ವಿಧ: ಪುಸ್ತಕ ವಿಮರ್ಶೆ
July 21, 2022
ನವಕರ್ನಾಟಕ ಪ್ರಕಾಶನ ಸಂಸ್ಥೆಯು ಹೊರತಂದಿರುವ ನವಕರ್ನಾಟಕ ಕಿರಿಯರ ಕಥಾ ಮಾಲೆಯ ಸರಣಿಯ ಪುಸ್ತಕವೇ 'ವಿನೋದ ಕಥೆಗಳು'. ಈ ಪುಸ್ತಕದಲ್ಲಿ ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳನ್ನು ಆರಿಸಿ ಪ್ರಕಟ ಮಾಡಿದ್ದಾರೆ. ಮಕ್ಕಳಿಗೆ ಓದಲು ಹಾಗೂ ಓದಿ ಹೇಳಲು ಅನುಕೂಲಕರವಾದ ಪುಸ್ತಕ ಇದು. ಈಗಾಗಲೇ ೧೧ ಮುದ್ರಣಗಳನ್ನು ಕಂಡಿದೆ.
ಪ್ರಕಾಶನದ ಪರವಾಗಿ ಆರ್ ಎಸ್ ರಾಜಾರಾಮ್ ಅವರು ತಮ್ಮ ನುಡಿಯಲ್ಲಿ " ಮಕ್ಕಳ ಓದುವ ಅಭಿರುಚಿಗೆ ಸಹಾಯಕವಾಗುವ ಉದ್ದೇಶದಿಂದ ಪ್ರಕಟವಾಗುತ್ತಿರುವ 'ವಿನೋದ ಕಥೆಗಳು' ಒಂದು ವಿಶಿಷ್ಟ…
ವಿಧ: ಪುಸ್ತಕ ವಿಮರ್ಶೆ
July 19, 2022
ದನಗಳ ಪಾಲನೆ, ರೋಗಗಳು, ಮುಂಜಾಗ್ರತೆ ಹಾಗೂ ಪ್ರಾಥಮಿಕ ಚಿಕಿತ್ಸೆ ಕುರಿತು ಜನಪ್ರಿಯ ಪಶುವೈದ್ಯಕೀಯ ಲೇಖನಗಳ ಸಂಗ್ರಹವೇ ‘ಪಶುವೈದ್ಯ ಸಮಾಲೋಕನ' ಎಂಬ ಪುಸ್ತಕ. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಪಶು ವೈದ್ಯಕೀಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಕೆ ಆರ್ ಲಕ್ಷ್ಮಯ್ಯ ಇವರು ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ "ಪಶುವೈದ್ಯಕೀಯ ಅತ್ಯಂತ ಪವಿತ್ರ ವೃತ್ತಿ. ಮೂಕ ಪ್ರಾಣಿಗಳ ವೇದನೆ ಪರಿಹರಿಸುವಲ್ಲಿ ಮತ್ತು ಬಡ ಪಶುಪಾಲಕನ ಶ್ರೇಯೋಭಿವೃದ್ಧಿಯಲ್ಲಿ ಪಶುವೈದ್ಯ…
ವಿಧ: ಪುಸ್ತಕ ವಿಮರ್ಶೆ
July 16, 2022
“ಭಾರತದಲ್ಲಿ ವೆನಿಲ್ಲಾ ಬೆಳೆಯ ವಾಣಿಜ್ಯ ಕೃಷಿ ಈಗ್ಗೆ ಕೆಲವು ವರ್ಷಗಳಿಂದ ಮಾತ್ರ ನಡೆಯುತ್ತಿದೆ. ವೆನಿಲ್ಲಾ ಬೆಳೆಗಾರರಿಗೆ ಈ ಬೆಳೆಯ ಕೃಷಿಯ ಬಗ್ಗೆ ಉಪಯುಕ್ತ ತಾಂತ್ರಿಕ ಮಾಹಿತಿಯ ಕೊರತೆಯನ್ನು ಈ ಪುಸ್ತಕ ನಿವಾರಿಸಿದೆ. ವೆನಿಲ್ಲಾ ಕೃಷಿಯನ್ನು ಆರಂಭಿಸಲು ಆಸಕ್ತರಿರುವ ರೈತರಿಗೆ ಇದು ಒಂದು ಉತ್ತಮ ಕೈಪಿಡಿ. ವೆನಿಲ್ಲಾ ಕೃಷಿಗೆ ತಗಲುವ ವೆಚ್ಚ, ಅದರ ಲಾಭ ಮುಂತಾದ ಉಪಯುಕ್ತ ಮಾಹಿತಿಯಿರುವ ಈ ಪುಸ್ತಕ ವೆನಿಲ್ಲಾ ಬೆಳೆಗೆ ಸಾಲವ್ಯವಸ್ಥೆಯನ್ನು ಯೋಜಿಸಲು ಬ್ಯಾಂಕುಗಳಿಗೆ ಅತ್ಯವಶ್ಯ. ತಾಂತ್ರಿಕ ಸಲಹೆ…
ವಿಧ: ಪುಸ್ತಕ ವಿಮರ್ಶೆ
July 14, 2022
ಕೃಷಿ ಪ್ರಯೋಗ ಪರಿವಾರ ಸಂಸ್ಥೆಯವರು ಹೊರತರುತ್ತಿದ್ದ ನಮ್ಮೂರ ವೈವಿಧ್ಯ ಮಾಲಿಕೆಯ ಮೂರನೇ ಕಾಣಿಕೆಯಾಗಿದೆ ಕದಿರು. ಇವರು ಭತ್ತದ ನಾಟಿತಳಿಗಳ ದಾಖಲೆಯನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಐವತ್ತಕ್ಕೂ ಮಿಕ್ಕಿದ ನಾಟಿತಳಿಗಳ ಹೆಸರು ಮತ್ತು ಅವುಗಳ ವಿಶ್ಲೇಷಣೆಗಳನ್ನು ಗಮನಿಸುವಾಗ ಅಚ್ಚರಿಯೆನಿಸುತ್ತದೆ. ಈ ರೀತಿಯ ದಾಖಲಾತಿಯನ್ನು ಮಾಡುವುದು ಒಂದು ಅಪರೂಪದ ವಿದ್ಯಮಾನವೇ ಸರಿ. ಈ ನಿಟ್ಟಿನಲ್ಲಿ ಕೃಷಿ ಪ್ರಯೋಗ ಪರಿವಾರದ ಕೆಲಸ ಸ್ತುತ್ಯಾರ್ಹ.
ಸಿಹಿ ಕೆಂಪಕ್ಕಿಯ ಸಿದ್ಧಸಾಲೆ…
ವಿಧ: ಪುಸ್ತಕ ವಿಮರ್ಶೆ
July 12, 2022
ಕಥೆಗಳ ರಚನೆಯಲ್ಲಿ ಆಸಕ್ತಿ ಹೊಂದಿರುವ ರವೀಂದ್ರ ಶೆಟ್ಟಿ ಕುತ್ತೆತ್ತೂರು ಅವರ ಚೊಚ್ಚಲ ಕಥಾ ಸಂಕಲನೇ 'ಪುನರ್ಜನ್ಮ'. ವಿವಿಧ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿರುವ ೧೦ ಉತ್ತಮ ಕಥೆಗಳನ್ನು ಆರಿಸಿ ಪುಟ್ಟ ಪುಸ್ತಕವನ್ನಾಗಿಸಿ ಓದುಗರ ಕೈಗಿರಿಸಿದ್ದಾರೆ. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪತ್ರಕರ್ತರಾದ ಕೆ. ಆನಂದ ಶೆಟ್ಟಿ ಇವರು. ಅವರ ಅಭಿಪ್ರಾಯದಂತೆ "ರವೀಂದ್ರ ಶೆಟ್ಟಿಯವರು ಬರೆದ ಹಲವಾರು ಕಥೆಗಳು ವಿವಿಧ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಓದುಗರ ಗಮನ ಸೆಳೆದಿದೆ…
ವಿಧ: ಪುಸ್ತಕ ವಿಮರ್ಶೆ
July 08, 2022
ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಇವರು ಹಲವಾರು ವಿಮರ್ಶಾ ಕೃತಿಗಳನ್ನು, ಪ್ರಬಂಧ ಸಂಕಲನಗಳನ್ನು ರಚಿಸಿದ್ದಾರೆ. ಇವರ ನೂತನ ಕೃತಿ 'ಅರಿವಿನ ಬಂಡಾಯ'ವನ್ನು ಕಣ್ಣ ಕೈದೀವಿಗೆಯ ಬೆಳಕು ಎಂದಿದ್ದಾರೆ. ಪುಸ್ತಕದ ಒಳಪುಟಗಳಿಂದ ಆಯ್ದ ಕೆಲವು ಸಾಲುಗಳೂ ಇಲ್ಲಿವೆ…
"...ಇಂದು ಜಗತ್ತನ್ನು ಗಾಢವಾಗಿ ಪ್ರಭಾವಿಸುತ್ತಿರುವ ಮೂರು ಪ್ರಭಾವೀ ಶಕ್ತಿಗಳೆಂದರೆ ರಾಜಕೀಯ, ಧರ್ಮ ಹಾಗೂ ತಂತ್ರಜ್ಞಾನ. ಇವುಗಳಲ್ಲಿ ರಾಜಕೀಯ ಹಾಗೂ ಧರ್ಮ ಅಧಿಕಾರ ಕೇಂದ್ರಗಳಾಗಿದ್ದು ಅಧೀನ…
ವಿಧ: ಪುಸ್ತಕ ವಿಮರ್ಶೆ
July 06, 2022
ಭಾರತದ ಚರಿತ್ರೆ ಎಡ-ಬಲಗಳ ಅತಿರೇಕದ ನಡುವೆ ಸಿಕ್ಕು ತತ್ತರಿಸಿದೆ. ನಿರ್ಮಲ ಚಿತ್ತದಿಂದ, ವಸ್ತುನಿಷ್ಟವಾಗಿ, ಕಲೆ, ಸಾಹಿತ್ಯ ಚರಿತ್ರೆಗಳನ್ನೆಲ್ಲ ಪೃಥಕ್ಕರಿಸಿ ಸತ್ಯಶೋಧನೆಗೆ ತೊಡಗಬೇಕೆಂಬ ಆದ್ಯತೆಯನ್ನು ಬಹುತೇಕರು ಮರೆತು, ತಾವು ನಂಬಿದ ಸಿದ್ಧಾಂತಕ್ಕೆ ಆಕರಗಳನ್ನು ಹುಡುಕಿದ್ದಾರೆ ಅಥವಾ ಜೋಡಿಸಿದ್ದಾರೆ. ಭಾರತದಂತ ಬಹುಮುಖಿ ಸಂಸ್ಕೃತಿಯ ದೇಶವನ್ನು ಕುರಿತು ಅಧ್ಯಯನ ಮಾಡುವಾಗ ಎಷ್ಟು ವ್ಯವಧಾನವಿದ್ದರು ಅದು ಅಲ್ಪವೇ. ವ್ಯವಧಾನದ ಜೊತೆಗೆ ಬಹುಜ್ಞಾತ ವ್ಯುತ್ಪತ್ತಿ ಹಾಗೂ ಚಿಕಿತ್ಸ ಬುದ್ಧಿಗಳು…
ವಿಧ: ಪುಸ್ತಕ ವಿಮರ್ಶೆ
July 04, 2022
'ದೇಶದ ಪಥ ಬದಲಿಸಿದ ೨೫ ಪ್ರಮುಖ ತೀರ್ಪುಗಳು' ಪುಸ್ತಕದ ಲೇಖಕ ವೈ ಜಿ ಮುರಳೀಧರನ್ ಅವರು ಕಳೆದ ೨೫ ವರ್ಷಗಳಿಂದ ಗ್ರಾಹಕ ಜಾಗೃತಿ, ಮಾನವ ಹಕ್ಕು, ವ್ಯಕ್ತಿತ್ವ ವಿಕಸನ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ರಚನೆ ಮತ್ತು ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇವರ ೫೦೦೦ಕ್ಕೂ ಹೆಚ್ಚು ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕೆಲವು ಘಟನೆಗಳು, ಪುಸ್ತಕಗಳು, ವ್ಯಕ್ತಿಗಳು ಮತ್ತು ಪ್ರಸಂಗಗಳು ಮಾನವ ಸಮಾಜದ ದಿಕ್ಕನ್ನು ಬದಲಿಸಿರುವುದನ್ನು…
ವಿಧ: ಪುಸ್ತಕ ವಿಮರ್ಶೆ
July 01, 2022
ನೀರಿನ ಮೌಲ್ಯ ಗೊತ್ತಾಗುವುದು ಅದರ ಕೊರತೆಯಾದಾಗಲೇ. ಇದನ್ನು ಇಸ್ರೇಲ್ ದೇಶದವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಹೇಳಿ ಕೇಳಿ ಇಸ್ರೇಲ್ ದೇಶದ ಬಹುಪಾಲು ಭೂಮಿ ಮರಳುಗಾಡು. ಮಳೆಯಾಗುವುದು ಬಹಳ ಕಡಿಮೆ. ಆದರೂ ನೀರಾವರಿ ತಂತ್ರಜ್ಞಾನ, ಕೃಷಿಯಲ್ಲಿ ಅವರು ಬಹಳ ಮುಂದುವರಿದಿದ್ದಾರೆ. ಇಸ್ರೇಲ್ ಜನರ ನೀರಾವರಿ ತಂತ್ರಗಳ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿವೆ. ಅಂತಹದ್ದೇ ಒಂದು ಪುಸ್ತಕ 'ನಾಳೆಗೂ ಇರಲಿ ನೀರು' ಇದು ಜಲದಾಹದಿಂದ ತತ್ತರಿಸುತ್ತಿರುವ ಜಗತ್ತಿಗೆ ಇಸ್ರೇಲ್ ನ ಪರಿಹಾರ ಎಂದಿದ್ದಾರೆ…
ವಿಧ: ಪುಸ್ತಕ ವಿಮರ್ಶೆ
June 29, 2022
'ಸುಡು ಬಯಲು' ಎನ್ನುವುದು ಒಂದು ಅಂಕಣ ಬರಹಗಳ ಸಂಗ್ರಹ. ೭೨ ಬರಹಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕವು ಕೊರೊನಾ ಸಾಂಕ್ರಾಮಿಕದ ಸಮಯದ ಜನರ ತಲ್ಲಣಗಳು, ವೈದ್ಯರ ಶ್ರಮ, ಮಾಧ್ಯಮದವರ ಅತಿರೇಕ ಎಲ್ಲವುದರ ಕುರಿತು ಬೆಳಕು ಚೆಲ್ಲುತ್ತದೆ. ಅದಕ್ಕೇ ಮಣಿ ಅವರು ಪುಸ್ತಕದ ಮುಖಪುಟದಲ್ಲೇ 'ಸತ್ಯಾನ್ವೇಷಣೆಯ ಬೆನ್ನೇರಿ...' ಎಂದು ಮುದ್ರಿಸಿದ್ದಾರೆ. ಪತ್ರಕರ್ತರಾಗಿರುವ ಮಣಿ ಅವರು ಕೊರೊನಾ ಸಂದರ್ಭದ ವಾಸ್ತವಾಂಶಗಳನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರಿನ ಹಿರಿಯ ಪತ್ರಕರ್ತರೂ,…