ಎಲ್ಲ ಪುಟಗಳು

ವಿಧ: ರುಚಿ
February 08, 2022
ಗೋಧಿ ಹುಡಿಗೆ ೨ಕಪ್ ಸ್ವಚ್ಛಗೊಳಿಸಿ ಸಣ್ಣಗೆ ತುಂಡುಮಾಡಿಟ್ಟ ಮೆಂತೆಸೊಪ್ಪನ್ನು ಸೇರಿಸಬೇಕು. ಅದೇ ಹಿಟ್ಟಿಗೆ ಎಣ್ಣೆ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಜವಾನ(ಓಮ) ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು. ೧೦ ನಿಮಿಷ ಮುಚ್ಚಿಟ್ಟು ಚಪಾತಿ ಲಟ್ಟಿಸಿ ಕಾಯಿಸಬೇಕು. ದಾಲ್, ಪಲ್ಯ, ಬೆಣ್ಣೆ ಜೊತೆ ತಿನ್ನಲು ಬಲು ರುಚಿ. -ರತ್ನಾ ಕೆ.ಭಟ್ ತಲಂಜೇರಿ 
ಲೇಖಕರು: Anantha Ramesh
ವಿಧ: ಬ್ಲಾಗ್ ಬರಹ
February 06, 2022
ಘನ ಘರಾನಾಗಳ ಸುಧೆಯ ಸಂಚಯಿಸಿ ಎದೆಯಿಂದ ಎದೆಗೆ ಸಿಂಚನಗೊಳಿಸಿ ಸತತ ಧರೆಗೆ ಸುಸ್ವರವಾದ, ಮೆರೆವ ದನಿಯಾದ ಮೊರೆವ ಸಾಗರ ಶಾರೀರ ಸಿರಿ ಅಮಿತನೀತ ಪುರಂದರ ತುಕಾ ಅಭಂಗ ವಾಣಿಯಾದ ಸವಾಯಿ ಗಂಧರ್ವ ಗುರುವಿನ ಗರ್ವನಾದ  ಸಂಗೀತಗರಡಿಯ ಖಯಾಲ ಗಾರುಡಿಗನೀತ ಭೀಮಸೇನ ಕಡೆದ ತಾನಾಲಾಪ ನವನೀತ ನೆನಪ ಹಾಡಾದ ಗಾನ ಘಮದಿಂದ ಮನ ಚಿತ್ತಾಗಿಸಿದವನಿಗೆ ಜನ್ಮಶತಮಾನೋತ್ಸವದ ಅಕ್ಷರದ ನಮನ  
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 05, 2022
‘ಕುಟಿಲೆಯ ಕುತಂತ್ರ' ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
February 05, 2022
೧೯ ನೆಯ ಶತಮಾನದ ಆದಿಭಾಗದಲ್ಲಿ ಶಿವಮೊಗ್ಗೆಯಲ್ಲಿ ಜನಪ್ರಿಯವ್ಯಕ್ತಿ, ವೆಂಕಟ ಸುಬ್ಬಾ ಶಾಸ್ತ್ರಿಯವರು. ಪ್ರಸಿದ್ಧ ವಕೀಲ, ಕಾಂಗ್ರೆಸ್ ಧುರೀಣರು, ಗಾಂಧಿ ವಾದಿ, ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯ ನೇತಾರರು. ಚಿಕ್ಕ ಬ್ರಾಹ್ಮಣರ ಕೇರಿಯಲ್ಲಿ ಅವರ ಮನೆ. (ಈಗಿನ ಎಸ್.ಪಿ.ಎಂ. ರಸ್ತೆ) ದೊಡ್ಡಮನೆಯ ಮಾಲೀಕರಾದ ಅವರ ಮನೆಗೆ ಶಂಕರ ಮಠದ ಸ್ವಾಮೀಜಿಯವರಿಂದ ಪ್ರಸಿದ್ಧ ರಾಜಕಾರಣಿಗಳು ಸ್ವಾತಂತ್ರ್ಯ ಸೇನಾನಿಗಳು ಬರುತ್ತಿದ್ದರು. ವೆಂಕಟ ಸುಬ್ಬಾ ಶಾಸ್ತ್ರಿಗಳು, ೭, ಏಪ್ರಿಲ್, ೧೮೮೮ ರಲ್ಲಿ ಪಂಡಿತ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 04, 2022
ಈ ಪುಸ್ತಕವೊಂದು ಕರ್ನಾಟಕದ ಪಾಪಿಗಳ ಲೋಕದ ಡೈಜೆಸ್ಟ್ ಎನ್ನಬಹುದಾಗಿದೆ. ಇದರಲ್ಲಿ ಪ್ರಮುಖವಾದ ಮೂರು ಸರಣಿ ಹಂತಕರ ಕೇಸ್ ವಿವರಗಳನ್ನು ಸವಿಸ್ತಾರವಾಗಿ ನೀಡಲಾಗಿದೆ. ದಕ್ಷಿಣ ಭಾರತದಲ್ಲೇ ಕುಖ್ಯಾತವಾಗಿದ್ದ ದಂಡುಪಾಳ್ಯ ಕ್ರಿಮಿನಲ್ ಗ್ಯಾಂಗ್, ಸೈನೈಡ್ ಕಿಲ್ಲರ್ ಮಲ್ಲಿಕಾ, ಸನೈಡ್ ಕಿಲ್ಲರ್ ಹೆಣ್ಣು ಬಾಕ ಮೋಹನ್ ಇವರ ಬಗ್ಗೆ ಸವಿವರವಾದ ಮಾಹಿತಿ ನೀಡಲಾಗಿದೆ.  ಕುಖ್ಯಾತ ದಂಡುಪಾಳ್ಯದ ಬಗ್ಗೆ ನಿಮಗೆ ಈಗಾಗಲೇ ಅದೇ ಹೆಸರಿನ ಚಲನ ಚಿತ್ರ ಬಿಡುಗಡೆಯಾಗಿರುವುದರಿಂದ ಬಹಳಷ್ಟು ವಿಷಯ ತಿಳಿದಿದ್ದರೂ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
February 03, 2022
ಮಹಿಳೆಯ ಬದುಕಿನ ವಿವಿಧ ಮುಖಗಳನ್ನು ಹಾಗೂ ಭಾವಲೋಕದ ವಿವಿಧ ಬಣ್ಣಗಳನ್ನು ಚಿತ್ರಿಸುವ ಹದಿಮೂರು ಕತೆಗಳು ಸುಮಂಗಲಾ ಅವರ ಈ ಕಥಾ ಸಂಕಲನದಲ್ಲಿವೆ. “ಮುತ್ತಿನ ಬುಗುಡಿ” ಎಂಬ ಮೊದಲ ಕತೆ, ತನ್ನ ಕೊನೆಯ ದಿನಗಳಲ್ಲಿ ಕ್ಯಾನ್ಸರಿನಿಂದ ಜರ್ಝರಿತಳಾಗುವ ಅಜ್ಜಿಯೊಬ್ಬಳದು. ತನ್ನ ಅಂತ್ಯ ಸಮೀಪಿಸುತ್ತಿದ್ದಂತೆ, ಬದುಕಿನುದ್ದಕ್ಕೂ ತನ್ನ ಕಿವಿಯಲ್ಲಿದ್ದ ಮುತ್ತಿನ ಬುಗುಡಿಯನ್ನು ಅಚಾನಕ್ಕಾಗಿ ಎರಡನೆಯ ಮಗನ ಸ್ನೇಹಿತೆಗೆ ದಾನ ಮಾಡ್ತಾಳೆ. ಮೊದಲ ಸೊಸೆಗೆ ಅಥವಾ ಎರಡನೇ ಸೊಸೆಗೆ ಕೊಡಬಹುದಾಗಿತ್ತು. ಈ ಕ್ರಿಯೆಯ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 01, 2022
ಮಕ್ಕಳಿಗಾಗಿ ‘ಬಾಲ ಸಾಹಿತ್ಯ ಮಾಲೆ' ಯ ಮುಖಾಂತರ ಹಲವಾರು ಅಪರೂಪದ ಸಾಹಿತ್ಯವನ್ನು ಉಣಬಡಿಸಿದ್ದಾರೆ ಸಪ್ನ ಬುಕ್ ಹೌಸ್ ಇವರು. ಆಂಗ್ಲ ಭಾಷೆಯಲ್ಲಿ ಪ್ರಕಟವಾದ ‘ಶೆರ್ಲಾಕ್ ಹೋಮ್ಸ್' ಎಂಬ ಕಾಲ್ಪನಿಕ ಪತ್ತೇದಾರಿಯ ರೋಚಕ ಕಥೆಗಳನ್ನು ಮಕ್ಕಳಿಗಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ನಳಿನಿ ರಾಮು ಅವರು. ಸರ್ ಆರ್ಥರ್ ಕಾನನ್ ಡಾಯಲ್ ಇವರ ಕಾಲ್ಪನಿಕ ಪತ್ತೇದಾರ ಶೆರ್ಲಾಕ್ ಹೋಮ್ಸ್. ಹಲವಾರು ಕಥೆಗಳನ್ನು ಬರೆದು ಪತ್ತೇದಾರಿ ಸಾಹಿತ್ಯವನ್ನು ಶ್ರೀಮಂತವಾಗಿಸಿದವರು ಕೆನಾನ್ ಡಾಯಲ್ ಇವರು. ಕನ್ನಡದಲ್ಲಿ ಈ…
ವಿಧ: ರುಚಿ
February 01, 2022
ಎಳತು ಗುಜ್ಜೆಯ ಹೊರಗಿನ ಸಿಪ್ಪೆ ಮತ್ತು ಒಳಗಿನ ಗೂಂಜನ್ನು ತೆಗೆದು ತುಂಡುಗಳಾಗಿಸಿ. ಅರಶಿನ ಹುಡಿ, ಹುಣಿಸೇಹುಳಿ ರಸ, ಇಲ್ಲವೇ ಹುಳಿ ಮಜ್ಜಿಗೆ ಸೇರಿಸಿ ಐದು ನಿಮಿಷ ಬಿಟ್ಟುನೀರನ್ನು ಬಸಿಯಿರಿ. ಹೋಳುಗಳನ್ನು ಉಪ್ಪು, ಮೆಣಸಿನ ಹುಡಿ, ಸ್ವಲ್ಪ ಹುಣಿಸೇರಸ (ಒಂದು ಚಮಚ) ಬೆಲ್ಲ ಸೇರಿಸಿ ಬೇಯಿಸಿ. ಬೆಂದ ತುಂಡುಗಳನ್ನು ಜಜ್ಜಿಟ್ಟುಕೊಂಡು (ಸಣ್ಣಗೆ ತುಂಡು ಮಾಡಿ ಬೇಯಿಸಬಹುದು) ಒಗ್ಗರಣೆಯೊಂದಿಗೆ ಮಿಶ್ರ ಮಾಡಿ, ತೆಂಗಿನಕಾಯಿ ತುರಿ (ಎಸಳು) ಸೇರಿಸಿ ೧೦ ನಿಮಿಷ ಬೇಯಿಸಿ ಮುಚ್ಚಿಡಿ. ಈ ಪಲ್ಯಕ್ಕೆ ಸ್ವಲ್ಪ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
January 29, 2022
ಆಂಗ್ಲ ಭಾಷೆಯ ಖ್ಯಾತ ಬರಹಗಾರರಲ್ಲಿ ಖುಷ್ವಂತ್ ಸಿಂಗ್ ಒಬ್ಬರು. ಇವರ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಖ್ಯಾತ ಕಾದಂಬರಿ ‘ಟ್ರೈನ್ ಟು ಪಾಕಿಸ್ತಾನ್'. ಇದನ್ನು ಡಾ. ಎಂ.ಬಿ.ರಾಮಮೂರ್ತಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಪುಸ್ತಕಕ್ಕೆ ಪಿ. ಲಂಕೇಶ್ ಅವರು ಬೆನ್ನುಡಿ ಬರೆದಿದ್ದಾರೆ. ಅವರು ಹೇಳುವಂತೆ “ಈ ಸರ್ದಾರ್ಜಿ (ಖುಷ್ವಂತ್ ಸಿಂಗ್) ಬಗ್ಗೆ ವಿಶೇಷವೇನೆಂದರೆ, ಜೀವನವನ್ನು ಬಹುವಾಗಿ ಪ್ರೀತಿಸುವ ಈತ ಎಲ್ಲ ಜಾತಿಯ ಜನರನ್ನು…
ವಿಧ: ರುಚಿ
January 29, 2022
ಒಂದು ಕುಕ್ಕರ್ ನಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಕಂದು ಕಡಲೆಯನ್ನು ಹಾಕಬೇಕು. ಕುಕ್ಕರ್ ಅನ್ನು ಉರಿಯ ಮೇಲಿರಿಸಿ ಎರಡು ವಿಷಲ್ ಕೂಗಿದ ಮೇಲೆ ಕೆಳಗಿಳಿಸಿ. ತೊಂಡೆಕಾಯಿಯನ್ನು ಉದ್ದಕ್ಕೆ ತುಂಡರಿಸಿ. ಕುಕ್ಕರ್ ತೆರೆದು ಬೆಂದ ಕಡಲೆಗೆ ಕತ್ತರಿಸಿಟ್ಟ ತೊಂಡೆಕಾಯಿಯನ್ನು ಹಾಗೂ ಅದಕ್ಕೆ ಅರಸಿನ, ಸ್ವಲ್ಪ ಉಪ್ಪು ಸೇರಿಸಿ ಮತ್ತೊಂದು ವಿಷಲ್ ಕೂಗಿಸಬೇಕು.  ಗ್ರೀನ್ ಮಸಾಲೆ ತಯಾರಿಸಲು ಮೊದಲು ಒಂದು ಬಾಣಲೆಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಬಳಿಕ ಅದಕ್ಕೆ ಕೊತ್ತಂಬರಿ…