ನನ್ನ ಗುರುವರ್ಯ ಪ್ರೊ. ರಾಜರತ್ನಂ--ಪ್ರೊ. ಎಚ್. ಆರ್. ಆರ್. ರಾವ್ 

ನನ್ನ ಗುರುವರ್ಯ ಪ್ರೊ. ರಾಜರತ್ನಂ--ಪ್ರೊ. ಎಚ್. ಆರ್. ಆರ್. ರಾವ್ 

ಚಿತ್ರ

ಬೆಂಗಳೂರಿನ ಸೆಂಟ್ರಲ್ ಕಾಲೇಜ್  ನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾಗ, ಎಚ್. ಆರ್. ರಾಮಕೃಷ್ಣರಾವ್ ಅವರ  ಹೆಮ್ಮೆಯ ಗುರುವರ್ಯರುಗಳಾದ, ಪ್ರೊ. ವಿ. ಸೀ,  ಪ್ರೊ. ಜಿ. ಪಿ. ರಾಜರತ್ನಂ ಮತ್ತು ಸೆಂಟ್ರೆಲ್ ಕಾಲೇಜಿನ  ಕರ್ನಾಟಕ ಸಂಘದ ಕಾರ್ಯ ವೈಖರಿಗಳನ್ನು ತಮ್ಮ ಸ್ವಂತ ಕೈಬರಹದಲ್ಲಿ  ಹೊಳಲ್ಕೆರೆಯಲ್ಲಿದ್ದ ಅವರ ತಂದೆ ಶ್ರೀ. ಎಚ್. ವಿ. ರಂಗರಾಯರಿಗೆ ಪತ್ರಬರೆದಿದ್ದರು.

ರಾಮಕೃಷ್ಣರಾಯರ  ತಮ್ಮ ಎಚ್ಚಾರೆಲ್, ಆ ಪತ್ರದಲ್ಲಿ ತಮ್ಮ ಅಣ್ಣನವರು ಬರೆದ ಮಾಹಿತಿಗಳನ್ನು ಓದುಗರ  ಬಳಿ ಹಂಚಿಕೊಂಡಿದ್ದಾರೆ.   

                                                          "ಗುರು ಶಿಷ್ಯ ಪರಂಪರೆ " :

ಕಾಲೇಜಿನಲ್ಲಿ ಭೌತಶಾಸ್ತ್ರದ  ಪಠ್ಯ  ಪುಸ್ತಕಗಳ  ಲೇಖಕ, ಅಂತರಿಕ್ಷ ಗ್ರಹಗಳ  ಬಗ್ಗೆ  ಆಕಾಶವಾಣಿ, ದೂರದರ್ಶನದಲ್ಲಿ ಜನಪ್ರಿಯ ಭಾಷಣಕಾರ/ಸಂವಹನಕಾರ  ಪ್ರೊ. ರಾಮಕೃಷ್ಣ ಸೆಪ್ಟೆಂಬರ್ ೧೨ ೨೦೨೨ ರಂದು ಬೆಂಗಳೂರಿನಲ್ಲಿ  ತೀರಿಕೊಂಡರು. ವಿಜ್ಞಾನದ  ಅತ್ಯುತ್ತಮ ಪ್ರಾಧ್ಯಾಪಕರಾಗಿದ್ದ ಅವರು, ನನ್ನ ಪ್ರೀತಿಯ ಅಣ್ಣನವರೂ ಹೌದು. ಅವರು ಮರಣಿಸಿ ಸುಮಾರು ೨ ತಿಂಗಳ ಮೇಲಾದರೂ,  ಈಗಲೂ ನನ್ನ ಕಣ್ಣಿನ ಮುಂದೆ ಸದಾ  ಅವರು ಬರುತ್ತಲೇ ಇರುತ್ತಾರೆ. 

ಹಿಂದೆ  ಬೆಂಗಳೂರಿನ ಸೆಂಟ್ರೆಲ್ ಕಾಲೇಜಿನಲ್ಲಿ ಅಧ್ಯಯನ  ಮಾಡುವಾಗ ರಾಮಕೃಷ್ಣ, ಪ್ರೊ. ಜಿ. ಪಿ. ರಾಜರತ್ನಂ ರವರ ಅಚ್ಚು- ಮೆಚ್ಚಿನ ಶಿಷ್ಯರಾಗಿದ್ದರು.  ಅವರು  ತಮ್ಮ ತಂದೆಯವರಿಗೆ  ಬರೆದಿದ್ದ ಪತ್ರಗಳಲ್ಲಿ  ತಮ್ಮ ಗುರುಗಳ ಮೇರು ವ್ಯಕ್ತಿತ್ವವನ್ನು ಮತ್ತು ಅವರ ಅಚ್ಚುಕಟ್ಟುತನ, ಮೊದಲಾದ ವಿಶೇಷ ಗುಣಗಳನ್ನು  ವಿವರವಾಗಿ ಬರೆದು ತಿಳಿಸುತ್ತಿದ್ದರು. ಊರಿಗೆ ಬಂದಾಗ ಮನೆಯಲ್ಲಿ ತಾಯಿಯವರ ಜತೆ ಮಾತಾಡುವಾಗ ಬಹಳವಾಗಿ  ಜಿ. ಪಿ. ಆರ್ ರವರ ಮಾತುಗಳೇ ನಮ್ಮ ಮನೆಯ ವಿಷಯಗಳಲ್ಲಿ ಬೆರೆತಿರುತ್ತಿದ್ದವು. ಮೀಡಿಯಾದಲ್ಲಿ  ರಾಜರತ್ನಂ ಅವರ ಬಗ್ಗೆ  ನಾನು ದಾಖಲಿಸಿರುವ ಕೆಳಗಿನ  ಕೆಲವು ಮಾಹಿತಿಗಳನ್ನು ಅಪೇಕ್ಷಿಸುವುದು ಸಾಧ್ಯವಿಲ್ಲ.  ಪ್ರೊ. ಜಿ. ಪಿ. ರಾಜರತ್ನಂ ಅಭಿಮಾನಿಗಳ ಹತ್ತಿರ  ವಿಷಯಗಳನ್ನು ಹಂಚಿಕೊಳ್ಳುವಾಸೆಯಿಂದ  ಈ ಲೇಖನದ ತಯಾರಿ ಮಾಡಿಕೊಂಡೆ.  

-ಎಚ್ಚಾರೆಲ್  

ಪ್ರೊ. ರಾಜರತ್ನಂರವರು,  ಸೆಂಟ್ರಲ್ ಕಾಲೇಜಿಗೆ ಸೇರಿದನಂತರ  ತಮ್ಮಪಾಲಿಗೆ  'ಸೆಂಟ್ರಲ್ ಕಾಲೇಜ್ ಕರ್ನಾಟಕ ಸಂಘ' ನೇಮಿಸಿದ  ಸೆಕ್ರೆಟರಿಯನ್ನು ಆಯ್ಕೆಮಾಡುವ  ಕಾರ್ಯಭಾರವನ್ನು  ನಿಭಾಯಿಸಿದ   ಕಾರ್ಯವೈಖರಿಯನ್ನು ಇಲ್ಲಿ ವಿವರಿಸಿರುವುದನ್ನು ಓದಲು  ಬಹಳ ಮುದವಾಗುತ್ತದೆ.  ರಾಜರತ್ನಂ ರವರು  ಇಬ್ಬರು ಸೆಕ್ರೆಟರಿಗಳ ಅಗತ್ಯವನ್ನು ಮನಗಾಣುತ್ತಿದ್ದರು. ಇಬ್ಬರಿಗೂ ಪ್ರತ್ಯೇಕವಾದ ಆಶುಭಾಷಣ, ಮತ್ತು ಯಾವುದಾದರೂ ಅವರಿಗೆ ಸರಿಕಂಡ  ವಿಷಯದ  ಬಗ್ಗೆ  ಲೇಖನ ಬರೆಯಲು ಕೊಡುತ್ತಿದ್ದರು. ಅದರಲ್ಲಿ ಗೆದ್ದವರು ಆಯ್ಕೆಯಾಗುತ್ತಿದ್ದರು. ಹಾಗೆ ನಾನು  ರಾಮಕೃಷ್ಣರಾವ್,  ಮತ್ತು ಸುಮತಿಂದ್ರನಾಡಿಗ್ (ಮುಂದೆ ಬಹಳ ದೊಡ್ಡ ಬರಹಗಾರರಾಗಿ ಹೆಸರುಮಾಡಿದರು) ಸೆಲೆಕ್ಟ್ ಆದೆವು. ಹಿಂದೆ  ಶ್ರೀ. ಬಿ. ಜಿ. ಎಲ್ ಸ್ವಾಮಿಯವರೂ,  ಸಂಘದ ಕಾರ್ಯದರ್ಶಿಯಾಗಿದ್ದರು. 

ಯಾವುದೇ ಆಯೋಜಿಸಿದ  ಭಾಷಣದ ದಿನ  ಹಲವು ಗಂಟೆಗಳ ಮೊದಲೇ ಸೆಕ್ರೆಟರಿಯವರನ್ನು ತಮ್ಮ ಕೋಣೆ  ಕರೆದು, ನಖ-ಶಿಕಾಂತವಾಗಿ ಟ್ರೇನಿಂಗ್ ಕೊಡುತ್ತಿದ್ದರು. ಅತಿಥಿಗಳನ್ನು  ಹೆಚ್ಚು ಹೊಗಳದೇ ಅವರ  ನೈಜ ಕೊಡುಗೆಗಳನ್ನು ಮಾತ್ರ  ಸಭಿಕರ ಗಮನಕ್ಕೆ ತರುವುದು, ಸಭೆಯಮುಂದೆ ಹೇಗೆ ನಗುಮುಖವನ್ನು ಹೊತ್ತು ನಿಲ್ಲಬೇಕು, ಹಾವಭಾವಗಳು ಹೇಗಿರಬೇಕು. ಹೂಮಾಲೆ ಹಾಕುವಾಗ /ಹೂಗುಚ್ಛ ಕೊಡುವಾಗ ಯಾವ ಕೋನದಲ್ಲಿ ಫೋಟೋತೆಗೆಯುವವರಿಗೆ ಅನುಕೂಲವಾಗುವಂತೆ ನಿಲ್ಲಬೇಕು.  ವಂದನಾರ್ಪಣೆಯಲ್ಲಿ ಎಲ್ಲಾ ಪ್ರಮುಖರ ಹೆಸರಿನ ವಿವರಗಳ ಪಟ್ಟಿಯನ್ನು ಮೊದಲೇ ತಯಾರಿಸಿ ಕೈನಲ್ಲಿ ಇಟ್ಟುಕೊಳ್ಳಬೇಕು  ; ತಡವರಿಸದೆ, ಸಭಿಕರಿಗೆ ಬೇಸರವಾಗದಂತೆ ಪ್ರಮುಖವ್ಯಕ್ತಿಗಳ ಹೆಸರನ್ನು ಬಿಡದೆ ಹೇಳಬೇಕು. ಇಂತಹ ವೈಜ್ಞಾನಿಕ ತಾಲೀಮಿನ ವತಿಯಿಂದ  ಅವರ ಕಾರ್ಯಕ್ರಮಗಳೆಲ್ಲಾ  ಸುಂದರವಾಗಿ ಪೃಸ್ತುತಗೊಂಡು, ಎಲ್ಲರ ಶ್ಲಾಘನೆಗೆ ಪಾತ್ರವಾಗುತ್ತಿದ್ದವು. ಬೇರೆಯವರಿಗೂ  ಹೀಗೆಯೇ ಬೇಜಾರಿಲ್ಲದೆ ಕಲಿಸುತ್ತಿದ್ದ ಅವರ ಶ್ರದ್ಧಾಸಕ್ತಿಗಳು ಅದ್ವಿತೀಯ. ಪಕ್ಕದಲ್ಲೇ ಕುರ್ಚಿಯಮೇಲೆ ಕುಳಿತು  ಇವೆಲ್ಲವನ್ನೂ  ಮೌನವಾಗಿ ವೀಕ್ಷಿಸುತ್ತಿದ್ದ ಪ್ರೊ. ವಿ. ಸೀತಾರಾಮಯ್ಯನವರು ಮುಗುಳ್ನಗೆ ಬೀರುತ್ತಿದ್ದರು. 

೧೯೫೫ ರಲ್ಲಿ   ಬೆಂಗಳೂರಿನ ಸೆಂಟ್ರಲ್  ಕಾಲೇಜಿನಲ್ಲಿ  ಪ್ರೊ. ಸಂಸರ ಬಗ್ಗೆ ಆಯೋಜಿಸಿದ ಅವರ ಕೃತಿಪ್ರದರ್ಶನ ಕಮ್ಮಟದಲ್ಲಿ ಜಿ. ಪಿ. ರಾ ಮಾಡಿಕೊಂಡ ಪೂರ್ವ ಸಿದ್ಧತೆಗಳು ಮಾದರಿಯಾಗಿದ್ದವು. ಅರಸಿಕರೂ ಪ್ರಕಟಿಸಿದ್ದ  ಪುಸ್ತಕಮಳಿಗೆ ಭೇಟಿಯಿತ್ತಾಗ, ಇಣುಕು ಹಾಕುವಂತೆ ಆಕರ್ಷಕವಾಗಿತ್ತು. 'ಕವಿ ಸಂಸರ ಹಸ್ತ ಪ್ರತಿಗಳ ಸಂಗ್ರಹಣೆ', ಹಾಗೂ ಟಿಪ್ಪಣಿಗಳೇ ಮುಂತಾದ ಎಲ್ಲದರ ಪರಿಚಯ ಆಗಿತ್ತು. ಸ್ಟುಡಿಯೋ ಒಳಗೆ ಪ್ರವೇಶಮಾಡಿದವರಿಗೆ  ಒಂದು ಅಪೂರ್ವ ಅನುಭವಾಗಿತ್ತು. ಮಳಿಗೆಗಳೂ ಅಲ್ಲಿದ್ದವು. ನಾನು ಅಲ್ಲಿ 'ಒಬ್ಬ ಸ್ವಯಂ ಸೇವಕ'ನಾಗಿ ಕೆಲಸಮಾಡುತ್ತಿದ್ದೆ. ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪ್ರದರ್ಶನಗಳ ಮಳಿಗೆಗಳು ಅಲ್ಲಿದ್ದವು. ಅವನ್ನು ನೋಡಲು ಬಂದಿದ್ದ ಒಬ್ಬ ಫ್ರೆಂಚ್ ಅಧ್ಯಾಪಕರು, ಕನ್ನಡ ಮಳಿಗೆಯನ್ನೂ  ನೋಡಲು ಬಂದವರು ಅತ್ಯಂತ ಆಸಕ್ತಿಯಿಂದ ಸಂಸರ ಬಗ್ಗೆ ಅನೇಕ ಪ್ರಶ್ನೆಗಳನ್ನು ಹಾಕಿ ಕೇಳಿ ತಿಳಿದುಕೊಂಡರು. ಅಲ್ಲಿಂದ  ತಮ್ಮ ಮನೆಗೆ  ಹೊರಡುವ ಮುಂಚೆ ಅವರು  ಅತ್ಯಂತ ಆಕರ್ಷಕವಾಗಿ  ವಿನ್ಯಾಸಗೊಳಿಸಿದ ರಾಜರತ್ನಂ ಬಗ್ಗೆ ವಿಚಾರಿಸಿ ತಿಳಿದುಕೊಂಡರು. "ಪ್ರೊ. ರಾಜರತ್ನಂ ರವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ" ಎಂದು ಬೇಡಿದರು. ನಾನು "ಅವರು ಪ್ರೊಫೆಸರ್ ಆಗಿರಲಿಲ್ಲ ; ಅಧ್ಯಾಪಕರಾಗಿದ್ದರು" ಎಂದಾಗ "ನನ್ನ ದೇಶದಲ್ಲಿ ಇಂತಹ ಒಂದು ಸಂಶೋಧನಾ ಕೆಲಸ ಮಾಡಿದ್ದರೆ, ಡಾಕ್ಟರೇಟ್ ಸಿಗುತ್ತಿತ್ತು" ಎಂದರು.

ರಾಜರತ್ನಂ  ರ. ಕೃತಿಗಳ ಬಗ್ಗೆ ಈಗಾಗಲೇ ಸಾಕಷ್ಟು ಲೇಖನಗಳು ಬಂದಿವೆ. ಪಟ್ಟಿಮಾಡಲು ಇಚ್ಛಿಸುವುದಿಲ್ಲ. ನಾನು ಅಧ್ಯಾಪಕ ವೃತ್ತಿ ಆಯ್ಕೆ ಮಾಡಿಕೊಂಡಾಗ, ಮಾರ್ಗದರ್ಶನಕ್ಕಾಗಿ ಮೂರು ಮಹಾನ್ ಗುರುಗಳ ಬಳಿ ಹೋಗಿದ್ದೆ. 

೧. ಅದರಲ್ಲಿ ಮೊದಲಿಗರು, ನನ್ನ ಭೌತ ವಿಜ್ಞಾನ  ಅಧ್ಯಾಪಕರಾಗಿದ್ದ, ಪ್ರೊ. ಸುಬ್ಬರಾಮಯ್ಯನವರು. " ತರಗತಿಯಲ್ಲಿ ಪಾಠಮಾಡಲು  ಸಿದ್ಧಪಡಿಸಿಕೊಂಡಿದ್ದ  ನೋಟ್ಸ್ ಗಳನ್ನು ವರ್ಷದ ಕೊನೆಯಲ್ಲಿ ಹರಿದು ಹಾಕು ; ಇಲ್ಲದಿದ್ದರೆ ಒಮ್ಮೆ ಸಿದ್ಧಪಡಿಸಿಕೊಂಡಿದ್ದನ್ನೇ ರಿಟೈರ್ ಆಗುವವರೆವಿಗೆ  ಪಾಠ ಹೇಳುವ ಜಡತ್ವ ಆವರಿಸಿರುತ್ತದೆ. ಹೊಸದನ್ನು ಓದು". 

೨. ನಂತರ ನಾನು ಹೋಗಿದ್ದು, ಪ್ರೊ. ವಿ. ಸೀತಾರಾಮಯ್ಯನವರ ಮನೆಗೆ  (ವಿ. ಸೀ)  :

ಸೊಗಸಾದ ಕಾಫಿ ಕೊಟ್ಟು ಅವರು ಹೇಳಿದ ಮಾತುಗಳು, ಈಗಲೂ ಕೇಳಿಸುತ್ತಿವೆ. "ಕಣ್ಣು ಬಿಟ್ಟು ಸುತ್ತಲಿನ ಜಗತ್ತನ್ನು ನೋಡಿ ಕಲಿ. Every step you tread is spread with knowledge ! Grab it...."  

೩. ಮೂರನೆಯದು ನನ್ನ ನೆಚ್ಚಿನ ರತ್ನ (ಜಿ. ಪಿ.) ಯವರ ಮನೆಗೆ. 

"ಮೇಸ್ಟ್ರು ಆಗಬೇಕಾದರೆ ನಿಯತ್ತಾಗಿ ಪಾಠ ಮಾಡಬೇಕು. ಗಳಿಸಿದ ಸಂಬಳ ಜೀರ್ಣವಾಗಬೇಕು. ವಿದ್ಯಾರ್ಥಿಗಳ ಉತ್ಸಾಹ ಹಿಗ್ಗಿಸಬೇಕು. ಅವರ ಮುಂದೆ ನಿಂತಾಗ ನೀನೊಬ್ಬ ನಟ. ಸ್ವಂತ ತಾಪತ್ರಯಗಳು, ನೋವು-ನಲಿವು, ಆಶೆ-ನಿರಾಶೆಗಳನ್ನು ಅವರ ಮುಂದೆ ತೋಡಿಕೊಂಡು ಬೋರ್ ಹೊಡೀಬೇಡ "

ಶಿಷ್ಯರನ್ನು ಪ್ರೀತಿಸುತ್ತಾ, ಛೇಡಿಸುತ್ತಾ, ಕೈಹಿಡಿದು ನಡೆಸಿದ ಆ ಮಹಾ ಚೇತನಕ್ಕೆ ಈಗ ನುರುತುಂಬಿ ನೂರಾವೊಂದು ! ನಾಯಿ ಮರಿ ನಾಯಿ ಮರಿ, ", ಬಣ್ಣದ ತಗಡಿನ ತುತ್ತೂರಿ " ಊದುತ್ತಾ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಇಂದಿಗೂ ಶಿಷ್ಯ ಕೋಟಿಯನ್ನು ಹುರಿದುಂಬಿಸುತ್ತಾ ಚಿರಂಜೀವಿಯಾಗಿದ್ದಾರೆ- ಗುರು ರಾಜರತ್ನಂ - ಪ್ರೊ. ಎಚ್. ಆರ್. ಆರ್. 

ಜಿಪಿರಾಜರತ್ನಂ ರವರ ಪೂರ್ವ ವೃತ್ತಾಂತ : 

ಚಾಮರಾಜ ನಗರ ಜಿಲ್ಲೆ ಗುಂಡ್ಲು ಪೇಟೆ, ತಮಿಳುನಾಡಿನ ನಾಗಪಟ್ಟಣಕ್ಕೆ ಸೇರಿದ ‘ತಿರುಕ್ಕಣ್ಣಾಪುರ’ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಗುಂಡ್ಲು ಪಂಡಿತ ವಂಶಕ್ಕೆ ಸೇರಿದ ಜಿ. ಪಿ. ಗೋಪಾಲಯ್ಯಂಗಾರ್ ಪರಿವಾರದವರು, ಮೈಸೂರಿಗೆ  ವಲಸೆ ಬಂದು ನೆಲೆಸಿದರು. 

ವಿದ್ಯಾರ್ಥಿಯಾಗಿದ್ದ  ಜಿ. ಪಿ. ರಾಜಯ್ಯಂಗಾರ್, ಎಲ್ ಎಸ್ ಪರೀಕ್ಷೆಯ ಸಮಯದಲ್ಲಿ  ಒಬ್ಬ ಮೇಸ್ಟ್ರ ಸಹಾಯದಿಂದ  ಜಿ.ಪಿ.ರಾಜರತ್ನಂ (೧೯೦೯-೧೯೭೯) ಎಂದು ತಮ್ಮ ಹೆಸರನ್ನು  ತಿದ್ದಿಸಿಕೊಂಡರು. ಬಾಲ್ಯದಲ್ಲೇ  ತಾಯಿಯನ್ನು ಕಳೆದುಕೊಂಡು ಅವರ  ಪ್ರೀತಿಯಿಂದ  ವಂಚಿತರಾದರು. ಅಜ್ಜಿ, ಹಾಗೂ ತಂದೆಯವರ ನಿಗರಾನಿಯಲ್ಲಿ ಬೆಳೆದರು. ತಂದೆ,  ಜಿ. ಪಿ. ಗೋಪಾಲಕೃಷ್ಣ ಅಯ್ಯಂಗಾರ್,  ಪ್ರಾಥಮಿಕ ಶಾಲೆಯ  ಮೇಷ್ಟ್ರಾಗಿದ್ದರು. ಚಿಕ್ಕವಯಸ್ಸಿನಲ್ಲೇ ರಾಜರತ್ನಂ  ಮೊದಲು ಲಲಿತಮ್ಮನವರನ್ನು ವಿವಾಹವಾದರು. ಅವರು ಕಾಯಿಲೆಯಿಂದ ನರಳಿ ನಿಧನರಾದಮೇಲೆ  ಸೀತಮ್ಮಎನ್ನುವರನ್ನು ಮದುವೆಯಾದರು.  

೧೯೩೧ ರಲ್ಲೇ ಕನ್ನಡದಲ್ಲಿ ಎಂ. ಎ. ಪದವಿ ಗಳಿಸಿದರು. ಶಿಶುವಿಹಾರದಲ್ಲಿ ಸ್ವಲ್ಪ ಕಾಲ ಕೆಲಸಮಾಡಿದರು. ನಂತರ ತಂದೆಯವರ ಶಾಲೆಯಲ್ಲಿ ಮೇಷ್ಟ್ರಾಗಿ ಸೇರಿಕೊಂಡರು. ಈ ಅನುಭವಗಳ ನಂತರ, ತುತ್ತೂರಿ ಎಂಬ ಶಿಶುಗೀತ ಸಂಕಲನ, ಹೊರಗೆ ಬಂತು. ಬೆಂಗಳೂರಿನಲ್ಲಿ ಜನಗಣತಿ ಆಫೀಸಿನಲ್ಲಿ ಕೆಲಸ ಮಾಡಲು ಸೇರಿದರು. ಆಗಿನ ಕಾಲದಲ್ಲಿ  ಅಸಿಸ್ಟಂಟ್ ಕಮಿಷನ್ ಹುದ್ದೆಯಲ್ಲಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ  ಪರಿಚಯವಾಯಿತು ಜಿ. ಪಿ. ರಾ ರವರಿಗೆ ಆಯಿತು.  ಸಣ್ಣಕತೆ,  ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಅನುವಾದಗಳನ್ನು ಮಾಡುವಷ್ಟು ಪರಿಣಿತರಾಗಿದ್ದ ಮಾಸ್ತಿಯವರ  ಪ್ರೋತ್ಸಾಹದಿಂದ ಜಿ. ಪಿ. ರಾ  ಸಾಹಿತ್ಯಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.  ೧೯೩೮ ರಲ್ಲಿ ಕನ್ನಡ ಪಂಡಿತರ ಕೆಲಸ ದೊರೆಯಿತು. 'ವಿದ್ಯಾರ್ಥಿ ವಿಚಾರ ವಿಲಾಸ'ವೆಂಬ ವಿದ್ಯಾರ್ಥಿಗಳ ಲೇಖನಗಳ ಸಂಕಲನ ಪ್ರೊ. ಎ. ಆರ್. ಕೃಷ್ಣ ಶಾಸ್ತ್ರಿಗಳು ಸ್ಥಾಪಿಸಿದ ಸೆಂಟ್ರಲ್ ಕಾಲೇಜ್ ಕರ್ನಾಟಕ ಸಂಘ, ಮತ್ತು ಅದರ ಮುಖ ಪತ್ರಿಕೆ, "ಪ್ರಬುದ್ಧ ಕರ್ನಾಟಕ " ವನ್ನು  ಜಿ ಪಿ. ರಾಜರತ್ನಂ ಸಕ್ರಿಯವಾಗಿ ನಡೆಸಿಕೊಂಡು ಹೋದರು. 

ಅವರ ಪ್ರಾರಂಭದ ಬರವಣಿಗೆಯ ಹಂತದಲ್ಲಿ  'ಭ್ರಮರ' ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದರು.  ಗಂಡು ಗೋಡಲಿ, ನರಕದ. ನ್ಯಾಯ, ಕಂಬೈ ಸೇನೆ, ಸಂಭವಾಮಿ ಯುಗೇ ಯುಗೇ, ನಾಟಕಗಳು. ಹಳಗನ್ನಡದ ಕೃತಿಗಳಿಗೆ ಟೀಕು, ವ್ಯಾಖ್ಯಾನ, ಗುಲಗಂಜಿ, ಕೋಳಿಕಳ್ಳ, ಗೂಳೂರು ನಾಯಕರು,  ಗದ್ಯಕೃತಿ, ವಿಚಾರತರಂಗ, ಕಿರಣಾನುಭವ, ಸಭಾವಿನಯ, ಸ್ವಾರಸ್ಯ, ವಿಚಾರ ರಶ್ಮಿ, ವಿಚಾರ ಸಾಹಿತ್ಯ,

"ನಿರ್ಭಯಾಕೃತಿ", ಅಂತ ದರ್ಶನ ಕೃತಿ, ಹತ್ತು ವರ್ಷ ಬದುಕು-ಬರಹ, ಮಹಾಹರಟೆ, ಸಂಘ ಸಂಸ್ಥೆ ಕಟ್ಟಿ ಬೆಳಸಿದ ಸೇವೆಗಳು. 

ವಿದ್ಯಾರ್ಥಿಯಾಗಿದ್ದಾಗಲೇ, ‘ತಾರೆ’  ಎಂಬ ಪದ್ಯ ಬರೆದು ಕನ್ನಡದ ಕಣ್ವರೆಂದು ಖ್ಯಾತಿಪಡೆದ  ಬಿ.ಎಂ.ಶ್ರೀ ಯವರ ಪದಕವನ್ನು ಗಿಟ್ಟಿಸಿದರು. 

Rating
Average: 4 (1 vote)