ಕಿಶೋರ್ ಕುಮಾರ್, ನನ್ನ ಸಂಗೀತಕ್ಕೆ ಸ್ಪಂದಿಸದ ಕಲಾವಿದ !

ಕಿಶೋರ್ ಕುಮಾರ್, ನನ್ನ ಸಂಗೀತಕ್ಕೆ ಸ್ಪಂದಿಸದ ಕಲಾವಿದ !

ಹಿಂದಿ ಚಲನಚಿತ್ರ ವಲಯದ ದಿಗ್ಗಜ ಸಂಗೀತಕಾರರಲ್ಲಿ 'ಜನಾಬ್ ನೌಶಾದ್  ಆಲಿ'ಯವರೂ ಒಬ್ಬ ಪ್ರಮುಖರೆಂದು ಸಿನಿಮಾ ತಜ್ಞರ ಅಂಬೋಣ.  ಅವರನ್ನು ಒಂದು ಸಂಗೀತದ ಪಾಠಶಾಲೆ/ಸಂಸ್ಥೆ,  ಎಂದು ಪರಿಗಣಿಸುವವರಿಗೇನೂ ಸಂಖ್ಯೆಯಲ್ಲಿ  ಕಡಿಮೆ ಇಲ್ಲ. ತಮ್ಮ ಚಲನ ಚಿತ್ರದ  ಗೀತೆಗಳಿಗೆ ಗಾಯಕ ಕಲಾವಿದರನ್ನು ಆರಿಸುವಾಗ ಅವರು ಸರಿಯಾದ ನ್ಯಾಯವನ್ನು ಕೆಲವರಿಗೆ ಒದಗಿಸಲಿಲ್ಲ. ಎನ್ನುವ ಮಾತು ಸಮಗ್ರವಾಗಿ  ಕೇಳಿಬರುತ್ತದೆ. ಒಂದು ಉತ್ಯುತ್ತಮ ಉನ್ನತ ಸ್ಥಾನದಲ್ಲಿರುವ ಸಮಯದಲ್ಲಿ ಕೆಲವಾರು ಇಂತಹ ಅಹಿತಕರ ಘಟನೆಗಳು ಅನೇಕರಿಂದ ಅನೇಕಬಾರಿ ನಡೆದಿರುವುದು ನಮ್ಮೆಲ್ಲರ ಗಮನಕ್ಕೆ ಬಂದಿರುವ ಸಂಗತಿ. ನಮ್ಮೆಲ್ಲರ ಪ್ರೀತಿಯ ಹಿಂದಿ ಚಿತ್ರರಂಗದ ಹೆಮ್ಮೆಯ ಕಂಠದಾನ ಕಲಾವಿದ, ಕಿಶೋರ್  ಕುಮಾರ್  ರಿಗೆ 'ಮಧ್ಯಪ್ರದೇಶ ಸರ್ಕಾರದಿಂದ ಸಾಹಿತ್ಯಿಕ ಪ್ರಶಸ್ತಿ' ಪ್ರಧಾನಿಸಲು ಒಂದು ಜ್ಯುರಿ ಸಮಾರಂಭವನ್ನು ಸುಪ್ರಸಿದ್ಧ ಪತ್ರಿಕಾಕರ್ತ, ಶ್ರೀ ಪ್ರಿತೀಶ್ ನಂದಿಯವರ ಅಧ್ಯಕ್ಷತೆಯಲ್ಲಿ ಆಯೋಜೆಸಲಾಗಿತ್ತು. ಸಮಿತಿಯಲ್ಲಿ ಆಗಿನ ಸಮಯದ ಸುಪ್ರಸಿದ್ಧ ಸಂಗೀತ ನಿರ್ದೇಶಕ ಜನಾಬ್,  ನೌಶಾದ್ ಆಲಿಯವರ ಜತೆ, ಪಂಡಿತ. ಕುಮಾರ ಗಂಧರ್ವ, ಮಣಿ ಕೌಲ್ ಮೊದಲಾದವರು  ಉಪಸ್ಥಿತರಿದ್ದರು.ಪ್ರಿತೀಶ್ ನಂದಿಯವರು ಕಿಶೋರ್ ಕುಮಾರ್ ರವರ ಹೆಸರನ್ನು ಘೋಷಿಸುತ್ತಿದ್ದಂತೆ, ವೇದಿಕೆಯಲ್ಲಿ ಕುಳಿತಿದ್ದ ನೌಶಾದ್ ಎದ್ದು ಅಲ್ಲಿಂದ ಹೊರಟುಹೋದರು, ಯಾಕೋ ಅವರು ಕಿಶೋರ್ ಕುಮಾರ್ ಹಾಡುಗಾರಿಕೆಯ ಪ್ರತಿಭೆಯನ್ನು ಒಪ್ಪಿಕೊಂಡಿರಲಿಲ್ಲ ; ಹಾಗಾಗಿ ಅವರನ್ನು ಸಮರ್ಥಿಸುತ್ತಿರಲಿಲ್ಲ. ಅವರು ಹೆಚ್ಚಾಗಿ ದಿಲೀಪ್ ಕುಮಾರ್ ನಟನೆಗೆ ತಕ್ಕ ಹಾಡುಗಳಿಗೆ ಸಂಗೀತ ಒದಗಿಸಿ ಮೊಹಮ್ಮದ್ ರಫಿಯವರ ಕೈಲಿ ಹಾಡಿಸುತ್ತಿದ್ದರು. ಏನು ಮನಸ್ತಾಪ ಕಿಶೋರ್ ಮತ್ತು ನೌಶಾದ್ ಬಳಿ ಇತ್ತೋ ಸರಿಯಾಗಿ ಯಾರಿಗೂ ತಿಳಿಯದು. 

ಹಿಂದಿ ಚಿತ್ರರಂಗದಲ್ಲಿ ಒಳ್ಳೆಯ ಹೆಸರುಮಾಡಿದ. ಕಲಾವಿದ ನಾಯಕರುಗಳಾದ ರಾಜ್ಕಪೂರ್-ವೈಜಯಂತಿಮಾಲ, ಮತ್ತು ಇತರೆ ಮಹಿಳೆಯರ ಜೊತೆ ಸಂಬಂಧ, ದಿಲೀಪ್ ಕುಮಾರ್ ಮತ್ತು ಮಧುಬಾಲರ ತಂದೆಯ ವಿರೋಧಗಳು, ನಟ  ಗುರುದತ್ ಹಾಗು ಅವರ ಶರಾಬ್ ವ್ಯಸನ, ಆ ಕಲಾವಿದರ ಒಳ್ಳೆಯ ಗುಣಗಳ ಮಧ್ಯೆ ಅವಗುಣಗಳ ತಿಕ್ಕಾಟವಿದೆ.  ೧೯೮೦ ರಲ್ಲಿ ರಾಜೇಶ್ ಖನ್ನಾ ಹಿಂದಿ ಸಿನಿಮಾ ರಂಗದಲ್ಲಿ  ಮೆರೆದಿದ್ದರು. ಅವರಿಗೆ ಮತ್ತು ದೇವ್  ಆನಂದ್  ರವರ ಪಾತ್ರಗಳಿವೆ ಕಿಶೋರ್ ಕುಮಾರ್ ವ್ಯವಸ್ಥಿತವಾಗಿ  ಹಾಡುತ್ತಿದ್ದರು. ೧೯೮೨ರಲ್ಲಿ ಸುಲ್ತಾನ್ ಪ್ರೊಡಕ್ಷನ್ ಅಡಿಯಲ್ಲಿ ಸುಲ್ತಾನ್ ಅಹ್ಮದ್ ನಿರ್ಮಿಸಿ, ನಿರ್ದೇಶಿಸಿದ "ಧರಮ್ ಕಾಂಟ" ಎನ್ನುವ ಚಿತ್ರದಲ್ಲಿ ವಹೀದಾ ರೆಹಮಾನ್,  ಸುಲಕ್ಷಣಾ  ಪಂಡಿತ್, ಜಿತೇಂದ್ರ, ರೀನಾ ರಾಯ್, ರಾಜ್ ಕುಮಾರ್, ಅಮ್ಜದ್ ಖಾನ್ (ಪ್ರಮುಖ ಭೂಮಿಕೆಯಲ್ಲಿ)  ಅಭಿನಯಿಸಿದ್ದರು. ಕಾದರ್ ಖಾನ್ ಪಟ್ಕಥಾ ಬರೆದಿದ್ದರು. ಮಜ್ರು ಸುಲ್ತಾನ್ ಪುರಿ ಚಿತ್ರದ ಹಾಡುಗಳಿಗೆ ಲಿರಿಕ್ಸ್  ಬರೆದಿದ್ದರು  ಆ ಚಿತ್ರದಲ್ಲಿ ನಾಯಕಿಗೆ ಗೀತೆಗಳನ್ನು ಹಾಡಿದವರು ಆಶಾ ಬೋನ್ಸ್ಲೆ.  ನಾಯಕ ನಟರಿಗೆ ಮೊಹಮ್ಮದ್ ರಫಿ ಹಾಡಿದ್ದರು. ಆ ಚಿತ್ರದಲ್ಲಿ ಯಾವ ಶಾಸ್ತ್ರೀಯ ಸಂಗೀತವನ್ನು ಆಧರಿಸಿದ ಕ್ಲಿಷ್ಟ  ಗೀತೆಗಳಿರಲಿಲ್ಲ. ಏಕೆ  ಕಿಶೋರ್ ಕುಮಾರ್ ಗೆ ಅವಕಾಶ ಕೊಡಲಿಲ್ಲ ಎನ್ನುವ ವಿವಾದವಿದೆ. ನೌಶಾದ್ ಒಂದು ತರಹದ ಪಕ್ಷಪಾತವನ್ನು ಕಿಶೋರ್ ಕುಮಾರ್ ಬಗ್ಗೆ  ತೋರಿಸುತ್ತಿದ್ದನ್ನು ಅನೇಕರು ಗಮನಿಸಿದ್ದರು. ನೌಶಾದ್ ಹಿಂದಿ ಚಿತ್ರಕ್ಕೆ ಕೊಟ್ಟ ಸಂಗೀತ  ಕೊಡುಗೆ ಎಲ್ಲರಿಗೂ ತಿಳಿದಿರುವ ವಿಚಾರವೇ !  ಈ ಚಿತ್ರ ಸಿಲ್ವರ್ ಜ್ಯುಬಿಲಿ ಓಡಿ, ಗಲ್ಲ ಪೆಟ್ಟಿಗೆಯಲ್ಲಿ ಹೆಚ್ಚಿನ ವರಮಾನ ತಂದುಕೊಟ್ಟಿತು. ಆದರೆ ಕಿಶೋರ್ ಕುಮಾರ್ ನಂತಹ ಕಲಾವಿದನ ಹಾಡುಗಾರಿಕೆಯನ್ನು  ಹಾಗೆ ತಿರಸ್ಕರಿಸಿ, ನೌಶಾದರು  "ಅವರ ಹಾಡುಗಾರಿಕೆಯನ್ನು  ದ್ವೇಷಿಸುತ್ತೇನೆ" ಎಂದು ಎಲ್ಲರ ಮುಂದೆ ಹೇಳಿ ಮೀಡಿಯಾದಲ್ಲಿ ವೈರಲ್ ಮಾಡುವ ಅವಶ್ಯಕತೆಯಿತ್ತೇ ? ಎನ್ನುವುದು ಯಾರಿಗೂ ಅರ್ಥವಾಗದ  ವ್ಯವಹಾರವಲ್ಲವೇ ? ಇಂತಹ ಅನೇಕ ವಿರೋಧಾಭಾಸಗಳು ಫಿಲಂ ಲೈನ್ ನಲ್ಲಿ ಇದ್ದಿದ್ದನ್ನು ನಾವು ಕಾಣುತ್ತೇವೆ. 

-ರಾಹುಲ್ ವಿತ್ ೭೦ ಎಂ. ಎಂ ಎಂಬ ವಿಡಿಯೋವನ್ನು ಆಧರಸಿ ಬರೆದ ಲೇಖನ 

-ಎಚ್ಚಾರೆಲ್ 

Rating
Average: 4 (1 vote)