ವಿಧ: ರುಚಿ
January 16, 2023
ಊಟದ ಬೆಳ್ತಿಗೆ ಅಕ್ಕಿಯನ್ನು ಸ್ವಚ್ಛಗೊಳಿಸಿ, ಒಂದು ಚಮಚ ತುಪ್ಪ ಸೇರಿಸಿ, ೬-೭ ವಿಸಲ್ ಕೂಗಿಸಿ ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಬೇಕು. ಒಂದು ಬಾಣಲೆಗೆ ಒಂದು ದೊಡ್ಡ ಚಮಚ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆದಿಟ್ಟುಕೊಳ್ಳಬೇಕು. ಬೆಲ್ಲದ ಹುಡಿಗೆ, ಸ್ವಲ್ಪ ನೀರು ಚಿಮುಕಿಸಿ ಒಂದು ನಿಮಿಷ ಸಣ್ಣ ಉರಿಯಲ್ಲಿ ಮಗುಚುತ್ತಾ ಕರಗಿದಾಗ, ಬೇಯಿಸಿಟ್ಟ ಅನ್ನವನ್ನು ಸೇರಿಸಿ, ಚಿಟಿಕೆ ಉಪ್ಪನ್ನು ಹಾಕಿ ಮಿಶ್ರ ಮಾಡಿ, ಸಣ್ಣ ಉರಿಯಲ್ಲಿ ಮಗುಚುತ್ತಿರಬೇಕು. ತೆಂಗಿನಕಾಯಿ ತುರಿ ಸೇರಿಸಿ. ಪಾಕವೆಲ್ಲ…
ವಿಧ: ಪುಸ್ತಕ ವಿಮರ್ಶೆ
January 14, 2023
‘ಫಾರೆಸ್ಟರ್ ಪೊನ್ನಪ್ಪʼ ಮಲೆನಾಡಿನಲ್ಲಿ ಬದಲಾದ ಮತ್ತು ಸಾಮಾಜಿಕ ವ್ಯವಸ್ಥೆಯ ಸುತ್ತಲೂ ಹೆಣೆದಿರುವ ಆರ್ಥಿಕ ಕಾದಂಬರಿ. ಇಲ್ಲೊಂದು ಜೀವನವಿದೆ, ಬದಲಾವಣೆ ಇದೆ ಮತ್ತು ಆ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲು ಆಗದ ಆರ್ದ್ರತೆ ಇದೆ” ಎನ್ನುತ್ತಾರೆ ಲೇಖಕ ವಿನಯ್ ಮಾಧವ್. ಲೇಖಕ ನೌಶಾದ್ ಜನ್ನತ್ತ್ ರವರ ʻಫಾರೆಸ್ಟರ್ ಪೊನ್ನಪ್ಪʼ ಪುಸ್ತಕಕ್ಕೆ ಅವರು ಬರೆದ ಮುನ್ನುಡಿಯ ಸಾಲುಗಳು ಇಲ್ಲಿವೆ...
“ಮಲೆನಾಡಿನ ಜನರ ಬದುಕಿನಲ್ಲಿ ಮಹತ್ತರ ತಿರುವು ಬಂದಿದ್ದು ತೊಂಬತ್ತನೇ ದಶಕದ ಆದಿಯಲ್ಲಿ. ಕಾಫಿ ಬೋರ್ಡ್…
ವಿಧ: ಪುಸ್ತಕ ವಿಮರ್ಶೆ
January 13, 2023
ಹಿರಿಯ ನಾಗರೀಕರ ಇಳಿಗಾಲದ ಬದುಕನ್ನು ಕುರಿತು ಹೇಳುವ ಈ ಕಾದಂಬರಿ, ಹೆತ್ತವರನ್ನು ಕಾಡಿಸಿ ಪೀಡಿಸಿ ಕಣ್ಣೀರು ಹಾಕಿಸುವ ಹಳೆಯ ಸಿನಿಮಾವಾಗಬಹುದಾದಂತಹ ಲಕ್ಷಣಗಳಿದ್ದರೂ ಅದನ್ನು ಹಾಗಾಗದಂತೆ ತಡೆಯಲು ಇಲ್ಲಿ ಹಲವಾರು ಅಂಶಗಳಿವೆ. ಮುಖ್ಯವಾಗಿ ಪ್ರೇಮಕಥೆ. ಅದು ಹದಿಹರೆಯದ್ದಲ್ಲ; ಪ್ರೌಢಾವಸ್ಥೆಯದ್ದು, ಗಾಢವಾದದ್ದು ಮತ್ತು ಕೊನೆಯಲ್ಲಿ ಬರುವ ಅನಿರೀಕ್ಷಿತ ತಿರುವು. ಈ ಎರಡು ಅಂಶಗಳು ಇಡೀ ಕಾದಂಬರಿಯ ಹೈಲೈಟ್ಸ್. ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿಯವರ 'ಅಗಮ್ಯ' ಕಾದಂಬರಿಯ ಬಗ್ಗೆ ನನ್ನ ಅನಿಸಿಕೆ…
ವಿಧ: ಪುಸ್ತಕ ವಿಮರ್ಶೆ
January 12, 2023
ಇತಿಹಾಸ, ವಿಜ್ಞಾನದ ಮಾಹಿತಿಗಳನ್ನು ಸೊಗಸಾಗಿ ಬರೆಯುವ ಲೇಖಕರಾದ ಕೆ ನಟರಾಜ್ ಅವರ ನೂತನ ಕೃತಿ ‘ಕೊರೋನಾ - ಈ ಜಗ ತಲ್ಲಣ'. ಪುಸ್ತಕದ ಬೆನ್ನುಡಿ ಹೇಳುವಂತೆ “ಕೊರೋನಾ ನಮ್ಮ ಕಾಲದ ಒಂದು ದೊಡ್ಡ ದುಃಸ್ವಪ್ನ. ಅದೆಷ್ಟು ಜನ ಆತ್ಮೀಯರನ್ನು ನಾವು ಕಳೆದುಕೊಂಡಿದ್ದೇವೆ... ಇದಕ್ಕೆ ಬಲಿ ತೆತ್ತ ಮಹನೀಯರೆಷ್ಟು? ಇಡೀ ಪ್ರಪಂಚವೇ ಕಳೆದುಕೊಂಡದ್ದೆಷ್ಟು? ಇದರ ವಿರುದ್ಧದ ಹೋರಾಟದ ಬಲಿದಾನಗಳನ್ನು ನೆನಪಿಸಿಕೊಳ್ಳದಷ್ಟು ಬಲಹೀನರಾಗಿಬಿಟ್ಟಿದ್ದೇವೆ ! ಆಗಿನ ನಮ್ಮ ಮನಸ್ಥಿತಿಯನ್ನು ನೆನಪಿಸಿಕೊಂಡರೆ ನಾವು…
ವಿಧ: ಪುಸ್ತಕ ವಿಮರ್ಶೆ
January 12, 2023
ನಿಕ್ ಗ್ರೀವ್ಸ್ ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿ ನಿರೂಪಿಸಿದ ಆಫ್ರಿಕಾದ 36 ದಂತಕತೆಗಳ ಮತ್ತು ಜನಪದ ಕತೆಗಳ ಸಂಕಲನ ಇದು. ಇಂಗ್ಲೆಂಡಿನಲ್ಲಿ ಹುಟ್ಟಿದ ಅವರು ಅಲ್ಲೇ ಶಿಕ್ಷಣ ಪಡೆದರು. ಅವರ ಕಾಲೇಜು ವ್ಯಾಸಂಗ ಭೂಗರ್ಭಶಾಸ್ತ್ರ ಮತ್ತು ಪರಿಸರ ವಿಜ್ನಾನದಲ್ಲಿ. ಅನಂತರ ದೊಡ್ಡ ಗಣಿ ಪ್ರದೇಶದಲ್ಲಿ ದುಡಿಯಲು ದಕ್ಷಿಣ ಆಫ್ರಿಕಾಕ್ಕೆ ಹೋದರು. ತಮ್ಮ ಕೆಲಸದ ನಿಮಿತ್ತ ದಕ್ಷಿಣ ಮತ್ತು ನೈಋತ್ಯ ಆಫ್ರಿಕಾ, ಜಿಂಬಾಬ್ವೆ ಮತ್ತು ಬೊಟ್ಸ್-ವಾನಾ ದೇಶಗಳ ಕುಗ್ರಾಮಗಳಿಗೆ ಹೋಗಬೇಕಾಯಿತು. ಈ ಅವಧಿಯಲ್ಲಿ…
ವಿಧ: ಪುಸ್ತಕ ವಿಮರ್ಶೆ
January 11, 2023
ವೃದ್ಧರಲ್ಲಿ ಈ ಮಾನಸಿಕ ಒತ್ತಡಗಳು ಹೇಗೆ ಬರುತ್ತದೆ, ಅವರ ಯೋಚನಾ ಲಹರಿ ಹೇಗೆ ಇರುತ್ತದೆ. ವಯಸ್ಸಾದಂತೆ ಹೇಗೆ ಅವರು ದಿನದಿಂದ ದಿನಕ್ಕೆ ಸೂಕ್ಷ್ಮ ಮನಸ್ಸಿನವರಾಗುತ್ತಾರೆ. ಈ ಒತ್ತಡಗಳಿಂದ ಹೊರ ಬರುವುದು ಹೇಗೆ? ಅದಕ್ಕೆಲ್ಲ ಏನೇನು ಮಾಡಬೇಕೆಂದು ಸವಿವರವಾಗಿ ತಿಳಿಸಿದ್ದಾರೆ. ಡಾ.ಸಿ.ಆರ್.ಚಂದ್ರಶೇಖರ್ ಅವರ “ವೃದ್ಧರ ಮನಸ್ಸು ಹೀಗೇಕೆ?” ಪುಸ್ತಕದೊಳಗಿನ ಸಮಾಧಾನದ ಮಾತುಗಳು ನಿಮಗಾಗಿ.
ಲೇಖಕರು ನಿಮಾನ್ಸ್ ಆಸ್ಪತ್ರೆಯ ಉಪ ವೈದ್ಯ ಅಧೀಕ್ಷರು ಹಾಗೂ ಮನಶಾಸ್ತ್ರಜ್ಞರು. ಲೇಖನವನ್ನು ಪ್ರತಿಯೊಬ್ಬರೂ…
ವಿಧ: ಪುಸ್ತಕ ವಿಮರ್ಶೆ
January 10, 2023
ಭರವಸೆಯ ಕಥೆಗಾರ ಕೆ.ನಲ್ಲತಂಬಿ ಬರೆದ ಕಥೆಗಳ ಸಂಕಲನ -’ಅತ್ತರ್’. ನಾವು ಕಂಡ ಜಗತ್ತೇ ನಲ್ಲತಂಬಿ ಅವರ ಕಕ್ಷೆಯಲ್ಲಿ ಕೌತುಕ ಹುಟ್ಟಿಸಿ ಹೊಸ ವೇಷ ತೊಟ್ಟು ನಮಗೆ ಗೋಚರವಾಗುತ್ತದೆ. ಅವರ ಕ್ಯಾಮೆರಾ ಕಣ್ಣುಗಳು ಅಷ್ಟು ಸೃಜನಶೀಲ ಮತ್ತು ಸುಂದರ! ಪ್ರಸ್ತುತ ಲೋಕರೂಢಿ ವ್ಯಾಪಾರ ಸಂಬಂಧಗಳಲ್ಲಿನ ಅನೇಕ ಸೂಕ್ಷ್ಮ ವಿಚಾರಗಳು ಈ ಸಂಕಲನದ ಕಥಾವಸ್ತುಗಳಾಗಿವೆ. ಅದನ್ನು ಸಮಕಾಲೀನತೆಯ ಏಕಾವಳಿ ಎಂದು ಬಣ್ಣಿಸಬಹುದು ಎನ್ನುತ್ತಾರೆ ಲೇಖಕ ಶ್ರೀಧರ ಬನವಾಸಿ. ಅವರು ಕೆ.ನಲ್ಲತಂಬಿಯವರ “ಅತ್ತರ್” ಕೃತಿಗೆ ಬರೆದ…
ವಿಧ: ರುಚಿ
January 08, 2023
ವೃತ್ತಾಕಾರವಾಗಿ ಕತ್ತರಿಸಿದ ಬಾಳೆದಿಂಡಿನ ತುಂಡುಗಳೊಂದಿಗೆ, ಸಾಸಿವೆ, ತೆಂಗಿನ ತುರಿ, ಒಣಮೆಣಸು, ಉಪ್ಪು, ಕಾಯಿ ಮೆಣಸು ರುಬ್ಬಬೇಕು. ಸಿಹಿ ಮಜ್ಜಿಗೆ(ಆ ದಿನ ಮಾಡಿದ ಮಜ್ಜಿಗೆ) ಸೇರಿಸಿ ಮಿಶ್ರ ಮಾಡಿ. ಒಗ್ಗರಣೆ ನೀಡಿ. (ಗಾಂಧಾರಿ ಮೆಣಸು ಸಹ ಬಳಸಬಹುದು).
ಬಾಳೆದಿಂಡಿನ ಹಸಿ ಸಲಾಡ್, ಜ್ಯೂಸ್, ಪಲ್ಯ, ಸಾಂಬಾರು, ರೊಟ್ಟಿ, ದೋಸೆ ಸಹ ಮಾಡಬಹುದು. ಆರೋಗ್ಯಕ್ಕೆ ತುಂಬಾ ಒಳ್ಳೆಯದು.
-ರತ್ನಾ ಕೆ ಭಟ್,ತಲಂಜೇರಿ
ವಿಧ: ಪುಸ್ತಕ ವಿಮರ್ಶೆ
January 07, 2023
ಹೇರಳವಾಗಿ ಗ್ರಾಮೀಣ ಪದಗಳು, ಗಾದೆಗಳು, ನುಡಿಗಟ್ಟುಗಳಿಂದ ಕೂಡಿರುವ, ಅನುವಾದಿಸಲು ಕ್ಲಿಷ್ಟವೆನಿಸುವ ಈ ಕಾದಂಬರಿಯನ್ನು ಕೆ.ನಲ್ಲತಂಬಿಯವರು ಸೊಗಸಾಗಿಯೂ, ಸಮರ್ಥವಾಗಿಯೂ ಅನುವಾದಿಸಿದ್ದಾರೆ ಎನ್ನುತ್ತಾರೆ ಲೇಖಕಿ, ಕಾದಂಬರಿಕಾರ್ತಿ ಆಶಾ ರಘು. ಲೇಖಕ ಕೆ. ನಲ್ಲತಂಬಿಯವರ ಅರ್ಧನಾರೀಶ್ವರ ಕೃತಿಯ ಕುರಿತು ಅವರು ಬರೆದ ಲೇಖನ ನಿಮ್ಮ ಓದಿಗಾಗಿ..
ಪೆರುಮಾಳ್ ಮುರುಗನ್ ಅವರ 'ಮದೋರುಬಾಗನ್' ಎಂಬ ತಮಿಳು ಕಾದಂಬರಿಯ ಕನ್ನಡ ಅನುವಾದ ಕೆ.ನಲ್ಲತಂಬಿಯವರ 'ಅರ್ಧನಾರೀಶ್ವರ' ಈಚೆಗೆ ನಾನು ನನ್ನ ಕಾದಂಬರಿಯ…
ವಿಧ: ಪುಸ್ತಕ ವಿಮರ್ಶೆ
January 05, 2023
ಒಬ್ಬ ಲೇಖಕಿಯ ಹಲವು ಬರಹಗಳ ಹಾಸುಹೊಕ್ಕಿನಲ್ಲಿಯೇ ಆಕೆಯ ಜೀವನದರ್ಶನ ಮಾಗುತ್ತದೆ, ಸಂಕೀರ್ಣವಾಗುತ್ತದೆ. ಇವರ ‘ಅ ಟೆರಿಬಲ್ ಮೇಟ್ರಿಯಾರ್ಕಿ’, ‘ಬಿಟರ್ ವುಮನಹುಡ್’ ಮುಂತಾದ ಕಾದಂಬರಿಗಳೂ ಕನ್ನಡಕ್ಕೆ ಬಂದರೆ ಹಲಬಗೆಯ, ಭಿನ್ನ, ಸಂಕೀರ್ಣ ಕಥನವಿನ್ಯಾಸವೊಂದು ಕನ್ನಡಕ್ಕೆ ದಕ್ಕುತ್ತದೆ ಎಂಬ ನಂಬಿಕೆ ನನ್ನದು ಎನ್ನುತ್ತಾರೆ ಲೇಖಕಿ ಜ.ನಾ. ತೇಜಶ್ರೀ. ಅವರು ರವಿ ಹಂಪಿ ಅವರ ನದಿಯೊಂದು ನಿದ್ರಿಸಿದಾಗ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...
“ಕನ್ನಡ ನೆಲದಲ್ಲಿ ಕಣ್ಣುಬಿಡುತ್ತಿರುವ ನಾಗಾಲ್ಯಾಂಡಿನ…