ಇಡ್ಲಿ ಮಂಚೂರಿ
ಇಡ್ಲಿ - ೫, ಮೈದಾ ಅರ್ಧ ಕಪ್, ಕೆಂಪು ಮೆಣಸಿನ ಹುಡಿ - ೨ ಚಮಚ, ಕಾರ್ನ್ ಫ್ಲೋರ್ ಅರ್ಧ ಕಪ್, ಕರಿಮೆಣಸಿನ ಹುಡಿ - ೧ ಚಮಚ, ಅಡುಗೆ ಎಣ್ಣೆ, ಈರುಳ್ಳಿ ೧, ಬೆಳ್ಳುಳ್ಳಿ ೧, ಶುಂಠಿ ಸಣ್ಣ ತುಂಡು, ದೊಣ್ಣೆ ಮೆಣಸು (ಕ್ಯಾಪ್ಸಿಕಂ) ೧, ಲವಂಗ-೨, ಟೊಮೆಟೋ ಸಾಸ್ ೧ ಚಮಚ, ರುಚಿಗೆ ಉಪ್ಪು, ಚಿಲ್ಲಿ ಸಾಸ್ ೨ ಚಮಚ, ವಿನೆಗಾರ್ ೨ ಚಮಚ, ಸೋಯಾ ಸಾಸ್ ೧ ಚಮಚ.
ಮೊದಲಿಗೆ ಇಡ್ಲಿಗಳನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ. ಒಂದು ದೊಡ್ಡ ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಕೆಂಪು ಮೆಣಸಿನ ಹುಡಿ, ಕರಿಮೆಣಸು ಮತ್ತು ಸೋಯಾ ಸಾಸ್ ಹಾಕಿ ಒಟ್ಟಿಗೆ ಮಿಶ್ರಣ ಮಾಡಿ, ಈಗ ಅದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇಡ್ಲಿ ತುಂಡುಗಳನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಚೆನ್ನಾಗಿ ಫ್ರೈ ಮಾಡಿ. ನಂತರ ಒಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕ್ಯಾಪ್ಸಿಕಂ, ಟೊಮೆಟೊ ಸಾಸ್, ಚಿಲ್ಲಿ ಸಾಸ್, ಉಪ್ಪು, ಸೋಯಾ ಸಾಸ್, ವಿನೆಗಾರ್ ಸೇರಿಸಿ, ಚೆನ್ನಾಗಿ ಬೇಯಿಸಿರಿ. ನಂತರ ಹುರಿದ ಇಡ್ಲಿಗಳನ್ನು ಈ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದರೆ ಇಡ್ಲಿ ಮಂಚೂರಿ ಸವಿಯಲು ಸಿದ್ಧ.