ವಿಧ: ಪುಸ್ತಕ ವಿಮರ್ಶೆ
January 13, 2022
ಶ್ರೀಕಾಂತ ಮತ್ತು ವಾಣಿ ದೊಡ್ಡ ಕನಸು ಹೊತ್ತು, ಸಿಂಗಪೂರ ಹಾದು, ಅಮೇರಿಕಾದ ಲಾಸ್ ಏಂಜಲಿಸ್ ಇಂಟರ್-ನ್ಯಾಷನಲ್ ಏರ್-ಪೋರ್ಟ್ ತಲಪುವ ಸನ್ನಿವೇಶದೊಂದಿಗೆ ಕಾದಂಬರಿ ಶುರು. ಅವರು ಸಿಂಗಪೂರ ಏರ್-ಪೋರ್ಟಿನಲ್ಲೇ ಎರಡು ದಿನ ಕಳೆಯಬೇಕಾಯಿತು. ಯಾಕೆಂದರೆ, ಅವರು ಸಿಂಗಪೂರ ತಲಪಿದ ದಿನವೇ, ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ಎರಡೂ ಗಗನಚುಂಬಿ ಕಟ್ಟಡಗಳನ್ನು (ಅಪಹರಿಸಿದ ವಿಮಾನಗಳನ್ನು ಅವಕ್ಕೆ ಅಪ್ಪಳಿಸುವ ಮೂಲಕ) ಭಯೋತ್ಪಾದಕರು ಧ್ವಂಸ ಮಾಡಿದ್ದರು. ಅದರಲ್ಲೊಂದು ವಿಮಾನ ಇವರು…
ವಿಧ: ರುಚಿ
January 12, 2022
ಒಂದು ಬಾಣಲೆಯಲ್ಲಿ ಹಾಲಿನ ಹುಡಿಯನ್ನು ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಕಲಸಬೇಕು. ಹಾಲಿನ ಹುಡಿ ನೀರಿನಲ್ಲಿ ಕರಗಿ ತೆಳುವಾದ ಪೇಸ್ಟ್ ನಂತೆ ಆಗುತ್ತದೆ. ಆ ಸಮಯದಲ್ಲಿ ಬಾಣಲೆಯನ್ನು ಉರಿಯುತ್ತಿರುವ ಒಲೆಯ ಮೇಲಿರಿಸಿ. ಹಾಲು ಕುದಿಯಲು ಪ್ರಾರಂಭವಾಗುವಾಗ ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿ ನಿಂಬೆಹುಳಿ ರಸವನ್ನು (ಒಮ್ಮೆಲೇ ಹಾಕಬೇಡಿ) ಹಾಕಿ. ಹಾಲು ಒಡೆದು ಪಾಕ ಇನ್ನಷ್ಟು ಗಟ್ಟಿಯಾಗುತ್ತದೆ. ಆ ಕುದಿಯುತ್ತಿರುವ ಪಾಕದಲ್ಲಿರುವ ನೀರಿನ ಅಂಶ ಸಂಪೂರ್ಣವಾಗಿ ಆವಿಯಾದ ಬಳಿಕ ಸಿಗುವ…
ವಿಧ: ಪುಸ್ತಕ ವಿಮರ್ಶೆ
January 11, 2022
ಸದಾ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಕಥೆಗಾರ ಜೋಗಿ (ಗಿರೀಶ್ ಹತ್ವಾರ್) ಹತ್ತಾರು ಕತೆಗಳನ್ನು ಹೆಕ್ಕಿ ತಂದು ‘ನನ್ನ ತೋಟದ ನೀಲಿ ಹೂಗಳು' ಎಂದು ಹೆಸರಿಸಿದ್ದಾರೆ. ಪುಸ್ತಕದಲ್ಲಿ ಪುಟ್ಟ ಪುಟ್ಟ ೧೪ ಕಥೆಗಳಿವೆ. ಜೋಗಿಯವರ ಕಥೆಗಳನ್ನು ಓದುವುದೇ ಬಹಳ ಸೊಗಸು.
ಈ ಪುಸ್ತಕವನ್ನು ಸಪ್ನ ಬುಕ್ ಹೌಸ್ ನವರು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಹೊರ ತಂದಿದ್ದಾರೆ. ಈ ಬಗ್ಗೆ ಸಾಹಿತಿ ಚೆನ್ನವೀರ ಕಣವಿಯವರು ಬೆನ್ನುಡಿಯನ್ನು ಬರೆದಿದ್ದಾರೆ. “..ಹೀಗೆ ಲೇಖಕ-ಪ್ರಕಾಶಕ-ಓದುಗರ ನಡುವೆ ನಿಕಟ…
ವಿಧ: ರುಚಿ
January 11, 2022
ತೊಂಡೆಕಾಯಿಗಳನ್ನು ಸ್ವಚ್ಛಗೊಳಿಸಿ ಉದ್ದಕ್ಕೆ ಕತ್ತರಿಸಬೇಕು. ತುಂಡುಗಳಿಗೆ ಉಪ್ಪು ಮತ್ತು ಖಾರಪುಡಿಯನ್ನು ಮಿಶ್ರಮಾಡಿ ಸ್ವಲ್ಪ ಹೊತ್ತು ಇಡಬೇಕು. ಎಣ್ಣೆ ಹಾಕಿ, ಒಗ್ಗರಣೆ ಜೊತೆ ಬೆಳ್ಳುಳ್ಳಿ ಜಜ್ಜಿ ಸೇರಿಸಿ ಹುರಿದು ಹೋಳು(ತುಂಡು)ಗಳನ್ನು ಹಾಕಿ ಬೇಯಿಸಬೇಕು. ನೀರು ಹಾಕಬಾರದು. ಎಣ್ಣೆಯಲ್ಲಿಯೇ ಬೇಯಿಸಬೇಕು. ಆಗಾಗ ಮಗುಚುತ್ತಿರಬೇಕು. ಸರಿಯಾಗಿ ಬೆಂದಿದೆ ಅನಿಸಿದ ಮೇಲೆ ಖಾರ ಬೇಕಾದಲ್ಲಿ ಖಾರಪುಡಿ ಸೇರಿಸಬೇಕು ಹಾಕಬೇಕು. ಈ ಖಾದ್ಯಕ್ಕೆ ಬೇರೇನೂ ಹಾಕಬೇಕಾಗಿಲ್ಲ. ಹಾಗೆಯೇ ತಿನ್ನಬಹುದು. ಸ್ವಲ್ಪ…
ವಿಧ: ಬ್ಲಾಗ್ ಬರಹ
January 08, 2022
ಅವನ ಹೆಸರು ಥಾಮಸ್ 'ಆಟೋ' ರಾಜಾ.ಚಿಕ್ಕಂದಿನಲ್ಲಿ ಅವನಿಗೆ ತಾಯಿತಂದೆಯರ ಪ್ರೀತಿ ಸಿಗಲಿಲ್ಲವಂತೆ, ಚಿಕ್ಕ ಪುಟ್ಟ ಕಳ್ಳತನ ದರೋಡೆ ಮಾಡುತ್ತಿದ್ದನಂತೆ, ಉಳಿದ ಹುಡುಗರಿಗೆ ಕಾಟ ಕೊಡುತ್ತಿದ್ದನಂತೆ.ಜನರ ದೂರು ಹೆಚ್ಚಾದಾಗ ಅವನನ್ನು ಮನೆಯಿಂದ ಹೊರಗೆ ಹಾಕಿದರಂತೆ, ಒಂದು ಸಲ ಒಂದು ತಿಂಗಳು ಜೈಲಿಗೂ ಹೋದನಂತೆ. ಜೈಲಿನಲ್ಲಿ ಅವನು ಯೋಚಿಸಿದನಂತೆ -ಇಂತಹ ಬದುಕು ನನ್ನದಾಗುವುದು ಬೇಡ. 'ದೇವರೇ ಏನಾದರೂ ದಾರಿ ತೋರಿಸು ' ಅಂತ ದೇವರನ್ನು ಬೇಡಿಕೊಂಡನು. ತನ್ನ ಜೀವನದಲ್ಲಿ ಬದಲಾವಣೆ ತಂದುಕೊಂಡನು. ಆಟೋ…
ವಿಧ: ಪುಸ್ತಕ ವಿಮರ್ಶೆ
January 08, 2022
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ…
ವಿಧ: ಪುಸ್ತಕ ವಿಮರ್ಶೆ
January 08, 2022
ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದ ಪ್ರಮುಖರಲ್ಲಿ ದೇವುಡು ನರಸಿಂಹ ಶಾಸ್ತ್ರಿಗಳೂ ಒಬ್ಬರು. ಭಾರತೀಯ ಪರಂಪರೆಯನ್ನೂ ಶಾಸ್ತ್ರಸಾಹಿತ್ಯವನ್ನೂ ವೇದಾಂತವನ್ನೂ ಅವರಂತೆ ಸಾಹಿತ್ಯಗಳ ಮೂಲಕ ಜನಸಾಮಾನ್ಯರಿಗೆ ಪರಿಚಯಿಸಿದವರು ವಿರಳ. ಅವರ ಮೂರು ಮಹತ್ವದ ಕೃತಿಗಳಾದ ಮಹಾದರ್ಶನ, ಮಹಾಬ್ರಾಹ್ಮಣ, ಮಹಾಕ್ಷತ್ರಿಯಗಳನ್ನು ಕುರಿತು ನಾವೆಲ್ಲ ಕೇಳಿಯೇ ಇದ್ದೇವೆ. ಅವರ ಮಯೂರ ಕಾದಂಬರಿಯೇ ಸಿನೆಮಾ ಆಗಿ, ಮನೆಮನೆಗೂ ತಲಪಿದ್ದು ಇತಿಹಾಸ. ಇವುಗಳಲ್ಲದೆ ಅವರು ಹಲವಾರು ಸಾಮಾಜಿಕ, ಮನೋವೈಜ್ಞಾನಿಕ, ಐತಿಹಾಸಿಕ…
ವಿಧ: ಪುಸ್ತಕ ವಿಮರ್ಶೆ
January 07, 2022
ಅಮೀಶ್ ಅವರ ರಾಮಚಂದ್ರ ಸರಣಿಯ ಎರಡನೇ ಭಾಗವೇ ‘ಮಿಥಿಲೆಯ ವೀರವನಿತೆ -ಸೀತೆ'. ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದವರು ದುಷ್ಯಂತ ಇವರು. ಮೊದಲ ಭಾಗದ ಅನುವಾದ ಮಾಡಿದ ಅನುವಾದಕರನ್ನು ಕೈಬಿಟ್ಟು ಹೊಸ ಅನುವಾದಕರನ್ನು ಪ್ರಕಾಶಕರು ಹುಡುಕಿದ್ದಾರೆ. ಮೊದಲ ಭಾಗದ ಅನುವಾದ ಬಹಳ ಕಳಪೆಯಾಗಿತ್ತು. ಆದರೆ ಎರಡನೇ ಭಾಗದ ಅನುವಾದ ಪರವಾಗಿಲ್ಲ ಎನಿಸುವಂತಿದೆ.
ಪುಸ್ತಕದ ಬೆನ್ನುಡಿಯಲ್ಲಿ “ಭಾರತ ಇಂದು ಒಡಕು, ಭಿನ್ನಾಭಿಪ್ರಾಯ, ಪ್ರತಿಭಟನೆ ಮತ್ತು ಬಡತನಗಳಿಂದ ಆವೃತವಾಗಿದೆ. ಜನ ತಮ್ಮನಾಳುವವರನ್ನು…
ವಿಧ: ಪುಸ್ತಕ ವಿಮರ್ಶೆ
January 05, 2022
"ರಾ. ಕು.” ಕಾವ್ಯನಾಮದಲ್ಲಿ ಬರೆಯುವ ಆರ್. ವಿ. ಕುಲಕರ್ಣಿ ಅವರ ಲಲಿತ ಪ್ರಬಂಧಗಳ ಮೊದಲ ಸಂಕಲನ ಇದು. ಇದರ ಸಂಪಾದಕರು ಲಲಿತ ಪ್ರಬಂಧಗಳ ಬಗ್ಗೆ ಹೀಗೆ ಬರೆದಿದ್ದಾರೆ: “ಈ ಪ್ರಬಂಧದ ಜಾತಿ ಹೊರ ಜಗತ್ತಿನೊಡನೆ ಅತ್ಯಂತ ನಿಕಟ ಸಂಬಂಧವನ್ನಿಟ್ಟುಕೊಂದು ಬೆಳೆಯಬೇಕಾದದ್ದಿರುತ್ತದೆ. ಪತ್ರಿಕಾ ವ್ಯವಸಾಯಿಯೊಬ್ಬನನ್ನು ಬಿಟ್ಟರೆ ಸಾಹಿತ್ಯದಲ್ಲಿ ಪ್ರಬಂಧಕಾರನಷ್ಟು ಸಮೀಪದಲ್ಲಿ ಜೀವನವನ್ನು ಸಂದರ್ಶಿಸುವ ವ್ಯಕ್ತಿ ಬೇರೊಬ್ಬನಿರಲಾರನು. ಅಂತೆಯೇ ಇಂಥ ಬರವಣಿಗೆಗೆ ಬಂದೊದಗುವ ಗಂಡಾಂತರ ತೀರ ದೊಡ್ಡದಾಗಿರುತ್ತದೆ…
ವಿಧ: ಪುಸ್ತಕ ವಿಮರ್ಶೆ
January 04, 2022
ಖ್ಯಾತ ಆಂಗ್ಲ ಲೇಖಕರಾದ ಅಮೀಶ್ ತ್ರಿಪಾಠಿ ಅವರ ರಾಮಚಂದ್ರ ಸರಣಿಯ ಮೊದಲ ಪುಸ್ತಕವೇ ‘ಇಕ್ಷ್ವಾಕು ಕುಲತಿಲಕ' (Scion of Ikshvaku). ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಬಿ.ಕೆ.ಎಸ್. ಮೂರ್ತಿ ಇವರು. ಶಿವ ಸರಣಿಯ ಮೂರು ಪುಸ್ತಕಗಳನ್ನು (ಮೆಲೂಹದ ಮೃತ್ಯುಂಜಯ, ನಾಗ ರಹಸ್ಯ, ವಾಯುಪುತ್ರರ ಶಪಥ - ಅನುವಾದ: ಎಸ್.ಉಮೇಶ್) ಈಗಾಗಲೇ ಕನ್ನಡದಲ್ಲಿ ಓದಿರುತ್ತೀರಿ. ಪೌರಾಣಿಕ ಪಾತ್ರಗಳನ್ನು ಈಗಿನ ಕಾಲಕ್ಕೆ ಸೂಕ್ತವಾಗುವಂತೆ ಮಾರ್ಪಾಡು ಮಾಡಿ ಮೂಲ ಉದ್ದೇಶಕ್ಕೆ, ಕಥೆಗೆ ಚ್ಯುತಿಯಾಗದಂತೆ…