ವಿಧ: ಪುಸ್ತಕ ವಿಮರ್ಶೆ
November 19, 2021
ಐವತ್ತು ವರ್ಷಗಳ ಹಿಂದೆ ಪ್ರಕಟವಾದ ಖ್ಯಾತ ಕಾದಂಬರಿಕಾರ ಶರಶ್ಚಂದ್ರ ಚಟರ್ಜಿಯವರ ನೀಳ್ಗತೆಯೇ ಮಂಗಲಸೂತ್ರ. ಈ ಕತೆಯನ್ನು ಗುರುನಾಥ ಜೋಶಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಹಳ ಸರಳವಾದ ಕಥೆಯಾದರೂ ಮಹತ್ವದ ಅರ್ಥವನ್ನು ಹೊಂದಿದೆ. ಐದು ದಶಕಗಳ ಹಿಂದಿನ ಕತೆಯಾದುದರಿಂದ ಆ ಸಮಯದ ಕೆಲವೊಂದು ಸಾಮಾಜಿಕ ಕಟ್ಟುಪಾಡುಗಳು, ಕೆಲವು ಭಾಷಾ ಪದಗಳ ಬಳಕೆ, ಬಾಲ್ಯ ವಿವಾಹದ ಸಂಸ್ಕೃತಿ ಎಲ್ಲವೂ ವಿಭಿನ್ನವೆಂದು ತೋರುತ್ತದೆ.
ಈ ಕಥೆ ಸತ್ಯೇಂದ್ರ ಚೌಧರಿ ಎಂಬ ಒಬ್ಬ ಯುವಕನದ್ದು. ಕಲ್ಕತ್ತಾದಲ್ಲಿ…
ವಿಧ: ಬ್ಲಾಗ್ ಬರಹ
November 18, 2021
ಮಕ್ಕಳಿಗೆ ಕಥೆಗಳ ಮೂಲಕ ನೀತಿಯನ್ನು ಬೋಧಿಸುವ ಪುಸ್ತಕ ಇದು. ಇದನ್ನು ಎಂ ಎಸ್ ಪುಟ್ಟಣ್ಣನವರು 135 ವರ್ಷಗಳ ಹಿಂದೆ ಬರೆದರು.ಈ ಪುಸ್ತಕ ಈತನಕ 33 ಮುದ್ರಣಗಳನ್ನು ಕಂಡಿದೆ.ಈ ಪುಸ್ತಕದ ಭಾಷೆಯನ್ನು ಇಂದಿನ ಕನ್ನಡ ತಕ್ಕಂತೆ ಪರಿವರ್ತಿಸಿ ಕಥೆಗಾರ ಎಸ್ ದಿವಾಕರ್ ಅವರು ಹತ್ತು ವರ್ಷಗಳ ಹಿಂದೆ ಬರೆದಿದ್ದಾರೆ.ಸುಮಾರುಸುಮಾರು 200 ಪುಟಗಳ ಪುಸ್ತಕ ಇದು. ಸುಮಾರು ಒಂದು ನೂರು ಕಥೆಗಳು ಇದರಲ್ಲಿ ಇರಬಹುದು. ಈ ಕಥೆಗಳೊಂದಿಗೆ ಸಂಬಂಧಿಸಿದ ನೀತಿಯನ್ನು (ಕೆಲವೆಡೆ ಅದು ಕಥೆಗೆ ಸೂಕ್ತ ಅನಿಸುವುದಿಲ್ಲ ) …
ವಿಧ: ಪುಸ್ತಕ ವಿಮರ್ಶೆ
November 18, 2021
ಅಮೆರಿಕ ಕನ್ನಡ ಕೂಟಗಳ ಆಗರ (“ಅಕ್ಕ”) ೮ನೇ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಿದ ಒಂಬತ್ತು ಆಹ್ವಾನಿತ ಕತೆಗಳ ಸಂಕಲನ ಇದು.
ಇದರ ಬಗ್ಗೆ ಸಂಪಾದಕ ಮಂಡಲಿಯ ಪರವಾಗಿ ಪ್ರಧಾನ ಸಂಪಾದಕರು ಬರೆದ ಕೆಲವು ಮಾತುಗಳು: “ಈ ಕಥಾಸಂಕಲನಕ್ಕಾಗಿ ನಮಗೆ ಲಭ್ಯವಿದ್ದ ಅನುಕೂಲತೆಗಳ ಇತಿಮಿತಿಯಲ್ಲಿ ಪ್ರಚಲಿತ ಲೇಖಕರನ್ನು ಸಂಪರ್ಕಿಸಿ ಈ ಕಥೆಗಳನ್ನು ಪಡೆದುಕೊಳ್ಳಲಾಯಿತು. ಬೊಗಸೆಯಲ್ಲಿ ಸಾಗರದ ನೀರನ್ನು ಹಿಡಿದು, ಇದೇ ಸಾಗರವೆನ್ನುವುದು ದುಸ್ಸಾಹಸವಾದಿತು. ಒಟ್ಟು ಒಂಬತ್ತು ಕಥೆಗಳ ಈ ಕಥಾಸಂಕಲನವನ್ನು…
ವಿಧ: ಬ್ಲಾಗ್ ಬರಹ
November 17, 2021
1) ಅನಿರೀಕ್ಷಿತವಾಗಿ, ಶಕುಂತಲೆಯ ಬಗ್ಗೆ ಸಹಾನುಭೂತಿಯಿಂದ ಹೇಳುವಾಗೊಬ್ಬ ಪುಣ್ಯಾತ್ಮರು “ ದೂರ್ವಾಸನ ಶಾಪ ದಿಂದ ಗರ್ಭವತಿಯಾಗಿದ್ದ ಶಕುಂತಲೆಗೆ ಎಂತೆಂತಹ ಸಂಕಷ್ಟಗಳು ಬಂದೊದ ಗಿದವು, ಬಲ್ಲಿರಾ ? ” ಎಂದಿದ್ದರು.( ಹಳೆಯ ಕಸ್ತೂರಿಯಿಂದ)
2)ಇನ್ನೊಬ್ಬರು “ ನಮ್ಮ ಕೋರಿಕೆಯ ಮೇರೆಗೆ ದಿವಂಗತರಾದ ಕೈಲಾಸಂರವರ ದಿನಾಚರಣೆಗಾಗಿ ಶ್ರೀ ಬೀಚಿ ಯವರು ಬಂದುದಕ್ಕೆ ನಾವು ತುಂಬಾ ಋಣಿಗಳು” ಎಂದು ಆಭಾರ ಮನ್ನಣೆ ಮುಗಿಸಿದ್ದರು. (ಹಳೆಯ ಕಸ್ತೂರಿಯಿಂದ)
3) ಒಂದು ಪಾಪಿಂಗ್ ಕಾಂಪ್ಲೆಕ್ಸ ಬಳಿಯ ಬೋರ್ಡು…
ವಿಧ: ರುಚಿ
November 17, 2021
ಬಾಳೆ ದಿಂಡನ್ನು ತೆಳುವಾಗಿ ವೃತ್ತಾಕಾರದಲ್ಲಿ ತುಂಡರಿಸಬೇಕು. ತುಂಡರಿಸುವಾಗ ನಡುವೆ ಸಿಗುವ ನೂಲಿನಂತಹ ವಸ್ತುವನ್ನು ತೆಗೆದು ಬಿಸಾಕಿ. ಕತ್ತರಿಸಿದ ತುಂಡುಗಳನ್ನು ನೀರಿನಲ್ಲಿ ಹಾಕಿ. ಇಲ್ಲವಾದರೆ ತುಂಡುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಸುಮಾರು ೧೫ ತುಂಡುಗಳು ಸಾಕು. ಬಾಳೆದಿಂಡನ್ನು ಬಟ್ಟೆಗೆ ತಾಗಿಸಬೇಡಿ. ಕಲೆಯಾಗುತ್ತದೆ. ಕತ್ತರಿಸಿಕೊಂಡ ತುಂಡುಗಳನ್ನು ನೀರಿನಿಂದ ಹೊರ ತೆಗೆದು ಒಂದು ಪಾತ್ರೆಗೆ ಹಾಕಿಡಿ.
ಮತ್ತೊಂದು ಪಾತ್ರೆಯಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಅರಸಿನ ಹುಡಿ, ಗರಂ…
ವಿಧ: ಪುಸ್ತಕ ವಿಮರ್ಶೆ
November 16, 2021
ಸಂಪಟೂರು ವಿಶ್ವನಾಥ್ ಅವರು ಜಗತ್ತಿನ ೩೬೫ ಶ್ರೇಷ್ಠ ವಿಜ್ಞಾನಿಗಳು ಹಾಗೂ ಗಣಿತಜ್ಞರ ಮಾಹಿತಿಯನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ. ಈ ಪುಸ್ತಕದಲ್ಲಿ ವಿಜ್ಞಾನ, ಗಣಿತ-ಶೋಧಕರು, ತಂತ್ರಜ್ಞಾನಿಗಳು, ಆವಿಷ್ಕಾರರು ಇವರೆಲ್ಲರ ವಿವರಗಳನ್ನು ಹಾಗೂ ಭಾವಚಿತ್ರ ಸಹಿತ ನೀಡಿದ್ದಾರೆ. ಲೇಖಕರು ಈ ವಿವರಗಳನ್ನು ನೀಡುವಾಗ ಎಲ್ಲೂ ಆ ವಿಜ್ಞಾನಿಯ ಹೆಸರನ್ನು ನಮೂದಿಸಿಲ್ಲ. ಒಂದು ರೀತಿಯಲ್ಲಿ ಕ್ವಿಝ್ ತರಹ ‘ವಿವರ ಓದಿ, ಚಿತ್ರ ನೋಡಿ, ಹೆಸರಿಸಿ' ಎಂದು ಬರೆದಿದ್ದಾರೆ. ನಿಮಗೆ ಗೊತ್ತಾಗದಿದ್ದರೆ ಪುಸ್ತ್ರಕದ…
ವಿಧ: ಬ್ಲಾಗ್ ಬರಹ
November 16, 2021
ಒಬ್ಬ ಶ್ರೀಮಂತನು ತನ್ನ ಮನೆಯಲ್ಲಿ ಒಂದು ಪೂಜೆಯನ್ನು ಇಟ್ಟುಕೊಂಡು ಊರಿನ ಜನರನ್ನು ಕರೆದಿದ್ದನು. ಅಲ್ಲಿ ದೇವರಿಗೆಂದು ಅನೇಕ ದೀಪಗಳನ್ನು ಬೆಳಗಿದ್ದನು. ಬಂದವರ ಮಾತುಗಳ ಸದ್ದಿನಲ್ಲಿ ಅವನು ಅದು ಹೇಗೋ ಬಂದು ಮಾತನ್ನು ಕೇಳಿಸಿಕೊಂಡ . 'ಇದೇ ದೀಪ ಅಲ್ಲಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!'. ಅವನು ಈ ಮಾತಿಗೆ ವಿವರಣೆ ಕೇಳಿದರೆ. 'ಏನಿಲ್ಲ, ಈ ನೀಲಾಂಜನ ಸ್ವಲ್ಪ ಪಕ್ಕಕ್ಕೆ ಇದ್ದರೆ ಚೆನ್ನಾಗಿ ಕಾಣುತ್ತಿತ್ತು' ಎಂದೇನೋ ಸಮಜಾಯಿಷಿ ಹೇಳಿ ಜನ ತಪ್ಪಿಸಿಕೊಂಡರು. ಆದರೆ ಆ ಶ್ರೀಮಂತನು ಅದು ಹೇಗೋ…
ವಿಧ: ಪುಸ್ತಕ ವಿಮರ್ಶೆ
November 13, 2021
ಪವಾಡ ಪುರುಷರಾದ ಶಿರಡಿಯ ಸಾಯೀ ಬಾಬಾ ಬಗ್ಗೆ ಮಕ್ಕಳಿಗಾಗಿ ಒಂದು ಪುಟ್ಟ ಪುಸ್ತಕವನ್ನು ‘ಬಾಲ ಸಾಹಿತ್ಯ ಮಾಲೆ' ಮೂಲಕ ಸಪ್ನ ಬುಕ್ ಹೌಸ್ ನವರು ಹೊರತಂದಿದ್ದಾರೆ. ಸಾಯೀ ಬಾಬಾ ಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಗಿರಿಜಾ ಶಾಸ್ತ್ರಿಯವರು. ಸಾಯೀ ಬಾಬಾ ಅವರ ಜೀವನದ ಬಗ್ಗೆ ಪುಟ್ಟ ಪುಟ್ಟ ಘಟನೆಗಳನ್ನು ರೇಖಾಚಿತ್ರಗಳ ಮೂಲಕ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
ಸಾಯೀ ಬಾಬಾ ಅವರ ಪರಿಚಯದಲ್ಲಿ ಹೀಗೆ ಬರೆದಿದ್ದಾರೆ “ಮತಗಳನ್ನೂ ಮೀರಿ ಹೋದ ಶಿರಡಿ ಸಾಯೀಬಾಬಾ ಎಂಬ ಭಾರತದ ಸಂತರು, ಸರಳವಾದ…
ವಿಧ: ಪುಸ್ತಕ ವಿಮರ್ಶೆ
November 11, 2021
ಇದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು “ಶ್ರೀನಿವಾಸ" ಕಾವ್ಯನಾಮದಲ್ಲಿ ಬರೆದಿರುವ ಎರಡು ಕವನ ಸಂಕಲನಗಳ ಸಂಯುಕ್ತ ಪುಸ್ತಕ. ಮೊದಲ ಪ್ರಕಟಣೆ: ೧೯೩೧ರಲ್ಲಿ “ಚೆಲುವು" ಮತ್ತು ೧೯೪೬ರಲ್ಲಿ “ಸುನೀತ”.
“ಚೆಲುವು" ಸಂಕಲನದಲ್ಲಿ ೧೪ ಕವನಗಳಿವೆ. ಎಲ್ಲವೂ ಮನಮುಟ್ಟುವ ಕವನಗಳು. “ಬೆಳವನ ಹಕ್ಕಿ” ಎಂಬ ಕವನದ ಆರಂಭದ ಸಾಲುಗಳು ಹೀಗಿವೆ: ತೋಪಿನ ಮರದಲಿ ಮೊಳಗಲು ತೊಡಗಿವೆ ಬೆಳವನ ಹಕ್ಕಿ ಸಖಿ. ಓಪನ ಓಪಳ ಕೂಗಿದು ಜಗದಲಿ ಹಳೆ ಕಾಲದ ಕೂಗು. (ಎರಡನೆಯ ಚರಣ) ಕೂಯೆನ್ನುವುದಿದು ಕೂಯೆನ್ನುವುದದು ಅರೆ ಅರೆ…
ವಿಧ: ಪುಸ್ತಕ ವಿಮರ್ಶೆ
November 11, 2021
‘ಕಪಿಧ್ವಜ ಮೊದಲಾದ ಕೆಲವು ಸತ್ಯಸಾಯೀ ಕತೆಗಳು' ಈ ಕೃತಿಯನ್ನು ರಚಿಸಿದವರು ಖ್ಯಾತ ಸಾಹಿತಿ ಜಿ.ಪಿ.ರಾಜರತ್ನಂ ಅವರು. ಇವರು ಮಕ್ಕಳ ಸಾಹಿತಿ ಎಂದೂ ಖ್ಯಾತಿಯನ್ನು ಪಡೆದಿದ್ದಾರೆ. ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ ‘Sathya Sai Speaks’ ಸಂಪುಟಗಳಿಂದ ಈ ಕತೆಗಳನ್ನು ಆಯ್ದುಕೊಳ್ಳಲಾಗಿದೆ. ಈ ಕತೆಗಳು ‘ಸುಧಾ’ ಹಾಗೂ ‘ಮಯೂರ' ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿವೆ.
ಕೃತಿಯ ಬಗ್ಗೆ ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ತಮ್ಮ ಬೆನ್ನುಡಿಯಲ್ಲಿ “ತಮ್ಮ ಅನ್ಯದುರ್ಲಭ ವ್ಯಕ್ತಿತ್ವ…