ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 03, 2022
“ಚಾಣಕ್ಯ ಒಬ್ಬ ಮಹಾನ್ ಕನಸುಗಾರ. ಒಂದು ರಾಜ್ಯ ಮತ್ತು ಸಂಸಾರದಲ್ಲಿ ಸನ್ಮಾರ್ಗ ಮತ್ತು ಸಂತೋಷದ ವಿಜಯವನ್ನು ನಿರೂಪಿಸುವ ಮಹಾಕಾವ್ಯ ಮಹಾಭಾರತ. ಒಂದು ಆಶ್ಚರ್ಯಕರ ಸೂತ್ರ ನೀಡುತ್ತದೆ. “ ಸಂತೋಷದ ಮೂಲ ಧರ್ಮ". ಚಾಣಕ್ಯ ಇದನ್ನೇ ಅನುಸರಿಸಿದ್ದಾನೆ. ಚಾಣಕ್ಯನ ಬೋಧನೆಗಳು ಜೀವನಕ್ಕೆ ಸಂಪದ್ಭರಿತವಾಗಿವೆ. ಶತಮಾನಗಳೇ ಕಳೆದರೂ, ಸ್ವಾಭಾವಿಕ ಅನಾಹುತಗಳು ಈ ಗ್ರಹದ ರೂಪ ರೇಷೆಗಳನ್ನೇ ಬದಲಾಯಿಸಿದರೂ, ಅವು ಜೀವಂತ, ಅತ್ಯಾವಶ್ಯಕ ಮತ್ತು ವಿನೂತನವಾಗಿರುತ್ತವೆ. ಅಂತಹ ಬೋಧನೆಗಳು ಎಂದೂ ನಾಶವಾಗುವುದಿಲ್ಲ;…
ವಿಧ: ಪುಸ್ತಕ ವಿಮರ್ಶೆ
December 02, 2022
ಕತೆಗಾರ ತಮ್ಮಣ್ಣ ಬೀಗಾರ  ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
December 02, 2022
ಶಾಂತಾ ರಂಗಾಚಾರಿ ಮಕ್ಕಳಿಗಾಗಿ ಇಂಗ್ಲಿಷಿನಲ್ಲಿ ಬರೆದ ಐದು ಪೌರಾಣಿಕ ಕತೆಗಳ ಸಂಕಲನ ಇದು. ಇವನ್ನು ಕನ್ನಡಕ್ಕೆ ಅನುವಾದಿಸಿದವರು ಕೆ.ವಿ. ಸುಬ್ಬಣ್ಣ. ಚಂದದ ಚಿತ್ರಗಳನ್ನು ಬರೆದವರು ಪಿ. ಖೇಮರಾಜ್. ಇದರಲ್ಲಿರುವ ಕತೆಗಳು: ಸಾವಿನ ಜತೆಗೆ ಸಂಭಾಷಣೆ (ಸಾವಿತ್ರಿ - ಸತ್ಯವಾನ) ಏಳು ದಿನಗಳ ಕಾವಲು (ಪರೀಕ್ಷಿತ ರಾಜ - ತಕ್ಷಕ ಸರ್ಪ) ಉಪಮನ್ಯು ಕಲಿತ ಪಾಠ (ಗುರು ಧೌಮ್ಯ ಆಚಾರ್ಯ - ಶಿಷ್ಯ ಉಪಮನ್ಯು) ಭೀಮ ಕೊಂದ ಬಕಾಸುರ ಖಾಂಡವ ದಹನ (ಅಗ್ನಿಯ ಖಾಂಡವ ವನ ದಹನಕ್ಕೆ ಅರ್ಜುನನ ರಕ್ಷಣೆ) ಇವೆಲ್ಲ ನಮ್ಮಲ್ಲಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 01, 2022
೧೯೪೪ರಲ್ಲಿ ಪ್ರಥಮ ಮುದ್ರಣ ಕಂಡ, ಮಕ್ಕಳ ಸಾಹಿತಿ ಎಂದೇ ಖ್ಯಾತ ಪಡೆದ ಜಿ.ಪಿ.ರಾಜರತ್ನಂ ಅವರ ಕೃತಿಯೇ “ವೈಣಿಕನ ವೀಣೆ". ಡೆನ್ಮಾರ್ಕ್ ದೇಶದ ಕಿನ್ನರ ಕಥೆಗಾರ ಹಾನ್ಸ್ ಕ್ರಿಸ್ಟಿಯನ್ ಆಂಡರ್ ಸನ್ ಅವರು ಬರೆದ ಆರು ಕತೆಗಳನ್ನು ರಾಜರತ್ನಂ ಅವರು ರೂಪಾಂತರ ಮಾಡಿಕೊಟ್ಟಿದ್ದಾರೆ. ನಮ್ಮ ಜೀವನಕ್ಕೆ ಹೊಂದಿಕೊಳ್ಳುವಂತೆ ರೂಪಾಂತರ ಮಾಡಿದ್ದೇನೆ ಎಂದು ರಾಜರತ್ನಂ ಅವರೇ ತಮ್ಮ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿರುವ ಆರು ಕತೆಗಳೆಂದರೆ, ಕಡ್ಡಿ ಬುಡ್ಡಿ ಜಗಳ, ಬಲು ಚೆಲುವು ಗುಲಾಬಿ, ಒಬ್ಬ ತಾಯಿಯ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 29, 2022
ಕನ್ನಡದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರು ೧೯೫೯-೭೧ರ ಅವಧಿಯಲ್ಲಿ ಬರೆದ ಅಮೂಲ್ಯ ಕವನಗಳ ಸಂಕಲನವೇ ‘ವರ್ಧಮಾನ'. ಇದೊಂದು ಹತ್ತು ಕವನಗಳನ್ನೊಳಗೊಂಡ ಪುಟ್ಟ ಪುಸ್ತಕ. ಈ ಪುಸ್ತಕಕ್ಕೆ ಪ್ರಸ್ತಾವನೆ ಬರೆದಿದ್ದಾರೆ ಖ್ಯಾತ ಸಾಹಿತಿಗಳಾದ ಸುಮತೀಂದ್ರ ನಾಡಿಗರು. ಇವರು ತಮ್ಮ ‘ಪ್ರಸ್ತಾವನೆ' ಯಲ್ಲಿ ಬರೆದ ಕೆಲವೊಂದು ಸಾಲುಗಳು ಇಲ್ಲಿವೆ. “ಭಾರತಕ್ಕೆ ಬರಬಹುದಾದ ಅನಿಷ್ಟ, ನಮಗೆ ಬೇಕಾದ ಆದರ್ಶ ನಾಯಕರು, ತಲೆಮಾರುಗಳ ಸಂಬಂಧ ಮತ್ತು ಕ್ರಿಯಾಶಕ್ತಿಯ ಸ್ವರೂಪ- ಇವು 'ವರ್ಧಮಾನ' ಸಂಗ್ರಹದ ಕಾವ್ಯ ವಸ್ತುಗಳು.…
ವಿಧ: ರುಚಿ
November 28, 2022
ಮೊದಲು ಕುಕ್ಕರಿನಲ್ಲಿ ತೊಗರಿಬೇಳೆಯನ್ನು ಚೆನ್ನಾಗಿ ಬೇಯಿಸಿ. ನಂತರ ಬಸಳೆಯನ್ನು ಸಣ್ಣದಾಗಿ ಕತ್ತರಿಸಿ ಬೇಯಿಸಿಡಿ. ಮಿಕ್ಸಿಗೆ ತೆಂಗಿನತುರಿ, ಹುಳಿ, ಮೆಣಸು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿರಿ. ನಂತರ ಅದನ್ನು ಬೇಳೆಗೆ ಹಾಕಿ ಕುದಿಸಿರಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದಕ್ಕೆ ಎಣ್ಣೆ ಹಾಕಿದ ನೀರುಳ್ಳಿಯ ಒಗ್ಗರಣೆ ಕೊಡಿ. ಈಗ ಇಡ್ಲಿ, ದೋಸೆ ಜೊತೆ ಅಥವಾ ಊಟದ ಜೊತೆ ತಿನ್ನಲು ಬಸಳೆ ತೊಗರಿಬೇಳೆ ಗಸಿ ರೆಡಿ. -ಕೆ. ಗಾಯತ್ರಿ ಕಾಮತ್
ವಿಧ: ಪುಸ್ತಕ ವಿಮರ್ಶೆ
November 27, 2022
ಮಾಕೋನಹಳ್ಳಿ ವಿನಯ್ ಮಾಧವ್ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯವರು. ೧೯೯೬ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದರು. ೨೫ ವರ್ಷಗಳಿಂದ ಹುಟ್ಟೂರಿಗೆ ಹೋಗಿ ಕಾಫೀ ಪ್ಲಾಂಟರ್ ಆಗಿ ಕಾರ್ಯನಿರ್ವಹಿಸುವ ಕನಸು ಕಾಣುತ್ತಿದ್ದಾರೆ. ಮಾಕೋನಹಳ್ಳಿ ವಿನಯ್ ಮಾಧವ್ ಅವರ ಕಾದಂಬರಿ ‘ಸಿಕೆಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ’. ಒಕ್ಕಲೊಂದರ ಆತ್ಮಕಥೆಯೆಂಬ…
ವಿಧ: ಪುಸ್ತಕ ವಿಮರ್ಶೆ
November 26, 2022
ಮೊದಲೆಲ್ಲ ಹೆಚ್ಚೆಚ್ಚು ಪತ್ತೇದಾರಿ ಕಾದಂಬರಿ ಓದುತ್ತಿದ್ದೆ. ಅದೊಮ್ಮೆ ಅಪ್ಪ ಆತನ ಪರಿಚಯದವರಿಂದ ಎನ್.ನರಸಿಂಹಯ್ಯ ಅವರು ಬರೆದ 'ಕುಂಟ,ಕುರುಡ,ಕುರೂಪಿ' ಅಂಬುದೊಂದು ಪತ್ತೇದಾರಿ ಕಾದಂಬರಿ ಕಡ ತಂದಿದ್ದರು. ಒಮ್ಮೆ ಹಿಡಿದರೆ ಓದುವವರೆಗೆ ಬಿಡದಷ್ಟು ರೋಮಾಂಚನಕಾರಿ ಕಥಾವಸ್ತು ಅದು.ಆಮೇಲೆ ಅದೇ  ಅಭ್ಯಾಸವಾಗಿ ಅಪ್ಪನಿಗೆ ದುಂಬಾಲು ಬಿದ್ದು, ಆತನ ಗೆಳೆಯರ ಮನೆಯವರೆಗೂ ಹೋಗಿ ಬೆಳೆಗೆರೆಯ 'ಒಮಾರ್ಟಾ' ಭೈರಪ್ಪರ 'ವಂಶವೃಕ್ಷ' ಐದಾರು ಕಾದಂಬರಿ ತಂದು ಬಿಡದೆ ಓದಿದೆ. ಆಗಿನ ಕಾಲಕ್ಕೆ ಮಯೂರದಲ್ಲಿ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
November 25, 2022
ಬೆಂಗಳೂರಿನ ಸೆಂಟ್ರಲ್ ಕಾಲೇಜ್  ನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾಗ, ಎಚ್. ಆರ್. ರಾಮಕೃಷ್ಣರಾವ್ ಅವರ  ಹೆಮ್ಮೆಯ ಗುರುವರ್ಯರುಗಳಾದ, ಪ್ರೊ. ವಿ. ಸೀ,  ಪ್ರೊ. ಜಿ. ಪಿ. ರಾಜರತ್ನಂ ಮತ್ತು ಸೆಂಟ್ರೆಲ್ ಕಾಲೇಜಿನ  ಕರ್ನಾಟಕ ಸಂಘದ ಕಾರ್ಯ ವೈಖರಿಗಳನ್ನು ತಮ್ಮ ಸ್ವಂತ ಕೈಬರಹದಲ್ಲಿ  ಹೊಳಲ್ಕೆರೆಯಲ್ಲಿದ್ದ ಅವರ ತಂದೆ ಶ್ರೀ. ಎಚ್. ವಿ. ರಂಗರಾಯರಿಗೆ ಪತ್ರಬರೆದಿದ್ದರು. ರಾಮಕೃಷ್ಣರಾಯರ  ತಮ್ಮ ಎಚ್ಚಾರೆಲ್, ಆ ಪತ್ರದಲ್ಲಿ ತಮ್ಮ ಅಣ್ಣನವರು ಬರೆದ ಮಾಹಿತಿಗಳನ್ನು ಓದುಗರ  ಬಳಿ ಹಂಚಿಕೊಂಡಿದ್ದಾರೆ…
ವಿಧ: ಪುಸ್ತಕ ವಿಮರ್ಶೆ
November 25, 2022
ಕಸ್ತೂರ್ ಬಾ ರ ಅಂತಿಮ ಸಂಸ್ಕಾರದೊಂದಿಗೆ ಆರಂಭಗೊಳ್ಳುವ ಕಾದಂಬರಿ flashback ತಂತ್ರದ ಮೂಲಕ ಕಸ್ತೂರ್ ಬಾ ಹಾಗೂ ಗಾಂಧಿಯವರ ಬಾಲ್ಯದ ಸುಂದರ ಸನ್ನಿವೇಶಗಳನ್ನು ಚಿತ್ರಿಸುತ್ತಾ, ಮದುವೆ, ಮಕ್ಕಳು, ವೃತ್ತಿ, ಹೋರಾಟಗಳ ಹಾದಿ ತುಳಿಯುತ್ತಾ ಕ್ರಮೇಣ ಗಂಭೀರವಾಗುತ್ತಾ ಸಾಗುತ್ತದೆ. ಹೆಸರಿಗೆ ತಕ್ಕಂತೆ ಕಾದಂಬರಿಯುದ್ದಕ್ಕೂ ಪತಿ-ಪತ್ನಿಯರ ಸಂವಾದವೇ ಪ್ರಧಾನವಾಗಿ, ಅದರ ಮೂಲಕವೇ ಅವರಿಬ್ಬರ ನಡುವಿನ ಸಂಬಂಧದ ಆಳ ಅಗಲಗಳನ್ನೂ ಅನಾವರಣಗೊಳಿಸಲಾಗಿದೆ. ಪೀಠಿಕೆಯ ಭಾಗದಲ್ಲಿ ಲೇಖಕರು ಕೆಲವು ಅಂಶಗಳನ್ನು…