ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 07, 2021
"‘ದೇವಯಾನಿ’ ಎಂಬ ಹೆಸರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸೃಜನಶೀಲ ಬರಹಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡ ಶುಭಾ ಎ ಆರ್ ಅವರ ಮತ್ತೊಂದು ಮಹತ್ವದ ಆಸಕ್ತ ಕ್ಷೇತ್ರ ಅನುವಾದ. ಇವರು ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ ಹಲವು ಕಥೆಗಳು ಈಗಾಗಲೇ ತುಷಾರ, ಮಯೂರಗಳಲ್ಲಿ ಪ್ರಕಟಗೊಂಡಿವೆ. ವಿಜ್ಞಾನ ಮತ್ತು ಗಣಿತ ಶಿಕ್ಷಕಿಯಾಗಿ ಅಸಂಖ್ಯಾತ ವಿದ್ಯಾರ್ಥಿಗಳ ಅರಿವಿಗೆ ನೀರೆರೆವ ಮಕ್ಕಳಿಗಾಗಿಯೇ ವಿಜ್ಞಾನ ನಾಟಕಗಳನ್ನೂ ಬರೆದು ‘ಧರೆಯನುಳಿಸುವ ಬನ್ನಿರಿ' ಎಂಬ ಮೂರು ವೈಜ್ಞಾನಿಕ ನಾಟಕಗಳುಳ್ಳ…
ವಿಧ: ರುಚಿ
October 06, 2021
ಮೊದಲಿಗೆ ಪನ್ನೀರ್ ಅನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಬೇಕು. (ಕತ್ತರಿಸಿದ ಪನ್ನೀರ್ ಸಹಾ ಸಿಗುತ್ತದೆ). ನಂತರ ಹಿಟ್ಟಿನ ಮಿಶ್ರಣ ಮಾಡಿಕೊಳ್ಳಲು ಕಾರ್ನ್ ಫ್ಲೋರ್, ಕಡಲೇ ಹಿಟ್ಟು, ತಲಾ ಕಾಲು ಚಮಚದಷ್ಟು ಗರಂ ಮಸಾಲೆ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ, ಕರಿಮೆಣಸಿನ ಹುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನೂ ಸ್ವಲ್ಪ ನೀರು ಸೇರಿಸಿ ಕಲಸಿ ಪೇಸ್ಟಿನಂತೆ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಆ ಮಿಶ್ರಣಕ್ಕೆ ಕತ್ತರಿಸಿಟ್ಟುಕೊಂಡ ಪನ್ನೀರನ್ನು ಹಾಕಿ ಮಿಶ್ರ ಮಾಡಿ.…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 05, 2021
‘ವರ್ಣಕ' -ತಕ್ಷಶಿಲೆಯಲ್ಲಿ ಮತ್ತೆ ಜೀವತಳೆದ ಭಾಷಾ ವಿಲಾಸ ಎಂಬ ಪುಸ್ತಕವನ್ನು ಬರೆದವರು ಕೆ.ಪಿ.ರಾವ್ ಇವರು. ಪುಸ್ತಕದ ಬೆನ್ನುಡಿಯಲ್ಲಿ “ಮಹೇಶ್ವರರು ತಮ್ಮ ಡಮರುಗವನ್ನು ನುಡಿಸಿದರು. ಅ ಇ ಉ ಮೊದಲಾಗಿ ಹಲ್ ವರೆಗಿನ ಸ್ವರ ವ್ಯಂಜನಗಳ ದಿವ್ಯ ನಾದ ತರಂಗ ಲೋಕವನ್ನೆಲ್ಲಾ ಎಚ್ಚರಿಸಿ, ಉದ್ಧರಿಸಿತು. ನಡೆಯಲು ಅಸಹಾಯಕರಾದ ಸುಕೇಶಕರಿಗೆ ಮೋಕ್ಷ ಪ್ರಾಪ್ತಿಯಾಯಿತು. ಪಾಣಿನಿ, ಪಿಂಗಲ, ಉಪವರ್ಷರನ್ನು ಅದುವೇ ಶಬ್ಧ ಪ್ರವಾಹ ತನ್ನ ಸೂತ್ರಗಳಲ್ಲಿ ಬಂಧಿಸಿತು. ಮಳೆ ನಿಂತಿತ್ತು. ಮೂಡುವ ಸೂರ್ಯನ ಉಜ್ವಲ ಹಳದಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 02, 2021
‘ಅಕ್ಕ ಮಹಾದೇವಿ' ಎಂಬ ಕಾದಂಬರಿಯನ್ನು ರಚಿಸಿದ್ದಾರೆ ಸು.ರುದ್ರಮೂರ್ತಿ ಶಾಸ್ತ್ರಿ ಇವರು. ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ಎಂದು ಮುಖಪುಟದಲ್ಲೇ ಟ್ಯಾಗ್ ಲೈನ್ ಮುದ್ರಿಸುವ ಮೂಲಕ ಕಾದಂಬರಿಯ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ವಚನಗಳನ್ನು ನೀಡಲಾಗಿದೆ. ಅದರಲ್ಲಿ “ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ! ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ! ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ! ಜಗವ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು…
ವಿಧ: ರುಚಿ
October 01, 2021
ಬಾಳೆ ಕಾಯಿ ಸಿಪ್ಪೆಯನ್ನು ತೆಗೆದು ಅರಶಿನ ಹುಡಿ ಬೆರೆಸಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ನಂತರ ನೀರನ್ನೆಲ್ಲ ಬಸಿಯಬೇಕು. ಒಂದು ಸ್ವಚ್ಛ ಬಟ್ಟೆಯಲ್ಲಿ ಹರವಿದರೆ ನೀರಿನಂಶ ಬೇಗ ಆರುತ್ತದೆ. ಕಾದ ಎಣ್ಣೆಗೆ ಚಿಪ್ಸ್  ಸ್ಲ್ಯೆಸರಲ್ಲಿ ನೇರವಾಗಿ ಕತ್ತರಿಸಿ ಹಾಕಿ ಕರಿಯಿರಿ, ಹದ ಕರಿದಾಗ ಉಪ್ಪು ನೀರು ಚಿಮುಕಿಸಿ ಪುನಃ ಸ್ವಲ್ಪ ಹೊತ್ತು ಕಾಯಿಸಬೇಕು. ಗರಿಗರಿಯಾದಾಗ ಎಣ್ಣೆಯಿಂದ ಹೊರ ತೆಗೆಯಿರಿ. (ಖಾರ ಬೇಕಾದಲ್ಲಿ ಉಪ್ಪು ನೀರಿಗೆ ಮೆಣಸಿನ ಹುಡಿ, ಅರಶಿನಹುಡಿ ಅಥವಾ ಸಾಂಬಾರ್ ಪೌಡರ್ ಮಿಶ್ರ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 30, 2021
‘ಲೋಲ' ಎಂಬುವುದು ಗುರುಪ್ರಸಾದ ಕಾಗಿನೆಲೆ ಅವರ ಕಥಾ ಸಂಕಲನ. ಪುಸ್ತಕದ ಬೆನ್ನುಡಿಯಲ್ಲಿರುವ ಮಾತುಗಳು “ವ್ಯಥೆಗಳೇ ಕತೆಗಳಾಗುವುದು ಅನ್ನುವುದಾದರೆ ಆಸ್ಪತ್ರೆಯೊಂದು ಕಥಾಸರಿತ್ಸಾಗರ. ಲಿಕ್ಕಾಚಾರದ ಬದುಕಿನಲ್ಲಿ ಮೈಮರೆತ ನಮ್ಮನ್ನು ಆಗಾಗ್ಗೆ ನಿಲ್ಲಿಸಿ ವಿಶಾಲ ದೃಷ್ಟಿಯನ್ನು ದಯಪಾಲಿಸಿ ಹುಷಾರಾಗಿಸುವುದು ಆಸ್ಪತ್ರೆ. ಈ ಹೊಸ ನೋಟ ಅಥವಾ ಹೊಸ ಪಾಠವನ್ನು ಅದು ಕೊಡುವುದು ಕಥೆಗಳ ರೂಪದಲ್ಲಿ. ಜನರಲ್ ವಾರ್ಡಿನ ಕಬ್ಬಿಣದ ಮಂಚದ ತುದಿಗೆ ಕೂತ ಇಬ್ಬರು ಹಂಚಿಕೊಳ್ಳುವ ವಿವರಗಳೆಲ್ಲವೂ ಕತೆಗಳೇ. ಇಲ್ಲಿನ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 28, 2021
ಹೆಸರಾಂತ ಲೇಖಕಿ ನೇಮಿಚಂದ್ರ ಇವರ ಪ್ರವಾಸ ಕಥನವೇ ‘ಒಂದು ಕನಸಿನ ಪಯಣ' ಎಂಬ ಪುಸ್ತಕ. ‘ಪೆರುವಿನ ಪವಿತ್ರ ಕಣಿವೆಯಲ್ಲಿ' ಪ್ರವಾಸ ಕಥನದ ಲೇಖಕಿ ನೇಮಿಚಂದ್ರ ಅವರ ಪ್ರಥಮ ಪ್ರವಾಸದ ಕಥನ ‘ಒಂದು ಕನಸಿನ ಪಯಣ' ಸುಮಾರು ಕಾಲು ಶತಮಾನದ ಹಿಂದೆ ಮಹಿಳೆಯರಿಬ್ಬರು, ತಮ್ಮಂತೆ ತಾವು ಇಂಗ್ಲೆಂಡ್ ಮತ್ತು ಯುರೋಪು ಅಲೆದು ಬಂದ ರೋಮಾಂಚನದ ಕತೆ ಇಲ್ಲಿದೆ. ಅಲ್ಪ ಹಣದಲ್ಲಿ ಅಗಾಧ ಅನುಭವಗಳನ್ನು ಜೋಳಿಗೆಯಲ್ಲಿ ಹೊತ್ತು ಬಂದ ಲೇಖಕಿ ‘ಕನಸು ಕಂಡರೆ ಸಾಕು, ಹಾರಲಿಕ್ಕೆ  ರೆಕ್ಕೆಗಳು ಮೊಳೆಯುತ್ತವೆ' ಎನ್ನುತ್ತಾರೆ. ಈ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 25, 2021
ಗುರುಪ್ರಸಾದ ಕಾಗಿನೆಲೆ ಇವರು ಬರೆದ ‘ಕಾಯಾ’ ಕಾದಂಬರಿ ಇತ್ತೀಚೆಗೆ ಅಂಕಿತ ಪುಸ್ತಕದಿಂದ ಪ್ರಕಾಶಿತವಾಗಿದೆ. ಈ ಪುಸ್ತಕದ ಬೆನ್ನುಡಿಯಲ್ಲಿ ಇಬ್ಬರು ಸಾಹಿತಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯಾ ಕಡಮೆ ಇವರ ಪ್ರಕಾರ “ ಕಾಯಾ ಕಾದಂಬರಿ ಬಗೆದು ತೋರಲು ಹೊರಟಿರುವುದು ಮನುಷ್ಯ ಬಾಳ್ವೆಯಲ್ಲೇ ಬೆರೆತು ಹೋಗಿರುವ ಹಪಾಪಿತನವನ್ನು. ಇಲ್ಲಿನ ಮಲೀಕ್, ಕಸ್ತೂರಿ, ಪರಿ, ಸಮಂತಾ, ಹನಿ ಕನ್ನಡ ಭೂಮಿಕೆಗೆ ಹೊಸತಾಗಿ ನಡೆದು ಬಂದವರಾದರೂ ತಮಗೇ ಗೊತ್ತಿಲ್ಲದೇ ಕನ್ನಡತನದಲ್ಲಿ ಆಳವಾಗಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 23, 2021
ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಟಿಸುತ್ತಿರುವ  ಆಶಾರಘು  ಅವರ ಹೊಸ ಕಾದಂಬರಿ  "ಮಾಯೆ ". ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರರಾದ ಡಾ. ಕೆ.ಎನ್ ಗಣೇಶಯ್ಯ ಅವರು ಬೆನ್ನುಡಿ ಬರೆದಿದ್ದಾರೆ. “ಸುಖ ಪಡೆಯಲೆಂದು ಹೆಣ್ಣು, ಹೊನ್ನು ಮತ್ತು ಮಣ್ಣುಗಳ ಹಿಂದೆ ಬಿದ್ದ ಜೀವಕ್ಕೆ ಆ ಸುಖವು ಎಂದೂ ಮರೀಚಿಕೆಯಾಗಿಯೇ ಉಳಿಯುತ್ತದೆ ಎನ್ನುವುದು ಚಿರಪರಿಚಿತ ಬೋಧನೆಯಷ್ಟೇ ಅಲ್ಲದೆ ಮಾನವನ ಚರಿತ್ರೆಯುದ್ದಕ್ಕೂ ಪುನರಾವರ್ತಿತವಾಗಿ ಗೋಚರಿಸುವ ಸತ್ಯ ಕೂಡ, ಇದರ  ಇನ್ನೊಂದು ಮಗ್ಗುಲಾಗಿ ನೆಲೆಯಾಗಿರುವ ಮತ್ತೊಂದು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 21, 2021
ವಸುಮತಿ ಉಡುಪ ಇವರು ಬರೆದ ಕಥೆಗಳ ಸಂಕಲನವೇ ‘ಬೊಗಸೆ ತುಂಬಾ ನಕ್ಷತ್ರಗಳು. ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರ ಪತ್ರಿಕೆ, ಮಾಸಿಕ ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್ಟತೆಯಿಲ್ಲದ ಸರಳ ಭಾಷೆ, ನಿರೂಪಣೆ, ನೇರ ಕತೆಗಾರಿಕೆಗಳಿಂದ ಒಮ್ಮೆಲೆ ಓದುಗನ ಮನದಾಳಕ್ಕಿಳಿದು ಬಿಡುತ್ತಾರೆ. ಮಹಿಳಾ ಓದುಗರಿಗಂತೂ ವಸುಮತಿಯವರ ಕತೆಗಳೆಂದರೆ ಪಂಚಪ್ರಾಣ. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು. ‘ಬಂದನಾ ಹುಲಿರಾಯ', ‘ಅಗ್ನಿ…