ಕಂಪನಿಗಳು ಬಳಸುತ್ತವೆ. ಇದು ಸರಿಯೆ!? ಇಲ್ಲಿ ನನಗೆ "ವರ್ಧಿತ" ಎನ್ನುವುದು ವಿಶೇಷಣವಾಗಿ ಕೇಳಿಸದೆ, ಒಂದು ಕ್ರಿಯಾಪದವಾಗಿ ತೋರುತ್ತಿದೆ, ನೀವೇನಂತೀರಾ,ಸಂಪದಿಗರೆ!?
ಲೇಖಕರು: prasadbshetty
ವಿಧ: Basic page
April 07, 2008
ಯುಗಾದಿ ... ಹೊಸ ವರುಷ... ...ತರಲಿ ಹೊಸ ಹರುಷ ಬೇವು ಬೆಲ್ಲಗಳು... ...ಸಿಹಿ-ಕಹಿಗಳು ಸಮವಾಗಿ ಅನುಭವಿಸುವ ಶಕ್ತಿ... ನಿಮಗೆ ಬರಲಿ....." ......ಯುಗಾದಿ ಹಬ್ಬದ ಶುಭಾಶಯಗಳು
ಲೇಖಕರು: snehasuggi
ವಿಧ: Basic page
April 07, 2008
ಜೀವದ ಚೈತ್ರದ ಸ್ವಾಗತ ಕೋರುತ, ಭಾವದ ಮೈತ್ರಿಯ ಮುನ್ನುಡಿ ಬರೆಯುತ, ಬಂತೋ ಯುಗಾದಿ, ತಂತೋ ಮನ ನೆಮ್ಮದಿ. ಬಾಳ್ವೆಯ ಬೇವಿಗೆ ತುಂಬುತ ಒಲವು, ನಲ್ಮೆಯ ಹೂವಿಗೆ ತೋರುತ ಗೆಲುವು, ಬಂತೋ ಯುಗಾದಿ, ತಂತೋ ಹೂ-ಹಾದಿ. ಬಂಧದ ನೇಗಿಲ ಉಳುಮೆಯ ಮಾಡುತ, ನೊಂದಿದ ಹೆಗಲ ಒಲುಮೆಯ ಬೇಡುತ, ಬಂತೋ ಯುಗಾದಿ, ತಂತೋ ಜೀವ ಬುನಾಧಿ. ಪ್ರೀತಿಯ ಬೆಳಕಿಗೆ,ತೆರೆಯುತ ಕಂಗಳ, ಜಾತಿಯ ಮುಸುಕಿಗೆ,ತೋರುತ ಬೆಳದಿಂಗಳ, ಬಂತೋ ಯುಗಾದಿ, ತಂತೋ ಚೈತ್ರ ಕಣಕಣದಿ. ಸ್ನೇಹದಿಂದ ಗಣೇಶ್ ಪುರುಷೋತ್ತಮ