ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 03, 2022
ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉತ್ತಮ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಪುಸ್ತಕ ಖ್ಯಾತ ಸಾಹಿತಿ ಕೌಂಡಿನ್ಯ ಇವರು ಬರೆದ 'ಆ ವಿಜಯನಗರ'. ಇದೊಂದು ಐತಿಹಾಸಿಕ ಕಾದಂಬರಿ. ವಿಜಯನಗರದ ವೀರಪುತ್ರನ ಯಶೋಗಾಥೆಯನ್ನು ಹೇಳುವ ಕಾದಂಬರಿ ಎನ್ನುತ್ತಾರೆ ಲೇಖಕರು. ಯಾರು ವಿಜಯನಗರದ ವೀರಪುತ್ರ? ಎಂಬ ಕುತೂಹಲವೇ? ತಿಳಿಯಲು ಈ ಐತಿಹಾಸಿಕ ಕಾದಂಬರಿಯನ್ನು ಓದಿ. ಪುಸ್ತಕದ ಬೆನ್ನುಡಿಯಲ್ಲಿ ಕಂಡ ಬರಹ "ಹಿಂದೂಗಳ, ಹಿಂದೂ ಧರ್ಮದ ರಕ್ಷಾ ಕವಚವಾಗಿ, ಸಾಮ್ರಾಜ್ಯ ವಿಸ್ತರಣೆ ಮತ್ತು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 02, 2022
ಜಗದ್ವಿಖ್ಯಾತ ಸ್ತ್ರೀವಾದಿ ಚಿಂತಕಿ ಕೇಟ್ ಮಿಲೆಟ್ ಅವರ 'Sexual Politics’ ಕೃತಿಯ ಕನ್ನಡ ನಿರೂಪಣೆ ಶ್ರೀಮತಿ ಎಚ್ ಎಸ್ ಅವರಿಂದ ಮೊದಲ ಬಾರಿ ಕನ್ನಡಕ್ಕೆ ಅನುವಾದಗೊಂಡಿದೆ. ಇದು ಸ್ತ್ರೀವಾದ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಕೃತಿ ಎಂದೇ ಹೇಳಬಹುದು. ಪುರುಷ ಪ್ರಧಾನತೆಯ ಹೆಣ್ಣನ್ನು ಲೈಂಗಿಕತೆಯ ಮೂಲಕ ಅಧೀನಗೊಳಿಸಿರುವುದನ್ನು ಕೂಲಂಕುಷವಾಗಿ ತೆರೆದಿಡುತ್ತದೆ. ಲೈಂಗಿಕತಾ ರಾಜಕಾರಣದ ಅನೇಕ ಆಯಾಮಗಳನ್ನು ಸಮರ್ಪಕವಾದ, ಖಚಿತವಾದ ನೆಲೆಯಲ್ಲಿ ಶೋಧಿಸಿದೆ. ಅಧಿಕಾರವು ಪುರುಷ ಪ್ರಧಾನತೆಯನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 30, 2022
"ಮಂಜೇಶ್ವರದ ಸಾರಸ್ವತ ಕೊಂಕಣಿ ಮನೆತನದ ಪುಟ್ಟ ಬಾಲೆ ಅಮ್ಮಣು ಆರೇಳರ ಹರೆಯದ ಬಾಲ್ಯದ ತನ್ನ ಅರಸುವ ಕಣ್ಗಳಿಂದ ಕಂಡ ಕಥನವಿದು ! ಒಂದೊಂದು ಅಧ್ಯಾಯವನ್ನು ಓದುತ್ತಿದ್ದಂತೆ ನಾನು ಆ ಬರಹದಲ್ಲಿ ಜಿನುಗುತ್ತಿದ್ದ ವಾತ್ಸಲ್ಯದ ಧಾರೆಯಲ್ಲಿ ತೊಯ್ದು ಹೋದೆ. ಎಂಬತ್ತು ವರ್ಷಗಳ ಹಿಂದೆ ನಿಧಾನವಾಗಿ ಸರಿದು ಹೋದ ಎಂಥ ಸುಂದರ ದಿನಗಳವು ! ಬಾಲ್ಯಕಾಲ ಬೀಸಿದ ಆ ತಂಬೆಲರ ಮಾಯಾಜಾಲದೊಳಗೆ ನಾನು ಕಳೆದೇ ಹೋದೆ. ಸಾರಸ್ವತ ಕೊಂಕಣಿ ಸಮಾಜದ ಆಗಿನ ಕಾಲದ ಜನರ ಜೀವನದ ರೀತಿ, ನೀತಿಗಳು ಉತ್ತಮ ದಾಖಲಾತಿ ಕೃತಿಯುದ್ದಕ್ಕೂ…
ವಿಧ: ರುಚಿ
August 29, 2022
ಸಿಪ್ಪೆ ಸುಲಿದ ಹಸಿ ಗೇರುಬೀಜ ಮತ್ತು ಆಲೂಗಡ್ಡೆಯನ್ನು ಬೇಯಿಸಿರಿ. ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನ ಕಾಯಿತುರಿ, ಸ್ವಲ್ಪ ಹುಳಿ, ಹುರಿದ ಕೆಂಪು ಮೆಣಸು ಹಾಕಿ ನುಣ್ಣಗೆ ರುಬ್ಬಿರಿ. ಬೇಯಿಸಿ ಇಟ್ಟ ಗೇರುಬೀಜ ಮತ್ತು ಆಲೂಗಡ್ಡೆಗೆ ಈ ಮಸಾಲೆ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿರಿ. ಆನಂತರ ಒಗ್ಗರಣೆ ಹಾಕಿ. ಒಗ್ಗರಣೆಗೆ ೫ ಚಮಚ ತೆಂಗಿನೆಣ್ಣೆ, ೧ ಚಮಚ ಸಾಸಿವೆ, ಇಂಗು, ಕರಿಬೇವು ಉಪಯೋಗಿಸಿ. ಈಗ ಹಸಿ ಗೇರುಬೀಜ, ಆಲೂಗಡ್ಡೆ ಹುಮ್ಮಣ ಊಟಕ್ಕೆ ರೆಡಿ. -- ಗಾಯತ್ರಿ ಕಾಮತ್
ವಿಧ: ರುಚಿ
August 28, 2022
೨ ಚಿಕ್ಕ ಹಾಗಲಕಾಯಿಗಳನ್ನು ಹಿಂದಿನ ದಿನವೇ ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಉಪ್ಪಿನೊಡನೆ ಬೆರೆಸಿ ಇಡಿ. ಬೆಳಿಗ್ಗೆ ಹಾಗಲಕಾಯಿಗಳಲ್ಲಿದ್ದ ಉಪ್ಪನ್ನೆಲ್ಲ ಹಿಂಡಿ ತೆಗೆಯಿರಿ. ನಂತರ ಕಾವಲಿಯಲ್ಲಿ ಎಣ್ಣೆಯಿಟ್ಟು ಹಾಗಲಕಾಯಿ ತುಂಡುಗಳನ್ನು ಕೆಂಪು ಬಣ್ಣ ಬರುವವರೆಗೆ ಹುರಿದು ತೆಗೆದಿಟ್ಟುಕೊಳ್ಳಿ. ಊಟ ಮಾಡುವ ಹೊತ್ತಿಗೆ ೨ ಈರುಳ್ಳಿಯನ್ನು ಸಣ್ಣಗೆ ಹಚ್ಚಿ. ೫ ಹಸಿ ಮೆಣಸಿನಕಾಯನ್ನು ಚಿಕ್ಕದಾಗಿ ಹಚ್ಚಿರಿ. ಸ್ವಲ್ಪ ತೆಂಗಿನಕಾಯಿ ತುರಿಯೊಂದಿಗೆ, ಹಚ್ಚಿದ ಈರುಳ್ಳಿ, ಹಸಿಮೆಣಸಿನಕಾಯನ್ನು ಮತ್ತು…
ಲೇಖಕರು: venkatesh
ವಿಧ: ಬ್ಲಾಗ್ ಬರಹ
August 27, 2022
ಒಂದು ಕಾಲದಲ್ಲಿ ಭಾರತದ ಹಿಂದಿ ಫಿಲಂ ಕ್ಷೇತ್ರದಲ್ಲಿ ಕೇವಲ (ಬದ್ರುದ್ದೀನ್ ಜಮಾಲುದ್ದೀನ್ ಕಾಝಿ), ಜಾನಿವಾಕರ್ ಎಂಬ  ಕಮೆಡಿಯನ್ ಒಬ್ಬನ ಮೇಲಿನ  ಅಭಿಮಾನಿಗಳ ಪ್ರೀತಿಯ  ಮಹಾಪೂರದ ಸಹಾಯದಿಂದ  ದಿಗ್ಗಜ ನಿರ್ಮಾಪಕರು, ನಿರ್ದೇಶಕರು ಹಿಂದಿ  ಚಿತ್ರಗಳನ್ನು ನಿರ್ಮಿಸುತ್ತಿದ್ದ  ಪ್ರಸಂಗ, ಬ್ರಿಟಿಷ್ ಹಾಸ್ಯ ನಟ  ಚಾರ್ಲಿ ಚಾಪ್ಲೆನ್  ನಂತರ ಜಾನಿವಾಕರ್ ರವರ ಹೆಸರು ಕೇಳಬರುತ್ತದೆ,  ಎಂದು ಹೇಳಿದರೆ, ಅತಿಶಯೋಕ್ತಿಯಾಗದು, ಎಂದು ನನ್ನ ಅಭಿಮತ. ಕಂಪ್ಯೂಟರ್ ನಲ್ಲಿ  ಗೂಗಲ್ ಯಂತ್ರಕ್ಕೆ  ಹುಡುಕಲು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 27, 2022
"ಕಿತ್ತೂರು ರಾಣಿ ಚೆನ್ನಮ್ಮಳ ಉನ್ನತೋನ್ನತ ಬಹುಮುಖಿ ವ್ಯಕ್ತಿತ್ವದ ಆಯಾಮವನ್ನು ಬಿಂಬಿಸುವ ಕಥೆ, ಕಾದಂಬರಿ, ಕವನ, ಲೇಖನ, ಸಂಶೋಧನ ಗ್ರಂಥ ಸಾಕಷ್ಟು ಬಂದಿದೆ. ಅವುಗಳಿಗೆ ಮುಡಿಯ ಮಾಣಿಕ್ಯವಾಗಿ 'ಸ್ವಾತಂತ್ರ್ಯದ ಕಿಚ್ಚು ಕಿತ್ತೂರು ರಾಣಿ ಚೆನ್ನಮ್ಮ' ಎಂಬ ಬೃಹತ್ ಚಾರಿತ್ರಿಕ ಕಾದಂಬರಿಯನ್ನು ತಂಗಿ ವಿಜಯಲಕ್ಷ್ಮಿ ಶಿವಕುಮಾರ ಕೌಟಗೆ ರಚಿಸಿದ್ದಾರೆ. ದಾನಚಿಂತಾಮಣಿ ಅತ್ತಿಮಬ್ಬೆ, ಪಟ್ಟ ಮಹಿಷಿ ಶಾಂತಲಾ ದೇವಿ, ತಪಸ್ವಿನಿ ಅಕ್ಕಮಹಾದೇವಿ, ತೇಜಸ್ವಿನಿ ಕೆಳದಿ ಚೆನ್ನಮ್ಮ ಮೊದಲಾದವರ ಉದಾತ್ತ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
August 26, 2022
ಹಿಂದಿ ಚಲನಚಿತ್ರ ವಲಯದ ದಿಗ್ಗಜ ಸಂಗೀತಕಾರರಲ್ಲಿ 'ಜನಾಬ್ ನೌಶಾದ್  ಆಲಿ'ಯವರೂ ಒಬ್ಬ ಪ್ರಮುಖರೆಂದು ಸಿನಿಮಾ ತಜ್ಞರ ಅಂಬೋಣ.  ಅವರನ್ನು ಒಂದು ಸಂಗೀತದ ಪಾಠಶಾಲೆ/ಸಂಸ್ಥೆ,  ಎಂದು ಪರಿಗಣಿಸುವವರಿಗೇನೂ ಸಂಖ್ಯೆಯಲ್ಲಿ  ಕಡಿಮೆ ಇಲ್ಲ. ತಮ್ಮ ಚಲನ ಚಿತ್ರದ  ಗೀತೆಗಳಿಗೆ ಗಾಯಕ ಕಲಾವಿದರನ್ನು ಆರಿಸುವಾಗ ಅವರು ಸರಿಯಾದ ನ್ಯಾಯವನ್ನು ಕೆಲವರಿಗೆ ಒದಗಿಸಲಿಲ್ಲ. ಎನ್ನುವ ಮಾತು ಸಮಗ್ರವಾಗಿ  ಕೇಳಿಬರುತ್ತದೆ. ಒಂದು ಉತ್ಯುತ್ತಮ ಉನ್ನತ ಸ್ಥಾನದಲ್ಲಿರುವ ಸಮಯದಲ್ಲಿ ಕೆಲವಾರು ಇಂತಹ ಅಹಿತಕರ ಘಟನೆಗಳು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 25, 2022
ತೆಲುಗು ಭಾಷೆಯಲ್ಲಿ ಕರುಣಾಕರ್ ಸುಗ್ಗುನ ಬರೆದಿರುವ 'ಲೋಕ ಮೆರುಗನಿ ಏಸು ಮರೋರೂಪಂ' (Other side of Jesus) ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ ಬೆಂಗಳೂರಿನ ಎಸ್. ಅಶ್ವತ್ಥ ನಾರಾಯಣ ಇವರು. ವಿಶ್ವ ಹಿಂದು ಪರಿಷದ್ ಇದರ ಧರ್ಮ ಪ್ರಸಾರ ವಿಭಾಗದ ಕೃಷ್ಣಮೂರ್ತಿ ಇವರು ಪುಸ್ತಕದ ಮೊದಲ ಮಾತು ಬರೆದಿದ್ದಾರೆ. ಅದರಲ್ಲಿ ಅವರು "ಕ್ರೈಸ್ತ ಮತ ವಿಚಾರಗಳಲ್ಲಿನ ಅಸಂಬದ್ಧತೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದವರು ಕರುಣಾಕರ ಸುಗ್ಗುನರವರು. ತೆಲುಗು ಭಾಷೆಯ ಓದುಗರಿಗೆ ಅವರು ಪರಿಚಿತರು, ಅಷ್ಟೇ ಅಲ್ಲ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 23, 2022
'ಫ್ಲವರ್ಸ್ ಆಫ್ ಹಿರೋಶಿಮಾ' ಕಾದಂಬರಿಯ ಮೂಲಕ ಜಗತ್ತಿನ ೩೯ ಭಾಷೆಗಳಿಗೆ ಅನುವಾದವಾಗಿರುವ ಈ ಕಾದಂಬರಿಯು, ಕನ್ನಡಕ್ಕೆ ಬಹಳ ತಡವಾಗಿಯಾದರೂ ಡಾ. ವಿಜಯ್ ನಾಗ್ ಅವರಿಂದ ಬರುತ್ತಿರುವುದು ಬಹಳ ಸಂತೋಷದ ವಿಷಯ. ಅಣುದಾಳಿ, ವಿಕಿರಣದ ಪರಿಣಾಮದಿಂದ ಉಂಟಾದ ನೋವು, ಹತಾಷೆಗಳನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಕಾದಂಬರಿಗಳ ಪಟ್ಟಿ ಹೇಗೆ ದೊಡ್ಡದಿದೆಯೋ, ಹಾಗೆಯೇ ಮನುಷ್ಯ ಪ್ರಕೃತಿಯ ಮೇಲೆ, ಕೊನೆಗೆ ತನ್ನೊಡನೆ ಇರುವ ಮನುಷ್ಯನ ಮೇಲೆಯೇ ಏಕಸ್ವಾಮ್ಯತೆಯನ್ನು ಸ್ಥಾಪಿಸಲು ಹವಣಿಸಿ ಮಾಡಿಕೊಂಡ ಅಪಾಯಗಳ…