ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 11

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 11

ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.

 

ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.

84) ಮೂಲ ಹಾಡು - ಪಂಕ ಹೋತೀ ತೋ ಉಡ ಆತೀರೇ

ನನ್ನ ಅನುವಾದ -

ರೆಕ್ಕೆ ಇದ್ದಿದ್ರೆ ಹಾರಿ ಬರ್ತಿದ್ದೆ

ಇನಿಯಾ ನಿನ್ನಲ್ಲಿಗೆ

ನನ್ನ ಮನದ ಬೇಗೆ

ನಿಂಗೆ ತೋರಿಸಲು

 

85) ಮೂಲ ಹಾಡು - ತುಮ್ಹೆ ಅಪನಾ ಬನಾನೇ ಕೀ

ನನ್ನ ಅನುವಾದ - 

ನಿನ್ನ ನನ್ನವಳಾಗಿಸುವ ಪ್ರತಿಜ್ಞೆ

ಮಾಡಿರುವೆ, ಮಾಡಿರುವೆ

ನಿನ್ನ ಕಣ್ಣಲ್ಲೂ ಅದೇ ಬಯಕೆ

ಕಂಡಿರುವೆ, ಕಂಡಿರುವೆ

 

ಅನುರಾಗ ಏನೆಂದು

ನಾ ಜಗಕೆ ತೋರುವೆನು

ನಿನ ತೋಳಲ್ಲೆ ನಾ ಇಹಪರವ

ಕಾಣುವೆನು, ಕಾಣುವೆನು

ನನ ಕಣಕಣದಿ ನೀ ಇಂತು

ಸೇರಿರುವೆ, ಸೇರಿರುವೆ

 

 

86) ಮೂಲ  ಮಲೆಯಾಳಂ ಹಾಡು - ನೀರಾಡುವಾನ್ ನದಿಯಿಲ್

ನನ್ನ ಅನುವಾದ -

ನೀರಾಟಕೆ, ನದಿಯಲಿ ನೀರಾಟಕೆ 

ನೀನೇಕೆ ತಡ ಮಾಡಿದೆ ಬೆಳುದಿಂಗಳೇ

 

87) ಮೂಲ ಹಿಂದಿ ಹಾಡು - ತುಂ ಚಲೇ ಗಮೇ

ನನ್ನ ಅನುವಾದ - 

ನೀನು ಹೊರಟುಹೋದೆ

ಏನನ್ನೂ ಹೇಳದೆ

ನನ್ನ ಕಾಲಿನ ಅಡಿಯ

ನೆಲವೇ ಕುಸಿದಿದೆ

ಹೃದಯ ಹೇಳಿದೆ 

ನೀನು ಮರಳಿ ಬಾರೆ

ಬಹುಶಃ ನೀನಿಲ್ಲದೆ

ನಾ ಬಾಳಲಾರೆನು

ನೀನಿಲ್ಲದೆ ನೀನಿಲ್ಲದೆ

ನೀನಿಲ್ಲದೆ ನೀನಿಲ್ಲದೆ

 

88) ಮೂಲ ಹಿಂದಿ ಹಾಡು - ಹುಸ್ನ್ ಪಹಾಡೊಂಕೀ

ನನ್ನ ಅನುವಾದ - 

ಈ ಸುಂದರ ಹಿಮಗಿರಿಗಳಲಿ , ಓ ಇನಿಯಾ

ಈ ಸುಂದರ ಹಿಮಗಿರಿಗಳಲಿ 

ಇಡೀ ವರ್ಷ ಚಳಿಗಾಲವೇ ,

ಹಿತವಾದ ಚಳಿಗಾಲವೇ

ಈ ಕಾಲ ಸುಖಕಾಲವೇ

ನನ್ನೊಲವೇ,  ಈ ಕಾಲ ಸುಖಕಾಲವೇ

ಇನ್ನೆಲ್ಲಿ ಚಳಿಗಾಲ, ಜೊತೆಯಲ್ಲಿ

ಬಿಸಿ ಯೌವ್ವನೆ ನೀ ಇರುವಲ್ಲಿ

 

ಎಲ್ಲಿಂದ ಬಂದೆ ಓ ನನ್ನ ಗೆಳೆಯ

ಬಂದಿಲ್ಲಿ ನನ್ನ ಬಾಳಲ್ಲಿ ಬೆರೆತೆ

ಮಾಡುವುದು ಮುಂದೇನು

ನಾನಂತೂ ಅರಿಯೆ

ನೋಡಿಲ್ಲಿ ತೊರೆ ನೀರ

ಕೈಯಲ್ಲಿ ಇದ ಹಿಡಿದು

ಕೆಲ ಆಣೆಗಳ ಮಾಡೋಣ

ಈ ನೀರೋ ತಾ ನಿಲ್ಲದು,

ಮಾಡೋಣ ಹಿಮಗಿರಿಗಳ ಆಣೆ

ಅವು ತಾನೆ ಶಾಶ್ವತವು !

 

 

89) ಮೂಲ ಹಿಂದಿ ಹಾಡು - ಮೇರೆ ನೈನಾ ಸಾವನ ಭಾದೋಂ

ನನ್ನ ಅನುವಾದ -

ನನ್ನೀ ಕಣ್ಣು ಶ್ರಾವಣ ಮೇಘ

ಆದರೂ ಆರದು ಬೆಂಕಿ

ಆರದು ಮನಸ್ಸಿನ ಬೆಂಕಿ

 

ಕಳೆದಿವೆ ಎನಿತೋ ವರುಷ

ಕಲೆತು ಅಗಲಿ ನಾವು

ಮಿಂಚಿನ ರೂಪದಿ ಆಗಸದಲ್ಲಿ

ಕಳೆದಾ ಸಮಯದ ರೇಖೆ

ನಿನ್ನನು ಕಂಡೆ ನಾನು

ನೋಯುವ ಮನಕೆ ಆಸೆಯ ಕಿರಣ

ಸುಖವು ತಾ ಅರೆಗಳಿಗೆ

ಆರದು ಮನಸ್ಸಿನ ಬೆಂಕಿ

 

90) ಮೂಲ ಹಿಂದಿ ಹಾಡು - ಜಬ ಜಬ ತೂ ಮೇರೆ ಸಾಮನೆ ಆಯೆ

ನನ್ನ ಅನುವಾದ - 

ಎದುರಿಗೆ ನೀ ಬಂದಾಗಲೆಲ್ಲ

ಮನಸಿನ ಸಂಯಮ ಚೂರಾಗುವುದೇ

ಮನಸ್ಸಿನ ಸಂಯಮ ಚೂರಾಗುವುದು

 

91)  ಮೂಲ ಹಿಂದಿ ಹಾಡು - ಝೂಮತೀ ಚಲೀ ಹವಾ

ನನ್ನ ಅನುವಾದ -

ತಂಪು ಗಾಳಿ ಬೀಸಿತು

ಅವಳ ನೆನಪು ತಂದಿತು

ಆರುತಿರುವ  ಉರಿಯನು

ಮತ್ತೆ ಭರದಿ ಉರಿಸಿತು

 

92) ಮೂಲ ಹಿಂದಿ ಹಾಡು - ಪಂಛೀ ನದಿಯಾ ಪವನ್ ಕೇ ಝೋಂಕೆ

ನನ್ನ ಅನುವಾದ -

ಯಾವ ಗಡಿಯೂ ತಡೆಯದು ಇವನು

ಹಾರುವ ಹಕ್ಕಿ, ಬೀಸುವ ಗಾಳಿ, ಹರಿಯುವ ನದಿಯ

ಗಡಿಗಳೋ ಇಹವು ಮನುಜರಿಗಾಗಿ

ನಾನೂ ನೀನು ಏನ ಪಡೆದೆವು ಮನುಜರು ಆಗಿ

 

 

 

 

 

 

 

 

Rating
Average: 4 (1 vote)