ಪುಸ್ತಕನಿಧಿ -ಪ್ರಾಣದಾನ - ಐತಿಹಾಸಿಕ ಕತೆ

ಪುಸ್ತಕನಿಧಿ -ಪ್ರಾಣದಾನ - ಐತಿಹಾಸಿಕ ಕತೆ

 ಇದು 45 ಪುಟದ ಕತೆಯಾಗಿದ್ದು ಮರಾಠಿ ಕತೆಯ ಆಧಾರಿತವಂತೆ. ಮೊದಲ ಅರ್ಧದಲ್ಲಿ  ಬಡವರಾದ ಗಂಡ ಹೆಂಡತಿಯು ಇದ್ದದ್ದರಲ್ಲಿ ಹೇಗೆ ತೃಪ್ತಿಯಿಂದ ಪ್ರೀತಿಯಿಂದ ಇದ್ದರು ಎಂಬ ಸಂಗತಿ ಇದೆ. ನಂತರವಷ್ಟೇ ಮುಖ್ಯಕತೆ ಇದೆ.

 

 

 

 

ವಿಜಯನಗರದ ಕೃಷ್ಣದೇವರಾಯನು ಆಗಿನ್ನೂ ರಾಜನಾಗಿರಲಿಲ್ಲ . ರಾಜಕುಮಾರ ಇದ್ದನಷ್ಟೇ.  ( ನಂತರ  ಇತಿಹಾಸದಲ್ಲಿ  ಅವನ ದುಡುಕುತನ, ಮುಂಗೋಪಗಳು ಪ್ರಸಿದ್ಧವಾಗುತ್ತವಷ್ಟೇ ?) ಅವನಿಗೆ ಒಂದು ಪ್ರಸಂಗದಲ್ಲಿ ಅರಣ್ಯದಲ್ಲಿ ಈ ಬಡವನಿಗೆ ಇದಿರಾಗಿ  ಒಂದು ಕೆಲಸ ಹೇಳುತ್ತಾನೆ. ಒಳ್ಳೆಯ ಪ್ರತಿಫಲವನ್ನು ಕೊಡುವುದಾಗಿ ಹೇಳಿದರೂ ಈ ಬಡವ ಒಲ್ಲೆ ಎನ್ನುತ್ತಾನೆ. ಕೃಷ್ಣದೇವರಾಯ ಸಿಟ್ಟಿಗೆದ್ದು ಬೈದಾಗ ಬಡವನೂ ಇದಿರಾಡುತ್ತಾನೆ. ಆಗ ಕೃಷ್ಣದೇವರಾಯ ಸಿಟ್ಟಿಗೆದ್ದು ಅವನನ್ನು ಕೊಂದು ಬಿಡುತ್ತಾನೆ.

 

 

 

 

ಪಾಪ ಅವನ ಹೆಂಡತಿಗೆ ಯಾರು ನ್ಯಾಯ ದೊರಕಿಸುವರು ? ರಾಜಕುಮಾರನ ವಿರುದ್ಧ ಊರ ಜನರೂ ಊರ ಅಧಿಕಾರಿಗಳೂ ಅಸಹಾಯಕರು. 

 

 

 

 

ಆಗ ಅವಳು ಆಗಿನ  ದೊರೆ ಮೊದಲನೇ ಬುಕ್ಕರಾಯನ ಬಳಿಗೆ ಹೋಗಿ ರಾಜ ಕುಮಾರ ಕೃಷ್ಣದೇವರಾಯನು ತನ್ನ ಗಂಡನನ್ನು ಕೊಂದಿದ್ದಕ್ಕೆ ನ್ಯಾಯ ಕೇಳುವಳು.  ಅವನು ಶಾಂತವಾಗಿ ಎಲ್ಲ ವಿಷಯ ತಿಳಿದುಕೊಂಡು , ಖಚಿತ ಪಡಿಸಿಕೊಂಡು ಕೃಷ್ಣದೇವರಾಯನನ್ನು ಕೃಷ್ಣದೇವರಾಯನನ್ನು ಕೃಷ್ಣದೇವರಾಯನನ್ನು  ಆಸ್ಥಾನಕ್ಕೆ ಕರೆಸುವನು. "ನೀನು ರಾಜ ಪುತ್ರನೇ ಇದ್ದರೂ ನನ್ನ ಮುಂದೆ ಈಗ ನ್ಯಾಯ ವಿಚಾರಣೆಯ ಸಂದರ್ಭದಲ್ಲಿ ಒಬ್ಬ ಸಾಮಾನ್ಯ ಪ್ರಜೆಯ ಸಮಾನ ಅಷ್ಟೆ " ಎನ್ನುತ್ತಾನೆ. ಕೃಷ್ಣದೇವರಾಯನನ್ನು ವಿಚಾರಿಸಿದಾಗ ಅವನು ಈ ಕೊಲೆಯ ಸಂಗತಿಯನ್ನು ಒಪ್ಪಿಕೊಳ್ಳುವನು. ಆ ಬಡವಿಗೆ ಆದ ನಷ್ಟಕ್ಕೆ ಸೂಕ್ತ ಪರಿಹಾರ ಕೊಡುವುದಾಗಿ ಹೇಳಿದಾಗ ರಾಜ ಬುಕ್ಕರಾಯನು ಸಿಟ್ಟಿಗೇಳುತ್ತಾನೆ. "ಅವಳಿಗೆ ಒದಗಿದ ವೈಧವ್ಯವನ್ನು ಅವಳ ಹೃದಯದ ದುಃಖವನ್ನು ನೀನು ಯಾವ ಸಂಪತ್ತಿನಿಂದ ದೂರ ಮಾಡುವಿ ? ಇನ್ನೊಬ್ಬರ ದುಃಖಕ್ಕೆ ಈ ರೀತಿ ಪ್ರತಿಕ್ರಿಯೆಯೋ ನಿನ್ನದು? ನನ್ನ ಲೋಕದ ಸುಖ ಸರ್ವಸ್ವವನ್ನು   ನೀನು ನಾಶ ಮಾಡಿದ್ದೀಯಾ, ನಿನಗೆ ದಿಕ್ಕಾರವಿರಲಿ " ಎಂದು ಬೈಯುವನು. 

ಆಗ  ಕೃಷ್ಣದೇವರಾಯನು " ಈ ಬಡವಿಗೆ ಎಂಥ ಹೃದಯ ? " ಎಂಬಂತಹ ಕ್ರೂರ ಮಾತನ್ನಾಡುವನು .

ಆಗ ರಾಜ ಬುಕ್ಕರಾಯನು ಮತ್ತಷ್ಟು ಬೇಸರಪಟ್ಟುಕೊಳ್ಳುವನು.  ರಾಜ ಧರ್ಮದ ಅಂಗವಾಗಿ ಕೃಷ್ಣದೇವರಾಯನಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತಾನೆ.

ಈ ಸುದ್ದಿಯು ಅಂತಃಪುರಕ್ಕೆ ತಲುಪಿ ಅಲ್ಲಿ ಕೃಷ್ಣದೇವರಾಯನ ಹೆಂಡತಿಯು ತನಗೆ ಒದಗಿ ಬರಲಿರುವ ವೈಧವ್ಯಕ್ಕೆ ಶೋಕಿಸುವಳು, ಅದನ್ನು ನೋಡಿದ ಈ ಬಡವಿಯ ಸೇಡಿನ ಭಾವನೆ ಅಡಗಿತು. ಅವಳು ರಾಜನಿಗೆ -" ನನಗೆ ವೈಧವ್ಯದ ದುಃಖ ಗೊತ್ತು. ಅದು ಹೇಗೆ ನಾನು ಇನ್ನೊಬ್ಬಳ ವೈಧವ್ಯದ ದುಃಖಕ್ಕೆ ಕಾರಣವಾಗಲಿ ? ನಾನು ನನ್ನ ದೂರನ್ನು ಹಿಂದಕ್ಕೆ ಪಡೆಯುತ್ತೇನೆ "ಎಂದಳು.

 

ಅವಳ  ಈ ಅಪೂರ್ವವಾದ ಉದಾತ್ತ ಮಾತುಗಳನ್ನು ಕೇಳಿ ಯಾವತ್ತೂ ಸಭಾಸದರು, ಅವಳ ವಿಷಯವಾಗಿ ಧನ್ಯ ಧನ್ಯ!'' ಎಂಬ ಉದ್ಗಾರಗಳನ್ನು ಹೊರಪಡಿಸಿದರು. ಸಭೆಯಲ್ಲಿ ಸ್ವಲ್ಪ ಶಾಂತತೆಯ ನೆಲೆಗೊ೦ಡನಂತರ ಮಹಾರಾಜರು ಅವಳನ್ನು  ಉದ್ದೇಶಿಸಿ "ತಾಯಿ, ನೀನು ಮಹಾಮಹಿಮಳು, ಪ್ರತ್ಯಕ್ಷ ದೇವಿ.  ಈ ನಿನ್ನ ಬೇಡಿಕೆಯು ನಿನ್ನ ಉದಾರವಾದ ಅಂತಃಕರಣಕ್ಕೆ ಶೋಭಿಸತಕ್ಕದ್ದೆ ಆಗಿದೆ. ಅದಕ್ಕಾಗಿ ಅಂತಃಕರಣ ಪೂರ್ವಕವಾಗಿ ನಾನು ನಿನಗೆ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಆದರೆ ತಾಯಿ, ನಾನು ರಾಜನು, ಕಾರಣ ನಾನು ರಾಜಧರ್ಮ ವನ್ನು, ಅದು ಎಷ್ಟೇ ನಿಷ್ಠುರವಾಗಿರಲಿ, ಪಾಲಿಸಲೇ ಬೇಕು. ಕೃಷ್ಣರಾಯನು ನನ್ನ ಓರ್ವ ಪ್ರಜೆಯ ವಧೆ ಮಾಡಿರುವನು. ಆ ಸಂಗತಿಯು ನನ್ನ ದೃಷ್ಟಿಗೆ ಎಂದಿದೆ ಈ ನರಾಧಮನಿಗೆ ನೀನ ಕ್ಷಮೆ ಮಾಡಿ ನಿನ್ನ ಹೃದಯದ ಉದಾತ್ತತೆಯನ್ನು  ಜಗತ್ತಿಗೆ ತೋರಿಸಿರುವಿ! ಆದರೆ ಈ ಸಿಂಹಾಸನದ ರಾಜಧರ್ಮವು ಇಂಥ ಮಹದಪರಾಧವನ್ನು ಕ್ಷಮಿಸಲಾರದು! ನರಹತ್ಯೆಗೆ ತಕ್ಕ ಶಿಕ್ಷೆಯ ಪ್ರಾಣದಂಡವೇ!  ಯಾರು ಎಷ್ಟೇ ಆಗ್ರಹ ಮಾಡಲಿ, ಎಷ್ಟೇ ರೀತಿಯಿಂದ ಹೇಳಿಕೊಳ್ಳಲಿ, ಪ್ರಾರ್ಥಿಸಲಿ ಇಲ್ಲವೆ ಶಪಿಸಲಿ; ರಾಜಧರ್ಮವು ತನ್ನ ನಿಯಮವನ್ನು ಉಲ್ಲಂಘಿಸಲಾರದು!'' ಎಂದು ನುಡಿದನು.

 

ಕ್ಷಣಹೊತ್ತು ಸುಮ್ಮನೆ ನಿಂತು ಆ ಬಡವಿಯು ರಾಜನನ್ನು ಕುರಿತು - ರಾಜಧಮವು ಪ್ರಾಣಕ್ಕೆ ಪ್ರಾಣವನ್ನು ಬೇಡುತ್ತದೆಯೋ? ಒಳ್ಳೇದು ಮಹಾರಾಜರೇ, ಪ್ರಾಣದ ಬದಲಾಗಿ ತಮಗೆ ಪ್ರಾಣವೇ ಬೇಕಾಗಿದ್ದ ಪಕ್ಷದಲ್ಲಿ ಈ ನನ್ನ ತುಚ್ಛವಾದ ಪ್ರಾಣವನ್ನು ತೆಗೆದುಕೊಂಡು, ತಮ್ಮ ಸೊಸೆಯ ಜೀವನಸರ್ವಸ್ವವಾದ ಕೃಷ್ಣರಾಯನ ಪ್ರಾಣವನ್ನು ಅವಳಿಗೆ ದಾನಮಾಡಬೇಕು '' ಎಂದು ಹೇಳುತ್ತಾ ತನ್ನ ಸೆರಗಿನೊಳಗೆ      ಇಟ್ಟುಕೊಂಡಿದ್ದ ಕಠಾರಿಯಿಂದ ಇರಿದುಕೊಂಡು ತನ್ನ ಪ್ರಾಣವನ್ನು ಬಿಟ್ಟಳು.

ಆಕೆಯ ಸತ್ಕೃತಿಯನ್ನು ಎಲ್ಲರೂ ಹೊಗಳಿದರು. 

ಬುಕ್ಕರಾಜನು  ಆಕೆಯ ಇಷ್ಟದಂತೆ ಒಂದು ಮಟ್ಟಿಗೆ ನಡೆದನು . ಕೃಷ್ಣದೇವರಾಯನನ್ನು ಆನೆಯ ಕಾಲಿನಲ್ಲಿ ತುಳಿಸಲಿಲ್ಲ. ಆದರೆ ಅವನನ್ನು ಹೆಂಡತಿಯೊಂದಿಗೆ ತನ್ನ ಸಾಮ್ರಾಜ್ಯದ ಗಡಿಭಾಗದ ಒಂದು ಕೋಟೆಯಲ್ಲಿ ಜೀವಾವಧಿ ಇಡಲು  ಆಜ್ಞೆ ಮಾಡಿದ.

(ಈ ಪುಸ್ತಕವು archive.org ತಾಣದಲ್ಲಿದ್ದು pustaka.sanchaya.net ತಾಣದಲ್ಲಿ "ಪ್ರಾಣದಾನ" ಎಂದು ಹುಡುಕಿ ಓದಬಹುದು.)

 

(ಇಂಥವಳೇ ಒಬ್ಬಳ ಕತೆಯನ್ನು ಕತೆಗಾರ ಕೆ.ಸತ್ಯನಾರಾಯಣ ಅವರು ಬರೆದಿದ್ದು, ಅದರ ಸಂಕ್ಷಿಪ್ತ ರೂಪವನ್ನು ಇಲ್ಲಿ - https://sampada.net/blog/%E0%B2%AE%E0%B2%B0%E0%B3%81%E0%B2%95%E0%B2%A5%E0%B2%A8-%E0%B2%95%E0%B3%86-%E0%B2%B8%E0%B2%A4%E0%B3%8D%E0%B2%AF%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3-%E0%B2%85%E0%B2%B5%E0%B2%B0-%E0%B2%95%E0%B2%A5%E0%B3%86-%E0%B2%9A%E0%B2%BF%E0%B2%95%E0%B3%8D%E0%B2%95%E0%B2%A4%E0%B2%BE%E0%B2%AF%E0%B2%BF/28-3-2021/50386  ಓದಬಹುದು.)

Rating
Average: 4 (1 vote)