ವಿಧ: ಬ್ಲಾಗ್ ಬರಹ
May 24, 2022
ಹಿಂದಿ ಸಾಹಿತ್ಯ ವಲಯದ ದಿಗ್ಗಜರಲ್ಲೊಬ್ಬರೆಂದು ಹೆಸರುಗಳಿಸಿದ ಹರಿವಂಶರಾಯ್ ಬಚ್ಚನ್ ಪುತ್ರನೆಂದು ಖ್ವಾಜ ಅಹ್ಮದ್ ಅಬ್ಬಾಸ್ ರಿಗೆ (ಕೆ. ಎ.ಅಬ್ಬಾಸ್ ಒಳ್ಳೆಯ ಕವಿ, ಚಿತ್ರನಿರ್ಮಾಪಕ, ನಿರ್ದೇಶಕ) ಗೊತ್ತಾದಮೇಲೆ ಮೊದಲು ನಿರ್ಧರಿಸಿದಂತೆ, ಹಿರಿಯ ನಟ, 'ತಿನ್ನು ಆನಂದ್' ರವರಿಗೆ ಮೀಸಲಾಗಿದ್ದ ಪಾತ್ರವನ್ನು ಅಮಿತಾಬ್ ಗೆ ನಾಯಕನ ಪಾತ್ರವನ್ನು ವಹಿಸಿಕೊಟ್ಟರು. ಹೀಗೆ, ಅಮಿತಾಭ್ ಬಚ್ಚನ್ ಗೆ ಬಾಲಿವುಡ್ ನ ಮೊದಲ ಬ್ರೇಕ್ ಸಿಕ್ಕಿದ್ದು ಬಾಂಬೆ ಟು ಗೋವಾ ಚಿತ್ರದಲ್ಲಿ. ಅರುಣಾ ಇರಾನಿ, ಶತ್ರುಜ್ಞ…
ವಿಧ: ಬ್ಲಾಗ್ ಬರಹ
May 23, 2022
ರಾಜೀವ್ ಗಾಂಧಿಯವರಿಗಿಂತ ೨ ವರ್ಷ ದೊಡ್ಡವರಾಗಿದ್ದ ಅಮಿತಾಭ್ ಬಚ್ಚನ್, ಧೋತಿ ಕುರ್ತಾ ತೊಟ್ಟು ಗಾಂಧೀ ಟೋಪಿ ಧರಿಸಿ ಕೈನಲ್ಲಿ ತಿರಂಗ ಧ್ವಜವನ್ನು ಆಡಿಸುತ್ತಾ ಕುಳಿತಿದ್ದ ರಾಜೀವ್ ಗಾಂಧಿಯನ್ನು ಅಮಿತಾಭ್, ಆವೋ ದೋಸ್ತ್ ಹಾಥ್ ಮಿಲಾವ್ ಎಂದು ಕರೆದಾಗ, ಅಮ್ಮನ ತೊಡೆಯಿಂದ ಕೆಳಗಿಳಿದು ಕೈಕುಲುಕುತ್ತಿದ್ದ ದಿನಗಳನ್ನು ನೆನೆದು ಇಬ್ಬರೂ ಸಂಭ್ರಮಿಸುತ್ತಿದ್ದರು.
ರಾಜೀವ್ ಗಾಂಧಿ ಮತ್ತು ಅಮಿತಾಬ್ ಬಚ್ಚನ್ ಅವರ ನಿಕಟ ಸ್ನೇಹವು ಬಹಳ ಮುಂಚೆಯೇ ಪ್ರಾರಂಭವಾಯಿತು ಮತ್ತು ಅವರು ಪರಸ್ಪರರ ಮೇಲಿದ್ದ…
ವಿಧ: ಪುಸ್ತಕ ವಿಮರ್ಶೆ
May 21, 2022
ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರಿಗೆ ಸಹಾಯವಾಗಲೆಂದು ತಮ್ಮ ಅನುಭವದ ಸಾರವನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಲೇಖಕ ಜೆಸುನಾ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ “ಒಂದು ಕಾಲವಿತ್ತು. ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶಿಸಿದವರಿಗೆ ಪೂರ್ವ ಸಿದ್ಧತೆಯೇನೂ ಇರುತ್ತಿರಲಿಲ್ಲ. ಅವರಿಗೆ ಇರುತ್ತಿದ್ದುದು ವ್ಯಾಪಕ ಓದಿನ ಹಿನ್ನಲೆ. ಈಗ ಹಾಗಿಲ್ಲ. ಗಿಣಿ ಪಾಠದ ಒಂದು ಪದವಿ ಇರುತ್ತದೆ. ಇದರಲ್ಲಿ ಬಹುತೇಕ ಮಂದಿಗೆ ಓದಿನ ಹಿನ್ನಲೆಯೇ ಇರುವುದಿಲ್ಲ. ಇಂಥವರು…
ವಿಧ: ಪುಸ್ತಕ ವಿಮರ್ಶೆ
May 19, 2022
‘ಬಣ್ಣದ ಕಾಲು' ಖ್ಯಾತ ಕತೆಗಾರ ಜಯಂತ ಕಾಯ್ಕಿಣಿ ಇವರ ಕಥಾ ಸಂಕಲನ. ‘ಅಪಾರ' ಅವರ ಮುಖಪುಟ ವಿನ್ಯಾಸ ಹಾಗೂ ರಾವ್ ಬೈಲ್ ಅವರ ಒಳ ಪುಟಗಳ ರೇಖಾಚಿತ್ರಗಳು ಗಮನ ಸೆಳೆಯುತ್ತವೆ. ಜಯಂತ ಇವರು ತಮ್ಮ ಕಥೆಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಒಟ್ಟು ೧೩ ಸಣ್ಣ ಕಥೆಗಳನ್ನು ಹೊಂದಿರುವ ಪುಸ್ತಕದ ಎಲ್ಲಾ ಕಥೆಗಳು ಒಮ್ಮೆ ಓದಿದ ಬಳಿಕ ಇನ್ನೊಮ್ಮೆ ಓದುವಷ್ಟು ಸೊಗಸಾಗಿವೆ.
ಪುಸ್ತಕದ ತಮ್ಮ ಮಾತಾದ 'ಅರಿಕೆ' ಯಲ್ಲಿ ಜಯಂತ ಕಾಯ್ಕಿಣಿ ಅವರು ಹೀಗೆ ಬರೆದಿದ್ದಾರೆ “ಪಂಚತಂತ್ರದಲ್ಲಿ ಬರುವ ಮಾಂತ್ರಿಕನೊಬ್ಬ…
ವಿಧ: ಪುಸ್ತಕ ವಿಮರ್ಶೆ
May 19, 2022
ನಿವೃತ್ತಿಯ ಅಂಚಿನಲ್ಲಿರುವವರಿಗೊಂದು ಉತ್ತಮ ಕೈಪಿಡಿ ಇದು. 1995ರಿಂದೀಚೆಗೆ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಿಂದ ನಿವೃತ್ತರಾಗಲಿರುವ ಉದ್ಯೋಗಿಗಳಿಗೆ ನಿವೃತ್ತ ಜೀವನಕ್ಕಾಗಿ ತಯಾರಾಗುವುದು ಹೇಗೆ? ಎಂಬ ಬಗ್ಗೆ ಕನ್ನಡದಲ್ಲಿ ಉಪನ್ಯಾಸ ನೀಡಿದ ಆನಂದ ರಾಮರಾಯರು ಇದರ ಲೇಖಕರು. ಅನಂತರ, ತನ್ನ ಉಪನ್ಯಾಸಗಳನ್ನೇ ಲೇಖನವಾಗಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. “ಉದಯವಾಣಿ”ಯ ಹಿರಿಯರ ಪುಟದಲ್ಲಿ, ಇದೇ ಶೀರ್ಷಿಕೆಯಲ್ಲಿ 52 ಕಂತುಗಳ ಅಂಕಣವನ್ನೂ ಬರೆದರು. ತದನಂತರ, ಅವನ್ನೇ ಪುಸ್ತಕವಾಗಿಸಿ…
ವಿಧ: ಬ್ಲಾಗ್ ಬರಹ
May 18, 2022
ಮುಹೂರತ್ ಶಾಟ್ ಕ್ಲಾಪರ್ ಬಾಯ್, ಕೆಲಸವನ್ನು ಒಮ್ಮೆ ಅಪ್ರತಿಮ ಬಾಲಿವುಡ್ ಚಲನಚಿತ್ರ ಅಭಿನೇತಾ ದಿಲೀಪ್ ಕುಮಾರ್ ಒಪ್ಪಿಕೊಂಡು ಮಾಡಿದ್ದರು. ಕ್ಲಾಪರ್ ಶಾಟ್ ಮಾಡುವುದು ಒಂದು ತರಹದ ಶುಭಾರಂಭ ಅಂದರೆ ; ಯಾವುದೇ ಹೊಸಚಿತ್ರವನ್ನು ಚಿತ್ರೀಕರಿಸಲು ಶ್ರೀಗಣೇಶ್ ಮಾಡುವ ಸಲುವಾಗಿ 'ಸೀನ್ ಒನ್, ಟೇಕ್ ಒನ್ ಎಂದು ಸಾಮಾನ್ಯವಾಗಿ ಗಣನೆಗೆ ತೆಗೆದುಕೊಳ್ಳುವ ಈ ವಿಧಿ ಎಷ್ಟು ಬಾರಿ ಕ್ಯಾಮರಾದಿಂದ ಹೊಸದಾಗಿ ತೆಗೆದುಕೊಂಡಾಗಲೂ ಆ ಚಿಕ್ಕ ಮರದ ಪಟ್ಟಿಯಲ್ಲಿ ಬರೆದು ದಾಖಲು ಮಾಡುವುದು ಒಂದು ಪ್ರಮುಖ…
ವಿಧ: ಪುಸ್ತಕ ವಿಮರ್ಶೆ
May 18, 2022
ಪತ್ತೇದಾರಿ ಸಾಹಿತ್ಯದಲ್ಲಿ ಖ್ಯಾತ ಹೆಸರು ಸರ್ ಆರ್ಥರ್ ಕನಾನ್ ಡಾಯ್ಲ್. ಇವರು ಮೂಲತಃ ಓರ್ವ ವೈದ್ಯ, ಆಂಗ್ಲ ಭಾಷೆಯಲ್ಲಿ ಇವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಕಥಾ ನಾಯಕ ಶೆರ್ಲಾಕ್ ಹೋಮ್ಸ್. ಈ ಪಾತ್ರವು ಎಷ್ಟು ಖ್ಯಾತಿ ಪಡೆಯಿತೆಂದರೆ ಆ ಕಾಲ್ಪನಿಕ ಪಾತ್ರವನ್ನು ಎಲ್ಲರೂ ನಿಜವಾದ ವ್ಯಕ್ತಿ ಎಂದೇ ನಂಬಿದ್ದರು. ಈ ಬಗ್ಗೆ ಈ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ “ ಆರ್ಥರ್ ಕಾನನ್ ಡಾಯ್ಲ್ ಸೃಷ್ಟಿಸಿದ ಪಾತ್ರ ‘ಶೆರ್ಲಾಕ್ ಹೋಮ್ಸ್' ಒಬ್ಬ ನಿಜವಾದ ವ್ಯಕ್ತಿ ಎಂದೇ ನಂಬಿದ ಓದುಗರಿದ್ದರು…
ವಿಧ: ಬ್ಲಾಗ್ ಬರಹ
May 17, 2022
ವರ್ಷ ೧೯೫೦ ರ ಬೊಂಬಾಯಿನ ಸಿನಿಮಾ ಉದ್ಯಮದಲ್ಲಿ ಕೆಲಸಮಾಡುತ್ತಿದ್ದ ನಟ ನಟಿಯರು, ಸಂಗೀತ ನಿರ್ದೇಶಕರು ಎಲ್ಲರೂ
'ಲೋಕಲ್ ಟ್ರೇನ್' ನಲ್ಲೆ ಪ್ರಯಾಣ ಮಾಡುತ್ತಿದ್ದರು. ಚಿತ್ರ ನಿರ್ಮಾಪಕ ಅನಿಲ್ ಬಿಸ್ವಾಸ್ ಅವರ ಸಹಾಯಕ, ಲತಾ ಮಂಗೇಶ್ಕರ್ (ಪಶ್ಚಿಮ ರೈಲ್ವೆ) ಲೋಕಲ್ ರೈಲಿನಲ್ಲಿ ಕುಳಿತು ಮಲಾಡ್ ನಲ್ಲಿದ್ದ ಬಾಂಬೆ ಟಾಕೀಸ್ ಗೆ ಹೋಗುತ್ತಿದ್ದರು. ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ದಿಲೀಪ್ ಕುಮಾರ್ ಡಬ್ಬಿಯ ಒಳಗೆ ಹತ್ತಿದರು. ಅವರು ಅನಿಲ್ ಬಿಸ್ವಾಸ್ ರ ಹತ್ತಿರದ ಸೀಟ್ ನಲ್ಲಿ ಬಂದು ಕುಳಿತು, …
ವಿಧ: ಪುಸ್ತಕ ವಿಮರ್ಶೆ
May 14, 2022
ಆಯುರ್ವೇದ ರತ್ನ ಡಾ. ಗುರುಶಾಂತ ಲಿಂಬಿತೋಟ ಇವರು ಸುಮಾರು ೪೦ ಬಗೆಯ ಹಣ್ಣು ಹಾಗೂ ತರಕಾರಿಗಳ ಔಷಧೀಯ ಗುಣಗಳನ್ನು ಸವಿವರವಾಗಿ ನೀಡಿದ್ದಾರೆ. ನಮ್ಮದೇ ತೋಟದ ಹಣ್ಣುಗಳು ಅಥವಾ ತರಕಾರಿಗಳು ನಮಗೆಷ್ಟು ಪ್ರಯೋಜನಕಾರಿ ಎಂಬುದಾಗಿ ವಿವರಿಸಿದ್ದಾರೆ. ಡಾ. ಸುನೀತಾ ಲಿಂಬಿತೋಟ ಇವರು ಪುಸ್ತಕದ ಪ್ರಾರಂಭದಲ್ಲಿ ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವುಗಳೆಂದರೆ…
* ಹಸಿರು ತರಕಾರಿ ಸೇವನೆ ಆರೋಗ್ಯದ ಹಿತದೃಷ್ಟಿಯಿಂದ ಅತ್ಯವಶ್ಯಕವಾಗಿದೆ. ಆದರೆ ಹಣ್ಣು-ತರಕಾರಿಗಳನ್ನು ಚೆನ್ನಾಗಿ ತೊಳೆಯದೆ…
ವಿಧ: ಪುಸ್ತಕ ವಿಮರ್ಶೆ
May 12, 2022
ನೊಬೆಲ್ ಪ್ರಶಸ್ತಿ ಪುರಸ್ಕೃತ ಮಾರ್ಕ್ವೆಜ್‌ನ ಕಾದಂಬರಿಗಳಲ್ಲೊಂದಾದ ಇದನ್ನು ಕನ್ನಡಕ್ಕೆ ತಂದವರು ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ. ಅವರು “ಓದುಗರೊಡನೆ" ಹಂಚಿಕೊಂಡ ಕೆಲವು ಮಾತುಗಳು: “ಇದು ನಾನು ತುಂಬ ಮೆಚ್ಚಿದ ಕೃತಿ. ಈ ಕೃತಿಯನ್ನು ಕನ್ನಡಿಗರಿಗೆ ತಲುಪಿಸಬೇಕೆನ್ನುವ ಹುಮ್ಮಸ್ಸಿಗೆ ಬಿದ್ದು ಇದನ್ನು ಅನುವಾದಿಸುವ ಹುಚ್ಚು ಸಾಹಸಕ್ಕೆ ಕೈಹಾಕಿದ್ದೇನೆ. ಇಂತಹ ಸಾಹಸಕ್ಕೆ ತೊಡಗುವ ಮುನ್ನ ಎಷ್ಟೊಂದು ಕಠಿಣ ಸವಾಲುಗಳನ್ನು ಎದುರಿಸಬೇಕಾದೀತೆಂಬ ಕಿಂಚಿತ್ ಕಲ್ಪನೆಯೂ ನನಗಿರಲಿಲ್ಲ…. ಮೂಲ…