ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 25, 2022
ಲೇಖಕ ಗಿರಿರಾಜ ಬಿ ಎಂ ಅವರ ಕಥಾ ಸಂಕಲನ ಸ್ನೇಕ್ ಟ್ಯಾಟು. ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ೨೨ ವರ್ಷಗಳ ನಡುವೆ, ಆಗಾಗ ಬರೆದ ಇಲ್ಲಿನ ಕಥೆಗಳು ನನ್ನ ಬದುಕು, ಬದಲಾವಣೆ, ಬೆಳವಣಿಗೆಗೆ ಸಾಕ್ಷಿಯಾಗಿವೆ. ದಾಖಲೀಕರಣದ ವಿಷಯದಲ್ಲಿ ತುಂಬ ಸೋಂಬೇರಿಯಾಗಿರುವುದರಿಂದ ಹಲವಾರು ಕಥೆಗಳು ಕಳೆದುಹೋಗಿವೆ. ಅದ್ಹೇಗೊ ಇಲ್ಲಿನವು ಉಳ್ಕೊಬಿಟ್ಟವು. ಈಗ ಓದಿದರೆ ಕೆಲವು ವಾಕ್ಯಗಳು, ಈಡಿಯಂಗಳು ಬಾಲಿಶ ಅನಿಸಿದರೂ ಅವು ಅವತ್ತಿನ ನನ್ನ ನಿಜ ಅನಿಸಿಕೆಗಳಾದ್ದರಿಂದ, ಅದನ್ನು ತಿದ್ದಿ ಹಾಳೆ ಹಾಳು ಮಾಡುವ ಕೆಲಸಕ್ಕೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 21, 2022
‘ಫಾಸಿಗೆ ಸಾಕ್ಷಿ' ಎಂಬ ಕಾದಂಬರಿಯನ್ನು ಬರೆದವರು ಮಾಲತಿ ಮುದಕವಿ ಇವರು. ಮಾಲತಿಯವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಬೆಳಕು ಕಂಡಿವೆ. ಹಲವಾರು ಬಹುಮಾನ, ಪುರಸ್ಕಾರಗಳೂ ಲಭಿಸಿವೆ.  ಮಾಲತಿ ಮುದಕವಿ ಅವರ ಕಾದಂಬರಿ ‘ಫಾಸಿಗೆ ಸಾಕ್ಷಿ’ಯಲ್ಲಿ ಓರ್ವ ವ್ಯಕ್ತಿ ಜೀವನದಲ್ಲಿ ಒಮ್ಮೊಮ್ಮೆ ಅತ್ಯಂತ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ಒಬ್ಬ ಮರಣದಂಡನೆ ಕೊಡುವ ವ್ಯಕ್ತಿಯನ್ನು ಭೆಟ್ಟಿಯಾಗುವ ಯೋಗವು ನನಗೆ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
October 20, 2022
ಎಂ.ಎಸ್. ಶ್ರೀರಾಮ್ ಅವರ ಎಂಟು ಸಣ್ಣಕತೆಗಳ ಸಂಗ್ರಹ “ತೇಲ್ ಮಾಲಿಶ್.” ಇದು ಅವರ ಮೂರನೆಯ ಕಥಾಸಂಕಲನ.  ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1962ರಲ್ಲಿ ಜನಿಸಿದ ಶ್ರೀರಾಮ್ ಉಡುಪಿ, ಬೆಂಗಳೂರು, ಮೈಸೂರು, ಗುಜರಾತಿನ ಆಣಂದ್‌ನಲ್ಲಿ ವ್ಯಾಸಂಗ ಮಾಡಿದವರು. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯಲ್ಲಿ ಎರಡು ವರುಷ ಕೆಲಸ ಮಾಡಿದರು. ಅನಂತರ ಆಣಂದದ ಗ್ರಾಮೀಣ ನಿರ್ವಹಣಾ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು. ಈ ಎಲ್ಲ ಅನುಭವಗಳಿಂದ…
ವಿಧ: ಪುಸ್ತಕ ವಿಮರ್ಶೆ
October 20, 2022
ಕಾಡು ಎರಡು ಅಕ್ಷರದ ಈ ಶಬ್ದ ಹಲವರಿಗೆ ಪ್ರೀತಿ. ಇದರ ಗರ್ಭದಲ್ಲಿ ಅಡಗಿರುವ ವಿಸ್ಮಯ ಅನನ್ಯ. ಇಂತಹ ಕಾಡಿನ ಮಧ್ಯೆ ಇದ್ದುಕೊಂಡು ನೈಸರ್ಗಿಕ ಜೀವನಶೈಲಿ ಮೂಲಕ ಆರೋಗ್ಯಕರ ಬದುಕು ಸಾಗಿಸುತ್ತಿರುವ ಬುಡಕಟ್ಟು ಜನಾಂಗವೆಂದರೆ ಕುಣಬಿ ಸಮುದಾಯ. ಒಂದರ್ಥದಲ್ಲಿ ಹೇಳಬೇಕೆಂದರೆ ನಿಜವಾದ ಮಣ್ಣಿನ ಮಕ್ಕಳು ಎಂದು ಕರೆಯಿಸಿಕೊಳ್ಳಲು ಯೋಗ್ಯತೆ ಹೊಂದಿರುವವರು. ಕಾಡಿನ ತಪ್ಪಲಲ್ಲಿ ಇದ್ದರೂ ಸ್ಪಂದನಶೀಲ ಗುಣದೊಂದಿಗೆ ಸಾಂಸ್ಕೃತಿಕ ಸಿರಿವಂತಿಕೆ, ಪಾರಂಪರಿಕ ಜ್ಞಾನದ ಭಂಡಾರವನ್ನೇ ಹೊತ್ತ ಅನೇಕ ಸಮುದಾಯಗಳು ನಮ್ಮ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 18, 2022
ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಜೀವನ ಚರಿತ್ರೆಯನ್ನು ಲೇಖಕರಾದ ಬೆ ಗೋ ರಮೇಶ್ ಅವರು ಸೊಗಸಾಗಿ, ಸಂಕ್ಷಿಪ್ತವಾಗಿ ‘ಶ್ರೀ ರಾಘವೇಂದ್ರ ಚರಿತ್ರೆ' ಎಂಬ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರು ತಮ್ಮ ಮುನ್ನುಡಿಯಲ್ಲಿ ರಾಘವೇಂದ್ರ ತೀರ್ಥರವರೆಗಿನ ೧೭ ಮಂದಿ ಯತಿಯರ ಹೆಸರು ಮತ್ತು ಕಾಲಾವಧಿಯನ್ನು ನೀಡಿದ್ದಾರೆ. ಶ್ರೀ ರಾಘವೇಂದ್ರ ತೀರ್ಥರ ಬಳಿಕ ಇಪ್ಪತ್ತು ಯತಿಗಳು ಶ್ರೀಮಠದ ಗುರುಗಳಾಗಿ ಹೋಗಿದ್ದಾರೆ. ಅವರ ಮುನ್ನುಡಿಯ ಪ್ರಮುಖಾಂಶ ಹೀಗಿದೆ  “ಶ್ರೀ ಮನ್ಮಧ್ವಾಚಾರ್ಯರ ವೇದಾಂತ ಸಾಮ್ರಾಜ್ಯ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
October 17, 2022
ಕಿಶೋರ್ ಕುಮಾರ್ ಇನ್ನೂ ಹೆಸರುವಾಸಿಯಾಗದ ಗಾಯಕನಾಗಿದ್ದ  ಸಮಯದಲ್ಲಿ ಅವರ ಪ್ರಾವೀಣ್ಯತೆಯನ್ನು ಮೊಟ್ಟಮೊದಲು ಗುರುತಿಸಿ  ಬ್ರೇಕ್ ಕೊಟ್ಟು ಸಹಾಯಮಾಡಿದರು. ಲತಾ  ಮಂಗೇಶ್ಕರ್  ಅವರನ್ನು ಮಹಲ್  ಚಿತ್ರದಲ್ಲಿ ಹಾಡಲು ವ್ಯವಸ್ಥೆಮಾಡಿ, ಅವರೊಬ್ಬ  ಮೇರುಗಾಯಕಿಯಾಗಿ ಹೊರಹೊಮ್ಮಲು ನೆರವಾದರು. ದುಖಃದ  ವಿಷಯವೆಂದರೆ ಖೇಮ್ ಚಂದ್ ಪ್ರಕಾಶ ರ  ಹೆಸರು ಯಾರಿಗೂ ನೆನಪಿನಲ್ಲಿಯೂ ಉಳಿಯದಿರುವುದು. ಹಿಂದಿ ಚಲಚಿತ್ರರಂಗಕ್ಕೆ ಅವರ  ಕೊಡುಗೆ ಅನುಪಮ, ಹಾಗೂ ಮರೆಯಲಾರದ್ದು  ! 'ಖೇಮ್ ಚಂದ್ ಪ್ರಕಾಶ್,'  ೧೯೦೭…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 15, 2022
‘ತಿರುಕ್ಕುರಳ್' ಪುಸ್ತಕವು ಕನ್ನಡದಲ್ಲಿ ರಾಧಾಕೃಷ್ಣ ಇವರಿಂದ ಭಾವಾನುವಾದಗೊಂಡು ಹೊರಬಂದಿದೆ. ಈ ಪುಸ್ತಕವು ‘ಅರಿವಿನೆಡೆಗೆ ಅರಿವಿನ ಹೆಜ್ಜೆ...' ಎಂದು ಮುಖಪುಟದಲ್ಲಿ ಮುದ್ರಿಸಿದ್ದಾರೆ. ಪುಸ್ತಕವನ್ನು ಮಹಾ ದಾರ್ಶನಿಕ ಕವಿ ತಿರುವಳ್ಳವವರಿಗೆ ಅರ್ಪಣೆ ಮಾಡಲಾಗಿದೆ.  ರಾಧಾಕೃಷ್ಣರು ತಮ್ಮ ಅನುಭವವನ್ನು ‘ಬಿಟ್ಟೆನೆಂದರೂ ಬಿಡದೀ ಮಾಯೆ' ಎಂಬ ಲೇಖನದಲ್ಲಿ ಹಂಚಿಕೊಂಡಿರುವುದು ಹೀಗೆ - ಹನ್ನೆರಡು ವರ್ಷಗಳ ಹಿಂದೆ ನನ್ನ ಗೆಳೆಯ ರಾಜೇಶ್  ಶೇಟ್ ರೊಂದಿಗೆ ತಿರುವನಂತಪುರ ಮತ್ತು ಕನ್ಯಾಕುಮಾರಿಯ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 13, 2022
‘ಪುರಾಣ ಕನ್ಯೆ' ಕಾದಂಬರಿಯು ಇಂತದ್ದೊಂದು ಅನನ್ಯವೂ ವಿಶಿಷ್ಟವೂ ಆದ ಸಾಂಸ್ಕೃತಿಕ ಲೋಕವನ್ನು ಸ್ಥಳೀಯ ಭಾಷೆಯಲ್ಲಿ ಕಟ್ಟಿಕೊಡುತ್ತಾ ಜನರ ದೈವವೊಂದರ ಕಲ್ಪನೆ ಇನ್ನಷ್ಟು ಸ್ಪುಟಗೊಳ್ಳುವಂತೆ ಮಾಡುತ್ತದೆ. ಈ ದೈವಗಳು ಹಿಂದೂ ಮುಸ್ಲಿಂ ವ್ಯತ್ಯಾಸ ಮಾಡುವುದಿಲ್ಲ ಎನ್ನುತ್ತಾರೆ ಲೇಖಕ ಪುರುಷೋತ್ತಮ ಬಿಳಿಮಲೆ. ಅವರು ಕಾ.ತ ಚಿಕ್ಕಣ್ಣ ಅವರ ‘ಪುರಾಣ ಕನ್ಯೆ’ ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ “ಒಂದು ರೀತಿಯಿಂದ, “ಪುರಾಣ ಕನ್ಯೆ” ಹೆಸರಿನ ಈ ಕಾದಂಬರಿಯು ಚಿಕ್ಕಣ್ಣನವರ ‘ನಿಶಬುದೆಡೆಗೆ”…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 13, 2022
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ರೆಕಾರ್ಡ್ ಮಾಡಿಕೊಂಡ ನನ್ನ ಹಾಡುಗಳ ಅಂತರ್ಜಾಲ ಕೊಂಡಿಯನ್ನು ಕೂಡ ಕೊಟ್ಟಿದ್ದೇನೆ . ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.     67) ಮೂಲ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
October 13, 2022
ಎಚ್. ಎಸ್. ವೆಂಕಟೇಶಮೂರ್ತಿಯವರ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಪುಟ "ಅನಾತ್ಮ ಕಥನ.” ಇವನ್ನು ಓದುತ್ತಿದ್ದಂತೆ, ಇವು ನಮ್ಮದೇ ಅನುಭವ ಅನಿಸುತ್ತದೆ. ಹಾಗಿದೆ ಎಚ್.ಎಸ್. ವಿ. ಅವರ ಮನಮುಟ್ಟುವ ಮತ್ತು ಹೃದಯಕ್ಕೇ ಇಳಿಯುವ ಶೈಲಿ. ಜೊತೆಗೆ ಈ ಬರಹಗಳಿಗಾಗಿ ಅವರು ತಮ್ಮ ಅನುಭವದಿಂದ ಆಯ್ದುಕೊಂಡ ಸಂಗತಿಗಳೂ ಅಂಥವೇ. ಕನ್ನಡಿಗರ ಮೆಚ್ಚಿನ ಕವಿಗಳಲ್ಲಿ ಒಬ್ಬರಾಗಿರುವ ಎಚ್.ಎಸ್.ವಿ. ಅವರು ಜನಿಸಿದ್ದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೋದಿಗ್ಗೆರೆಯಲ್ಲಿ. ಆರಂಭದ ಮೂವತ್ತು ವರುಷ ಅವರು…