ವಿಧ: ಪುಸ್ತಕ ವಿಮರ್ಶೆ
July 01, 2022
ನೀರಿನ ಮೌಲ್ಯ ಗೊತ್ತಾಗುವುದು ಅದರ ಕೊರತೆಯಾದಾಗಲೇ. ಇದನ್ನು ಇಸ್ರೇಲ್ ದೇಶದವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಹೇಳಿ ಕೇಳಿ ಇಸ್ರೇಲ್ ದೇಶದ ಬಹುಪಾಲು ಭೂಮಿ ಮರಳುಗಾಡು. ಮಳೆಯಾಗುವುದು ಬಹಳ ಕಡಿಮೆ. ಆದರೂ ನೀರಾವರಿ ತಂತ್ರಜ್ಞಾನ, ಕೃಷಿಯಲ್ಲಿ ಅವರು ಬಹಳ ಮುಂದುವರಿದಿದ್ದಾರೆ. ಇಸ್ರೇಲ್ ಜನರ ನೀರಾವರಿ ತಂತ್ರಗಳ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿವೆ. ಅಂತಹದ್ದೇ ಒಂದು ಪುಸ್ತಕ 'ನಾಳೆಗೂ ಇರಲಿ ನೀರು' ಇದು ಜಲದಾಹದಿಂದ ತತ್ತರಿಸುತ್ತಿರುವ ಜಗತ್ತಿಗೆ ಇಸ್ರೇಲ್ ನ ಪರಿಹಾರ ಎಂದಿದ್ದಾರೆ…
ವಿಧ: ಪುಸ್ತಕ ವಿಮರ್ಶೆ
June 29, 2022
'ಸುಡು ಬಯಲು' ಎನ್ನುವುದು ಒಂದು ಅಂಕಣ ಬರಹಗಳ ಸಂಗ್ರಹ. ೭೨ ಬರಹಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕವು ಕೊರೊನಾ ಸಾಂಕ್ರಾಮಿಕದ ಸಮಯದ ಜನರ ತಲ್ಲಣಗಳು, ವೈದ್ಯರ ಶ್ರಮ, ಮಾಧ್ಯಮದವರ ಅತಿರೇಕ ಎಲ್ಲವುದರ ಕುರಿತು ಬೆಳಕು ಚೆಲ್ಲುತ್ತದೆ. ಅದಕ್ಕೇ ಮಣಿ ಅವರು ಪುಸ್ತಕದ ಮುಖಪುಟದಲ್ಲೇ 'ಸತ್ಯಾನ್ವೇಷಣೆಯ ಬೆನ್ನೇರಿ...' ಎಂದು ಮುದ್ರಿಸಿದ್ದಾರೆ. ಪತ್ರಕರ್ತರಾಗಿರುವ ಮಣಿ ಅವರು ಕೊರೊನಾ ಸಂದರ್ಭದ ವಾಸ್ತವಾಂಶಗಳನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರಿನ ಹಿರಿಯ ಪತ್ರಕರ್ತರೂ,…
ವಿಧ: ಪುಸ್ತಕ ವಿಮರ್ಶೆ
June 28, 2022
ರೈತ ಹೋರಾಟಗಾರ ಹೆಚ್ ಆರ್ ಬಸವರಾಜಪ್ಪನವರ ಐದು ದಶಕಗಳ ಹೋರಾಟದ ಹಿನ್ನೋಟವೇ 'ಹಸಿರು ಹಾದಿಯ ಕಥನ' ಎಂಬ ಕೃತಿ. ಬಸವರಾಜಪ್ಪನವರ ಮಾತುಗಳನ್ನು ಗಿರೀಶ್ ತಾಳೀಕಟ್ಟೆ ಹಾಗೂ ಕೆ ಎಲ್ ಅಶೋಕ್ ಅವರು ಸೊಗಸಾಗಿ ನಿರೂಪಿಸುತ್ತಾ ಅಕ್ಷರರೂಪಕ್ಕೆ ಇಳಿಸಿದ್ದಾರೆ. ೮೦ರ ದಶಕದಲ್ಲಿ ಆರಂಭವಾದ ರೈತ ಚಳುವಳಿಯಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ಬಸವರಾಜಪ್ಪನವರು ಇಂದಿಗೂ ಅಷ್ಟೇ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ರೈತರ ಮನೆ ಜಪ್ತಿಗೆ ಪ್ರತಿಯಾಗಿ ಬಸವರಾಜಪ್ಪನವರ ನೇತೃತ್ವದಲ್ಲಿ ಭದ್ರಾವತಿಯ ತಹಶೀಲ್ದಾರ್…
ವಿಧ: ರುಚಿ
June 28, 2022
ಸೌತೆಕಾಯಿ ಹೋಳಿನೊಂದಿಗೆ ಹಲಸಿನಕಾಯಿ ಸೊಳೆ, ನೀರುಳ್ಳಿ ಕತ್ತರಿಸಿ ಸೇರಿಸಿ. ಉಪ್ಪು, ಚಿಟಿಕೆ ಅರಶಿನ ಪುಡಿ, ಸ್ವಲ್ಪ ಬೆಲ್ಲ ಹಾಕಿ ಬೇಯಿಸಬೇಕು. ತೆಂಗಿನಕಾಯಿ ತುರಿಗೆ ಸ್ವಲ್ಪ ಹುಣಿಸೇಹುಳಿ ಸೇರಿಸಿ. ಒಣಮೆಣಸು, ಜೀರಿಗೆ, ಉದ್ದಿನಬೇಳೆ, ಮೆಂತೆ, ಕಾಲು ಚಮಚ ಅರಶಿನಪುಡಿ, ಚಿಟಿಕೆ ಇಂಗು, ಕರಿಬೇವು ಹುರಿದು ಸೇರಿಸಿ ನುಣ್ಣಗೆ ರುಬ್ಬಿಕೊಂಡು ,ಬೆಂದ ಹೋಳಿಗೆ ಸೇರಿಸಿ, ಸಣ್ಣ ಉರಿಯಲ್ಲಿ ಕುದಿಸಬೇಕು. ಬೆಳ್ಳುಳ್ಳಿ ಒಗ್ಗರಣೆ ಹಾಕಬೇಕು. ಇದಕ್ಕೆ ಬೇಯಿಸಿದ ಹಲಸಿನಬೀಜ ಸೇರಿಸಿದರೆ ತುಂಬಾ ರುಚಿ.…
ವಿಧ: ಪುಸ್ತಕ ವಿಮರ್ಶೆ
June 25, 2022
ದೀಪಾ ಹಿರೇಗುತ್ತಿ ಇವರು ಬರೆದ ವ್ಯಕ್ತಿತ್ವ ವಿಕಸನದ ಬರಹಗಳೇ 'ಸೋಲೆಂಬ ಗೆಲುವು' ಈ ಪುಸ್ತಕವನ್ನು ಪ್ರಕಾಶಿಸಿದವರು ವೀರಲೋಕ ಪ್ರಕಾಶನ ಇವರು. ಇದರ ಮಾಲಕರಾದ ವೀರಕಲೋಕ ಶ್ರೀನಿವಾಸ ಇವರು ತಮ್ಮ ಬೆನ್ನುಡಿಯಲ್ಲಿ ಈ ಪುಸ್ತಕ ಪ್ರಕಾಶನದ ಹೇಳಿಕೊಂಡದ್ದು ಹೀಗೆ..." "ನಿಮ್ಮ ನಾಲಿಗೆ ಬಯಸುವ ಚಾಕೋಲೆಟೊಂದು ಸಲೀಸಾಗಿ ನಿಮ್ಮನ್ನು ತಲುಪುವಂತೆ, ನಿಮ್ಮ ಬುದ್ಧಿ ಇಷ್ಟ ಪಡುವ ಪುಸ್ತಕವೊಂದು ನಿಮ್ಮ ಗೂಡಿಗೆ ತಲುಪಿಸಲು ಹರಸಾಹಸ ಪಡಬೇಕಾದ ಸ್ಥಿತಿ ಕನ್ನಡದಲ್ಲಿದೆ. ಅದನ್ನು ಮನಗಂಡು ನೀವು ಇರುವಲ್ಲೇ, ನೀವು…
ವಿಧ: ಪುಸ್ತಕ ವಿಮರ್ಶೆ
June 24, 2022
ಈ ಪುಸ್ತಕದ ಒಂದೊಂದೇ ಲೇಖನ ಓದುತ್ತ ಹೋದಂತೆ, ಪರಿಸರ ನಮ್ಮ ಬದುಕನ್ನು ತಟ್ಟುವ ವಿವಿಧ ಪರಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಊರಿಗೆ ಮಂಜೂರಾದ ಮೂರು ಟ್ಯೂಬ್‍ಲೈಟ್‍ಗಳನ್ನು ಗ್ರಾಮ ಪಂಚಾಯತಿಯ ಸದಸ್ಯರ ಮನೆ ಮುಂದೆಯೇ ಹಾಕಬೇಕೆಂದು ಕೆಇಬಿ ಲೈನ್‍ಮನ್‍ಗೆ ತಾಕೀತು ಮಾಡುವ ಒಬ್ಬ ಗ್ರಾಮ ಪಂಚಾಯತಿ ಸದಸ್ಯನ ಉದಾಹರಣೆಯೊಂದಿಗೆ ಪುಸ್ತಕದ "ಮುನ್ನುಡಿ"ಯನ್ನು ಆರಂಭಿಸುತ್ತಾರೆ ಸಂಪಾದಕರು.
"ಹಳ್ಳಿಗಳಲ್ಲಿನ ರಾಜಕೀಯ ಮತ್ತು ಇಂದಿನ ಪರಿಸ್ಠಿತಿಗಳ ಬಗ್ಗೆ ಗೊತ್ತಿರುವ ಯಾರೂ ಆ ಕಡೆ ಸುಳಿಯದಂಥ ವಾತಾವರಣ…
ವಿಧ: ಪುಸ್ತಕ ವಿಮರ್ಶೆ
June 23, 2022
ನವಕರ್ನಾಟಕ ಪ್ರಕಾಶನ ಇವರು ಹೊರತರುತ್ತಿರುವ 'ವಿಶ್ವ ಮಾನ್ಯರು' ಮಾಲಿಕೆಯಲ್ಲಿ ಹೊರಬಂದ ಕೃತಿಯೇ ನಕ್ಷತ್ರಗಳ ಭವಿಷ್ಯಕಾರ 'ಸುಬ್ರಹ್ಮಣ್ಯನ್ ಚಂದ್ರಶೇಖರ್'. ಈ ಮಾಲಿಕೆಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಹಾಗೂ ಕೃತಿಯ ಲೇಖಕರು ವಿಜ್ಞಾನ ಬರಹಗಾರರಾದ ರೋಹಿತ್ ಚಕ್ರತೀರ್ಥ ಇವರು. ರೋಹಿತ್ ಅವರು ಕನ್ನಡದಲ್ಲಿ ವಿಜ್ಞಾನ-ಗಣಿತ ಬರಹಗಾರರ ಸಂಖ್ಯೆ ಕಡಿಮೆ ಎಂಬ ಕೊರತೆಯನ್ನು ನೀಗಿಸಿದವರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರ ಹಲವಾರು ಪುಸ್ತಕಗಳನ್ನು ನವಕರ್ನಾಟಕ ಪ್ರಕಾಶನ ಹೊರ…
ವಿಧ: ಪುಸ್ತಕ ವಿಮರ್ಶೆ
June 21, 2022
ಸಾಮಾಜಿಕ ಕಳಕಳಿಯ ಧೀಮಂತ ವಿಜ್ಞಾನಿ 'ಸತೀಶ್ ಧವನ್' ಎಂಬ ಪುಸ್ತಕವನ್ನು 'ವಿಶ್ವಮಾನ್ಯರು' ಪ್ರಕಟಣೆಯ ಅಡಿಯಲ್ಲಿ ಮುದ್ರಿಸಿ ಹೊರತಂದಿದ್ದಾರೆ ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಇವರು. ವಿಶ್ವಮಾನ್ಯರು ಸರಣಿಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಇವರು. ಸತೀಶ್ ಧವನ್ ಬಗ್ಗೆ ಸೊಗಸಾದ ಮಾಹಿತಿ ಬರೆದಿದ್ದಾರೆ ಡಾ ಬಿ ಆರ್ ಗುರುಪ್ರಸಾದ್ ಇವರು. ಬಾಹ್ಯಾಕಾಶ ಮತ್ತು ಖಗೋಳ ವಿಜ್ಞಾನದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿರುವ ಗುರುಪ್ರಸಾದ್ ಇವರು ೩೭ ವರ್ಷ ಇಸ್ರೋದಲ್ಲಿ ಸೇವೆ ಸಲ್ಲಿಸಿ…
ವಿಧ: ಪುಸ್ತಕ ವಿಮರ್ಶೆ
June 18, 2022
ರಮೇಶ್ ಅರವಿಂದ್ ಕನ್ನಡದ ಖ್ಯಾತ ಚಲನಚಿತ್ರ ನಟರು, ನಿರ್ದೇಶಕರು ಹಾಗೂ ಕಿರುತೆರೆಯ ಕಾರ್ಯಕ್ರಮ ನಿರೂಪಕರು ಎಂಬ ಸಂಗತಿ ನಿಮಗೆ ಗೊತ್ತೇ ಇದೆ. ಕಿರುತೆರೆಯಲ್ಲಿ 'ವೀಕೆಂಡ್ ವಿದ್ ರಮೇಶ್' ಹಾಗೂ 'ಪ್ರೀತಿಯಿಂದ ರಮೇಶ್' ಮೊದಲಾದ ಕಾರ್ಯಕ್ರಮಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ರಮೇಶ್ ಅವರ ಲೇಖನಿಯಿಂದ ಮೂಡಿಬಂದ 'ಆರ್ಟ್ ಆಫ್ ಸಕ್ಸಸ್' ಪುಸ್ತಕವನ್ನು ವೀರಲೋಕ ಬುಕ್ಸ್ ಪ್ರಕಾಶನ ಸಂಸ್ಥೆಯವರು ಬಿಡುಗಡೆಗೊಳಿಸಿದ್ದಾರೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ೧೬೦ ಟಿಪ್ಸ್ ಗಳು ಈ ಪುಸ್ತಕದಲ್ಲಿ…
ವಿಧ: ಪುಸ್ತಕ ವಿಮರ್ಶೆ
June 17, 2022
"ಸುಬ್ಬರಾಯರು ನಮ್ಮೂರಿನ ಹಿರಿಯರು, ಶತಾಯುಷಿಗಳು. ಅವರಿಗೆ ಈಗ ೧೦೩ ವರ್ಷ. .... ನೂರರ ಮೇಲೆ ಮೂರಾದರೂ ಲವಲವಿಕೆಯಿಂದ ಓಡಾಡಿಕೊಂಡಿರುವ ಒಂದೇ ಕಾರಣದಿಂದ ಅವರು ನಮ್ಮೂರಿನ ಆಕರ್ಷಣೆಯ ಕೇಂದ್ರ" ಎಂದು ಆರಂಭವಾಗುತ್ತದೆ ಮೊದಲ ಅಧ್ಯಾಯ, "ಮರಗಳ ಒಡನಾಟ."
ಅದರ ಎರಡನೇ ಪಾರಾದಲ್ಲೇ ಈ ಪ್ರಶ್ನೆ ಎತ್ತುತ್ತಾರೆ, ಲೇಖಕರಾದ ಎಚ್. ಆರ್. ಕೃಷ್ಣಮೂರ್ತಿಯವರು, "ನೂರು ವಸಂತಗಳನ್ನು ಕಂಡ ಸುಬ್ಬರಾಯರೇ ಇಂತಹ ಆಕರ್ಷಣೆಯ ಕೇಂದ್ರವಾದರೆ, ನೂರಾರು ಸಾವಿರಾರು ವರ್ಷಗಳಾದರೂ ಆರೋಗ್ಯಪೂರ್ಣವಾಗಿ ಬದುಕುತ್ತಿರುವ…