ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 04, 2022
‘ಶನಿ ಮಹಾತ್ಮೆ ಮತ್ತು ಬಜ್ಪೆ ಶನೈಶ್ಚರ ದೇವಸ್ಥಾನ' ಪುಸ್ತಕದ ಲೇಖಕರು ಡಿ.ಎಸ್.ಬೋಳೂರು ಇವರು. ತಮ್ಮ ಮಾತಿನಲ್ಲಿ ಇವರು ಹೀಗೆ ಬರೆಯುತ್ತಾರೆ “ಈ ಕೃತಿಯಲ್ಲಿ ಎರಡು ವಿಭಾಗಗಳಿವೆ. ಒಂದನೇ ಭಾಗದಲ್ಲಿ ಮೂರು ಅಧ್ಯಾಯಗಳನ್ನು ರಚಿಸಿದ್ದೇನೆ. ಒಂದನೇ ಅಧ್ಯಾಯವು ಜ್ಯೋತಿಷ್ಯದ ಸಂಕ್ಷಿಪ್ತ ವಿವರಣೆಗಳೊಂದಿಗೆ ನವಗ್ರಹಗಳ ಪರಿಚಯ, ಏಳುವರೆ ಶನಿ, ಅಷ್ಟಮ ಶನಿ, ಶನಿದೆಸೆ ಮತ್ತು ಇತರ ದೆಶೆಗಳು ಹಾಗೂ ಆ ದೆಶೆಗಳಲ್ಲಿ ಅಂತರ್ಗತವಾಗಿರುವ ಭುಕ್ತಿಗಳ ಕುರಿತಾಗಿ ಸಂಕ್ಷಿಪ್ತವಾಗಿ ನಿರೂಪಿಸಿರುತ್ತೇನೆ.  ಎರಡನೇ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
March 03, 2022
ಇದು 256 ಔಷಧೀಯ ಗಿಡಮೂಲಿಕೆಗಳ ಪರಿಚಯ ಹಾಗೂ ಉಪಯೋಗ ತಿಳಿಸುವ ಉಪಯುಕ್ತ ಪುಸ್ತಕ. ಪ್ರತಿಯೊಂದು ಔಷಧೀಯ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಹಾಗೂ ವರ್ಣ ಮತ್ತು ಕಪ್ಪುಬಿಳುಪು ಚಿತ್ರಗಳನ್ನು ಕೊಟ್ಟಿರುವುದರಿಂದ ಅವನ್ನು ಗುರುತಿಸಲು ಸಹಾಯ. ಜೊತೆಗೆ, ಸಸ್ಯದ ಕನ್ನಡ, ತೆಲುಗು, ತಮಿಳು, ಮಳೆಯಾಳ ಮತ್ತು ಸಂಸ್ಕೃತ ಹೆಸರುಗಳನ್ನೂ ಪ್ರಕಟಿಸಲಾಗಿದೆ. ಬಹುಪಾಲು ಸಸ್ಯಗಳ ಹಿಂದಿ ಹೆಸರುಗಳೂ ಇವೆ. ಅಕಾರಾದಿಯಾಗಿ ಔಷಧೀಯ ಸಸ್ಯಗಳ ಬಗ್ಗೆ ತಲಾ ಒಂದೊಂದು ಪುಟ ಮಾಹಿತಿ ನೀಡಲಾಗಿದೆ. ಆರಂಭದಲ್ಲಿ ಹೆಸರುಗಳ ಪಟ್ಟಿ,…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 01, 2022
ಪೂರ್ಣಿಮಾ ಮಾಳಗಿಮನಿಯವರು ‘ಪ್ರೀತಿ ಪ್ರೇಮ-ಪುಸ್ತಕದಾಚೆಯ ಬದನೇಕಾಯಿ' ಎಂಬ ಸೊಗಸಾದ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ಓದುಗರ ಅನಿಸಿಕೆಯನ್ನು ಮುದ್ರಿಸಿದ್ದಾರೆ. ಲೇಖಕರಾದ ಗೋಪಾಲಕೃಷ್ಣ ಕುಂಟಿನಿಯವರು "ಇದು ಪ್ರೇಮ ಮತ್ತು ಯಾತನೆಯ ಕತೆ. ನೆಲದ ಮುಖದಿಂದ ಎದ್ದು ಬಂದ ಬದುಕುಗಳ ಕತೆ. ಈ ಪುಸ್ತಕ ಬೋಲ್ಡ್ ಮತ್ತು ಬ್ಯೂಟಿಫುಲ್!” ಎಂದಿದ್ದಾರೆ. ಪತ್ರಕರ್ತ, ಲೇಖಕ ಜೋಗಿಯವರು ತಮ್ಮ ಅಭಿಪ್ರಾಯದಲ್ಲಿ ‘ಒಂದು ಗುಪ್ತ ಪ್ರೇಮ, ಮತ್ತೊಂದು ಭಗ್ನ ಪ್ರೇಮ, ಮುಗಿಯದ ಹುಡುಕಾಟ, ತೀವ್ರ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
March 01, 2022
ಮುಂಬಯಿನ  ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಪಾರ್ವತೀಯ ಕೋ-ಆಪರೇಟಿವ್ ಹೌಸಿಂಗ್ ಸೊಸಾಯಿಟಿಯಲ್ಲಿ ನಿರ್ಮಿಸಿರುವ  ‘ಹಿಮಾಲಯೇಶ್ವರ ಮಹದೇವ್ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಆಚರಿಸುತ್ತಿರುವುದು’  ! ಹೆಸರೇ ಸೂಚಿಸುವಂತೆ ಶಿವನ ಆರಾಧನೆಗೆ ಮೀಸಲಾದ ಸಮಯ ‘ರಾತ್ರಿ’. ಇಡೀ ರಾತ್ರಿ ನಾವು ಜಾಗರಣೆಯಲ್ಲಿದ್ದು ಶಿವನನ್ನು ಪೂಜಿಸಬೇಕು. ರಾತ್ರಿ ಎಂದರೆ ನಿದ್ರೆ; ತಮಸ್ಸು; ಕತ್ತಲು. ಇವೆಲ್ಲವೂ ನಮ್ಮ ಎಚ್ಚರವನ್ನು ತಪ್ಪಿಸುವಂಥವು; ಪ್ರಮಾದಕ್ಕೆ ಕಾರಣವಾಗಬಲ್ಲಂಥವು. ಇಂಥ ಸಮಯ ದಲ್ಲಿ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
February 27, 2022
ಲೇಖಕರು : ಎಚ್ಚಾರೆಲ್, (ಸಂಪದ ತಾಣದಲ್ಲಿ ಶುರುವಿನಿಂದ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ) 'ಕನ್ನಡ ವಿಕಿಪೀಡಿಯದ ಸಂಪಾದಕರು', ಸುಮಾರು ಒಂದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಸಂಪಾದಿಸಿದ್ದಾರೆ.  ಬ್ಲಾಗ್ ಲೇಖಕರು, ಫೇಸ್ಬುಕ್, ನಲ್ಲಿ ಸಕ್ರಿಯರಾಗಿದ್ದಾರೆ.  ಹಲವು ಅಂತರ್ಜಾಲ ತಾಣಗಳಲ್ಲಿ ಲೇಖನಗಳನ್ನು ಬರೆಯುತ್ತಾರೆ.  ಲತಾ ಮಂಗೇಶ್ಕರ್, ತಮ್ಮ ಟೆಲಿವಿಷನ್ ಸಂವಾದಗಳಲ್ಲಿ  ಬಡೇಗುಲಾಂ ಖಾನ್  ಹಾಗೂ ನೂರ್ ಜೆಹಾನ್ ಬೇಗಂ ತಮ್ಮ ಪರಮಾಪ್ತ ಮಾರ್ಗದರ್ಶಕರೆಂದು ಪ್ರಶಂಸಿದ್ದಾರೆ.  ಶಂಶಾದ್…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 25, 2022
ಆತ ಲೋಕ ಪ್ರಸಿದ್ಧ ಸಾಹಿತಿ ಆಲ್ಬರ್ಟ್ ಕಮೂ - ಕಾಮೂ ಎಂದೂ ಬರೆಯುತ್ತಾರೆ. ಅದಿರಲಿ. ಕನ್ನಡದ ಕಥೆಗಾರ ಕೇಶವ ಮಳಗಿ ಅವರು ಈತನ ಬಗ್ಗೆ ಬರೆದ 'ಕಮೂ - ತರುಣ ವಾಚಿಕೆ, ಎಂಬ ಪುಸ್ತಕವನ್ನು ಓದುತ್ತಿದ್ದೇನೆ. ಅದರಲ್ಲಿನ ಒಂದು ಕಥೆಯನ್ನು ಈಗತಾನೆ  ಓದಿದೆ. ಕಥೆಯು ಸಂಕ್ಷಿಪ್ತವಾಗಿ ಹೀಗಿದೆ. ಊರಿನ ಒಂದು ಶಾಲೆ. ಅಲ್ಲಿ ಒಬ್ಬ ಮಾಸ್ತರ. ಆತನ ಪರಿಚಯದ ಪೊಲೀಸನು ಒಬ್ಬ ಕೈದಿಯನ್ನು ಕರೆತಂದು ಇವನಿಗೆ  ಒಪ್ಪಿಸುತ್ತಾನೆ. ಅವನ ಮೇಲಧಿಕಾರಿಗಳ ಆದೇಶದಂತೆ ಈ ಮಾಸ್ತರನು ಈ ಕೈದಿಯನ್ನು ಹತ್ತಿರದಲ್ಲಿರುವ ಪೊಲೀಸ್…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 25, 2022
ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದಾರೆ, ಗಜಲ್ ನ ಮಗದೊಂದು ಆಯಾಮದೊಂದಿಗೆ, ಅದೂ "ಸ್ನೇಹದ ಮಧುಶಾಲೆ" ಎಂಬ ಗಜಲ್ ಗುಲ್ಜಾರ್ ನೊಂದಿಗೆ ಡಾ. ಮಲ್ಲಿನಾಥ ಎಸ್.ತಳವಾರ ಇವರು. ಮಲ್ಲಿನಾಥ ಇವರ ಮೊದಲ ಗಜಲ್ ಗುಲ್ದಸ್ಥ "ಗಾಲಿಬ್ ಸ್ಮೃತಿ" ಯು ಗಜಲ್ ನ ಉಗಮ, ಸ್ವರೂಪ, ಲಕ್ಷಣ ಹಾಗೂ ಗಜಲ್ ಪ್ರಕಾರಗಳನ್ನು ಉದಾಹರಣೆಯೊಂದಿಗೆ ತಿಳಿ ಹೇಳಿದ್ದರೆ, ಎರಡನೇ ಗಜಲ್ ಸಂಕಲನ "ಮಲ್ಲಿಗೆ ಸಿಂಚನ" ಗಜಲ್ ಹೂದೋಟ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಗಜಲ್ ಪಾರಿಭಾಷಿಕ ಪದಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಈ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
February 24, 2022
ಇದು ಭಾರತದ ಪಾರಂಪರಿಕ ಔಷಧೀಯ ಸಸ್ಯಜ್ನಾನವನ್ನು ಭಟ್ಟಿ ಇಳಿಸಿದ ಪುಸ್ತಕ; ಪಾಣಾಜೆಯ ಪಾರಂಪರಿಕ ಮೂಲಿಕಾ ವೈದ್ಯರಾಗಿದ್ದ ಪಿ. ಎಸ್. ವೆಂಕಟರಾಮ ದೈತೋಟ ಅವರ ಜೀವಮಾನದ ತಪಸ್ಸಿನ ಫಲ ಇದು. ಈ ಪುಸ್ತಕದಲ್ಲಿದೆ 280 ಜನೋಪಯೋಗಿ ಔಷಧೀಯ ಸಸ್ಯಗಳ ಅಪೂರ್ವ ಜ್ನಾನಭಂಡಾರ. ಪ್ರತಿಯೊಂದು ಔಷಧೀಯ ಸಸ್ಯದ ಬಗ್ಗೆ ಮೂರು ವಿಭಾಗಗಳಲ್ಲಿ ಮಾಹಿತಿ ನೀಡಲಾಗಿದೆ: ಸಸ್ಯದ ಹೆಸರುಗಳು, ಮೂಲಿಕಾ ಪರಿಚಯ, ಉಪಯೋಗಗಳು. ಜೊತೆಗೆ ಸಸ್ಯದ ಗುರುತು ಹಿಡಿಯಲು ಸಹಾಯವಾಗಲಿಕ್ಕಾಗಿ ಲೇಖಕರೇ ಚಿತ್ರಿಸಿರುವ ಸಸ್ಯದ ರೇಖಾ ಚಿತ್ರಗಳು.…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 23, 2022
ಪುನೀತ್ ರಾಜಕುಮಾರ್ ಅವರ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ಲೇಖಕ, ಪತ್ರಕರ್ತರಾದ ಡಾ.ಶರಣು ಹುಲ್ಲೂರು ಇವರು. ಪುನೀತ್ ಬದುಕಿರುವಾಗಲೇ ಈ ಪುಸ್ತಕವನ್ನು ಹೊರ ತರಬೇಕೆಂದು ಲೇಖಕರಿಗೆ ಬಹಳ ಮನಸ್ಸಿತ್ತು. ಆದರೆ ಪುನೀತ್ ತಮ್ಮ ತಂದೆ ಹಾಗೂ ತಾಯಿಯವರ ಪುಸ್ತಕಗಳ ಜೊತೆ ತಮ್ಮ ಪುಸ್ತಕ ಇರಿಸಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿ ಲೇಖಕರಿಗೆ ನಿರಾಸೆ ಮಾಡಿದ್ದರು. ಆದರೆ ಪುನೀತ್ ಅಕಾಲ ಮರಣಕ್ಕೀಡಾದಾಗ ಅವರು ಮಾಡಿದ ಸಾಧನೆಗಳು ಒಂದೊಂದಾಗಿಯೇ ಹೊರಬರಲಾರಂಭಿಸಿತು. ಶರಣು ಅವರೂ…
ವಿಧ: ರುಚಿ
February 23, 2022
ಬದನೆ(ಉಡುಪಿ ಗುಳ್ಳ)ಯನ್ನು ತುಂಡುಗಳನ್ನಾಗಿ ಮಾಡಿ, ಮಜ್ಜಿಗೆ ಅಥವಾ ಅರಶಿನ ಹುಡಿ ಹಾಕಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ರುಚಿಗೆ ತಕ್ಕಷ್ಟು ಉಪ್ಪು, ಟೊಮ್ಯಾಟೊ, ಎರಡು ಕಾಯಿಮೆಣಸುಗಳನ್ನು ಬದನೆ ಹೋಳುಗಳಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು. (ಚಿಟಿಕೆ ಅರಶಿನ ಹುಡಿ ಬೇಕಾದರೆ ಹಾಕಬಹುದು) ಈ ಹೋಳುಗಳು ಹತ್ತೇ ನಿಮಿಷದಲ್ಲಿ ಬೇಯುತ್ತದೆ. ತೆಂಗಿನಕಾಯಿ ತುರಿಗೆ ಒಂದು ಕಾಯಿಮೆಣ‌ಸು ಹಾಕಿ ನುಣ್ಣಗೆ ರುಬ್ಬಿ, ಬೆಂದ ಹೋಳುಗಳಿಗೆ ಸೇರಿಸಿ. ಮಜ್ಜಿಗೆ ಸೇರಿಸಿ, ಹದ ಕುದಿಯಲು ಆರಂಭಿಸುವಾಗ…