ಕಡ್ಲೇ ಹಿಟ್ಟು ಸ್ಪೆಷಲ್ ಬರ್ಫಿ

ಕಡ್ಲೇ ಹಿಟ್ಟು ಸ್ಪೆಷಲ್ ಬರ್ಫಿ

ಬೇಕಿರುವ ಸಾಮಗ್ರಿ

ಕಡ್ಲೇ ಹಿಟ್ಟು ೧ ಕಪ್, ಸಕ್ಕರೆ ೨ ಕಪ್, ತುಪ್ಪ ೧ ಕಪ್, ತೆಂಗಿನಕಾಯಿ ತುರಿ ೧ ಕಪ್, ಹಾಲು ೧ ಕಪ್, ಬಾದಾಮಿ ಸಣ್ಣಗಿನ ತುಂಡುಗಳು ೧ ಕಪ್

 

ತಯಾರಿಸುವ ವಿಧಾನ

ಒಂದು ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ, ಕರಗಿದ ಬಳಿಕ ಕಡ್ಲೇ ಹಿಟ್ಟು ಹಾಕಿ ಕಂದು ಬಣ್ಣ ಬರುವವರೆಗೂ ಮಧ್ಯ ಉರಿಯಲ್ಲಿ ಹುರಿಯಿರಿ. ನಂತರ ಹಾಲು, ಸಕ್ಕರೆ ಮಿಶ್ರ ಮಾಡುತ್ತಾ ಚೆನ್ನಾಗಿ ಕುದಿಸಿರಿ. ಇನ್ನು ಉಳಿದ ತುಪ್ಪ, ಬಾದಾಮಿ ತುಂಡುಗಳು, ತೆಂಗಿನ ಕಾಯಿ ತುರಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. 

ನಂತರ ಈ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಸುರಿದು ತಣಿಯಲು ಬಿಡಿ. ಅರ್ಧ ಗಂಟೆಯ ಬಳಿಕ ನಿಮಗೆ ಸೂಕ್ತವೆನಿಸಿದ ಆಕಾರದಲ್ಲಿ ತುಂಡರಿಸಿದರೆ ರುಚಿಕರವಾದ ಬರ್ಫಿ ತಯಾರು.