ಎಲ್ಲ ಪುಟಗಳು

ಲೇಖಕರು: Shreerama Diwana
ವಿಧ: ಪುಸ್ತಕ ವಿಮರ್ಶೆ
June 17, 2022
ಮಗ - ಸೊಸೆ ಸಂಪಾದಿಸಿದ ಕೃತಿ "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ" "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ", ದಿ | ಕೆ. ಎಸ್. ಪದ್ಮನಾಭ ಆಚಾರ್ಯ ಅವರ ಪುತ್ರ ಕಡಿಯಾಳಿ ಬಾಲಕೃಷ್ಣ ಆಚಾರ್ಯ ಹಾಗೂ ಸೊಸೆ ಶ್ರೀಮತಿ ವಾಣಿ ಬಿ. ಆಚಾರ್ಯ ಅವರು ಜಂಟಿಯಾಗಿ ಜವಾಬ್ದಾರಿ ವಹಿಸಿಕೊಂಡು ಸಂಪಾದಿಸಿ ತಮ್ಮದೇ ಆದ " ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ" ಇದರ ಮೂಲಕ ಪ್ರಕಟಿಸಿದ ಕೃತಿ. ಕಡಿಯಾಳಿ ಬಾಲಕೃಷ್ಣ ಆಚಾರ್ಯರು ಬಹುಮುಖ ಸಾಧಕರಾಗಿ ಪ್ರಸಿದ್ಧಿ ಪಡೆದವರು. ಇವರ ಪತ್ನಿ ವಾಣಿ ಬಿ. ಆಚಾರ್ಯ ಅವರು ಸಹ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 16, 2022
"ನನ್ನ ಪುಸ್ತಕ ಹಿಡಿಸದಿದ್ದರೆ ನಿಮ್ಮ ಹಣ ಮರಳಿ ಪಡೆಯಿರಿ" ಎಂದು ವಿನಮ್ರಪೂರ್ವಕವಾಗಿ ಚಾಲೆಂಜ್ ಮಾಡಿದಾಗ ಪತ್ರಕರ್ತ, ಅಂಕಣಕಾರ ಸಂತೋಷಕುಮಾರ ಮೆಹಂದಳೆ ಅವರಿನ್ನೂ ಪುಸ್ತಕವನ್ನು ಬರೆದಿರಲಿಲ್ಲ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ "... ವಿನಮ್ರ ಸವಾಲೆಸೆದು ಬರೆಯಲು ಕೂತ ಮೇಲೆ, ಅದನ್ನು ಹಿಂದೆಗೆದ ದಿನ ಪೆನ್ನು ಕೆಳಗಿಡುತ್ತೇನೆನ್ನುವ ಅಕ್ಷರ ವ್ಯಾಮೋಹಿ ನಾನು. ಇದರರ್ಥ ದುಡ್ಡು ಕೊಟ್ಟೇ ಓದಿರಿ ಎಂದಾದ ಮೇಲೆ ಓದಿಸಬಲ್ಲ ಪುಸ್ತಕಗಳನ್ನೇ ಕೊಡುತ್ತೇನೆನ್ನುವ ಬದ್ಧತೆಯೂ ಲೇಖಕನಿಗೆ ಇರಬೇಕಲ್ಲವೇ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 15, 2022
ಡಾ. ಬಸವರಾಜ ಸಾದರ ಅವರ 'ನೋಯುವ ಹಲ್ಲಿಗೆ ಹೊರಳುವ ನಾಲಿಗೆ' ಕೃತಿಯಲ್ಲಿ ಒಟ್ಟು ನಲವತ್ನಾಲ್ಕು ಲೇಖನಗಳಿವೆ. ಕೃತಿಯ ಶೀರ್ಷಿಕೆಯೇ ರೂಪಕದಲ್ಲಿದೆ. ಹನ್ನೆರಡನೆಯ ಶತಮಾನದ ಶರಣರ ಕ್ರಾಂತಿ ಕನ್ನಡಿಗರ ಪ್ರಜ್ಞೆಯಾಳದಲ್ಲಿ ಸದಾ ಕಾಡುವ ನೋಯುವ ಹಲ್ಲಿನ ನೆನಪು. ಇದು ಕೇವಲ ನಾಸ್ಟಾಲ್ಜಿಯಾ ಮಾದರಿಯ ನೆನಪು ಅಲ್ಲ. ಶ್ರೇಣೀಕೃತ ಸಮಾಜದಲ್ಲಿ ಜಾತಿವ್ಯವಸ್ಥೆ ಇರುವವರೆಗೂ ಆ ನೋವು ತಪ್ಪಿದ್ದಲ್ಲ. ಹಾಗಾಗಿ ಆ ಕ್ರಾಂತಿಯ ನೆನಪು ನೇವರಿಕೆಯ ನಿವಾರಣೆಯ ಹಿತದ ನೆನಪಾಗಿ ಬಿಟ್ಟೆನೆಂದರೂ ಬಿಡದ ಅನುಬಂಧದ ಹೊರಳು…
ವಿಧ: ಪುಸ್ತಕ ವಿಮರ್ಶೆ
June 14, 2022
ಈ 'ನಾ. ಕಾರಂತ' ಎಂಬ ಹೆಸರು ನೋಡಿದಾಗಲೆಲ್ಲ ನನಗೆ ನಾನೇ ಕೇಳಿಕೊಳ್ಳುವುದುಂಟು. ಇದೊಂದು ಯಾವ ನಮೂನೆಯ ಜನ ಮಾರಾಯ್ರೆ, ಅಂತ. ಹೇಳಿಕೇಳಿ ಪತ್ರಕರ್ತರು ಮತ್ತು ಯಕ್ಷಗಾನ ಕಲಾವಿದರು. ಯಾವಾಗ ನೋಡಿದರೂ ಯಾವುದೋ ಊರಿನ ಸುತ್ತಾಟದಲ್ಲಿರುತ್ತಾರೆ; ಯಾರೋ ಒಬ್ಬ ಪ್ರಯೋಗಶೀಲ ರೈತ ಅಥವಾ ಕಲಾವಿದರೊಡನೆ ಮಾತಾಡಿಕೊಂಡು ಕೂತಿರುತ್ತಾರೆ; ಇಲ್ಲವೇ ಯಾವುದೋ ಒಂದು ಆಟದಲ್ಲೋ ಕೂಟದಲ್ಲೋ ರಂಗದ ಮೇಲಿರುತ್ತಾರೆ. ಪತ್ರಿಕೆಗಳಲ್ಲಿ ತಿಂಗಳಿಗೆ ಐದಾರು ಬೈಲೈನು ಖಾಯಂ. ಇಂತಿಪ್ಪ ಕಾರಂತರ ಎರಡೋ ಮೂರೋ ಪುಸ್ತಕಗಳು ಪ್ರತೀ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 11, 2022
ದುಂಡಿರಾಜರ ಹನಿಗವನ ಎಂದರೆ ಮುಖದಲ್ಲಿ ಮಂದಹಾಸ ಮೂಡುತ್ತದೆ. ನಾಲ್ಕೈದು ಸಾಲುಗಳಲ್ಲೇ ಪಂಚ್ ನೀಡಿ ಮುದಗೊಳಿಸುವ ಹನಿಗವನ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ದುಂಡಿರಾಜ್ ಅವರು ಈ ಹನಿಗವನಗಳನ್ನು ಹೇಗೆ ರಚನೆ ಮಾಡುತ್ತಾರೆ ಎಂಬ ಬಗ್ಗೆ ಆಲೋಚನೆ ಮಾಡಿದ್ದೀರಾ? ಹನಿಗವನದ ಬಗ್ಗೆ ನಿಮಗಿರುವ ಸಂಶಯವನ್ನು ನಿವಾರಣೆ ಮಾಡಲು ಅಂಕಿತ ಪುಸ್ತಕ ಪ್ರಕಾಶನದವರು ನಿಮಗಾಗಿ ದುಂಡಿರಾಜ್ ಅವರ 'ಹನಿಗವನ ಏನು? ಏಕೆ? ಹೇಗೆ?' ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಕೃತಿಕಾರರಾದ ಎಚ್ ದುಂಡಿರಾಜ್ ಅವರು ತಮ್ಮ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
June 11, 2022
ನನಗೋ ಈಗ ೭೭ ತುಂಬಿ ೭೮ ನೇ ವರ್ಷ ಶುರುವಾಗೋ ಸಮಯ; ಆದ್ರೂ, ದಿನಾನೂ ಆ ಮಹಾ ತಾಯಿ, ನಮ್ಮನ ಜ್ಞಾಪಕ ಬರ್ದೇ ಇರಲ್ಲ.ನಾವು ನಾಲ್ಕುಮಂದಿ ಮಕ್ಳೂ ಅಮ್ಮನಿಗೆ ಆಗಾಗ ಸಹಾಯಮಾಡುತ್ತಿದ್ದೆವು. ಕೆಲವು ವೇಳೆ ಅಮ್ಮ ಹೇಳಿದ ಮಾತುಗಳು ನಮಗೆ ಚುಚ್ಚುತ್ತಿದ್ದವು. ಅದೇನೋ ಹೇಳ್ತಾರಲ್ಲ, "ಆಳ್ಮಾಡೊದ್ ಹಾಳು, ಮಗ ಮಾಡೋದ್ ಮಧ್ಯಮ ; ತಾನ್ ಮಾಡೊದ್ ಉತ್ತಮ " ಗೊತ್ತಾಯ್ತಲ್ಲ. ದಿನದಲ್ಲಿ ಅದೆಷ್ಟ್ ಗಾದೆಗಳ್ನ ಹೇಳೋಳು ಅವ್ಳು ಅಂತ ಈಗ್ ಲೆಕ್ಕ ಹಾಕಿದ್ರೆ, ಪ್ರತಿ ಒಂದ್ ಗಂಟೆಗೆ, ೪ ಆದೃ ಇರೋದು ಅಂತ ನನ್ನ ಲೆಕ್ಕ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 10, 2022
ಖ್ಯಾತ ಸಾಹಿತಿ ಖಲೀಲ್ ಗಿಬ್ರಾನ್ ಬರೆದ ಹಲವಾರು ಪುಸ್ತಕಗಳನ್ನು ನೀವು ಓದಿರಬಹುದು. ಆದರೆ ಖಲೀಲ್ ಗಿಬ್ರಾನ್ ಅವರ ಗೆಳತಿ ಬಾರ್ಬರಾ ಯಂಗ್ ಅವರ ಕಂಗಳಲ್ಲಿ ಕಂಡು ಬಂದ ಗಿಬ್ರಾನ್ ಬಗ್ಗೆ ಓದಿರುವಿರಾ? ಇಲ್ಲವೆಂದಾದರೆ 'ಇವ ಲೆಬನಾನಿನವ' ಮೂಲಕ ಕನ್ನಡ ಭಾಷೆಗೆ ಅನುವಾದಗೊಂಡ ಈ ಪುಸ್ತಕ ಓದಲೇ ಬೇಕು. ಅನುವಾದಕರು ಎನ್ ಸಂಧ್ಯಾರಾಣಿ. ಕವಿ ಹಾಗೂ ಅನುವಾದಕರಾದ ಚಿದಂಬರ ನರೇಂದ್ರ ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯ ಹೀಗಿದೆ… "ಕನ್ನಡಕ್ಕೂ ಲೆಬನಾನ್ ನ ಮಹಾಕವಿ ಖಲೀಲ್ ಗಿಬ್ರಾನ್…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 09, 2022
"ದಯವಿಟ್ಟು ನಂತರ ಪ್ರಯತ್ನಿಸಿ..." ಇದೊಂದು ರಾಜಕೀಯ ಕಾದಂಬರಿ, ಆಧುನಿಕತೆಯಲ್ಲಿ ಇಂದಿನ ರಾಜಕೀಯ ರಂಗಿನಾಟಗಳ ಸ್ಪಷ್ಟ ಚಿತ್ರಣವನ್ನು ಕೊಡಲು ಇಲ್ಲಿ ಪ್ರಯತ್ನಿಸಿರುವೆ. ಹಾಗೆಯೇ ಸಾಮಾಂಜಿಕವಾಗಿ ಹೆಣ್ಣು ಹೇಗೆ ಶೋಷಣೆಗೆ ಗುರಿಯಾಗುತ್ತಾಳೆ? ಹೆಣ್ಣು, ಹೆಣ್ಣಿಗೆ ಸಹಾಯ ಮಾಡಿದರೇ, ಆಕೆಯ ಬದುಕನ್ನು ಬದಲಿಸಬಹುದು ಎನ್ನುವುದಕ್ಕೆ ಈ ಕಾದಂಬರಿ ಸಾಕ್ಷಿಯಾಗುತ್ತದೆ. ಅಲ್ಲದೇ ಮನಸ್ಸು ಮಾಡಿದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ! ತನ್ನ ಗುರಿಯನ್ನು ಮುಟ್ಟಬಹುದು ! ಕುಟುಂಬ, ಸಮುದಾಯ ಮತ್ತು ಸಮಾಜ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
June 09, 2022
"ಸಸ್ಯ ಪ್ರಪಂಚ" ಒಂದು ಅಪೂರ್ವ ಪುಸ್ತಕ. ಸಸ್ಯಗಳ ಬಗ್ಗೆ ಡಾ. ಕೃಷ್ಣಾನಂದ ಕಾಮತರ ಆಳವಾದ ಅಧ್ಯಯನವನ್ನು ತೆರೆದಿಡುವ ಪುಸ್ತಕ. "....ನಾವು ಇನ್ನೂ ನಿಸರ್ಗಪ್ರೇಮಿಗಳಾಗಲಿಲ್ಲ. ದೇವದತ್ತವಾಗಿ ಬಂದ ಪರಿಸರವನ್ನು ಕಂಡು ಆನಂದಿಸುವ ಕಲೆಯನ್ನು ನಾವಿನ್ನೂ ಕರಗತ ಮಾಡಿಕೊಂಡಿಲ್ಲ .....ಕಾಡು, ನಮ್ಮ ಉಪಯೋಗಕ್ಕಾಗಿಯೇ ನಿರ್ಮಿತವಾದ ಧನರಾಶಿಯೆಂದು ನಾವೂ ಸರಕಾರವೂ ಕೂಡಿಯೇ ಭಾವಿಸಿದ್ದೇವೆಯೇ ಹೊರತು ಈ ಸಂಪತ್ತು ಬೆಳೆಸಲು ನಾವೇನು ಮಾಡಬೇಕು? ಎಂದು ಯೋಚಿಸುವ ಗೋಜಿಗೇ ಹೋಗಿಲ್ಲ" ಎಂಬ ನೇರ ಮಾತುಗಳೊಂದಿಗೆ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
June 08, 2022
'ರೇಷ್ಮಾ ಔರ್ ಶೇರಾ' ರಾಷ್ಟೀಯ ಹಾಗೂ  ಅಂತಾರಾಷ್ಟ್ರೀಯ ವಿಮರ್ಶಕರಿಂದ ಹೆಚ್ಚಿನ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಚಿತ್ರವಾಗಿತ್ತು.  22 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್‌ಗೆ ನಾಮನಿರ್ದೇಶನಗೊಂಡಿತ್ತು ಸಹಿತ.  44 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ರೇಷ್ಮಾ ಔರ್ ಶೇರಾ  ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ (ಭಾರತದಿಂದ ಪ್ರವೇಶಕ್ಕೆ ಒಳಗಾದ) ವಾಗಿ  ಆಯ್ಕೆಯಾಗಿತ್ತು.  ಆದರೆ ನಾಮನಿರ್ದೇಶಿತವಾಗಿ  ಸ್ವೀಕೃತವಾಗಿರಲಿಲ್ಲ. 'ಸುನಿಲ್ ದತ್' ರಂತಹ ಕಲಾವಿದ,  …