ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 10, 2022
ವಿಶ್ವ ಮಾನವ ಕುವೆಂಪು ಪುಸ್ತಕವನ್ನು ಕರ್ನಾಟಕ ಸರಕಾರದ ಅಧೀನದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿದೆ. ಪ್ರತೀ ವರ್ಷ ಕುವೆಂಪು ಅವರ ಜನ್ಮ ದಿನವನ್ನು ಕರ್ನಾಟಕ ಸರಕಾರ ‘ವಿಶ್ವ ಮಾನವ ದಿನಾಚರಣೆ' ಎಂದು ಆಚರಿಸುತ್ತದೆ. ಆ ಹಿನ್ನಲೆಯಲ್ಲಿ ಈ ಕಿರು ಹೊತ್ತಿಗೆಯನ್ನು ಹೊರತಂದಿದ್ದಾರೆ.  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯಲ್ಲಿ ಕಂಡ ನುಡಿಗಳು “…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
November 10, 2022
ಕೈಯ್ಯಾರರ “ಶತಮಾನದ ಗಾನ” ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕನ್ನಡದ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ. ಕೈಯ್ಯಾರರು ಕವಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಈಗ ಕೇರಳದ ಭಾಗವಾಗಿರುವ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಹೋರಾಟದ ನಾಯಕರಾಗಿ ಗುರುತಿಸಲ್ಪಟ್ಟವರು. ಅವರ 111 ಕವನಗಳು ಈ ಸಂಪುಟದಲ್ಲಿವೆ. ಜೂನ್ 1986ರ ಇದರ ಮೊದಲ ಮುದ್ರಣದ ಪ್ರತಿಗಳು ಒಂದು ವರುಷದಲ್ಲಿಯೇ ಮುಗಿದು ಹೋಗಿದ್ದವು. ಮುನ್ನುಡಿಯಲ್ಲಿ ಕೈಯ್ಯಾರರು “ಇಲ್ಲಿ ನೂರಕ್ಕೂ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 08, 2022
ದೂರದ ಅಮೇರಿಕಾ ದೇಶದಿಂದ ‘ವಿಶ್ವವಾಣಿ' ಪತ್ರಿಕೆಗೆ ಪ್ರತೀ ಭಾನುವಾರ ಹೊಸ ಹೊಸ ವಿಚಾರಗಳನ್ನು ಹೊತ್ತುಕೊಂಡು ಅಂಕಣವನ್ನು ಬರೆಯುವವರು ಶ್ರೀವತ್ಸ ಜೋಶಿ. ವಿಶ್ವವಾಣಿಗೂ ಮೊದಲು ವಿಜಯ ಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದರು. ವಿಶ್ವವಾಣಿ ಪತ್ರಿಕೆಗೆ ಅಂಕಣ ಬರೆಯಲು ಶುರು ಮಾಡಿದ ಬಳಿಕ ಪರ್ಣಮಾಲೆ ೩ ಮತ್ತು ೪ ಪುಸ್ತಕಗಳು ಹೊರಬಂದವು. ಅದೇ ತಿಳಿರುತೋರಣ ಅಂಕಣ ಬರಹಗಳ ಸಂಗ್ರಹ ಸರಣಿಯಲ್ಲಿ ಪರ್ಣಮಾಲೆಯ ೫ನೇ ಭಾಗ ಪುಸ್ತಕವಾಗಿ ಪ್ರಕಟವಾಗಿದೆ.   ಈ ಪುಸ್ತಕದ ಬೆನ್ನುಡಿಯಲ್ಲಿ ಅಂಕಣಕಾರ, ಸಾಹಿತಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 05, 2022
ತಮ್ಮ ಭಾವನಾತ್ಮಕ ಅಂಕಣ ಬರಹಗಳಿಗೆ ಹೆಸರುವಾಸಿಯಾದ ಲೇಖಕ ಎ ಆರ್ ಮಣಿಕಾಂತ್ ಆವರ ನೂತನ ಪುಸ್ತಕವೇ ‘ಮತ್ತೆ ಹಾಡಿತು ಕೋಗಿಲೆ'. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖಕರ ಅಂಕಣ ಬರಹವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಸ್ತಕದಲ್ಲಿರುವ ಪ್ರತಿಯೊಂದು ಅಧ್ಯಾಯವನ್ನು ಓದಿ ಮುಗಿಸುವಾಗ ನಿಮ್ಮ ಕಣ್ಣಂಚಿನಲ್ಲಿ ಖಂಡಿತಕ್ಕೂ ನೀರು ಜಿನುಗುತ್ತಿರುತ್ತದೆ. ಅಷ್ಟೊಂದು ಆಪ್ತವಾಗಿರುವ ಬರಹಗಳಿವೆ. ಇಲ್ಲಿ ಮುದ್ರಿತವಾಗಿರುವ ಬಹಳಷ್ಟು ಬರಹಗಳು ವ್ಯಕ್ತಿಯೊಬ್ಬರ ನಿಜ ಜೀವನಕ್ಕೆ ಸಂಬಂಧಿಸಿದವುಗಳೇ.…
ವಿಧ: ಪುಸ್ತಕ ವಿಮರ್ಶೆ
November 03, 2022
ಡಾ. ವಿಜಯ್ ನಾಗ್ ರಿಂದ ಕನ್ನಡಕ್ಕೆ ಭಾಷಾಂತರವಾದ ಜಪಾನಿನ ಕಾದಂಬರಿಕಾರ ಜುನ್ ಇಚಿರೋ ತಾನಿಜ಼ಾಕಿ ಅವರ "ಕಾಗಿ" ಯೇ ಈ "ಬೀಗದ ಕೈ" ಕಾದಂಬರಿ. ಎರಡು ದೇಶಗಳ ಜನರ ಸಂಸ್ಕೃತಿ ಮತ್ತು ಮನುಷ್ಯ ಸಂವೇದನೆಗಳನ್ನು ಬೆಸೆವ ಕೆಲಸ ಈ ಅನುವಾದ. ಕಲೋನಿಯಲ್ ಎಂಬ ಮಟ್ಟದಲ್ಲಿ ಎಂದೂ ಜಪಾನ್ ಭಾಷೆ ಭಾರತದ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪನೆ ಮಾಡಿಲ್ಲದಿರುವುದು ವಿಶೇಷವಾದ ಮತ್ತು ಬಹಳ ಮುಖ್ಯವಾದ ಅಂಶ. ಚಿತ್ರಲಿಪಿಗೂ ಭಾರತೀಯರ ಅಕ್ಷರ ಲಿಪಿಗೂ ಬಹಳ ವ್ಯತ್ಯಾಸದ ಜೊತೆಗೆ,…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
November 03, 2022
ಶಿಕಾರಿ ಕತೆಗಳು ಅಪರೂಪದ ಬರಹಗಳು. ಇದರಲ್ಲಿನ ನಾಲ್ಕು ಶಿಕಾರಿಗಳಲ್ಲಿ ಕೋವಿ ಗುರಿಯಿಟ್ಟವರು, ಅನಂತರ ಅದನ್ನೆಲ್ಲ ರೋಚಕವಾಗಿ ಇಂಗ್ಲಿಷಿನಲ್ಲಿ ಬರೆದವರು ನರಭಕ್ಷಕ ಹುಲಿಗಳ ಬೇಟೆಯ ದಂತಕತೆಯಾಗಿರುವ ಬೇಟೆಗಾರ ಕೆನ್ನೆತ್ ಆಂಡರ್ ಸನ್. ಅದನ್ನು ಸಮರ್ಥವಾಗಿ ಕನ್ನಡಕ್ಕೆ ಸಂಗ್ರಹಾನುವಾದ ಮಾಡಿದವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು. ಇದರ ಮೊದಲ ಶಿಕಾರಿ ಕತೆಯೇ ಪುಸ್ತಕದ ಶೀರ್ಷಿಕೆ ಕತೆ: ಮುನಿಶಾಮಿ ಮತ್ತು ಮಾಗಡಿ ಚಿರತೆ. ಮುನಿಶಾಮಿ ಎಂಬಾತ ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಶಿಕಾರಿಯ ಹುಚ್ಚು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 01, 2022
ವೀರ ಸಾವರ್ಕರ್ ಎಂಬ ಹೆಸರು ಈಗ ಬಹು ಚರ್ಚಿತವಾಗುತ್ತಿರುವ ಸಂಗತಿ ಎಲ್ಲರಿಗೂ ತಿಳಿದಿರುವಂತದ್ದೇ. ಸಾವರ್ಕರ್ ಅವರು ದೇಶಭಕ್ತರೇ, ಸ್ವಾತಂತ್ರ್ಯ ಯೋಧರೇ, ಗಾಂಧೀಜಿ ಹತ್ಯೆಯಲ್ಲಿ ಅವರ ಕೈವಾಡವಿದೆಯೇ, ಎರಡು ಜೀವಾವಧಿ ಶಿಕ್ಷೆಗಳನ್ನು ಅವರು ಅಂಡಮಾನಿನ ಸೆಲ್ಯುಲಾರ್ ಜೈಲಿನಲ್ಲಿ ಹೇಗೆ ಕಳೆದರು? ಅಲ್ಲಿನ ಯಾತನಾಮಯ ದಿನಗಳು ಹೇಗಿದ್ದವು? ಅವರು ಬ್ರಿಟೀಷ್ ಸರಕಾರಕ್ಕೆ ಕ್ಷಮಾಪಣಾ ಅರ್ಜಿ ಬರೆದದ್ದು ಹೌದೇ? ಈ ಎಲ್ಲಾ ಸಂಶಯಗಳನ್ನು ನಿವಾರಣೆ ಮಾಡಲು ಖ್ಯಾತ ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಇವರು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 29, 2022
ಮಂಗಳೂರಿನ ಸಾವಯವ ಕೃಷಿಕರ ಬಳಗವು ‘ವಿಷಮುಕ್ತ ಅನ್ನದ ಬಟ್ಟಲಿನತ್ತ ಪುಟ್ಟ ಹೆಜ್ಜೆ' ಎಂಬ ಪರಿಕಲ್ಪನೆಯ ಮಾಲಿಕೆಯ. ಮೊದಲ ಕೃತಿಯಾಗಿ ‘ಕೈತೋಟ ಕೈಪಿಡಿ' ಎಂಬ ಪುಟ್ಟ ಆದರೆ ಮಹತ್ವಪೂರ್ಣ ಪುಸ್ತಕವನ್ನು ಹೊರತಂದಿದ್ದಾರೆ. ಸ್ವತಃ ಪ್ರಗತಿಪರ, ಸಾವಯವ ಕೃಷಿಕರಾದ ಪುತ್ತೂರಿನ ಮಂಜುನಾಥ ಫಾರ್ಮ್ಸ್ ನ ಹರಿಕೃಷ್ಣ ಕಾಮತ್ ಅವರು ಉತ್ತಮ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಹೆಕ್ಕಿ ತಂದು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಪುಸ್ತಕಕ್ಕೆ ಮೊದಲ ಮಾತನ್ನು ಬರೆದಿದ್ದಾರೆ, ಸಾವಯವ ಕೃಷಿಕ ಗ್ರಾಹಕ ಬಳಗ ಇದರ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 27, 2022
ಕೆ ಆರ್ ಉಮಾದೇವಿ ಉರಾಳ ಇವರ ನೂತನ ಪ್ರಬಂಧಗಳ ಸಂಕಲನವೇ ‘ಮುಳ್ಳುಬೇಲಿಯ ಹೂಬಳ್ಳಿ’. ಹಲವು ನೆನಪುಗಳು ಜೀವನ ತತ್ವವೊಂದನ್ನು ಅರಿವಿಗೆ ತರುವುದಕ್ಕೆ 'ಬೇವೆಂದೆಣಿಸಿದ್ದು ಬೆಲ್ಲವೆಂದೆನಿಸುವಾಗ' ಪ್ರಬಂಧ ಸಾಕ್ಷಿ. ಒಂದು ರಸ್ತೆ ಅಪಘಾತದ ನೋವು ಹಿಂಸೆಗಳಿಂದ ಕೊನೆಗೂ ಚೇತರಿಸಿಕೊಂಡು ವಾಕರಿನಲ್ಲಿ ನಡೆಯಲು ಪ್ರಾರಂಭಿಸಿದಾಗ ಲೇಖಕಿಗೆ ಸರಳ ತತ್ವ ಸಾಕ್ಷಾತ್ಕಾರವಾದ ಅನುಭವವಾಗುತ್ತದೆ. 'ಇದೆ' ಅಂದುಕೊಂಡರೆ ಎಲ್ಲವೂ ಇದೆ: 'ಇಲ್ಲ' ಅಂದುಕೊಂಡರೆ ಯಾವುದೂ ಇಲ್ಲ. ಹಾಗಾಗಿ 'ಇದೆ' ಎಂಬ ಭಾವ ತುಂಬಿದ ಬದುಕೇ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
October 27, 2022
ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಶ್ರೀನುಡಿ ಬರೆದವರೇ ಪಂಜೆ ಮಂಗೇಶರಾಯರು. ಅವರ ಹಲವು ಪದ್ಯಗಳು ಮೂರು ತಲೆಮಾರುಗಳ ಮಕ್ಕಳ ಬಾಯಿಯಲ್ಲಿ ನಲಿದಾಡಿದವು. ಮಕ್ಕಳಿಗೆ ಕನ್ನಡ ನುಡಿಯ ಸೊಗಡನ್ನು ಪರಿಚಯಿಸಿದವು. ಮಕ್ಕಳ ಪದಸಂಪತ್ತನ್ನು ಹೆಚ್ಚಿಸಿದವು. ಕನ್ನಡ ನಾಡಿನ ಹೆತ್ತವರ ಇಂಗ್ಲಿಷ್ ಮಾಧ್ಯಮದ ಮೋಹದಲ್ಲಿ, ಖಾಸಗಿ ಶಾಲೆಗಳ ಬಾಲವಾಡಿಗಳ ಇಂಗ್ಲಿಷ್ ಮಾಧ್ಯಮದ ಅಬ್ಬರದಲ್ಲಿ, ಬ್ರಿಟಿಷರು ತಮಗೆ ಬೇಕಾದ ಕಾರಕೂನರನ್ನು ರೂಪಿಸಲು ಆರಂಭಿಸಿದ "ಮೆಕಾಲೆ ಶಿಕ್ಷಣ ಪದ್ಧತಿ”ಯ ಅಂಧ ಅನುಸರಣೆಯಲ್ಲಿ, ಕ್ರಮೇಣ…