ಜಾನಿವಾಕರ್ ಎಂಬ ನಗುಬುಗ್ಗೆ  !

ಜಾನಿವಾಕರ್ ಎಂಬ ನಗುಬುಗ್ಗೆ  !

ಚಿತ್ರ

ಒಂದು ಕಾಲದಲ್ಲಿ ಭಾರತದ ಹಿಂದಿ ಫಿಲಂ ಕ್ಷೇತ್ರದಲ್ಲಿ ಕೇವಲ (ಬದ್ರುದ್ದೀನ್ ಜಮಾಲುದ್ದೀನ್ ಕಾಝಿ)ಜಾನಿವಾಕರ್ ಎಂಬ  ಕಮೆಡಿಯನ್ ಒಬ್ಬನ ಮೇಲಿನ  ಅಭಿಮಾನಿಗಳ ಪ್ರೀತಿಯ  ಮಹಾಪೂರದ ಸಹಾಯದಿಂದ  ದಿಗ್ಗಜ ನಿರ್ಮಾಪಕರು, ನಿರ್ದೇಶಕರು ಹಿಂದಿ  ಚಿತ್ರಗಳನ್ನು ನಿರ್ಮಿಸುತ್ತಿದ್ದ  ಪ್ರಸಂಗ, ಬ್ರಿಟಿಷ್ ಹಾಸ್ಯ ನಟ  ಚಾರ್ಲಿ ಚಾಪ್ಲೆನ್  ನಂತರ ಜಾನಿವಾಕರ್ ರವರ ಹೆಸರು ಕೇಳಬರುತ್ತದೆ,  ಎಂದು ಹೇಳಿದರೆ, ಅತಿಶಯೋಕ್ತಿಯಾಗದು, ಎಂದು ನನ್ನ ಅಭಿಮತ. ಕಂಪ್ಯೂಟರ್ ನಲ್ಲಿ  ಗೂಗಲ್ ಯಂತ್ರಕ್ಕೆ  ಹುಡುಕಲು ಆದೇಶಿಸಿದರೆ ತೆರೆಯಮೇಲೆ ಕುಣಿಯುತ್ತಾ ಮೂಡಿ ಬರುವುದು, ಜಾನಿವಾಕರ್ ಎಂಬ  ವಿಸ್ಕಿಯ ವಿವರಣೆಗಳು. ಅದು  ಡಿಯಾಜಿಯೋ ಮಾಲೀಕತ್ವದ ಸ್ಕಾಚ್ ವಿಸ್ಕಿ ಬ್ರಾಂಡ್ ಹೆಸರು. ಆ ಸಮಯದಲ್ಲಿ ಜಗತ್ತಿನಲ್ಲಿ ಅತಿಹೆಚ್ಚು ಮಾರಾಟವಾಗುತ್ತಿದ್ದ ಇಂಗ್ಲಿಷ್  ವಿಸ್ಕಿಯ ಬಗ್ಗೆ ಮಾಹಿತಿಯ ತಾಣವಾಗಿತ್ತು. ಆದರೆ ಭಾರತೀಯ ಸಿನಿಮಾ ನೋಡುವ ರಸಿಕರ ಮನಸ್ಸಿನಲ್ಲಿ, ಮುಖದಮೇಲೆ  ಮೂಡುವುದು ಜಾನಿವಾಕರ್ ರವರ ನಗುಮುಖ, ಕೀಟಲೆಮಾಡುವ ಅವರ  ಸ್ವಭಾವ. 'ಪ್ಯಾಸಾ' ಚಿತ್ರದಲ್ಲಿ ಅವರು ಅಭಿನಯಿಸಿದ,  'ಸರ್ ಜೋ ತೇರಾ ಚಕರಾಯೇ',  ಹಾಡಿನ ಸನ್ನಿವೇಶ.

'ಬದ್ರುದ್ದೀನ್ ಜಮಾಲುದ್ದೀನ್ ಕಾಝಿ', (೧೧, ನವೆಂಬರ್, ೧೯೨೬-೨೯ ಜುಲೈ, ೨೦೦೩) ಈಗಿನ ಮಧ್ಯಪ್ರದೇಶದ ಇಂದೋರ್ ನಲ್ಲಿ ಜನ್ಮಿಸಿದರು.  ತಂದೆ ಹತ್ತಿಗಿರಣಿಯಲ್ಲಿ ಕೆಲಸಮಾಡುತ್ತಿದ್ದಾಗ ಕೆಲಸಹೋಯಿತು. ಆಗ ಮುಂಬಯಿನಗರಕ್ಕೆ ನೌಕರಿಯ ತಲಾಷಿಗಾಗಿ ಬಂದು ನೆಲೆಸಿದರು. ಮನೆಯಲ್ಲಿ ೧೫ ಜನ ಸದಸ್ಯರ ಕುಟುಂಬ. ಅವರಲ್ಲಿ  ೫ ಜನ ಚಿಕ್ಕವಯಸ್ಸಿನಲ್ಲೇ ಮರಣ ಹೊಂದಿದರು. ಬದ್ರುದ್ದೀನ್ ಜಮಾಲುದ್ದೀನ್ ಕಾಝಿ, ಮುಂಬಯಿನಲ್ಲಿ ತರಕಾರಿಮಾರುವುದು, ಮೊದಲಾದ ಅನೇಕ ಕೆಲಸಗಳನ್ನು ಮಾಡಿದಮೇಲೆ ಒಬ್ಬರ ಸಹಾಯದಿಂದ  ಬಿ.ಇ.ಎಸ್. ಟಿ ಬಸ್ ಸೇವೆಯಲ್ಲಿ ಕಂಡಕ್ಟರ್ ಹುದ್ದೆ ಗಳಿಸಿಕೊಂಡರು. ಸಂತೋಷಗೊಂಡ  ಬದ್ರುದ್ದೀನ್  ತಮ್ಮದೇ ಶೈಲಿಯಲ್ಲಿ ಬಸ್ ಗೆ ಕಾಯುವವರು,  ಬೇಗ ಬಸ್ ಹತ್ತುವವರು, ಇಳಿಯುವವರು, ಅವರಲ್ಲಿ ಮುದುಕರು, ಮಕ್ಕಳು ಯುವಜನರ ಆಶಯಗಳಿಗೆ ಸ್ಪಂದಿಸಿ, ಅವರ ಜತೆ ತಮಾಷೆಯಾಗಿ ಮಾತನಾಡುತ್ತಾ ಅವರಿಗೆ ಮನರಂಜನೆ ಮಾಡುತ್ತಿದ್ದರು. ಹಾಗಾಗಿ ಅನೇಕರು ಕಾಝಿ  ಯಾವ ಬಸ್ಸಿನಲ್ಲಿ ಕಂಡಕ್ಟರ್ ಆಗಿದ್ದಾರೆಯೋ ಆ ಬಸ್ಸಿನಲ್ಲಿ ಪ್ರಯಾಣಿಸಲು ಓಡಿ ಬರುತ್ತಿದ್ದರು. ಹೀಗಿರುವ ಸಮಯದಲ್ಲಿ ಒಮ್ಮೆ  ಬಸ್ಸಿನಲ್ಲಿ ಒಬ್ಬ ಸಜ್ಜನರು ಪ್ರಯಾಣಿಸುತ್ತಿದ್ದರು. ಅವರು ಕಾಝಿಯವರ ಹಾವಭಾವ ಜನರನ್ನು ಮೆಚ್ಚಿಸಲು ಮಾಡುವ ಮುಖಭಾವ, ಅಂಗಚೇಷ್ಟೆ, ಬಳಸುವ ತಂತ್ರಗಳಿಂದ ಪ್ರಭಾವಿತರಾಗಿ, ಅವರ ಡ್ಯೂಟಿ ಸಮಯ ಮುಗಿಯುವವರೆಗೂ ಕಾದಿದ್ದು, ತಮ್ಮ ಜತೆಯಲ್ಲಿ ಕರೆದುಕೊಂಡು ಹೋದರು. ಅವರೇ ಆಗಿನ ಕಾಲದ ಸುಪ್ರಸಿದ್ಧ ನಟ, ಬಾಲರಾಜ್ ಸಹಾನಿ. ಅವರು  ನೇರವಾಗಿ ಗುರುದತ್ ಸ್ಟುಡಿಯೋ ಗೆ ಕಾಝಿಯವರನ್ನು ಕರೆದುಕೊಂಡು ಹೋಗಿ ಅವರಿಗೆ ದೇವ್ ಆನಂದ್, ಮತ್ತು ಗುರುದತ್  ರನ್ನು ಪರಿಚಯಿಸುವ ಇರಾದೆಯನ್ನು ಹೊಂದಿದ್ದರು. ಆಗ ಗುರುದತ್,  ದೇವ್ ಆನಂದ್ ಜತೆ (ದೇವ್ ಆನಂದ್, ಗುರುದತ್ ಸ್ನೇಹಿತರು, ಜತೆಯಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದರು) ಯಾವುದೊ ಸ್ಕ್ರಿಪ್ಟ್ ಬಗ್ಗೆ ಚರ್ಚೆನಡೆಸುತ್ತಿದ್ದರು. ಹಾಗಾಗಿ ಬಾಲರಾಜ್ ಸಾಹ್ನಿ,  ಒಳಗಿನ ಕೊಠಡಿಯಲ್ಲಿ ಒಂದು ಮೂಲೆಯಲ್ಲಿ ನಿಂತು. ಕಾಝಿಗೆ ಗುರುದತ್ ರನ್ನು ಹೇಗಾದರೂ ಆಕರ್ಷಿಸುವ ಕೆಲಸ ಮಾಡಿದರೆ, ನಿನಗೆ ನೌಕರಿ ಖಾತ್ರಿ ಎಂದು ಕಿವಿಯಲ್ಲಿ ಗುನುಗುಟ್ಟಿದರು. ಸ್ಮಾರ್ಟ್ ಆಗಿದ್ದ ಕಾಝಿಗೆ ಈ ಇಶಾರಾ  ಸಾಕಾಗಿತ್ತು. ಒಬ್ಬ ಹೆಂಡಗುಡಕನ ತರಹ ತೂರಾಡುತ್ತಾ ಜೋರಾಗಿ ಕೆಲವರನ್ನು ಒಳ್ಳೆಯ ಮಾತುಗಳಿಂದ ಬೈಯುತ್ತಾ ಗುರುದತ್ ವರೆಗೂ ನಡೆದುಕೊಂಡು ಹೋಗಿ ಥಟ್ಟನೆ ನಿಂತುಬಿಟ್ಟರು. ಗುರುದತ್ ಬೆಚ್ಚಿದರು. ಇದುವರೆಗೆ ಹೆಂಡದ ಮತ್ತಿನಲ್ಲಿ ಓಲಾಡುತ್ತಿದ್ದ ಈ  ಮನುಷ್ಯ ತಕ್ಷಣ ನಿಂತದ್ದಾದರೂ ಹೇಗೆ ?  ಎಂದು ಯೋಚಿಸುತ್ತಿರುವಂತೆ ಅದು ಕೇವಲ ನಟನೆ. ನಿಜಹೇಳಬೇಕೆಂದರೆ, ಈ ವ್ಯಕ್ತಿ ತನ್ನ ಜೀವನವಿಡೀ ಎಂದೂ  ಶರಾಬ್ ಬಾಟಲ್ ನ್ನು  ಮುಟ್ಟಿದವನೂ ಅಲ್ಲವೆಂದು  ಬಲರಾಜ್ ಸಹಾನಿಯವರು ಹೇಳಿದಾಗ ಗುರುದತ್ ಮತ್ತು ದೇವಾನಂದ್ ಬಹಳ ಪ್ರಭಾವಿತರಾಗಿ ಇವರಿಗೆ ತಕ್ಕಂತಹ ಒಂದು ರೋಲ್ ತಮ್ಮ ಪ್ರೊಡಕ್ಷನ್ ನಲ್ಲಿ  ಕೊಡಲು ಯೋಚಿಸೋಣ, ಎಂದು ಪರಸ್ಪರ ಮಾತಾಡಿಕೊಂಡರು. ಬಹಳ ಪ್ರಭಾವಿತರಾದ ಗುರುದತ್ ಒಮ್ಮೆಲೇ ಇನ್ನು ಮೇಲೆ ನಿಮ್ಮ ಹೆಸರು ; ಜಾನಿವಾಕರ್.  ನಾನು ಬಳಸುವ ಸುಪ್ರಸಿದ್ಧ ಲಿಕರ್ ಬ್ರಾಂಡ್ ಹೆಸರು; ನಿಮ್ಮ ಸಾಮರ್ಥ್ಯಕ್ಕೆ ಸರಿಹೋಗುತ್ತದೆ.  ಇಂದಿನಿಂದ ನಮ್ಮ ಪ್ರೊಡಕ್ಷನ್ ಕಂಪೆನಿಯಲ್ಲಿ ಕೆಲಸ ನಿಮಗೆ ಯಾವಾಗಲೂ ತೆರವಾಗಿದೆ,  ಸ್ವಾಗತ, ಎಂದು ನುಡಿದರು. ಹೀಗೆ ನಾಮಕರಣವಾದ ನಂತರ ಕಾಝಿಯವರು  ತಮ್ಮ ತಂತ್ರಗಳನ್ನು ಉತ್ತಮ ಪಡಿಸಿಕೊಂಡು ಹಲವಾರು ಚಿತ್ರಗಳಲ್ಲಿ ತಮ್ಮ ನಟನಾಸಾಮರ್ಥ್ಯವನ್ನು ಹೆಚ್ಚಿಸಿಕೊಂಡರು. ಶರಾಬಿಯಲ್ಲದೆ ಕೆಲವು ಪೋಷಕ ಪಾತ್ರಗಳನ್ನು ಗಿಟ್ಟಿಸಿಕೊಂಡರು. 

೧೯೫೬ ರಲ್ಲಿ 'ಛೂಮಂತರ್' ಎನ್ನುವ  ಹಿಂದಿ ಚಿತ್ರದಲ್ಲಿ ಆಗಿನ ಕಾಲದ ಜನಪ್ರಿಯ ನಟಿ  ಶ್ಯಾಮಾ  ಜೊತೆ ಅಭಿನಯಿಸಿದ್ದರು.

೧೯೬೮ ನಿರ್ಮಿತ ರೋಮಾಂಚಕಾರಿ ಗುರುದತ್ ರ ತಮ್ಮ ಆತ್ಮಾರಾಮ್, ನಿರ್ಮಾಣದ, ಹಾಲಿವುಡ್ ಚಲನಚಿತ್ರದ ರೀ ಮೇಕ್ ಆಗಿತ್ತು. ಕೊಲೆಯ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ತೆಗೆದ ಬಾಕ್ಸ್ ಆಫೀಸ್ ಹಿಟ್ ಚಿತ್ರ. ಆ ಚಿತ್ರದ ಗೀತೆಗಳು ಬಹಳ ಜನಪ್ರಿಯವಾಗಿದ್ದವು.  ಧರ್ಮೇಂದ್ರ, ಆಶಾಪರೇಖ್, ಸಂಜೀವ್ ಕುಮಾರ್, ಹೆಲೆನ್ ರೆಹಮಾನ್,ಜಾನಿ ವಾಕರ್, ಬೇಲಾ ಬೋಸ್, ರಮೇಶ್ ದೇವ್ ನಟಿಸಿದ, ಹೆಸರಾಂತ ಸಂಗೀತ ನಿರ್ದೇಶಕ  ಶಂಕರ್ ಜೈಕಿಶನ್ ಸಂಗೀತವಿತ್ತು.  ಹಸರತ್ ಜೈಪುರಿ, ಗೀತರಚನಾಕಾರರು; ಆಶಾ ಬೋನ್ಸ್ಲೆ ಈ ಚಿತ್ರದಲ್ಲಿ ಹಾಡಿದ"ಪರ್ದೇ ಮೇ ರಹ್ನೆ ದೊ". ಹಾಡಿಗೆ 'ಫಿಲ್ಮ ಫೇರ್ ಪ್ರಶಸ್ತಿ'ದೊರೆಯಿತು. ಲತಾಮಂಗೇಶ್ಕರ್ ಮತ್ತು  ಆಶಾಬೋನ್ಸ್ಲೆ ಗುನುಗಿದ  ಡುಯೆಟ್ "ಜಬ್ ಸೆ ಲಾಗಿ ತೋಸೆ ನಝರಿಯ" ಸಂಗೀತ ರಸಿಕರ ಮನಸ್ಸನ್ನು ತಣಿಸಿತು.   ಜಾನಿವಾಕರ್ ಅನಿತಾ ಗುಹಾ, ಮತ್ತು ಶ್ಯಾಮ, ಎಂ. ಸಾದಿಕ್ ಆಲಿಯವರ ನಿರ್ದೇಶನ ಸಾದಿಕ್ ಆಲಿ ಪ್ರೊಡಕ್ಷನ್ಅಡಿಯಲ್ಲಿ ನಿರ್ಮಿತವಾಗಿತ್ತು.  ಹಿಂದಿ ಚಿತ್ರದ ಇತಿಹಾಸದ ಎರಡು ತಲೆಮಾರಿನ ಪ್ರತಿಷ್ಠಿತ ನಿರ್ಮಾಪಕ, ನಿರ್ದೇಶಕ, ಓ ಪಿ ನಯ್ಯರ್  ರಂತಹ ಮೇರು ಸಂಗೀತ ನಿರ್ದೇಶಕ  ನಾಯಕ ನಟರ ಜತೆ, ಸುಮಾರು ಮುನ್ನೂರು ಚಿತ್ರಗಳಲ್ಲಿ ಪೋಷಕ ನಟನ ಪಾತ್ರ ನಿರ್ವಹಣೆ  ಮಾಡಿರುವ ಹೆಗ್ಗಳಿಕೆಗೆ  ಜಾನಿವಾಕರ್  ಪಾತ್ರರಾಗಿದ್ದಾರೆ. ಇದು  ಸುಲಭದ ಮಾತಲ್ಲ. 

೧. ಮಧುಮತಿ ಚಿತ್ರದಲ್ಲಿ ಜಾನಿವಾಕರ್  ರವರಿಗೆ  ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆಯಿತು. ಬಿಮಾಲ್ ರಾಯ್ ರವರ  ಪ್ರಣಯಾಧಾರಿತ ಚಲನ ಚಿತ್ರ, ವೈಜಯಂತಿಮಾಳ, ದಿಲೀಪ್ ಕುಮಾರ್, ಪ್ರಾಣ್ , ಜಾನಿವಾಕರ್, ಸಂಗೀತ :  ಸಲೀಲ್ ಚೌಧರಿ, 'ಸುಹಾನಾ ಸಫರ್'- ಮುಕೇಶ್, 'ದಿಲ್ ತಡಪ್ ತಡಪ್ ಕೆ'- ಮುಕೇಶ್  ಮತ್ತು  ಲತಾಮಂಗೇಶ್ಕರ್, 'ಘಡಿ ಘಡಿ ಮೇರೇ ದಿಲ್ ಧಡಕೆ', ಲತಾಮಂಗೇಶ್ಕರ್,

೨. ಶಿಕಾರ್ (೧೯೬೮)  ಚಿತ್ರದಲ್ಲಿ ಜಾನಿವಾಕರ್ ರವರಿಗೆ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಸಿಕ್ಕಿತು. ಆತ್ಮಾರಾಮ್,ನಿರ್ದೇಶನ ನಿರ್ಮಾಣ: ಅಬ್ರಾರ್ ಆಲ್ವಿ, ಸಂಗೀತ : ಶಂಕರ್ ಜೈಕಿಶನ್, ಕ್ಯಾಮರಾ : ವಿ. ಕೆ. ಮೂರ್ತಿ, ತಾರಾಗಣ :  ಧರ್ಮೇಂದ್ರ, ಆಶಾಪರೇಖ್,

೩. ಬಾಝಿ (೧೯೫೧) ನಿರ್ದೇಶನ ಗುರುದತ್,  ಕತೆ : ಬಾಲರಾಜ್ ಸಾಹ್ನಿ, ಗುರುದತ್, ನವಕೇತನ್ ಲಾಂಛನ. ನಿರ್ಮಾಪಕ : ದೇವ್ ಆನಂದ್, ತಾರಾಗಣ : ದೇವ್ ಆನಂದ್, ಕಲ್ಪನಾ ಕಾರ್ತಿಕ್, ಸಂಗೀತ : ಎಸ್. ಡಿ. ಬರ್ಮನ್ ೧೯೫೧ ರ  ಬಾಜಿ ಚಿತ್ರದಲ್ಲಿ , ಹೆಂಡಗುಡಕನ  ಪಾತ್ರ ಬಹಳ ಮೆಚ್ಚುಗೆ ಗಳಿಸಿತು. ಜಾನಿವಾಕರ್ ಅಭಿನಯಿಸಿದ  ಹಲವಾರು ಚಿತ್ರಗಳಲ್ಲಿ  ಮೇರೇ ಮೆಹಬೂಬ್, ಸಿ.ಐ. ಡಿ. ಪ್ಯಾಸಾ, ಚೋರಿ ಚೋರಿ, ಮುಖ್ಯವಾದವುಗಳು.  ಬಿಮಲ್ ರಾಯ್, ವಿಜಯಾನಂದ್,  ರವರ ಚಿತ್ರಗಳಲ್ಲಿ ನಟಿಸಿದ್ದರು. 

ವರ್ಷ  ೧೯೮೦  ರ ನಂತರ, ಜಾನಿವಾಕರ್ ಫಿಲಂ ಗಳಲ್ಲಿ ನಟಿಸಲು ಯಾಕೋ ಇಷ್ಟಪಡಲಿಲ್ಲ. ಅವರು ಅಭಿನಯಿಸುತ್ತಿದ್ದ ಕಾಲದಲ್ಲಿ  ಚಿತ್ರಗಳಲ್ಲಿ ಸಂವಾದಗಳಲ್ಲಿ ಅಶ್ಲೀಲತೆ,  ಡಬಲ್ ಮೀನಿಂಗ್ ಗಳಾವುವೂ ಇರಲಿಲ್ಲ.  ಎಲ್ಲವೂ ನೇರ, ಸ್ಪಷ್ಟ. ಸೆನ್ಸಾರ್ ಬೋರ್ಡ್ ನವರಿಗೆ  ಜಾನಿವಾಕರ್  ಸಂಭಾಷಣೆಯಲ್ಲಿ ಒಂದು ಸಾಲನ್ನೂ ಕಟ್ ಮಾಡುವ ಪ್ರಸಂಗಕ್ಕೆ ಎಡೆಕೊಟ್ಟಿರಲಿಲ್ಲ. ೧೯೮೫ ನಲ್ಲಿ 'ಪಹುಂಚೆ ಹುವೆ  ಲೋ'ಗ್ಎನ್ನುವ ಹಹೆಸರಿನ  ಒಂದು ಚಿತ್ರ ನಿರ್ಮಾಣ, ಮತ್ತು ನಿರ್ದೇಶನಕ್ಕೆ ಕೈ ಹಾಕಿದ್ದರು. 

೧೯೫೦-೬೦ ಕಾಲಘಟ್ಟ ಜಾನಿವಾಕರ್  ರವರ ಜೀವನದ 'ಪ್ರೈಮ್ ಟೈಮ್' ಎನ್ನಬಹುದು. ೧೯೭೦ ರಲ್ಲಿ ಕಾಮೆಡಿಯ ಬೇಡಿಕೆಗಳು ಸ್ವಲ್ಪ  ಬೇರೆತರಹದವು. ಸ್ಲಾಪ್ ಶಾಕ್, (ಧಮಾಕ್) ಡಬಲ್. ಮೀನಿಂಗ್ `೧೯೮೦ ನಂತರ ತಾವೇ ಸ್ವ ಇಚ್ಛೆಯಿಂದ ಫಿಲಂ ಕೆಲಸವನ್ನು  ಬಿಟ್ಟೇಬಿಟ್ಟರು ಹಾಗೂ ಒಂದು  ದೊಡ್ಡ ಬ್ರೇಕ್ ತೆಗೆದುಕೊಂಡರು. ತಮಿಳು ಚಿತ್ರ ವಲಯದ ಅತಿಜನಪ್ರಿಯ ನಾಯಕ ನಟ 'ಕಮಲ ಹಾಸನ್' ಅವರ 'ಚಾಚಿ ನಂಬರ್ ೪೨೦' ಯಲ್ಲಿ ನಟಿಸಲು ಆಹ್ವಾನಿಸಿದ್ದೇ ಅವರ  ಕೊನೆಯ ಚಿತ್ರವಾಯಿತು.

ಪರಿವಾರ ಪ್ರೇಮಿ :

ಜಾನಿವಾಕರ್  ತಮ್ಮ ಹೆಂಡತಿ  ನೂರ್  ರನ್ನು ಬಹಳ  ಗಾಢವಾಗಿ ಪ್ರೀತಿಸುತ್ತಿದ್ದರು.  ಬಾಂದ್ರಾದಲ್ಲಿದ್ದ  ತಮ್ಮ ಬಂಗಲೆಗೆ ಆಕೆಯ ಹೆಸರನ್ನೇ ಇಟ್ಟರು. ನೂರ್ಜೇಹಾನ್, ಆರ್ ಪಾರ್ ಚಿತ್ರ ತಯಾರಿಕೆಯ ಸಮಯದಲ್ಲಿ ಅಕ್ಕ ಶಕೀಲಾಳ  ಶೂಟಿಂಗ್ ನೋಡಲು ಬಂದಾಗ, ಮೊದಲ ನೋಟದಲ್ಲೇ ಜಾನಿವಾಕರ್ ಲಟ್ಟುವಾಗಿ ಹೋಗಿದ್ದರು. ನೂರ್ ಬಂಗಲೆ,  ಬಾಂದ್ರಾ ಬಸ್ ಸ್ಟಾಪ್ ಬಳಿ ಇತ್ತು. ಅದನ್ನು ಚಲನ ಚಿತ್ರ ಪ್ರೇಮಿಗಳು  ಪ್ರೀತಿಯಿಂದ ಜಾನಿವಾಕರ್ ಬಸ್ ಸ್ಟಾಪ್ ಎಂದು ಕರೆಯುತ್ತಿದ್ದರು. ಜಾನಿವಾಕರ್ ಹಾಗೂ  ನೂರ್ ಜಹಾನ್ (ನೂರ್) ದಂಪತಿಗಳಿಗೆ, ೬ ಜನ ಮಕ್ಕಳು.  ೩ ಜನ ಗಂಡು ಮತ್ತು ೩ ಹೆಣ್ಣುಮಕ್ಕಳು. ತಾವು ೬ ತರಗತಿಯಲ್ಲಿ ಓದುತ್ತಿದ್ದಾಗ ಸ್ಕೂಲ್ ಬಿಡಬೇಕಾದ ಸಂದರ್ಭ ಒದಗಿತ್ತು. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ನಿಗಾವಹಿಸಿ, ಅವರನ್ನು ವಿದೇಶಕ್ಕೆ ಕಳಿಸಿ ಓದಿಸಿದರು.ಜಾನಿವಾಕರ್ ರಿಗೆ ಬಂದೂಕದ ಲೈಸೆನ್ಸ್ ಸಂಗ್ರಹಿಸುವ ಶೌಕ್ ಇತ್ತು. ಅದನ್ನು  ನೌಶಾದ್ ಜತೆ ಮಾಡುತ್ತಿದ್ದರು. ಜಾನಿವಾಕರ್ ಇಳಿ ವಯಸ್ಸಿನಲ್ಲಿ  ಸಕ್ಕರೆ ಖಾಯಿಲೆಗೆ ತುತ್ತಾಗಿದ್ದರು. ಕಿಡ್ನಿ ಸರಿಯಾಗಿ ಕೆಲಸಮಾಡುತ್ತಿರಲಿಲ್ಲ ೨೯, ಜುಲೈ ೨೦೦೩ ರಲ್ಲಿ ತಮ್ಮ ಜೀವನಕ್ಕೆ ಅಲ್ಬಿದಾ ಹೇಳಿದರು. 

-ಎಚ್ಚಾರೆಲ್ 

ಆಧಾರ : '೭೦ ಎಂ. ಎಂ. ವಿತ್ ರಾಹುಲ್' ಎಂಬ ವಿಡಿಯೋ ಆಧಾರಿತ ಲೇಖನ . 

 

Rating
Average: 4 (1 vote)