ವಿಧ: ಬ್ಲಾಗ್ ಬರಹ
April 07, 2022
* ವಿಂಟೇಜ್ ಮೂವಿ ಪೋಸ್ಟರ್. ಸಂಗ್ರಹದಿಂದ
* ಮೈಸೂರು ಅಸೋಸಿಯೇಷನ್, ಮುಂಬಯಿ ಫೋಟೋ ಸಂಗ್ರಹದಿಂದ
ಹಿಂದಿ ಭಾಷೆಯ ಫಿಲಂ ಪಟ್ಟಿಯಲ್ಲಿ ಒಬ್ಬ ಅತ್ಯಂತ ಸೃಜನಶೀಲ ಚಿತ್ರ ನಿರ್ಮಾಪಕ, ನಿರ್ದೇಶಕ, ಅಭಿನಯಕರ್ತರೆಂದು ಗುರುತಿಸಲ್ಪಟ್ಟ 'ಗುರುದತ್' ತಮ್ಮ ಹಲವಾರು ಚಿತ್ರಗಳಲ್ಲಿ ನೃತ್ಯ ಕಲಾವಿದೆ, ಸಮರ್ಥ ಅಭಿನೇತ್ರಿ, 'ವಹೀದಾ ರೆಹ್ಮಾನ್' ರವರನ್ನು ಬಳಸಿಕೊಂಡಿದ್ದಾರೆ. ಆಕೆಯನ್ನು ಮುಂಬಯಿ ಫಿಲಂ ಲೈನ್ ಗೆ ಪರಿಚಯಿಸಿದವರೂ ಅವರೇ. ಚಲನ ಚಿತ್ರ ರಂಗದಲ್ಲಿನ ಅನೇಕ ಹೆಸರಾಂತ ನಿರ್ಮಾಪಕ,…
ವಿಧ: ಪುಸ್ತಕ ವಿಮರ್ಶೆ
April 06, 2022
ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದಿರುವ ಸರಿಗಮ ‘ಪದ' ಎಂಬ ಪುಸ್ತಕವು ಪತ್ರಿಕಾ ಭಾಷೆಗೊಂದು ಹದ ಎಂದು ಅವರೇ ಪುಸ್ತಕದ ಮುಖಪುಟದಲ್ಲೇ ಬರೆದುಕೊಂಡಿದ್ದಾರೆ. ‘ಪದ'ಕ್ಕೊಂದು ನನ್ನ ರಾಗ ಎಂಬ ಮುನ್ನುಡಿಯಲ್ಲಿ “ಇದು ನಾನು ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಪತ್ರಿಕೋದ್ಯಮದ ಮೇಷ್ಟ್ರಾಗಿ ಪಾಠ ಮಾಡುವಾಗ ವಿದ್ಯಾರ್ಥಿಗಳಿಗೆಂದು ಸಿದ್ಧಪಡಿಸಿದ ನೋಟ್ಸ್. ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಬರೆದಿದ್ದು. ಭಾಷೆ ಹಾಗೂ ಪದ ಬಳಕೆ ಬಗ್ಗೆ ಎಂಥ ಸಂಯಮ, ಪ್ರೀತಿ, ಶ್ರದ್ಧೆ…
ವಿಧ: ಪುಸ್ತಕ ವಿಮರ್ಶೆ
April 01, 2022
ಬಾಹ್ಯಾಕಾಶ, ಗ್ರಹಣಗಳು ಮತ್ತು ಆಕಾಶಕಾಯಗಳ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿರುವ ಬಿ. ಎಸ್. ಶೈಲಜಾ ಅವರ ಪ್ರವಾಸ ಕಥನ ಇದು. ಡಿಸೆಂಬರ ತಿಂಗಳಿನಲ್ಲಿ ಘಟಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎರಡು ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಲು ಹೋಗಿದ್ದಾಗಿನ ಅನುಭವಗಳನ್ನು ಇದರಲ್ಲಿ ನಿರೂಪಿಸಿದ್ದಾರೆ.
ಆಫ್ರಿಕಾದ ನ್ಯಾಷನಲ್ ಪಾರ್ಕುಗಳಲ್ಲಿ ಸಫಾರಿ ಹೋದಾಗ ಕಂಡ ಆನೆಗಳು, ಸಿಂಹಗಳು, ಚಿರತೆಗಳು, ಜಿರಾಫೆಗಳು, ಜೀಬ್ರಾಗಳು, ಕತ್ತೆಕಿರುಬಗಳು ಇತ್ಯಾದಿ ಹತ್ತು ಹಲವು ಪ್ರಾಣಿಗಳ…
ವಿಧ: ಪುಸ್ತಕ ವಿಮರ್ಶೆ
March 31, 2022
108 Daily ಮನಿ ಎಂಬ ಪುಸ್ತಕವು ವಿತ್ತ ಪದಗಳ ಅರ್ಥಗುಚ್ಛ. “ನಿಮಗೆಲ್ಲಾ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಜಂಕ್ ಬಾಂಡ್ ಎಂದರೇನು? ಎನ್ನುವ ಪ್ರಶ್ನೆ ಬಂದಿರುತ್ತದೆ. ಮಸಾಲಾ ಬಾಂಡ್ ಎನ್ನುವ ಹೆಸರನ್ನ ಕೇಳಿರುತ್ತೀರಿ ಆದರೆ ಅದೇನು ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿರುವುದಿಲ್ಲ. ಎಲ್ಲರ ಬಾಯಲ್ಲಿ ‘ಎಕಾನಮಿ' ಬಿದ್ದೋಗಿದೆ ಅಥವಾ ಎಕಾನಮಿ ರಿಕವರಿ ಆಗಿದೆ ಎನ್ನುವ ಮಾತನ್ನ ಕೇಳಿರುತ್ತೀರಿ. ಆದರೆ ಯಾರಾದರೂ ವಾಟ್ ಇಸ್ ಎಕಾನಮಿ? ಎಂದಾಗ ತಬ್ಬಿಬ್ಬಾಗುತ್ತೇವೆ ಅಲ್ಲವೇ?
ಗ್ರೋಥ್ ರೇಟ್, ಬಯ್…
ವಿಧ: ಪುಸ್ತಕ ವಿಮರ್ಶೆ
March 29, 2022
ಅಜ್ಞಾತ ವಾಸ ಅನುಭವಿಸಲು ಪಾಂಡವರು ಕಾಡಿಗೆ ಬಂದಾಗ ಅವರು ಅನುಭವಿಸಿದ ಸಂಕಷ್ಟಗಳು ಹಾಗೂ ಅವುಗಳನ್ನು ಎದುರಿಸಿಕೊಂಡ ಬಗೆಗಳ ಕುರಿತು ಧಾರ್ಮಿಕ ಚಿಂತಕರಾದ ಡಾ. ಕೆ ಎಸ್ ನಾರಾಯಣಾಚಾರ್ಯ ಇವರು ಸವಿವರವಾಗಿ ‘ವನದಲ್ಲಿ ಪಾಂಡವರು' ಕೃತಿಯಲ್ಲಿ ಬರೆದಿದ್ದಾರೆ. ಆಜ್ಞಾತವಾಸದ ನಿಯಮಗಳನ್ನು ಮುರಿಯಲು ದುರ್ಯೋಧನ ನಡೆಸಿದ ಕುಯುಕ್ತಿಗಳಿಗೆ ಪಾಂಡವರು ಇಟ್ಟ ಎಚ್ಚರಿಕೆಯ ಹೆಜ್ಜೆಗಳ ಬಗ್ಗೆ, ಕೀಚಕನ ಸಂಹಾರದ ಬಗ್ಗೆ, ಅರಗಿನ ಅರಮನೆಗೆ ಬೆಂಕಿ ಬಿದ್ದ ಬಗ್ಗೆ ಈ ಎಲ್ಲಾ ಸನ್ನಿವೇಶಗಳನ್ನು ಬಹಳ ಸಮರ್ಥವಾಗಿ ಬರೆದು…
ವಿಧ: ಪುಸ್ತಕ ವಿಮರ್ಶೆ
March 25, 2022
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಯಾವುದೇ ಕೃಷಿ ಮೇಳಗಳು ನಡೆದಿರಲಿಲ್ಲ. ಕೃಷಿಕರೂ ಕೃಷಿಯಲ್ಲಿ ಆಗುತ್ತಿರುವ ಹೊಸ ಹೊಸ ಅನ್ವೇಷಣೆ, ಮಾಹಿತಿಗಳಿಂದ ದೂರವೇ ಉಳಿದುಹೋಗಿದ್ದರು. ಈ ಕಾರಣದಿಂದ ರಾಜ್ಯ ಮಟ್ಟದ ಬೃಹತ್ ಕೃಷಿ ಮೇಳವನ್ನು ಆಯೋಜನೆ ಮಾಡಬೇಕೆಂದು ಯೋಚನೆ ಮಾಡಿ ‘ಕೃಷಿ ಸಿರಿ- 2022’ ಎಂದು ಹೆಸರಿಸಿದರು. ‘ಕೃಷಿ ಸಿರಿ’ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಣವ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಶ್ರೀ ಜಿ.ಆರ್. ಪ್ರಸಾದ್, ಅಧ್ಯಕ್ಷರಾಗಿ ವಿನಯ ಕೃಷಿ ಬೆಳೆಗಾರರ ಸಂಘದ…
ವಿಧ: ಪುಸ್ತಕ ವಿಮರ್ಶೆ
March 24, 2022
ತಮ್ಮ ಕಾವ್ಯಾತ್ಮಕ ಭಾಷೆಯ ಮೂಲಕ ಸಮುದಾಯಗಳ ಅತ್ಯಂತ ಖಾಸಗಿ ಹಾಗೂ ಸಾರ್ವಜನಿಕವಾದ ಸಂಕೀರ್ಣ ಅನುಭವಗಳನ್ನು ದಾಖಲಿಸುತ್ತ ಬಂದವರು ಕೇಶವ ಮಳಗಿ. ಅವರ ಹೊಸ ಬಗೆಯ 26 ಕಥನಗಳು ಇದರಲ್ಲಿವೆ.
ಎಂಬತ್ತರ ದಶಕದಲ್ಲಿ ಬರೆಯಲು ಶುರುವಿಟ್ಟ ಲೇಖಕರಲ್ಲಿ ಕೇಶವ ಮಳಗಿ ಅವರದು ವಿಭಿನ್ನ ಕಥನ ಮಾರ್ಗ. 1963ರಲ್ಲಿ ಜನಿಸಿದ ಇವರು ವಿಜಾಪುರ, ಬಾಗಿಲುಕೋಟೆ, ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಗಳ ಭಾಷೆ ಹಾಗೂ ಸಂಸ್ಕೃತಿಗಳ ಬನಿಯನ್ನು ತಮ್ಮ ಬರಹದಲ್ಲಿ ಇಳಿಸಿದ್ದಾರೆ. ಹೊಸ ಬಗೆಯ ಅಭಿವ್ಯಕ್ತಿ ಶೈಲಿ, ವಸ್ತು…
ವಿಧ: ರುಚಿ
March 23, 2022
ಕಂಚುಹುಳಿ ರಸಹಿಂಡಿ ಇಡಬೇಕು. ತೆಂಗಿನಕಾಯಿ ತುರಿಗೆ ಒಣಮೆಣಸು, ಸಾಸಿವೆ, ಕಾಯಿಮೆಣಸು, ಚಿಟಿಕೆ ಅರಶಿನಹುಡಿ ಹಾಕಿ ರುಬ್ಬಿ, ಹಿಂಡಿ ಇಟ್ಟ ರಸಕ್ಕೆ ಸೇರಿಸಬೇಕು. ಉಪ್ಪು ಮತ್ತು ಬೆಲ್ಲ ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಬೆಲ್ಲ ಜಾಸ್ತಿ ಹಾಕಬೇಕಾಗುತ್ತದೆ. ಒಗ್ಗರಣೆ ಕೊಡದಿದ್ದರೂ ಆಗುತ್ತದೆ.(ಬಾಣಂತಿಯರಿಗೆ ಕೊಡುವುದಾದರೆ ಸಣ್ಣ ಉರಿಯಲ್ಲಿ ಕುದಿಸಿ ಬಡಿಸಬಹುದು).ಆರೋಗ್ಯಕ್ಕೆ ಒಳ್ಳೆಯದು.
ಪೂರಕ ಮಾಹಿತಿ: *ಇದೇ ಕಾಯಿಯ ಸಿಪ್ಪೆಯನ್ನು ಒಣಗಿಸಿಟ್ಟು ತಂಬುಳಿ ಮಾಡಬಹುದು.
*ಎಳ್ಳೆಣ್ಣೆ ಅಥವಾ…
ವಿಧ: ಪುಸ್ತಕ ವಿಮರ್ಶೆ
March 22, 2022
ಮೂಲತಃ ಗಡಿನಾಡು ಕಾಸರಗೋಡಿನ ಕುಂಬಳೆಯವರಾದ ಸೂರ್ಯ ನಾರಾಯಣ ಹಿಳ್ಳೆಮನೆಯವರ ಮೊದಲ ಪ್ರಯತ್ನವೇ ‘ಗೋವು, ಮಹಿಷಿ ಮತ್ತು ಮಹಾವೃಕ್ಷ' ಎಂಬ ಕಥಾ ಸಂಕಲನ. ಅವರೇ ತಮ್ಮ ಸಂಕಲನದ ಮುನ್ನುಡಿಯಲ್ಲಿ ಬರೆದಂತೆ “ ಈ ಸಂಕಲನದಲ್ಲಿ ಇರುವ ಹೆಚ್ಚಿನ ಬರಹಗಳ ಕಾಲಘಟ್ಟ ೧೯೮೦-೯೦ರ ದಶಕಗಳು. ಶುದ್ಧ ಗ್ರಾಮೀಣ ಪರಿಸರ, ಹಿತ ಮಿತ ಅರಿತು ಬದುಕುವ ಸಣ್ಣ ಹಿಡುವಳಿದಾರ ಕುಟುಂಬಗಳು. ಅವರ ಜನಜೀವನ ಇತ್ಯಾದಿ ಈ ಬರಹಗಳ ಕಥಾ ವಸ್ತು. ಸನಾತನ ಸಂಸ್ಕೃತಿಯಲ್ಲಿ, ಪ್ರಕೃತಿಯನ್ನೂ ಪ್ರಾಣಿಗಳನ್ನೂ ಒಂದು ರೀತಿಯ ಆದರದಿಂದ ಕಾಣುವ…
ವಿಧ: ಪುಸ್ತಕ ವಿಮರ್ಶೆ
March 18, 2022
‘ಕಾನನ ಜನಾರ್ದನ' ಎಂಬುವುದು ಕೆ ಎನ್ ಗಣೇಶಯ್ಯ ಅವರ ಮತ್ತೊಂದು ರೋಚಕ ಕಾದಂಬರಿ. ಪುಸ್ತಕದ ಬೆನ್ನುಡಿಯಲ್ಲಿ “ ಮೇಘಾಲಯದ ಪರ್ವತಗಳ ಮೇಲೆ ಚರಿತ್ರೆಯ ವಿದ್ಯಾರ್ಥಿಗಳಿಗೆ ಶಿಲಾಯುಗದ ಮಾನವನ ಸಂಸ್ಕೃತಿಯ ಪಳೆಯುಳಿಕೆಯೊಂದನ್ನು ಪರಿಚಯಿಸುತ್ತಿದ್ದ ಪಲ್ಲವಿಗೆ ಬಂದ ಕರೆಯೊಂದು ಆಕೆಯನ್ನು ತಲ್ಲಣಗೊಳಿಸುತ್ತದೆ. ಅಮೇರಿಕದ ಕಂಪೆನಿಯೊಂದಿಗೆ ಕೈ ಜೋಡಿಸಿದ ಮುಂಬೈನ ಉದ್ಯಮಿಯೊಬ್ಬ ಭಾರತದ ಧಾರ್ಮಿಕ ಮತ್ತು ಸಂವಿಧಾನದ ನಿಲುವನ್ನೆ ಬದಲಾಯಿಸುವ ಷಡ್ಯಂತ್ರಕ್ಕೆ ಕೈ ಹಾಕುತ್ತಾನೆ. ಕನ್ನಡದ ಕಾದಂಬರಿಕಾರ…