ವಿಧ: ಪುಸ್ತಕ ವಿಮರ್ಶೆ
December 13, 2022
ಚರಿತ್ರೆ ಎಂದರೆ ಏನು ಎಂಬ ಪ್ರಶ್ನೆ ಪ್ರತಿಯೊಬ್ಬ ಚರಿತ್ರೆಕಾರನಿಗೂ ಕಾಡಲೇಬೇಕಾದ ಹಾಗೂ ಎಂದೂ ಕೊನೆಯಾಗಲಾರದ ಪ್ರಶ್ನೆ. ಚರಿತ್ರೆ, ಚರಿತ್ರೆಕಾರ, ಚಾರಿತ್ರಿಕ ಸತ್ಯ ಮುಂತಾದ ಸಂಗತಿಗಳಿಗೆ ಅಂತಿಮ ಎನ್ನಬಹುದಾದ ತೀರ್ಮಾನಗಳನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ಚರಿತ್ರೆ ಒಂದು ರಚನೆಯಾದರೂ ಅದು ಅಂತಿಮ ರಚನೆಯಲ್ಲ. ಆದರೆ ಚರಿತ್ರೆ ರಚನೆ ಇರುವುದೇ ಪುನಾರಚನೆಗಾಗಿ ಎನ್ನುವುದು ವಾಸ್ತವ. ಕಾರ್ ಚರಿತ್ರೆಯ ಜೀವಂತಿಕೆಯನ್ನು ಸರಿಯಾಗಿಯೇ ಗ್ರಹಿಸಿದ ಕಾರಣದಿಂದಾಗಿ ಇದನ್ನೊಂದು ನಿರಂತರ ಪ್ರಕ್ರಿಯೆ ಹಾಗೂ…
ವಿಧ: ಬ್ಲಾಗ್ ಬರಹ
December 12, 2022
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.
ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.
84) ಮೂಲ ಹಾಡು - ಪಂಕ ಹೋತೀ ತೋ ಉಡ ಆತೀರೇ
ನನ್ನ ಅನುವಾದ -
ರೆಕ್ಕೆ ಇದ್ದಿದ್ರೆ ಹಾರಿ…
ವಿಧ: ಪುಸ್ತಕ ವಿಮರ್ಶೆ
December 12, 2022
ನಮ್ಮ ಪುಣ್ಯಭೂಮಿಯನ್ನೂ ಒಳಗೊಂಡಂತೆ ಪ್ರಾಚೀನ ಕಾಲದಿಂದಲೂ ವಿಶ್ವದ ಹಲವಾರು ಸಂಸ್ಕೃತಿ ಮತ್ತು ನಾಗರಿಕತೆಗಳಲ್ಲಿ ‘ದೇವದಾಸಿ’ ಪದ್ಧತಿ ಅಧಿಕೃತವಾಗಿಯೇ ರೂಢಿಯಲ್ಲಿತ್ತೆಂಬ ಅನೇಕ ವಿವರಗಳೊಂದಿಗೆ ಡಾ. ಜಗದೀಶ್ ಕೊಪ್ಪ ಅವರು ಈ ಕೃತಿಯನ್ನು ಪ್ರಾರಂಭಿಸುತ್ತಾರೆ. ಒಟ್ಟು ಹದಿನೈದು ಅಧ್ಯಾಯಗಳಲ್ಲಿ ಈ ಪದ್ಧತಿಯ ಉಗಮ ಮತ್ತು ಬೆಳವಣ ಗೆಯ ಚಾರಿತ್ರಿಕ ಘಟ್ಟಗಳನ್ನು, ಸಾಂಸ್ಕೃತಿಕ ಪಲ್ಲಟಗಳನ್ನು ನಿರೂಪಿಸಿದ್ದಾರೆ.
ಇಪ್ಪತ್ತೊಂದನೆಯ ಶತಮಾನದ ಈ ಗಳಿಗೆಯವರೆಗೂ ಅನಧಿಕೃತವಾಗಿ, ಗುಪ್ತವಾಗಿ ಈ ಅನಿಷ್ಟ ಪದ್ಧತಿ…
ವಿಧ: ಪುಸ್ತಕ ವಿಮರ್ಶೆ
December 10, 2022
ಡಾ. ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 2008ರಿಂದ ಉಡುಪಿಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕರಾದ ವೈದ್ಯರು ಮಾನವ ಸಂಬಂಧಗಳು, ಸಂಬಂಧಗಳಲ್ಲಿ ಸಂವಹನ ಹಾಗೂ ಸಾಮರಸ್ಯ, ಪೇರೆಂಟಿಂಗ್, ಮಕ್ಕಳ ಆರೈಕೆ…
ವಿಧ: ಪುಸ್ತಕ ವಿಮರ್ಶೆ
December 09, 2022
ಸಣ್ಣಕತೆಯ ತೀವ್ರತೆ ಮತ್ತು ಕಾದಂಬರಿಯ ವಿಸ್ತಾರ -ಎರಡನ್ನೂ ಈ ಕಾದಂಬರಿ ಹೊಂದಿದೆ. ಅದೇ ಕಾರಣಕ್ಕೆ ಇದಕ್ಕೆ ಅಪರಿಮಿತ ವೇಗ ಪ್ರಾಪ್ತಿಯಾಗಿದೆ. ಓದಿ ಮುಗಿಸಿದ ನಂತರ ಕಾದಂಬರಿ ನಮ್ಮೊಳಗೆ ವಿಸ್ತರಿಸುತ್ತಾ ಹೋಗುತ್ತದೆ. ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. ನಿಜ ಮತ್ತು ಸುಳ್ಳನ್ನು ಹೊದ್ದುಕೊಂಡಿರುವ, ಯಾವುದು ನಿಜ ಯಾವುದು ಸುಳ್ಳು ಎಂದು ಗುರುತಿಸಲಿಕ್ಕಾಗದ ಮಾಯೆಯೊಂದು ಈ ಕತೆಯನ್ನು ತನಗೇ ತಾನೇ ಹೇಳಿಕೊಳ್ಳುತ್ತಿರುವಂತಿದೆ ಎನ್ನುತ್ತಾರೆ ಲೇಖಕ ಜೋಗಿ.
ತಮ್ಮ ‘ಆರಂಭದ ಮಾತು’ ಇಲ್ಲಿ…
ವಿಧ: ಪುಸ್ತಕ ವಿಮರ್ಶೆ
December 08, 2022
ರಂಜನಿ ರಾಘವನ್ ಅವರು ಮೂಲತಃ ಬೆಂಗಳೂರಿನವರು. ಬರಹಗಾರ್ತಿ, ನಟಿ, ಸೃಜನಶೀಲ ನಿರ್ದೇಶಕಿಯೂ ಆಗಿದ್ದಾರೆ. ಪ್ರಸ್ತುತ ಕಲರ್ಸ್ ಕನ್ನಡದ ‘ಕನ್ನಡತಿ’ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.
ರಂಜನಿ ರಾಘವನ್ ಅವರ ಚೊಚ್ಚಲ ಕಾದಂಬರಿ ‘ಸ್ವೈಪ್ ರೈಟ್’. ‘ನಿನ್ನ ಬೆರಳಂಚಲಿ ನಾನು’ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಕೃತಿಯಲ್ಲಿ ಕತೆಗಾರ ವಸುಧೇಂದ್ರ ಅವರ ಮುನ್ನುಡಿಯ ಮಾತುಗಳಿವೆ. ಅವರು ಹೇಳುವಂತೆ, ಬೆಂಗಳೂರಿನ ಯುವಜನತೆ ತನ್ನದೇ ಆದ ವಿಭಿನ್ನ ಪರಿಸರವನ್ನು ಕಟ್ಟಿಕೊಂಡಿದೆ. ದೊಡ್ಡ ಕನಸುಗಳು,…
ವಿಧ: ಪುಸ್ತಕ ವಿಮರ್ಶೆ
December 08, 2022
ಈ ಉಪಯುಕ್ತ ಪುಸ್ತಕದ ಉಪಶೀರ್ಷಿಕೆ: ಔಷಧಿಗಳ ಗುಣ, ಉಪಯೋಗ ಮತ್ತು ಸೇವಿಸುವ ವಿಧಾನಗಳು. ಜೊತೆಗೆ “ವೈದ್ಯರ ಉಪಯೋಗಕ್ಕಾಗಿ ಮಾತ್ರ" ಎಂಬ ಎಚ್ಚರಿಕೆ ಮುಖಪುಟದಲ್ಲೇ ಇದೆ.
ಗಮನಾರ್ಹ ಸಂಗತಿಯೆಂದರೆ ಇದರ ಕನ್ನಡ ಆವೃತ್ತಿಯ 25,000 ಪ್ರತಿಗಳನ್ನು ಮುದ್ರಿಸಲಾಗಿದೆ! ಕನ್ನಡದ ಪುಸ್ತಕಗಳ ಒಂದು ಸಾವಿರ ಪ್ರತಿಗಳನ್ನು ಮುದ್ರಿಸುವುದನ್ನು ನಿಯಮದಂತೆ ಪಾಲಿಸಲಾಗುತ್ತದೆ (ಇದಕ್ಕೆ ಕೆಲವು ವಿನಾಯ್ತಿಗಳಿವೆ). ಯಾಕೆಂದರೆ, ಬಹುಪಾಲು ಪುಸ್ತಕಗಳ ಒಂದು ಸಾವಿರ ಪ್ರತಿಗಳು ಮಾರಾಟವಾಗಲು 3ರಿಂದ 10 ವರುಷ ತಗಲುತ್ತದೆ…
ವಿಧ: ಪುಸ್ತಕ ವಿಮರ್ಶೆ
December 07, 2022
ತಾವು ಬದುಕಿದ ಅಲ್ಪ ಕಾಲದಲ್ಲೇ ಮರೆಯಲಾಗದ ಛಾಪನ್ನು ಮೂಡಿಸಿ ನಮ್ಮಿಂದ ಅಗಲಿದ ಮಹನೀಯರನ್ನು ಪರಿಚಯಿಸುವ ‘ಅಲ್ಪಾಯುಷಿ ಮಹಾನ್ ಸಾಧಕರು' ಮಾಲಿಕೆಯ ದ್ವಿತೀಯ ಭಾಗ ಈ ಕೃತಿ. ಈ ಕೃತಿಯಲ್ಲಿ ತಮ್ಮ ಅಲ್ಪಾಯುಷ್ಯಲ್ಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ೨೫ ಮಹನೀಯರ ಪರಿಚಯವನ್ನು ಈ ಪುಸ್ತಕದಲ್ಲಿ ಮಾಡಿಕೊಡಲಾಗಿದೆ.
‘ಅನನ್ಯ’ ಬಳಗದ ಮ್ಯಾನೇಜಿಂಗ್ ಟ್ರಸ್ಟಿಯಾದ ಡಾ. ಆರ್ ವಿ ರಾಘವೇಂದ್ರ ಇವರು ಪುಸ್ತಕದ ಬೆನ್ನುಡಿ ಬರೆದಿದ್ದಾರೆ. ಅವರು ತಮ್ಮ ನುಡಿಯಾದ ‘ಅಪರೂಪದ ದಾಖಲಾತಿ'ಯಲ್ಲಿ ಹೇಳುವುದು ಹೀಗೆ…
ವಿಧ: ಪುಸ್ತಕ ವಿಮರ್ಶೆ
December 06, 2022
"ವಂಶೀ ಸಂದೇಶ" ಎಂಬ ರಸಾನುಭೂತಿ - ಶತಾವಧಾನಿ ಡಾ. ಆರ್ ಗಣೇಶರ ಕಾವ್ಯಾನುಸಂಧಾನ(ಯಥಾಮತಿ)
ವಾಲ್ಮೀಕಿಯ ಶೋಕ ರಾಮಾಯಣ ಮಹಾಕಾವ್ಯಕ್ಕೆ ಕಾರಣವಾಯಿತು. ಆ ಶೋಕಭಾವ ವಿಶುದ್ದ ಕರುಣರಸಕ್ಕೇರಿ ಅತ್ಯಪೂರ್ವ ಆದಿಕಾವ್ಯವನ್ನು ಸೃಜಿಸುವಲ್ಲಿ ಆದಿಕವಿಯ ಕಲಾಶ್ರೀಮಂತಿಕೆ, ಅಭಿಜ್ಞತೆ ಕಾರಣವೆಂದು ಅರಿವಾಗುತ್ತದೆ. ಸತ್ಕವಿಯಲ್ಲಿ ಮೂಡಿದ ಯಾವುದೇ ಭಾವ ವ್ಯರ್ಥವಾಗದು; ಅವು ರಸದ ತುದಿಗೆ ತಲುಪಿ ಅಲ್ಲಿಂದ ಮತ್ತೊಂದು ಕಲಾಸೃಷ್ಟಿಯಾಗುತ್ತದೆ. ಅದೇ ರೀತಿಯ ಮನೋಹರ, ರಸಾರ್ದ್ರ ಕಾವ್ಯಸೃಷ್ಟಿ ಡಾ| ಶತಾವಧಾನಿ ಆರ್.…
ವಿಧ: ಪುಸ್ತಕ ವಿಮರ್ಶೆ
December 04, 2022
ಸುರೇಶ ದೇಸಾಯಿ ಅವರ ʼ ಬೇಸಾಯದ ಕಲೆ- ಸಮೃದ್ಧ ಕೃಷಿ ಪ್ರಯೋಗಗಳುʼ ಸಾಧಕನೊಬ್ಬ, ಪ್ರಯೋಗ- ಅನುಭವದ ಮೂಲಕ ಕಂಡುಕೊಂಡ ಕೃಷಿ ಆವಿಷ್ಕಾರಗಳ ದಾಖಲೆ. ದಶಕಗಳ ಆಳ ಆನುಭವ ಇಲ್ಲಿ ಫಲರೂಪಿಯಾಗಿ ಅನಾವರಣಗೊಂಡಿದೆ. ಕರ್ನಾಟಕದಲ್ಲಿ ನಾರಾಯಣ ರೆಡ್ಡಿ, ಭರಮಗೌಡರಷ್ಟೇ ಧೀಮಂತ ಸ್ಥಾನ ಸುರೇಶ ದೇಸಾಯಿ (ಹಾಗೂ ಸೋಮನಾಥ ರೆಡ್ಡಿ ಪೂರ್ಮಾ) ಅವರಿಗಿದೆ.
ಕರ್ನಾಟಕದ ಸೀಸನಲ್ ಬೆಳೆ ಬೆಳೆಯುವ ಪ್ರದೇಶಗಳ ಬೆಳೆಗಳಲ್ಲಿ ಸುಸ್ಥಿರ ಕೃಷಿ/ ಕೃಷಿ ಪರಿಸರ ವಿಧಾನಗಳ ಬಗ್ಗೆ ರೈತರಿಗೆ ಒಗ್ಗುವ ರೀತಿಯಲ್ಲಿ ಹೇಳುವ ವಿವರಗಳೇ…