ವಿಧ: Basic page
December 15, 2007
ಕೋಪವೆಂಬ ಧೂರ್ತನೊಬ್ಬ
ಭೂತದಂತೆ ಮೈಯ್ಯನೇರಿ
ಭುಸಭುಸನೆ ಉಸಿರನಿಟ್ಟು
ರಭಸದಿಂದ ಗುಡುಗುವವನೆ
ಕಣ್ಣು ಕೆಂಪೇರಿಸಿರುವೆ
ಕುರುಡಾಗಿ ವರ್ತಿಸುವೆ
ಕೇಳುವ ಮನಸ್ಥಿತಿಯ
ತ್ಯಜಿಸಿರುವ ಮೂರ್ಖನೆ
ಪಿತ್ಥವೇರಿದ ಚಿತ್ತ
ಸುಟ್ಟುಹಾಕುವ ಮುನ್ನ
ಸಹನೆ ಸಂಯಮವೆಂಬ
ದೀಪ ಬೆಳಗು ಗೆಳೆಯನೆ
ವಿಧ: Basic page
December 15, 2007
ಕನ್ನಡದ ಕಾಗುಣಿತ
ತಿಳಿದವರಿಗಿದು ಕುಣಿತ
ತಿಳಿಯದವರಿಗೆ ಗಣಿತ
ಸತತ ಯತ್ನವ ಮಾಡುತ
ಹಲವು ಪುಸ್ತಕ ಓದುತ್ತಾ
ಗೆಳೆಯರೊಂದಿಗೆ ಹರಟುತ್ತಾ
ಭಾಷೆಯ ಬಳಕೆ ಬಯಸಿ
ಸಿಕ್ಕ ಸಲಹೆಗಳ ಸ್ವೀಕರಿಸಿ
ಚಿಗುರಿದ ಭಾವಗಳ
ಬಿಡಿಸುವ ಬಯಕೆಗಳ
ಜೊತೆ ನಿಮ್ಮೊಂದಿಗೆ
ನಡೆವ ಆಸೆ ಎನಗೆ
ವಿಧ: ಬ್ಲಾಗ್ ಬರಹ
December 15, 2007
ಈ ಶಬ್ದಗಳು / ಶಬ್ದರೂಪಗಳು ನಿಮಗೆ ಗೊತ್ತೇ ? ಅಥವಾ ಮರೆತಿದ್ದೀರಾ?
( ಗೊತ್ತಿದ್ದಷ್ಟನ್ನು ವಿವರಿಸಿದ್ದೇನೆ , ನಿಖರವಾಗಿ ಗೊತಿಲ್ಲದ್ದನ್ನು ಬಿಟ್ಟಿದ್ದೇನೆ- ನಿಮಗೆ ಗೊತ್ತಿದ್ದರೆ ತಿಳಿಸಿ)
ಆರಪಾರ -- ಈ ಗಾಡೀಗೆ ಎಲ್ಲಾ ಡಬ್ಬಿಗೂ ಆರಪಾರ ಹಾದಿ ಇರತSದ-- ’ಥ್ರೂ’
ಹತ್ತೀಲೆ / ಹಂತೇಕ / ಹತ್ತರ -- ಹತ್ತಿರ
ಫರಾಳ - ನಾಷ್ಟ /ತಿಂಡಿ
ಊಟಾ-ಉಡಿಗಿ
ಉಡಿಗಿ-ತೊಡಿಗಿ/ ವಸ್ತಾ-ಒಡಿವಿ -- ವಸ್ತ್ರಾಭರಣ
ಎದುರುಗೊಳ್ಳು - ಸ್ವಾಗತಿಸು
ಅಲ್ಲಾಬೆಲ್ಲಾ ತಗೆದುಕೊಳ್ಳು --- ಪರಸ್ಪರ ಆಲಂಗಿಸು (…
ವಿಧ: ಬ್ಲಾಗ್ ಬರಹ
December 15, 2007
ಇದು ಒಂದು ಸಣ್ಣ ಕಾದಂಬರಿ . ಹಿಂದಿಯಿಂದ ಅನುವಾದವಾದದ್ದು . ಕಾದಂಬರಿ ತನ್ನ ಸರಳ ಕತೆ , ತಮಾಷೆಯ ವಾಕ್ಯಗಳು , ಕನಸಿನಂಥ ಒಂದು ಲೋಕದ ವರ್ಣನೆಯಿಂದ ನಮ್ಮ ನೆನಪಿನಲ್ಲುಳಿಯುತ್ತದೆ.
ಇಲ್ಲಿ ಕೆಳವರ್ಗದಿಂದ ಬಂದಿರುವ ಒಬ್ಬ ಕಾಲೇಜು ಲೆಕ್ಚರರ ಸಂಸಾರ ವಿಷಯ ಇದೆ. ಇಲ್ಲಿ ಯಾವದೇ ಖಳನಾಯಕನಿಲ್ಲ ; ಅಂಥ ಸಮಸ್ಯೆಯೂ ಇಲ್ಲ . ಈ ಲೆಕ್ಚರರು ಹೊಸದಾಗಿ ಮದುವೆ ಆಗಿ ಒಂದು ಸಣ್ಣ ಮನೆ ಮಾಡಿದ್ದಾನೆ. ಒಂದೇ ಕೋಣೆಯ ಮನೆಯ ಜತೆ ಉಪಯೋಗಕ್ಕೆ ಒಂದು ಸಂಡಾಸನ್ನೂ (ಕಕ್ಕಸು) ಬಾಡಿಗೆ ಹಿಡಿದಿದ್ದಾನೆ. ಆಗಾಗ…
ವಿಧ: ಬ್ಲಾಗ್ ಬರಹ
December 14, 2007
ಏಕೆ ನಕ್ಕೆ..??
ಏಕೆ ನಕ್ಕೆ ಹೇಳು ಚೆನ್ನೆ
ಶೋಕ ನೀಗುವ ತೆರದಲಿ
ಎಲ್ಲ ಮರೆತು ಸ್ತಬ್ಧನಾದೆ
ನಿನ್ನ ನಗುವಿನ ಸಿರಿಯಲಿ
ಎಂದೂ ಕಣ್ಣಿಟ್ಟು ನೋಡಿದವಳಲ್ಲ
ಇಂದೇಕೆ ನನ್ನನೇ ದಿಟ್ಟಿಸಿರುವೆ
ನಾನೂ ಯಾರನು ನೋಡಿದವನಲ್ಲ
ನಿನ್ನನೇ ಕಾಣುತ ಏಕೆ ನಿಂತಿರುವೆ
ಯಾವುದಾಶಕ್ತಿ ನಿನ್ನ ಕಂಗಳಲಿ
ಮಾಡುತಿವೆನಗೆ ಸೆಳಕಿನ ಮೋಡಿ
ಮೀಟುತಿವೆ ಮನದ ತಂತುಗಳ
ನಸುನಗೆಯ ಮಾಟವ ಮಾಡಿ
ತಿಳಿಯಾಗಿದ್ದ ಮನದ ಕೊಳದಲ್ಲಿ
ಎಣಿಸದಷ್ಟು ಅಲೆಗಳು ಮೂಡಿವೆ
ಪ್ರತಿಯಲೆಯ ನಾದ ನೂರು ಮಾತನು
ಹೇಳಿ ಹೊಸ ಕನಸುಗಳ ಹುಟ್ಟಿಸಿವೆ
ಬೇಕಂತಲೇ…
ವಿಧ: Basic page
December 14, 2007
ಏಕೆ ನಕ್ಕೆ..??
ಏಕೆ ನಕ್ಕೆ ಹೇಳು ಚೆನ್ನೆ
ಶೋಕ ನೀಗುವ ತೆರದಲಿ
ಎಲ್ಲ ಮರೆತು ಸ್ತಬ್ಧನಾದೆ
ನಿನ್ನ ನಗುವಿನ ಸಿರಿಯಲಿ
ಎಂದೂ ಕಣ್ಣಿಟ್ಟು ನೋಡಿದವಳಲ್ಲ
ಇಂದೇಕೆ ನನ್ನನೇ ದಿಟ್ಟಿಸಿರುವೆ
ನಾನೂ ಯಾರನು ನೋಡಿದವನಲ್ಲ
ನಿನ್ನನೇ ಕಾಣುತ ಏಕೆ ನಿಂತಿರುವೆ
ಯಾವುದಾಶಕ್ತಿ ನಿನ್ನ ಕಂಗಳಲಿ
ಮಾಡುತಿವೆನಗೆ ಸೆಳಕಿನ ಮೋಡಿ
ಮೀಟುತಿವೆ ಮನದ ತಂತುಗಳ
ನಸುನಗೆಯ ಮಾಟವ ಮಾಡಿ
ತಿಳಿಯಾಗಿದ್ದ ಮನದ ಕೊಳದಲ್ಲಿ
ಎಣಿಸದಷ್ಟು ಅಲೆಗಳು ಮೂಡಿವೆ
ಪ್ರತಿಯಲೆಯ ನಾದ ನೂರು ಮಾತನು
ಹೇಳಿ ಹೊಸ ಕನಸುಗಳ ಹುಟ್ಟಿಸಿವೆ
ಬೇಕಂತಲೇ…
ವಿಧ: ಬ್ಲಾಗ್ ಬರಹ
December 14, 2007
ಈ ಮಾತನ್ನ ನಮ್ಮ ತಂದೆಯವರು ನಂಗೆ ಯಾವಾಗಲೂ ಹೇಳುತ್ತಿದ್ದರು. ನಾವು ಒಬ್ಬರಿಗೆ ನೆರವು ಕೊಡುವಾಗ ಅವರಿಂದ ಮುಂದೆ ಯಾವುದೇ ನೆರವನ್ನ ಎದುರು ನೋಡಬಾರದು. ಒಂದು ವೇಳೆ ಆ ತರ ಮಾಡಿದರೆ ಅದು ನಮ್ಮ ತಪ್ಪಾಗುತ್ತದೆ. ನೆರವು ಮಾಡಲೇಬೇಕೆಂಬ ಒಂದೇ ಒಂದು ಒಳ್ಳೆಯ ಗುರಿಯಿಂದ ನಾವು ಬೇರೆಯವರಿಗೆ ನೆರವು ಮಾಡಬೇಕು. ಆದರೆ ಹಲವು ಸರ್ತಿ ನಮ್ಮಿಂದ ನೆರವು ತೆಗೆದುಕೊಂಡಿರದವರೇ ನಮ್ಮ ಎಡರೊತ್ತಿನಲ್ಲಿ ನಮಗೆ ನೆರವಾಗುವರು.ಇದೊಂದು ಬರೆದಿರದ ಕಟ್ಟಳೆ(ಅಲಿಖಿತ ನಿಯಮ).ಆದರೂ ಸಾಮಾನಿಯ ಮನ್ಸರಾದ ನಾವು ನೆರವು…
ವಿಧ: ಬ್ಲಾಗ್ ಬರಹ
December 14, 2007
ನಾನು ಮೊದಲ ಬಾರಿ ಕನ್ನಡದಲ್ಲಿ ಬರೆಯಲು ಪ್ರಯತ್ತ್ನ ಮಾಡುತ್ತಿದ್ದಿನಿ ನನಗೆ ನಿವೆಲ್ಲ ಸಹಕರಿಸಿ ತಪ್ಪಿದ್ದರೆ ತಪ್ಪು ತಿಳಿಯಬೆ ಡೀ ನನಗೆ ನನ್ನ ಮನಸ್ಸಿನಲ್ಲಿ ಸ೦ಪದ ತು೦ಬ ಅಸಕ್ತಿ ತದಿ೦ದೆ ಬರೆಯಲು ತೊ೦ದರೆ ಅದನ್ನು ನಾನು ಬದಲಾವಣೆ ಮಾಡಿಕೂಳ್ಳುತ್ತೆನೆ ಎಲ್ಲ ಸ೦ಪದ ಮಿತ್ರರಿಗೆ ನನ್ನ ವ೦ದನೆಗಳು
ವಿಧ: ಬ್ಲಾಗ್ ಬರಹ
December 14, 2007
ನಾನು ಈ ಹಿಂದೆ www.dasasahitya.org ಸೈಟಿನಲ್ಲಿ ಸ್ವಚ್ಛಂದವಾಗಿ ವಿಹರಿಸುದ್ದೆ
ಈಗೇನಾಗಿದೆಯೋ ನಿಮಗಾರಿಗಾದರೂ ಗೊತ್ತೆ ?
ದಯವಿಟ್ಟು ಉತ್ತರಿಸಿ
ವಿಧ: ಬ್ಲಾಗ್ ಬರಹ
December 14, 2007
ನಾನು ಈ ಹಿಂದೆ www.dasasahitya.org ಸೈಟಿನಲ್ಲಿ ಸ್ವಚ್ಛಂದವಾಗಿ ವಿಹರಿಸುದ್ದೆ
ಈಗೇನಾಗಿದೆಯೋ ನಿಮಗಾರಿಗಾದರೂ ಗೊತ್ತೆ ?
ದಯವಿಟ್ಟು ಉತ್ತರಿಸಿ