ವೃದ್ಧರ ಮನಸ್ಸು ಹೀಗೇಕೆ?

ವೃದ್ಧರ ಮನಸ್ಸು ಹೀಗೇಕೆ?

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಸಿ ಆರ್ ಚಂದ್ರಶೇಖರ್
ಪ್ರಕಾಶಕರು
ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು
ಪುಸ್ತಕದ ಬೆಲೆ
ಬೆಲೆ: 45.00, ಮುದ್ರಣ: 2014

ವೃದ್ಧರಲ್ಲಿ ಈ ಮಾನಸಿಕ ಒತ್ತಡಗಳು ಹೇಗೆ ಬರುತ್ತದೆ, ಅವರ ಯೋಚನಾ ಲಹರಿ ಹೇಗೆ ಇರುತ್ತದೆ. ವಯಸ್ಸಾದಂತೆ ಹೇಗೆ ಅವರು ದಿನದಿಂದ ದಿನಕ್ಕೆ ಸೂಕ್ಷ್ಮ ಮನಸ್ಸಿನವರಾಗುತ್ತಾರೆ. ಈ ಒತ್ತಡಗಳಿಂದ ಹೊರ ಬರುವುದು ಹೇಗೆ? ಅದಕ್ಕೆಲ್ಲ ಏನೇನು ಮಾಡಬೇಕೆಂದು ಸವಿವರವಾಗಿ ತಿಳಿಸಿದ್ದಾರೆ. ಡಾ.ಸಿ.ಆರ್.ಚಂದ್ರಶೇಖರ್‌ ಅವರ “ವೃದ್ಧರ ಮನಸ್ಸು ಹೀಗೇಕೆ?” ಪುಸ್ತಕದೊಳಗಿನ ಸಮಾಧಾನದ ಮಾತುಗಳು ನಿಮಗಾಗಿ.

ಲೇಖಕರು ನಿಮಾನ್ಸ್ ಆಸ್ಪತ್ರೆಯ ಉಪ ವೈದ್ಯ ಅಧೀಕ್ಷರು ಹಾಗೂ ಮನಶಾಸ್ತ್ರಜ್ಞರು. ಲೇಖನವನ್ನು ಪ್ರತಿಯೊಬ್ಬರೂ ಓದುವಂತಹದ್ದು. ವೃದ್ಧರ ಚಿಂತನೆ ಹೇಗೆ ಇರುತ್ತವೆ. ಅವರು ಯೋಚಿಸುವ ಪರಿ ವಯಸ್ಸಾದಂತೆ ಹೇಗೆ ಬದಲಾಗುತ್ತದೆ. ಅದಕ್ಕೆ ಪರಿಹಾರ ಏನು ಎಂದು ಬಹಳ ಚೆನ್ನಾಗಿ ಹೇಳಿದ್ದಾರೆ.

ವೃದ್ಧರ ಸಮಸ್ಯೆಗಳು ಹಾಗೂ ಸಮಾಧಾನ: ವೃದ್ಧರಲ್ಲಿ ಆಗುವ ಭಾವನಾತ್ಮಕ ಹಾಗೂ ಶಾರೀರಿಕ ಸಮಸ್ಯೆಯ ಬಗ್ಗೆ ಮತ್ತು ಅದರಿಂದ ಹೊರ ಬರುವುದು ಹೇಗೆ ಎಂದು ಪ್ರಶ್ನೋತ್ತರ ಮೂಲಕ ಲೇಖಕರು ವೃದ್ಧರ ಮನಸ್ಥಿತಿಗಳ ಬಗ್ಗೆ ತರೆದು ಇಟ್ಟಿದ್ದಾರೆ. ಹಾಗೆ ಅವರನ್ನು ನೋಡಿಕೊಳ್ಳುವುದು ಮತ್ತು ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿ ಕೊಳ್ಳಬಹುದು ಎಂದು ತಿಳಿಸಿದ್ದಾರೆ . ಸೂಕ್ತ ಸಲಹೆಯನ್ನು ನೀಡಿ ಸಮಸ್ಯೆಗೆ ಪರಿಹಾರವನ್ನು ಸೂಚಿಸಿದ್ದಾರೆ.

ಹಿರಿಯ ಪ್ರಜೆಗಳಲ್ಲಿ ಮಾನಸಿಕ ಒತ್ತಡಗಳು ಹಾಗೂ ಪರಿಹಾರ:ವೃದ್ಧರಲ್ಲಿ ಈ ಮಾನಸಿಕ ಒತ್ತಡಗಳು ಹೇಗೆ ಬರುತ್ತದೆ, ಅವರ ಯೋಚನಾ ಲಹರಿ ಹೇಗೆ ಇರುತ್ತದೆ. ವಯಸ್ಸಾದಂತೆ ಹೇಗೆ ಅವರು ದಿನದಿಂದ ದಿನಕ್ಕೆ ಸೂಕ್ಷ್ಮ ಮನಸ್ಸಿನವರಾಗುತ್ತಾರೆ. ಈ ಒತ್ತಡಗಳಿಂದ ಹೊರ ಬರುವುದು ಹೇಗೆ? ಅದಕ್ಕೆಲ್ಲ ಏನೇನು ಮಾಡಬೇಕೆಂದು ಸವಿವರವಾಗಿ ತಿಳಿಸಿದ್ದಾರೆ

ಇಳಿವಯಸ್ಸಿನ ಸಾಮಾನ್ಯ ಮಾನಸಿಕ ಖಾಯಿಲೆಗಳು: ಅರವತ್ತು ವರ್ಷದ ನಂತರ ಅರಳು ಮರಳು ಎಂದು ಹೇಳುತ್ತಾರೆ. ಅರವತ್ತರ ನಂತರ ಮನಸ್ಸು ದಿನದಿಂದ ದಿನಕ್ಕೆ ಸೂಕ್ಷ್ಮ ಆಗುತ್ತಾ ಹೋಗುತ್ತದೆ. ಒಂದು ಚೂರೂ ನೋವಾದರೂ ತನಗೆ ಏನೋ ಆಯಿತು ಎನ್ನುವಂತೆ ಆಗುತ್ತದೆ. ಅದರ ಜೊತೆಗೆ ವಯೋ ಸಹಜ ಖಾಯಿಲೆಗಳು ಬಂದರೆ ಕೇಳುವುದೇ ಬೇಡ ಏನೋ ಜೀವನವೇ ಮುಗಿಯಿತು ಎನ್ನುವಂತೆ ಚಿಂತೆ ಮಾಡುತ್ತಾರೆ. ಹೀಗೆ ಆರೋಗ್ಯ, ಮಕ್ಕಳ ನಿರ್ಲಕ್ಷ್ಯ, ವೃದ್ಧರ ಹಠಮಾರಿತನ ಹಲವಾರು ಕಾರಣಕ್ಕೆ ಮಾನಸಿಕ ಖಾಯಿಲೆಗಳು ಶುರು ಆಗುತ್ತವೆ ಎನ್ನುವುದು ಡಾಕ್ಟರ್ ವಾದ.

ಇಳಿವಯಸ್ಸಿನ ಮರೆವಿನ ರೋಗ - ಡೆಮೆನ್ಷಿಯ ಲಕ್ಷಣಗಳು:  ಈ ರೋಗದ ಲಕ್ಷಣಗಳು ಹಾಗೂ ಈ ರೋಗ ಗುಣಮುಖವಾಗದೆ ಇದ್ದರೂ ನಮ್ಮ ಹಿಡಿತದಲ್ಲಿ ಹೇಗೆ ಇಡಬಹುದು. ಅದಕ್ಕೆ ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ಅಂತಹ ರೋಗಿಯನ್ನು ನೋಡಿಕೊಳ್ಳುವ ರೀತಿಯನ್ನು ವಿವರಿಸಿದ್ದಾರೆ. ಒಟ್ಟಾರೆಯಾಗಿ ಎಲ್ಲರೂ ಓದಿ ತಿಳಿಯಲೇ ಬೇಕಾದಂತಹ ವಿಷಯ. ವೃದ್ಧರ ಮನಸ್ಥಿತಿ ಹೇಗೆ ಇರುತ್ತದೆ, ಅವರನ್ನು ಕಾಳಜಿ ಮಾಡುವುದೂ ಹೇಗೆ? ವಯಸ್ಸು ಆದಂತೆ ಭಯ , ನಕಾರಾತ್ಮಕ ಚಿಂತನೆಗಳು ಜಾಸ್ತಿ ಆಗಿ ಹಿರಿಯರಲ್ಲಿ ಮತ್ತಷ್ಟು ಒತ್ತಡವನ್ನು ಉಂಟು ಮಾಡುತ್ತಿದೆ. ಹಾಗಾಗಿ ಇವೆಲ್ಲದರಿಂದ ಹೊರ ಬರುವುದು ಹೇಗೆ ಎಂದು ತಿಳಿಯಲು ಪುಸ್ತಕವನ್ನು ಓದಿ.

- ಛಾಯಾ ಹೆಗಡೆ