ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 28, 2023
ನಾಗೇಶ್ ಜೆ ನಾಯಕ ಇವರು ಬರೆದಿರುವ ನೂತನ ಪುಸ್ತಕ “ಸಜ್ಜನ ರಾಜಕಾರಣಿ ಬಿ.ಎ.ಬೋಳಶೆಟ್ಟರು" . ಈ ಕೃತಿಗೆ ಲೇಖಕರಾದ ಪ್ರಕಾಶ ಗ.ಖಾಡೆ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ನಿಮ್ಮ ಓದಿಗಾಗಿ... “ಕನ್ನಡದ ಹೆಸರಾಂತ ಸಾಹಿತಿಗಳು , ಮಿತ್ರರಾದ ಸವದತ್ತಿಯ ನಾಗೇಶ ಜೆ. ನಾಯಕ ಅವರು ನಮ್ಮ ನಡುವಿನ ಅತ್ಯಂತ ಕ್ರಿಯಾಶೀಲ ಲೇಖಕರು. ಅವರ ಬರವಣಿಗೆ ವೈವಿಧ್ಯಮಯವಾದುದು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಬರೆದು ಛಾಪು ಮೂಡಿಸಿದ್ದಾರೆ. ಅವರ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
September 28, 2023
ಉಡುಪಿ ಜಿಲ್ಲೆಯ ಕುಂದಾಪುರ ಹತ್ತಿರದ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮಾಹಿತಿ ನೀಡುವ ಪುಸ್ತಕ ಇದು. ಸಾಲಿಗ್ರಾಮದ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮುಂಚೆಯೂ ಕೆಲವು ಪುಸ್ತಕಗಳು ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾದ ಕೆಲವು ಆಕರ ಪುಸ್ತಕಗಳು: ಕೋಟ ಶಂಕರನಾರಾಯಣ ಕಾರಂತರ "ಕೂಟ ಮಹಾಜಗತ್ತು, ಕೂಟ ಬ್ರಾಹ್ಮಣರ ಮೂಲ ಮತ್ತು ಸಾಲಿಗ್ರಾಮ ಕ್ಷೇತ್ರ ಮಹಾತ್ಮ್ಯೆ” ಪುಸ್ತಕ; ವಿದ್ವಾಂಸ ಮತ್ತು ಸಂಶೋಧಕರಾಗಿದ್ದ ಡಾ. ಪಾ. ನ. ಮಯ್ಯರು ರಚಿಸಿರುವ “…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 26, 2023
ಜಗದೀಶ ಬ ಹಾದಿಮನಿ ಅವರು ಬರೆದ ಕಥೆಗಳ ಸಂಗ್ರಹವೇ “ಕಾಡ ನಾಡ ತೋಳಗಳು". ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಶ್ರೀಶೈಲ ಆರ್. ಗೋಲಗೊಂಡ ಇವರು. ತಮ್ಮ ಮುನ್ನುಡಿಯಲ್ಲಿ ಇವರು ಬರೆದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ... “ಸಾಹಿತ್ಯದ ಓದು-ಬರಹ ಹಾಗೂ ಸಂಘಟನೆಗಳಲ್ಲಿ ನಿರಂತರತೆಯನ್ನು ಮೈಗೂಡಿಸಿಕೊಂಡಿರುವ ನನ್ನ ಆತ್ಮೀಯ ವಿದ್ಯಾರ್ಥಿ ಮಿತ್ರರೂ ಮತ್ತು ಕನ್ನಡ ಉಪನ್ಯಾಸಕರೂ ಆಗಿರುವ ಜಗದೀಶ, ಬ. ಹಾದಿಮನಿ ಅವರು ಈಗಾಗಲೇ 'ಮುಗ್ಧೆ' ಕವನ ಸಂಕಲನ (2018) 'ಪ್ರೇಮಮಯಿ' ಖಂಡ ಕಾವ್ಯ (2019) ಹಾಗೂ '…
ಲೇಖಕರು: Kavitha Mahesh
ವಿಧ: ರುಚಿ
September 24, 2023
ಒಂದು ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ, ಕರಗಿದ ಬಳಿಕ ಕಡ್ಲೇ ಹಿಟ್ಟು ಹಾಕಿ ಕಂದು ಬಣ್ಣ ಬರುವವರೆಗೂ ಮಧ್ಯ ಉರಿಯಲ್ಲಿ ಹುರಿಯಿರಿ. ನಂತರ ಹಾಲು, ಸಕ್ಕರೆ ಮಿಶ್ರ ಮಾಡುತ್ತಾ ಚೆನ್ನಾಗಿ ಕುದಿಸಿರಿ. ಇನ್ನು ಉಳಿದ ತುಪ್ಪ, ಬಾದಾಮಿ ತುಂಡುಗಳು, ತೆಂಗಿನ ಕಾಯಿ ತುರಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ.  ನಂತರ ಈ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಸುರಿದು ತಣಿಯಲು ಬಿಡಿ. ಅರ್ಧ ಗಂಟೆಯ ಬಳಿಕ ನಿಮಗೆ ಸೂಕ್ತವೆನಿಸಿದ ಆಕಾರದಲ್ಲಿ ತುಂಡರಿಸಿದರೆ ರುಚಿಕರವಾದ ಬರ್ಫಿ ತಯಾರು.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 22, 2023
ಹೆಸರಾಂತ ಬರಹಗಾರ್ತಿ ಲತಾ ಗುತ್ತಿಯವರ ನೂತನ ಕಾದಂಬರಿ ‘ಚದುರಂಗ' ಈ ಬೃಹತ್ (೪೭೦ ಪುಟಗಳು) ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಡಾ. ಬಸವರಾಜ ಕಲ್ಗುಡಿ. ಇವರು ತಮ್ಮ ಮುನ್ನುಡಿಯಲ್ಲಿ ಕಾದಂಬರಿಯ ಕುರಿತಾಗಿ ಬಹಳ ಸೊಗಸಾಗಿ ವರ್ಣನೆ ಮಾಡಿದ್ದಾರೆ. ಇವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ... “ಲತಾ ಗುತ್ತಿ ಅವರು ಕನ್ನಡದ ಹೆಸರಾಂತ ಬರಹಗಾರರು. ಇವರು ಮುಖ್ಯವಾಗಿ ಕಾದಂಬರಿ, ಕಾವ್ಯ, ಪ್ರವಾಸ ಮತ್ತು ಕಥಾ ಸಾಹಿತ್ಯದಲ್ಲಿ ತಮ್ಮ ಹೆಸರನ್ನು ಗಟ್ಟಿ ಗೊಳಿಸಿಕೊಂಡಿದ್ದಾರೆ.…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
September 21, 2023
ಕನ್ನಡ ಸಾಹಿತ್ಯಕ್ಕೊಂದು ಅಪೂರ್ವ ಕೊಡುಗೆ ಈ ಪುಸ್ತಕ. ತಮಿಳಿನ ಅಗ್ರ ಸಾಹಿತಿ ಡಾ. ಸ್ವಾಮಿನಾಥ ಅಯ್ಯರ್ ಅವರ ಆಯ್ದ ಪ್ರಬಂಧಗಳ ಈ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದವರು ಬಿ.ಜಿ.ಎಲ್. ಸ್ವಾಮಿ ಅವರು. ಮುನ್ನುಡಿಯಲ್ಲಿ ಮೂಲ ಲೇಖಕರನ್ನು ಬಿ.ಜಿ.ಎಲ್. ಸ್ವಾಮಿಯವರು ಪರಿಚಯಿಸಿದ ಪರಿ: “ಕಳೆದ ನೂರು ವರ್ಷಗಳಲ್ಲಿ ತಮಿಳು ನುಡಿ ಸಮೃದ್ಧಿ ಹೊಂದುವುದಕ್ಕೆ ಇಬ್ಬರು ಮಹಾ ಮೇಧಾವಿಗಳು ಕಾರಣವೆಂದು ಹೇಳಬಹುದು. ಒಬ್ಬರು ಪಾಂಡಿತ್ಯ, ಸಂಶೋಧನೆ, ಮುದ್ರಣ ಸಾಮರ್ಥ್ಯ ಮತ್ತು ಋಜುತ್ವವುಳ್ಳವರು. ಮತ್ತೊಬ್ಬರು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 20, 2023
‘ಯಾಬ್ಲಿ’ ಎಚ್.ಆರ್. ರಮೇಶ ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬದುಕಿನ ಅನೇಕ ಸಂಗತಿ ಮತ್ತು ಅನುಭವಗಳಿಗೆ ಮುಖಾಮುಖಿಯಾಗಿ ಅದನ್ನೆಲ್ಲ ಕತೆಯಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಹಿಡಿದಿಡಲು ಪ್ರಯತ್ನಪಟ್ಟರೂ ಸಿಕ್ಕುವುದು ಒಂದು ಚುಕ್ಕಿಯಷ್ಟು ಮಾತ್ರ. ಆ ಅಷ್ಟಾದರೂ ಕತೆಯಲ್ಲಿ / ಕಲೆಯಲ್ಲಿ ಯಥಾವತ್ತಾಗಿ ಮೂಡುವುದಾ, ನೋ ವೇ! ವಾಸ್ತವವೆನ್ನುವುದು ಯಾವ ಕಾರಣಕ್ಕೂ ಭಾಷೆಯಲ್ಲಿ ಇದ್ದ ಹಾಗೆ ಮೂಡುವುದೇ ಇಲ್ಲ. ಅದು ಬೇರೆ ಬಗೆಯಲ್ಲೇ ಇರುತ್ತದೆ. ಏನನ್ನೋ ಹೇಳಲು…
ಲೇಖಕರು: Kavitha Mahesh
ವಿಧ: ರುಚಿ
September 17, 2023
ಮೊದಲಿಗೆ ಇಡ್ಲಿಗಳನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ. ಒಂದು ದೊಡ್ಡ ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಕೆಂಪು ಮೆಣಸಿನ ಹುಡಿ, ಕರಿಮೆಣಸು ಮತ್ತು ಸೋಯಾ ಸಾಸ್ ಹಾಕಿ ಒಟ್ಟಿಗೆ ಮಿಶ್ರಣ ಮಾಡಿ, ಈಗ ಅದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.  ಇಡ್ಲಿ ತುಂಡುಗಳನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಚೆನ್ನಾಗಿ ಫ್ರೈ ಮಾಡಿ. ನಂತರ ಒಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕ್ಯಾಪ್ಸಿಕಂ, ಟೊಮೆಟೊ ಸಾಸ್…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 16, 2023
ಆಂಧ್ರಪ್ರದೇಶ ಮೂಲದ ವಲ್ಲೂರು ಹುಸೇನಿ ಅವರು ತಮ್ಮ “ಹುಸೇನಿ ದ್ವಿಪದಿಗಳು” ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಕವಿ, ವಿಮರ್ಶಕರೂ ಆದ ನಾಗೇಶ ಜೆ ನಾಯಕ ಇವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ವಲ್ಲೂರು ಹುಸೇನಿ ಅವರು ತಮ್ಮ ಲೇಖಕರ ನುಡಿ “ದಿಲ್ ಕೀ ಬಾತ್" ನಲ್ಲಿ ಮನದಾಳದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದು ಹೀಗೆ... “ಆಂಧ್ರ ಮೂಲದ 'ಹುಸೇನಿ' ಕೇವಲ 'ಕವಿ'ಯೆಂದೆನಿಸಿಕೊಳ್ಳಲು ಅವಸರದಿ ಕೃತಿ ಪ್ರಕಟಿಸಿದರೆಂದ ಹಿರಿಯರ ಮಾತಿಗೆ ಐದು ವರ್ಷಗಳ ಬೊಗಸೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 14, 2023
ತ್ರಿಕೋನ ಪ್ರೇಮದ ಕಥಾ ಹಂದರವನ್ನು ಹೊಂದಿರುವ "ಚಂದ್ರಮಾನೆ" ಎಂಬ ಕಾದಂಬರಿಯನ್ನು ಬರೆದವರು ಕಗ್ಗೆರೆ ಪ್ರಕಾಶ್. ಇವರು ತಮ್ಮ ಈ ಪುಟ್ಟ ಕಾದಂಬರಿಯಲ್ಲಿ ತ್ರಿಕೋನ ಪ್ರೇಮವನ್ನು ಬಹಳ ಸೊಗಸಾಗಿ ಹೇಳ ಹೊರಟಿದ್ದಾರೆ. ಈ ಬಗ್ಗೆ ಅವರೇ ತಮ್ಮ ಮಾತು ‘ನಿಮ್ಮೊಂದಿಗೆ..." ಇಲ್ಲಿ ಹೇಳಿದ್ದು ಹೀಗೆ… “ಕಥಾನಾಯಕ ‘ಚಂದ್ರ’ ಅರವತ್ತು ವರ್ಷ ವಯಸ್ಸಿನ ಗಂಡ. ಕಥಾನಾಯಕಿ ‘ಮಾನೆ’ ಐವತ್ತು ವರ್ಷದ ಹೆಂಡತಿ. ಇವರಿಬ್ಬರ ಜೋಡಿಯ ಕಾದಂಬರಿ ಶೀರ್ಷಿಕೆಯೇ ‘ಚಂದ್ರಮಾನೆ.’ ಇವರಿಬ್ಬರ ನಡುವೆ ವಿಲನ್‌ನಂತೆ ಬರುವ…