ವಿಧ: ಪುಸ್ತಕ ವಿಮರ್ಶೆ
December 25, 2022
ಮುನ್ನುಡಿಯಲ್ಲಿ ಹೇಳಿದ ಹಾಗೆ ಇಲ್ಲಿ ಉಪನ್ಯಾಸಕ ಕೃಷ್ಣಚಂದ್ರ ಪ್ರಧಾನ ಪಾತ್ರ, ವೇಶ್ಯಾ ವಂಶ ಎನ್ನಲಾಗುವ ಗೇಟ್ ಭಾರತಿ ಪ್ರವೇಶಿಸಿ ಕಥೆ ಬೆಳೆಸುತ್ತಾಳೆ. ಆ ಕಾಲದ ವೇಶ್ಯಾ ಮನಸ್ಥಿತಿಯನ್ನು ಅರಿಯಲು ಗೇಟ್ ಭಾರತಿಯ ಮೂಲಕ ಸಂಶೋಧನೆಗೆ ತೊಡಗಿ ಭೂವರಾಹ ಪಾಂಡ್ಯನ ಕಥೆಯನ್ನು ಹೇಳುತ್ತಾ ಹೋಗುತ್ತಾರೆ.
ಸುಮಿತ್ರ ಹೆರಿಗೆಗೆಂದು ತವರುಮನೆಗೆ ಹೋಗಿ ಕೃಷ್ಣಚಂದ್ರ ಬ್ರಹ್ಮಚಾರಿ ಜೀವನಕ್ಕೆ ಮರಳಿದ್ದ, ಗೇಟ್ ಭಾರತಿಯ ಕುಟುಂಬಕ್ಕೂ ಹಾಗು ಬೂಬಾವರದ ಗಣ್ಯವ್ಯಕ್ತಿ ಪಟೇಲ್ ಗುಣಪಾಲ ಸೆಟ್ಟಿಯವರ ಕುಟುಂಬಕ್ಕೆ…
ವಿಧ: ಪುಸ್ತಕ ವಿಮರ್ಶೆ
December 24, 2022
ಕೆಲವು ಕತೆಗಳನ್ನು ಓದುಗರು ಹೀಗೂ ಪ್ರವೇಶಿಸಬಹುದು ಎಂಬುದಕ್ಕೆ ಈ ಕಥಾ ಸಂಕಲನದಲ್ಲಿ ನಿದರ್ಶನಗಳಿವೆ. ‘ಸೂರೊಳೊಂದು ಕಿಟಕಿ’ ಕತೆಯಲ್ಲಿ ಮನುಷ್ಯನ ಹಸಿವಿಗೂ ಹಂಬಲಕ್ಕೂ ಮೂಲ ಕಾರಣ ಭ್ರಮೆ ಎಂಬುದನ್ನು ಪೂರ್ಣಿಮಾ ಸರಳವಾಗಿ ಪ್ರತಿಪಾದಿಸುತ್ತಾರೆ” ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಗೋಪಾಲ ಕೃಷ್ಣ ಕುಂಟಿನಿ. ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿಯವರ ‘ಡೂಡಲ್ ಕತೆಗಳು’ ಕೃತಿಗೆ ಬರೆದಿರುವ ಮುನ್ನುಡಿ ಹೀಗಿದೆ...
“ಸ್ನೇಹಿತೆ ಪೂರ್ಣಿಮಾ ಮಾಳಗಿಮನಿ ‘ಡೂಡಲ್ ಕತೆ’ಗಳನ್ನು ಬರೆದಿದ್ದಾರೆ. ಡೂಡಲಿಂಗ್…
ವಿಧ: ಪುಸ್ತಕ ವಿಮರ್ಶೆ
December 22, 2022
ಆಬಿದ್ ಸುರತಿ ಅವರ ನವಾಬ್ ರಂಗೀಲೆ ಎಂಬ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಡಿ. ಎನ್. ಶ್ರೀನಾಥ್. ಇದಕ್ಕೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಆಬಿದ್ ಸುರತಿ. ಮಕ್ಕಳ ಪುಸ್ತಕವಾದರೂ ಹಿರಿಯರನ್ನೂ ಚಿಂತನೆಗೆ ಹಚ್ಚುವ ಪುಸ್ತಕವಿದು.
ಭಾರತ - ಪಾಕಿಸ್ಥಾನದ ಗಡಿಯ ಪಕ್ಕದ ನಗಡಾಪುರದಲ್ಲಿ ನಡೆಯುವ ಕಾಲ್ಪನಿಕ ಘಟನೆಗಳ ಸರಣಿಯ ಕಥನ ಇದು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನಗಡಾಪುರ ರಾಜ್ಯ ನಮ್ಮ ದೇಶದೊಂದಿಗೆ ಸೇರಬೇಕಾಯಿತು. ಅದರೊಂದಿಗೆ ನವಾಬನ ನವಾಬಗಿರಿ ಅಂತ್ಯವಾಗಿತ್ತು. ಆದರೆ ಆ ರಾಜ್ಯದ…
ವಿಧ: ಪುಸ್ತಕ ವಿಮರ್ಶೆ
December 22, 2022
‘ಚಾಲುಕ್ಯರ ಶಿಲ್ಪಕಲೆ’ ಕೃತಿಯು ಪುಂಡಲೀಕ ಕಲ್ಲಿಗನೂರ ಅವರ ಸಂಶೋಧನಾ ಗ್ರಂಥ. ಈ ಬೃಹತ್ ಗ್ರಂಥದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಚಿತ್ರಗಳಿವೆ. ಈ ಚಿತ್ರಗಳು ಚಾಲುಕ್ಯರ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುತ್ತವೆ. ಪುಸ್ತಕದ ಕಲಾತ್ಮಕ ಪುಟ ವಿನ್ಯಾಸ ಓದುಗರನ್ನು ಸೆಳೆಯುತ್ತವೆ.
ಕೃತಿಗೆ ಬೆನ್ನುಡಿ ಬರೆದಿರುವ ನಳಿನ ಡಿ. ಅವರು, ಜಗತ್ತಿನ ಇತಿಹಾಸ ಕಟ್ಟುವಲ್ಲಿ ಶಿಲ್ಪಗಳು, ಸ್ಮಾರಕಗಳು, ಶಾಸನಗಳು ತಮ್ಮದೇ ಆದ ಕೊಡುಗೆ ನೀಡಿದೆ. ಆದರೂ ಇತಿಹಾಸವೇ ಹಾಗೆ ತಿರುಚುಮಲ್ಲನ ಘೋರ ಕಾಳಗದ ನಡುವೆ…
ವಿಧ: ಪುಸ್ತಕ ವಿಮರ್ಶೆ
December 21, 2022
"ಎದೆ ಹಾಲಿನ ಪಾಳಿ " ಲೇಖಕರಾದ ಆರಫ್ ರಾಜಾ ಅವರ ಕೃತಿ. ಬದುಕಿನ ಗಟ್ಟಿ ತುಮುಲಗಳನ್ನು, ಸಂಘರ್ಷಗಳನ್ನು, ಅನುರಾಗದ ಅಲೆಗಳನ್ನು ಹಾಗೂ ಮಮತೆಯ ಸೆಲೆಯನ್ನು ತಮ್ಮದೇ ಆದ ಪದಗಳಲ್ಲಿ ಬಂಧಿಸಿ ಕವಿತೆಯಾಗಿಸಿದ್ದಾರೆ. ಪ್ರತಿ ಕವಿತೆಗಳು ಒಂದು" ಜಗತ್ತು" ಎನ್ನುವಷ್ಟು ಆಳವಾಗಿವೆ, ಈ ಜಗದ ಸಂತೆ (ಕವಿತೆ ಒಳಗಿನ ಭಾವ) ಓದುಗರನ್ನು ಚಿಂತನೆಗೆ ಒಯ್ಯುತ್ತವೆ. ನೀರಿಗಾಗಿ ನಳದ ಮುಂದೆ (ನಲ್ಲಿ) ಪಾಳಿ, ಟಿಕೆಟ್ ಗಾಗಿ ಸಿನಿಮಾ ಥಿಯೇಟರ್ ಅಲ್ಲಿ ಪಾಳಿ, ಬ್ಯಾಂಕಿನಲ್ಲಿ ಸಂಬಳಕ್ಕಾಗಿ ಪಾಳಿ (ಈಗ ಚಿತ್ರಣ ಸ್ವಲ್ಪ…
ವಿಧ: ಪುಸ್ತಕ ವಿಮರ್ಶೆ
December 20, 2022
ಆಶಾ ಇತ್ತೀಚೆಗೆ ಮಗಳನ್ನು ಪಡೆದ ಹೊಸ ತಾಯಿ. ತಾಯಿಯಾಗುವ, ಮತ್ತಾ ಎಳೆಕೂಸಿನ ಜೊತೆಗೆ ತಾಯಿಯೂ ಬೆಳೆಯುವ ಕವಿತೆಯನ್ನು ನಾವೆಲ್ಲರೂ ಬರೆದವರೇ, ಕ್ಲೀಷೆಯೆನಿಸುವಷ್ಟು! ಆದರಿಲ್ಲಿ ಹೊಸ ತಂದೆಯೊಬ್ಬನ ಪುಳಕ ವರ್ಣಿಸುವ ಕವಿತೆಯೊಂದಿದೆ. ಮಗುವನ್ನು ಎತ್ತಿಕೊಂಡಾಗ ಆ ಹೊಸತಂದೆಗೆ ತನ್ನಪ್ಪ ಇದ್ದಿದ್ದರೆ ಎನ್ನುವ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿದೆಯಂತೆ! ಮಾಮೂಲಿನ ಹಾಗೆ ಅವನು ಅಮ್ಮನನ್ನು ನೆನಪು ಮಾಡಿಕೊಂಡಿಲ್ಲ ಎನ್ನುತ್ತಾರೆ ಕವಯಿತ್ರಿ ಲಲಿತಾ ಸಿದ್ಧಬಸವಯ್ಯ. ಕವಯಿತ್ರಿ ಆಶಾ ಜಗದೀಶ್ ಅವರ ನಡು…
ವಿಧ: ಪುಸ್ತಕ ವಿಮರ್ಶೆ
December 18, 2022
ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು. 1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು. 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ…
ವಿಧ: ಪುಸ್ತಕ ವಿಮರ್ಶೆ
December 17, 2022
“ಮುದುಕನೊಬ್ಬ ಬಾವಿಯಲ್ಲಿ ಇಣಿಕಿದಾಗ ಅವನಿಗೆ ಚಂದ್ರ ಕಾಣಿಸಿದ. ‘ಅಯ್ಯೋ, ಚಂದ್ರ ಬಾವಿಯಲ್ಲಿ ಬಿದ್ದಿದ್ದಾನೆ, ಮೇಲಕ್ಕೆತ್ತಬೇಕು.’ ಅಂದುಕೊಂಡ. ಬಿಂದಿಗೆ ಕಟ್ಟಿ ನೀರನ್ನು ಸೇದಿದ. ಆಯ ತಪ್ಪಿ ಹಿಂದಕ್ಕೆ ಬಿದ್ದ. ಚಂದ್ರ ಆಕಾಶದಲ್ಲಿ ಕಾಣಿಸಿದ. ಅರೆ ! ಚಂದ್ರ ನೀರಿನಿಂದ ಮೇಲೆ ಬಂದು ಆಕಾಶಕ್ಕೆ ಹೊರಟು ಹೋಗಿದ್ದಾನೆ ಅಂದುಕೊಂಡ. ಹೀಗೆ ಮುದುಕ ಚಂದ್ರನನ್ನು ಉಳಿಸಿದ.”
***
ಗಾಡಿಯ ಚಕ್ರದ ಮೇಲೆ ಕೂತಿದ್ದ ಸೊಳ್ಳೆ ಹೇಳಿತು ‘ಎಷ್ಟೊಂದು ಧೂಳು ಎಬ್ಬಿಸ್ತಾ ಇದ್ದೀನಿ ನಾನು' ಅಂತ.
ಸ್ವಲ್ಪ ಹೊತ್ತಾದ…
ವಿಧ: ಪುಸ್ತಕ ವಿಮರ್ಶೆ
December 15, 2022
ಕನ್ನಡದಲ್ಲಿ ಪ್ರಕಟವಾಗಿರುವ ಗಿಡಮರಬಳ್ಳಿಗಳ ಮಾಹಿತಿ ನೀಡುವ ಪುಸ್ತಕಗಳು ವಿರಳ. ಅಂತಹ ವಿರಳ ಪುಸ್ತಕಗಳ ಸಾಲಿಗೆ ಸೇರಿದೆ ಪದ್ಮಾ ಶ್ರೀರಾಮ ಅವರ “ಗಿಡಗಂಟೆಯಾ ಕೊರಳು". “ಮಯೂರ" ಮಾಸಪತ್ರಿಕೆಯಲ್ಲಿ 20 ತಿಂಗಳುಗಳ ಕಾಲ ನಿರಂತರವಾಗಿ ಪ್ರಕಟವಾದ ಅವರ ಸಸ್ಯ ಲೇಖನಗಳೂ, ಕಸ್ತೂರಿ, ಕರ್ಮವೀರ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳೂ ಇದರಲ್ಲಿವೆ.
ಸುಮ ಸಂಕುಲದ ಅಂಕುರಾದ್ಭುತ ಎಂಬ ಮೊದಲ ಲೇಖನವು ಪರಕೀಯ ಪರಾಗಸ್ಪರ್ಶ ಕ್ರಿಯೆಗಾಗಿ ಸಸ್ಯಗಳು ಅಳವಡಿಸಿಕೊಂಡಿರುವ ಚತುರ ಹಾಗೂ ವಿಸ್ಮಯಕಾರಿ…
ವಿಧ: ಪುಸ್ತಕ ವಿಮರ್ಶೆ
December 15, 2022
ಲೇಖಕ, ಅಂಕಣಕಾರ ಯೋಗೀಂದ್ರ ಮರವಂತೆ ಅವರು ಪಶ್ಚಿಮ ಕರಾವಳಿಯಲ್ಲಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಗ್ರಾಮದವರು. ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ "ಏರ್ ಬಸ್" ಕಂಪನಿಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರಾಗಿರುವ ಅವರು ಬ್ರಿಟನ್ನಿನ ಜೀವನಾನುಭವಗಳನ್ನು ಅಂಕಣಗಳಾಗಿ ಪ್ರಬಂಧಗಳಾಗಿ ಕನ್ನಡದ ಪತ್ರಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಸುಧಾ ವಾರಪತ್ರಿಕೆಯ 2019 ಹಾಗು 2021ರ ಯುಗಾದಿ ಸ್ಪರ್ಧೆಗಳಲ್ಲಿ ಇವರ ಪ್ರಬಂಧಗಳು ಬಹುಮಾನ ಪಡೆದಿವೆ.
ಯೋಗೀಂದ್ರ ಮರವಂತೆ ಅವರ ನೂತನ ಪ್ರಬಂಧ…