ವಿಧ: ಪುಸ್ತಕ ವಿಮರ್ಶೆ
December 02, 2021
ಖ್ಯಾತ ಲೇಖಕರಾದ ಖುಶವಂತ್ ಸಿಂಗ್ ಅವರ ಹತ್ತು ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಪ್ರಸಿದ್ಧ ಅನುವಾದಕರಾದ ಡಿ.ಎನ್.ಶ್ರೀನಾಥ್ ಅವರು. ಪುಸ್ತಕದಲ್ಲಿ ಯಾವುದೇ ಮುನ್ನುಡಿಗಳಿಲ್ಲ. ಮೂಲ ಲೇಖಕರ ಹಾಗೂ ಅನುವಾದಕರ ಬಗ್ಗೆ ಕೊಂಚ ಮಾಹಿತಿಗಳಿವೆ. ಪುಸ್ತಕದಲ್ಲಿ ೧೦ ಸಣ್ಣ ಕಥೆಗಳಿವೆ. ವಿಷ್ಣು ಚಿಹ್ನೆ, ಸರ್ ಮೋಹನಲಾಲರೂ ಅವರ ಆಂಗ್ಲ ಪ್ರೇಮವೂ..., ಲಂಡನ್ ನಲ್ಲಿ ಒಂದು ಪ್ರೇಮ ಪ್ರಸಂಗ, ಕಪ್ಪು ಮಲ್ಲಿಗೆ, ಅಜ್ಜಿ, ಬ್ರಹ್ಮ -ವಾಕ್ಯ, ರೇಪ್, ರಸಿಕ, ಸ್ವರ್ಗ ಮತ್ತು ಮರಣೋಪರಾಂತ ಎಂಬ ಕಥೆಗಳಿವೆ.
ಪುಟ್ಟ…
ವಿಧ: ಪುಸ್ತಕ ವಿಮರ್ಶೆ
December 02, 2021
ಪ್ರಕಾಶಕರು ಜರಗಿಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ೧೩ ಕಥೆಗಳ ಸಂಕಲನ ಇದು. ಈ ಸ್ಪರ್ಧೆಗೆ ಪ್ರಕಾಶಕರಿಗೆ ಬೆಂಗಳೂರಿನ ಜಾಗತಿಕ ಕನ್ನಡಿಗರ ಕೂಟ “ಕಥನ" ಸಹಯೋಗ ನೀಡಿತ್ತು.
ಆ ಸ್ಫರ್ಧೆಗೆ ಸಲ್ಲಿಕೆಯಾದ ೨೨೦ ಕತೆಗಳಲ್ಲಿ ಮೊದಲ ಬಹುಮಾನ ಪಡೆದ ಕತೆ “ನೀವೂ ದಾರ ಕಟ್ಟಿ”. ಫತೇಪುರಸಿಕ್ರಿಗೆ ಪ್ರವಾಸ ಹೋಗಿದ್ದ ದಂಪತಿಗಳಿಗೆ ಸೂಫಿ ಸಂತ ಸಲೀಂ ಕ್ರಿಸ್ತಿಯ ಸಮಾಧಿಯ ಕಿಂಡಿಯನ್ನು ತೋರಿಸಿ, ಪ್ರವಾಸಿ ಗೈಡ್ “….ಮಕ್ಕಳಿಲ್ಲದವರು ಈ ಕಿಂಡಿಗೆ ದಾರ ಕಟ್ಟಿದರೆ ಅವರ ಇಷ್ಟಾರ್ಥ ಪೂರೈಸುತ್ತದಂತೆ. ಸರ್,…
ವಿಧ: ಪುಸ್ತಕ ವಿಮರ್ಶೆ
November 30, 2021
ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರು ಎಂಬ ಪುಸ್ತಕವನ್ನು ಕಮಲಾ ಹಂಪನಾ ಇವರು ಬರೆದಿದ್ದಾರೆ. ಅವರು ತಮ್ಮ ‘ಮೊದಲ ಮಾತು’ ಎಂಬ ಮುನ್ನುಡಿಯಲ್ಲಿ ಉಲ್ಲೇಖಿಸಿರುವಂತೆ “ಸ್ವಾತಂತ್ರ್ಯ ಪೂರ್ವದಲ್ಲಿ ತುಳುನಾಡು ಮದರಾಸು ಪ್ರಾಂತ್ಯಕ್ಕೆ ಸೇರಿತ್ತು. ಭಾಷಾವಾರು ಪ್ರಾಂತ್ಯ ರಚನೆಯ ಪುನರ್ ವಿಂಗಡಣೆ ಸಂದರ್ಭದಲ್ಲಿ ‘(ಅವಿಭಜಿತ) ದಕ್ಷಿಣ ಕನ್ನಡ ಜಿಲ್ಲೆ’ ಎಂಬ ಹೆಸರಿನಿಂದ ಕನ್ನಡ ನಾಡಿನಲ್ಲಿ ವಿಲೀನವಾಯಿತು. ಮತ್ತೆ ಇತ್ತೀಚೆಗೆ ೨೦೦೨ರಲ್ಲಿ ಜಿಲ್ಲೆಗಳ ಮರುಜೋಡಣೆ…
ವಿಧ: ಪುಸ್ತಕ ವಿಮರ್ಶೆ
November 27, 2021
‘ಮೋಡದೊಡನೆ ಮಾತುಕತೆ' ಈ ಪುಸ್ತಕವು ಹೊಸಗಾಲದ ಆಖ್ಯಾನ-ವ್ಯಾಖ್ಯಾನ ಸಮೇತ ಕಾಳಿದಾಸನ ‘ಮೇಘದೂತ'ದ ಕನ್ನಡ ಭಾವಾನುವಾದವಾಗಿದೆ. ಖ್ಯಾತ ಬರಹಗಾರರಾದ ಅಕ್ಷರ ಕೆ.ವಿ. ಇವರು ಬರೆದ ಪುಸ್ತಕಕ್ಕೆ ಡಾ. ಶ್ರೀರಾಮ ಭಟ್ ಇವರು ಹಿನ್ನುಡಿ ಬರೆದಿದ್ದಾರೆ. ಅಕ್ಷರ ಕೆ.ವಿ. ಅವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ “ ಮೇಘದೂತ ಕಾವ್ಯವು ತನ್ನ ಹಿನ್ನಲೆಯಲ್ಲಿ ಇರಬಹುದಾದ ಸಾಮಾಜಿಕ-ಸಾಂಸ್ಕೃತಿಕ ನಿಲುವುಗಳನ್ನು ಅಡಗಿಸಿ ಇಟ್ಟುಕೊಂಡಿದೆ. ಮಾತ್ರವಲ್ಲ, ತನ್ನ ಕಾವ್ಯಸ್ವರೂಪದಿಂದಾಗಿ ಅಂಥ ಹಿನ್ನಲೆಗಳನ್ನು ಹುಡುಕಿ…
ವಿಧ: ಪುಸ್ತಕ ವಿಮರ್ಶೆ
November 25, 2021
ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮಹಮದ್ ಯೂನಸ್ ಅವರ ಜೀವನ ಚರಿತ್ರೆಯೇ ‘ಬಡವರ ಬಾಪು' ಎಂಬ ಪುಸ್ತಕ. ಈ ಪುಸ್ತಕವನ್ನು ಖ್ಯಾತ ಬರಹಗಾರ ಎನ್. ಜಗದೀಶ್ ಕೊಪ್ಪ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
‘ಬಡತನವೆಂದರೆ ಶಾಪವಲ್ಲ, ಅದೊಂದು ವ್ಯವಸ್ಥೆ. ನಮ್ಮನ್ನಾಳುವ ಸರ್ಕಾರಗಳು ಮತ್ತು ಸಮಾಜದ ಕುರುಡುತನದಿಂದಾಗಿ ಸೃಷ್ಟಿಯಾಗಿರುವ ವ್ಯವಸ್ಥೆ ಎಂದು ಜಾಗತಿಕ ಬಡತನಕ್ಕೆ ಹೊಸ ಭಾಷ್ಯ ಬರೆದ ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಪ್ರೊ.ಮಹಮದ್ ಯೂನಸ್…
ವಿಧ: ಪುಸ್ತಕ ವಿಮರ್ಶೆ
November 25, 2021
ಉತ್ತರ ಕರ್ನಾಟಕದ ಕನ್ನಡ ಭಾಷೆಯ ಸೊಗಡು ತಿಳಿಯಬೇಕಾದರೆ ಓದಬೇಕು ಈ ಪುಸ್ತಕ. ಸರಾಗವಾಗಿ, ಸುಲಲಿತವಾಗಿ ಆಡುಮಾತಿನಲ್ಲಿ ಹಲವು ಸಂಗತಿಗಳ ಬಗ್ಗೆ ಬರೆದಿದ್ದಾರೆ ಪ್ರಶಾಂತ ಆಡೂರ.
ಈಗಲೂ ಈ ಧಾಟಿಯಲ್ಲಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುತ್ತಿರುವ ಪ್ರಶಾಂತ ಆಡೂರ, ತಾನು ಹೇಗೆ ಬರೆಯಲು ಶುರು ಮಾಡಿದೆ ಎಂದು ಪುಸ್ತಕದ ಕೊನೆಯ ಬರಹ "ಭಿಡೆ ಬಿಟ್ಟ ಬರದಿದ್ದೆ ಬರಹ"ದಲ್ಲಿ ಹೀಗೆ ಹಂಚಿಕೊಂಡಿದ್ದಾರೆ: "ನನ್ನ ಜೀವನದಾಗ ನಾ ಕನ್ನಡದಾಗ ಬರಿತೇನಿ ಎಂತ ಎಂದೂ ಅನ್ಕೊಂಡಿದ್ದಿಲ್ಲ……. ಒಂದ ದಿವಸ ಮಧ್ಯಾಹ್ನ ನಾನೂ…
ವಿಧ: ಪುಸ್ತಕ ವಿಮರ್ಶೆ
November 23, 2021
೧೮೫೯ರ ನವೆಂಬರ್ ನಲ್ಲಿ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ ‘ಜೀವ ಸಂಕುಲಗಳ ಉಗಮ' ಎಂಬ ಸಂಶೋಧನಾ ಗ್ರಂಥ ಬಿಡುಗಡೆಯಾಯಿತು. ಇದರ ಎಲ್ಲಾ ೧೨೫೦ ಪ್ರತಿಗಳು ಮೊದಲನೇ ದಿನವೇ ಖರ್ಚಾದುವಂತೆ. ಮುಂದೆ ಮಾನವ ಜ್ಞಾನ ಭಂಡಾರಕ್ಕೆ ಅಮೂಲ್ಯವಾದ ಕೊಡುಗೆ ಎನಿಸಿಕೊಂಡ ಈ ಗ್ರಂಥ ಅಂದು ಇಡೀ ಯುರೋಪ್ ದೇಶವನ್ನು ತಲ್ಲಣಗೊಳಿಸಿತು. ಈ ಜಗತ್ತು ಒಂದು ಪರಮ ಶಕ್ತಿಯ ಸೃಷ್ಟಿ ಎಂಬ ಸೃಷ್ಟಿವಾದದ ಪರವಾಗಿ ಮತ್ತು ವಿರುದ್ಧವಾಗಿ ನಡೆದುಕೊಂಡು ಬಂದಿರುವ ವಾದ-ವಿವಾದಗಳ ಹಿನ್ನಲೆಯಲ್ಲಿ ಇದೊಂದು ಮಹತ್ವದ…
ವಿಧ: ಬ್ಲಾಗ್ ಬರಹ
November 20, 2021
ಇದು 45 ಪುಟದ ಕತೆಯಾಗಿದ್ದು ಮರಾಠಿ ಕತೆಯ ಆಧಾರಿತವಂತೆ. ಮೊದಲ ಅರ್ಧದಲ್ಲಿ ಬಡವರಾದ ಗಂಡ ಹೆಂಡತಿಯು ಇದ್ದದ್ದರಲ್ಲಿ ಹೇಗೆ ತೃಪ್ತಿಯಿಂದ ಪ್ರೀತಿಯಿಂದ ಇದ್ದರು ಎಂಬ ಸಂಗತಿ ಇದೆ. ನಂತರವಷ್ಟೇ ಮುಖ್ಯಕತೆ ಇದೆ.
ವಿಜಯನಗರದ ಕೃಷ್ಣದೇವರಾಯನು ಆಗಿನ್ನೂ ರಾಜನಾಗಿರಲಿಲ್ಲ . ರಾಜಕುಮಾರ ಇದ್ದನಷ್ಟೇ. ( ನಂತರ ಇತಿಹಾಸದಲ್ಲಿ ಅವನ ದುಡುಕುತನ, ಮುಂಗೋಪಗಳು ಪ್ರಸಿದ್ಧವಾಗುತ್ತವಷ್ಟೇ ?) ಅವನಿಗೆ ಒಂದು ಪ್ರಸಂಗದಲ್ಲಿ ಅರಣ್ಯದಲ್ಲಿ ಈ ಬಡವನಿಗೆ ಇದಿರಾಗಿ ಒಂದು ಕೆಲಸ ಹೇಳುತ್ತಾನೆ. ಒಳ್ಳೆಯ…
ವಿಧ: ಪುಸ್ತಕ ವಿಮರ್ಶೆ
November 20, 2021
ಚೆನ್ನಭೈರಾದೇವಿ ಈಕೆ ಕರಿಮೆಣಸಿನ ರಾಣಿ ಎಂಬ ಖ್ಯಾತಿ ಹೊತ್ತವಳು. ನಮ್ಮ ಇತಿಹಾಸಕಾರರು ಈಕೆಯನ್ನು ಗುರುತಿಸಿ ಪರಿಚಯಿಸಿದ್ದು ಕಡಿಮೆ. ಆ ಕರಿಮೆಣಸಿನ ರಾಣಿಯ ಅಕಳಂಕ ಚರಿತ್ರೆಯನ್ನು ನಿಮ್ಮ ಮುಂದೆ ಇಟ್ಟಿದ್ದಾರೆ ಲೇಖಕರಾದ ಡಾ. ಗಜಾನನ ಶರ್ಮ ಇವರು. ಈ ಪುಸ್ತಕದ ಬಗ್ಗೆ ಖ್ಯಾತ ಅಂಕಣಕಾರ, ಪತ್ರಕರ್ತ ಜೋಗಿ ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ.
“ ಸಂಕಷ್ಟದಲ್ಲಿರುವವರಿಗೆ ದೂರದಲ್ಲೇ ಇದ್ದು ಕಾಪಾಡುವ ಅವ್ವರಸಿ, ಹತ್ತಿರದಿಂದ ಕಂಡವರಿಗೆ ಸಣ್ಣಮ್ಮ, ಶತ್ರುಗಳ ಪಾಲಿಗೆ ಎದೆನಡಗಿಸುವ…
ವಿಧ: ಬ್ಲಾಗ್ ಬರಹ
November 19, 2021
ನೋಡಿದೊ ಅರಸನೆ ನನ್ನೆದೆ ಕೊತ್ತಲ
ನಾಡಿಯ ಕಲ್ಲಿನ ಗೋಡೆಯ ಸುತ್ತಲ
ಕಣಕಣ ಕರೆತಿದೆ ನಿನ್ನನು ಕೂಗುತ
ಕುಣಿತಿವೆ ಕನಸವು ನನ್ನೊಳ ಮಾಗತ
ಪ್ರೇಮದ ಆನೆಯ ಘೀಳನ ಇಕ್ಕುತ
ಸೀಮೆಯ ಸುಂದರ ಗಡಿಗಳ ಗೆಲ್ಲತ
ಬೇಲಿಯ ಕಟ್ಟಿಸ ತುಡಿತಕೆ ನನ್ನಯ
ಸೋಲುತ ನೆಡೆವೆನು ವಿಜಯಕೆ ನಿನ್ನಯ
ಮೋಹದ ಖತ್ತಿಯ ಕಣ್ಣಲೆ ಬೀಸತ
ದಾಹದಿ ಒಲವಿಲೆ ರಾಜ್ಯವ ಕಟ್ಟುತ
ಬಿತ್ತುತ ಖುಷಿಗಳ ಒಕ್ಕುವ ಮುತ್ತನು
ಸುತ್ತಲ ಬಾನಿಗು ಹಂಚುವ ತುತ್ತನು
ಮನವಿದ ಅಶ್ವವು ಏರುತ ಅಲೆವುದು
ನೆನೆಯತ ನಿನ್ನನು ಬಿತ್ತಿಗೆ ಸೆಲೆವುದು
ಹಬ್ಬುತ ಮಂಜಿನ ಹನಿಗಳ…