ವರ್ಣಕ

ವರ್ಣಕ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಪಿ.ರಾವ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ.೪೫೦.೦೦, ಮುದ್ರಣ: ೨೦೨೧

‘ವರ್ಣಕ' -ತಕ್ಷಶಿಲೆಯಲ್ಲಿ ಮತ್ತೆ ಜೀವತಳೆದ ಭಾಷಾ ವಿಲಾಸ ಎಂಬ ಪುಸ್ತಕವನ್ನು ಬರೆದವರು ಕೆ.ಪಿ.ರಾವ್ ಇವರು. ಪುಸ್ತಕದ ಬೆನ್ನುಡಿಯಲ್ಲಿ “ಮಹೇಶ್ವರರು ತಮ್ಮ ಡಮರುಗವನ್ನು ನುಡಿಸಿದರು. ಅ ಇ ಉ ಮೊದಲಾಗಿ ಹಲ್ ವರೆಗಿನ ಸ್ವರ ವ್ಯಂಜನಗಳ ದಿವ್ಯ ನಾದ ತರಂಗ ಲೋಕವನ್ನೆಲ್ಲಾ ಎಚ್ಚರಿಸಿ, ಉದ್ಧರಿಸಿತು. ನಡೆಯಲು ಅಸಹಾಯಕರಾದ ಸುಕೇಶಕರಿಗೆ ಮೋಕ್ಷ ಪ್ರಾಪ್ತಿಯಾಯಿತು. ಪಾಣಿನಿ, ಪಿಂಗಲ, ಉಪವರ್ಷರನ್ನು ಅದುವೇ ಶಬ್ಧ ಪ್ರವಾಹ ತನ್ನ ಸೂತ್ರಗಳಲ್ಲಿ ಬಂಧಿಸಿತು. ಮಳೆ ನಿಂತಿತ್ತು. ಮೂಡುವ ಸೂರ್ಯನ ಉಜ್ವಲ ಹಳದಿ ಬೆಳಕಿನಲ್ಲಿ ಗುರುಗಳ ಕನಕಾಭಿಷೇಕವಾಯಿತು. ಭೇರಿಯ ಮಂದ್ಯ ಸದ್ದು ಹಿಮತುಂಬಿದ ಪರ್ವತಗಳಲ್ಲಿ ಇನ್ನೂ ಅಮರಣಿಸುತ್ತಿತ್ತು.” ಎಂದು ಮುದ್ರಿಸಿ ಓದುವ ಕುತೂಹಲವನ್ನು ಇನ್ನಷ್ಟು ಅಧಿಕಗೊಳಿಸಿದ್ದಾರೆ