ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 10
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.
ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ರೆಕಾರ್ಡ್ ಮಾಡಿಕೊಂಡ ನನ್ನ ಹಾಡುಗಳ ಅಂತರ್ಜಾಲ ಕೊಂಡಿಯನ್ನು ಕೂಡ ಕೊಟ್ಟಿದ್ದೇನೆ . ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.
67) ಮೂಲ ಹಾಡು - ಆಪ ಕೀ ನಜರೋನೆ ಸಮಝಾ
ನನ್ನ ಅನುವಾದ -
ನಿನ್ನ ಕಣ್ಣು ನನ್ನ ತಿಳಿದವು
ನಿನ್ನ ಪ್ರೇಮಕೆ ಅರ್ಹಳು
ಎದೆಯ ಬಡಿತ ಮೇರೆ ಮೀರಿದೆ
ನನಗೆ ದಕ್ಕಿದೆ ಗಮ್ಯವು
ಹೌದು ನನಗೆ ಒಪ್ಪಿಗೆ
ನಿನ್ನ ಈ ನಿರ್ಣಯ
ಹೇಗೆ ಸ್ತುತಿಸಲಿ ದೇವನ
ಆತ ಇರುವ ದಯಾಮಯ
ನಿನ್ನ ಬಾಳಲಿ ಸೇರಿಸಿದೆ ನೀ
ಮುಗುಳು ನಗೆಯ ಬೀರುತ
ನಿನ್ನ ಗಮ್ಯವು ನಾನು ಇರುವೆ
ನೀನೇ ನನ್ನ ಗಮ್ಯವು
ಏಕೆ ಹೆದರಲಿ ಬಿರುಗಾಳಿಗಳಿಗೆ
ನೀನೇ ಇರಲು ಆಸರೆ
ಹೇಳಿಬಿಡಿರಿ ಬಿರುಗಾಳಿಗಳಿಗೆ
ನನಗೆ ಸಿಕ್ಕಿದೆ ಆಸರೆ
68) ಮೂಲ ಹಾಡು - ಮೋಹೆ ಭೂಲ ಗಯೆ ಸಾವರಿಯಾ
ನನ್ನ ಅನುವಾದ -
ನನ್ನ ಮರೆತೇ ಬಿಟ್ಟನು ಏನೋ , ಅವನು
ನನ್ನ ಮರೆತೇ ಬಿಟ್ಟನು ಏನೋ
ಬರತೀನಿ ಅಂದ, ಬರಲಿಲ್ಲ ಇನ್ನೂ
ಬಂದು ಕೇಳಲಿಲ್ಲ ಕ್ಷೇಮವನು
ಹೃದಯಕೆ ಏಕೆ ವಿರಹವ ಕೊಟ್ಟ
ಕೆಡವಿದ ಏಕೆ ಅರಮನೆ ಕಟ್ಟಿ
ಆಸೆಯ ಕೊಟ್ಟು ಆ ನಿರ್ದಯನು
ಕಣ್ಣ ತಪ್ಪಿಸುವ ಏಕೋ
ಕಣ್ಣು ನುಡಿವವು ಕಂಬನಿ ತುಂಬಿ
ಪ್ರೇಮವು ಕನಸು ಎಂದರಿವಾಯ್ತು
ಪ್ರೇಮವು ಸುಳ್ಳು, ಪ್ರೀತಿಯು ಸುಳ್ಳು
ಸುಳ್ಳು ಈ ಲೋಕವೆಲ್ಲ
69)ಮೂಲ ಹಾಡು - ತುಮ್ಹೆ ದೇಖತೀ ಹೂಂ , ಲಗತಾ ಹೈ ಜೈಸೆ
ನನ್ನ ಅನುವಾದ -
ನಿನ ನೋಡಿದಾಗ ಅನಿಸುವುದು ಹೀಗೆ
ಯುಗಯುಗಗಳಿಂದ ನಾ ಬಲ್ಲೆ ನಿನ್ನ
ನೀ ಕಡಲು ಆದರೆ
ನೀ ಸೇರೋ ನದಿಯು ನಾನು
ನೀ ಮುಗಿಲು ಆದರೆ ನಾ ನಲಿವ ನವಿಲು
70)ಮೂಲ ಹಾಡು - ಭೂಲ ಗಯಾ ಸಬ ಕುಛ
ಹಿಂದಿ ಚಲನಚಿತ್ರ - ಜೂಲೀ
ನನ್ನ ಅನುವಾದ -
ಮರೆಯಿತು ಎಲ್ಲ - ಹೂಂ,
ಮರೆಯಿತು ಎಲ್ಲ
ನೆನಪಿಲ್ಲ ಏನೂ
ಒಂದು ಸಂಗತಿ ಮರೆಯೆ
ಜೂಲಿ , ಪ್ರೀತಿಸುವೆ ನಿನ್ನೇ
(/ಜೂಲಿ , ಪ್ರೀತಿಸುವಳು ನಿನ್ನೇ)
ಅಷ್ಟೊಂದು ದೂರ ನೀ ಹೋಗಬೇಡ
ಸನಿಯ ಬರೋದು ಆದೀತು ಕಠಿಣ
ಇಷ್ಟೊಂದು ಸನಿಹ ನೀ ಬರಲೇಬೇಡ
ದೂರ ಹೋಗೋದು ಆದೀತು ಕಠಿಣ ....
71) ಮೂಲ ಹಾಡು - ಯೆಹ್ ದಿಲಿ ಔರ್ ಉನಕೀ ನಿಗಾಹೊಂ ಕೆ ಸಾಯ
ನನ್ನ ಅನುವಾದ -
ಅವನ ಕಣ್ಣ ನೋಟ
ನನ್ನ ಮನದ ಆಸೆ
ಅವನ ತೋಳ ಸೆರೆಯೇ
ನನ್ನ ಪರಮ ಧ್ಯೇಯ
ಗಿರಿಶಿಖರಕೆಲ್ಲ ಸೂರ್ಯ ಕಿರಣ ಚುಂಬನ
ನದಿ ನೀರ ಜತೆಗೆ ತಂಗಾಳಿ ಸರಸ
ಜಗದ ತುಂಬ ಎಲ್ಲ
ಬಯಕೆಗಳದೇ ಉತ್ಸವ
72) ಮೂಲ ಹಾಡು - ಕಾಕರೂ ಸಜನೀ
ಹಿಂದಿ ಚಲನಚಿತ್ರ - ಸ್ವಾಮೀ ದಾದಾ
ನನ್ನ ಅನುವಾದ -
ಮಾಡಲೀ ಏನೇ ? ಬರಲಿಲ್ಲ ಆತ !
ಓ ಸರಿಯಿತು ಹಗಲು, ಆಯಿತು ಸಂಜೆ
ಇರುಳು ಕೂಡ ಬಂದಿತು ನೋಡೇ
ಈ ಜಗವೆಲ್ಲ ನಿದ್ದೆಯ ವಶವು
ನನಗೋ ಬಾರದು ನಿದ್ದೆ
ಗಾಬರಿ ನನಗೆ , ಹೆದರುವೆ ನಾನು
ಆತ ಬರುವುದೇ ಇಲ್ಲವೋ
ರಾಧೆಯ ಈ ಕರೆ
ಕೇಳಿದೆ ಕೃಷ್ಣಗೆ
ಬರಲಿಲ್ಲ ಆತ
ಮಾಡಲೀ ಏನೇ ? ಬರಲಿಲ್ಲ ಆತ !
73)ಮೂಲ ಹಾಡು - ಆಜ ಸೆ ತೇರಿ ಸಾರಿ ಗಲಿಯಾ
ನನ್ನ ಅನುವಾದ -
ಇಂದಿನಿಂದ ಎಂದೂ ನಿನ್ನ ದಾರಿ ನಿನ್ನದಾಯಿತು
ಇಂದಿನಿಂದ ನನ್ನ ಮನೆಯೂ ನಿನ್ನದಾಯಿತು
ಇಂದಿನಿಂದ ನನ್ನ ಎಲ್ಲ ಸುಖ ನಿನ್ನದಾದವು
ಇಂದಿನಿಂದ ನಿನ್ನ ಎಲ್ಲ ದುಃಖ ನನ್ನವಾದವು
74)ಮೂಲ ಹಾಡು - ಟೈಟಾನಿಕ್ ಇಂಗ್ಲೀಷ್ ಚಿತ್ರದ ಶೀರ್ಷಿಕೆ ಗೀತೆ
ನನ್ನ ಅನುವಾದ -
ಪ್ರತಿ ರಾತ್ರಿ ನಿನ್ನ ನೆನಪು
ತೆರೆತೆರೆಯಾಗಿ ತಲುಪುವುದು
ನನ್ನ ಮನದ ತೀರಕೆ
ನೀ ಬರುವೆ ಕನಸಲ್ಲಿ
ನನ್ನ ಬಳಿಗೆ
ನೀ ಇರಲು ನನ್ನ ಜತೆಗೆ
ಇನ್ನೆಲ್ಲಿ ಬೇಸರ ನನಗೆ
ಪ್ರತಿ ಬೆಳಗು ನಿನ್ನದೇನೆ
ಪ್ರತಿ ಸಂಜೆ ನಿನ್ನದೇ
ದೂರ ಇರಲಿ ಇಲ್ಲ ಸನಿಯ
ಎದೆ ಕೇಳುವುದು ನಿನ್ನ ದನಿಯ
ನಾನು ಕಣ್ಣು ಮುಚ್ಚಿದರೂನೂ
ಕಾಣುವೆ ನೀ ತಪ್ಪದೇ
ಮೊದಲ ಬಾರಿ ನಂಗೆ ಆಯ್ತು
ನಿನ್ನೊಂದಿಗೇ ಪ್ರೀತಿ
ಬಾರಿ ಬಾರಿ ಆಗುವುದು
ಅದು ಪ್ರೀತಿಯೇ ಅಲ್ಲ,
ನೀ ಇರಲು ನನ್ನ ಜತೆಗೆ
ಇನ್ನೆಲ್ಲಿ ಬೇಸರ
ಪ್ರತಿ ಬೆಳಗು ಪ್ರತಿ ಸಂಜೆ
ನಿನ್ನದೇನೆ ಧ್ಯಾನವು
ಮತ್ತೆ ಸೇರುವೆವು ನಾನು ನೀನು
ತೊಡೆದೆಲ್ಲ ಬಂಧಗಳ
ದಾಟಿ ಎಲ್ಲ ತಡೆಗಳನು
ಪ್ರತಿ ರಾತ್ರಿ ನಿನ್ನ ನೆನಪು
ತೆರೆತೆರೆಯಾಗಿ ತಲುಪುವುದು
ನನ್ನ ಮನದ ತೀರಕೆ
75)ಮೂಲ ಹಾಡು - ತೂ ಜೋ ಮೇರೆ ಸುರ ಮೆ ಸುರ ಲಗಾಲೆ
ನನ್ನ ಅನುವಾದ
ನೀನು ನನ್ನ ಸ್ವರಕೆ
ಸ್ವರವ ಸೇರಿಸಿ
ಜತೆಗೆ ಹಾಡೆ
ಈ ಬಾಳಿದೂ ಆಗ ಸಾರ್ಥಕ
ನಲ್ಲ ನಿನ್ನ ಮನಕೆ
ನನ್ನ ಮನವು
ಸೇರಿದಾಗ
ನನ್ನ ತಪವಿದೂ ಆಗ ಸಾರ್ಥಕ
76) ಮೂಲ ಹಾಡು - ಬಹಾರೊಂ ಫೂಲ ಬರಸಾವೋ
ನನ್ನ ಅನುವಾದ -
ತಂಗಾಳಿ ಹೂವ ನೀ ಹಾಸು
ಅದೋ ಬಂದಳು ನನ ನಲ್ಲೆ
ತಂಗಾಳಿ ಸಂಗೀತವ ಹಾಡು
ಅದೋ ಬಂದಳು ನನ ನಲ್ಲೆ
77)ಮೂಲ ಹಾಡು - ದೇಶಾ ಏಕ ಖ್ವಾಬ
ಹಿಂದಿ ಚಲನಚಿತ್ರ - ಸಿಲ್ಸಿಲಾ
ನನ್ನ ಅನುವಾದ -
ನಿನ್ನ ಕಂಡ ದಿನವೆ ನನ್ನ ಬಾಳು ಬದಲಿತು
ನನ್ನ ಮನದ ಲೋಕದಲ್ಲಿ ಪ್ರೇಮ ಬೆಳಗಿತು
78) ಮೂಲ ಹಾಡು - ಜಿಂದಗೀ ಕಿತನೀ ಖೂಬಸೂರತ ಹೈ
ನನ್ನ ಅನುವಾದ -
ಬದುಕಿದು ಎನಿತು ಸುಂದರವು
ನಿನ್ನ ಆಗಮನ ಆವಶ್ಯಕವು
79) ಮೂಲ ಹಾಡು - ದಿಲ ಸೆ ದಿಲ ಮಿಲನೇ ಕಾ
ನನ್ನ ಅನುವಾದ -
ಎರಡು ಹೃದಯ ಸೇರಲು
ಏನೋ ಕಾರಣ ಬೇಕು
ಏನೂ ಕಾರಣ ಇಲ್ಲದೆ
ಇಲ್ಲಿ ಏನೂ ಆಗೋದಿಲ್ಲ
ಮೂಲ ಹಾಡು - ಹೇ ನಿಲೆ ಗಗನ ಕೆ ತಲೇ
ನನ್ನ ಅನುವಾದ -
ಹೀ ನೀಲೀ ಆಕಾಶದಡಿ
ಭೂಮಿಯ ಬೆಳೆ ಪ್ರೀತಿ || ಪ ||
ಇಂತಹ ಸ್ಥಳದಿ ಬೆಳಗು ಸುಂದರ
ಸುಂದರ ಸಂಜೆ ಕೂಡ|| ಅ.ಪ. ||
ಇಬ್ಬನಿ ಹನಿಯು ಹೂಗಳ ಮೇಲೆ
ಮುತ್ತಂತೆ ಶೋಭಿಸಿದೆ || 1 ||
ಹರಡಿರುವ ಕೊಂಬೆ ಮರಗಳ ಜತೆಗೆ
ಸರಸವ ಆಡುತಿವೆ || 2 ||
ಓಡುವ ನದಿಯು ಇನಿಯನ ಅರಸಿ
ಕಡಲತ್ತ ಧಾವಿಸಿದೆ || 3 ||
81)ಮೂಲ ಹಾಡು - ಆಜ್ ಕಲ ತೇರೆ ಮೇರೆ ಪ್ಯಾರ್ ಕೆ ಚರ್ಚೆ
ನನ್ನ ಅನುವಾದ -
ಈಚಿನ ದಿನದಲ್ಲಿ ನಾವು ಎಲ್ಲರ ಬಾಯಲಿ
ನಮ್ಮ ಪ್ರೀತಿಯ ಕತೆಯು ತಿಳಿಯಿತು ಇಡೀ ಊರಿಗೆ
82)ಮೂಲ ಹಾಡು - ತುಂ ಸೆ ಓ ಹಸೀನಾ ಕಭೀ ಮುಹಬ್ಬತ ನ ಕರನೀ ಥೀ
ನನ್ನ ಅನುವಾದ -
ನಾ ನಿನ್ನ ಜತೆಗೆ ಎಂದೂ
ಪ್ರೀತಿ ಮಾಡೋನಿ(/ಳಿ)ರಲ್ಲಿಲ್ಲ
ಆದ್ರೆ ನನ್ನ ಹೃದಯ
ನನಗೆ ಮೋಸ ಮಾಡಿತು.
83)
ಮೂಲ ಹಾಡು - ತುಂ ಮುಜೆ ಯೂ ಭುಲಾ ನ ಪಾವೋಗೆ
ನನ್ನ ಅನುವಾದ -
ಮರೆಯಲಾರೆ ನನ್ನ ನೀ ಹೀಗೆ
ನನ್ನ ಹಾಡು ಕೇಳಿದಾಗೆಲ್ಲ
ಗುನುಗುನಿಸಿ ಜತೆಗೆ ಹಾಡುವೆ ನೀ!