'ರೇಷ್ಮಾ ಔರ್ ಶೇರಾ'
'ರೇಷ್ಮಾ ಔರ್ ಶೇರಾ' ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ವಿಮರ್ಶಕರಿಂದ ಹೆಚ್ಚಿನ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಚಿತ್ರವಾಗಿತ್ತು. 22 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್‌ಗೆ ನಾಮನಿರ್ದೇಶನಗೊಂಡಿತ್ತು ಸಹಿತ. 44 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ರೇಷ್ಮಾ ಔರ್ ಶೇರಾ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ (ಭಾರತದಿಂದ ಪ್ರವೇಶಕ್ಕೆ ಒಳಗಾದ) ವಾಗಿ ಆಯ್ಕೆಯಾಗಿತ್ತು. ಆದರೆ ನಾಮನಿರ್ದೇಶಿತವಾಗಿ ಸ್ವೀಕೃತವಾಗಿರಲಿಲ್ಲ.
'ಸುನಿಲ್ ದತ್' ರಂತಹ ಕಲಾವಿದ, ಒಬ್ಬ ಪ್ರಾಮಾಣಿಕ ಚಿತ್ರ ನಿರ್ಮಾಪಕ ತನ್ನ ಕೌಶಲ್ಯಗಳನ್ನೆಲ್ಲಾ ಧಾರೆಯೆರೆದು ಒಂದು ದೃಶ್ಯಕಾವ್ಯವನ್ನು ನಿರ್ಮಿಸಿದಾಗ ಅದನ್ನು ಕಂಡು ಕಣ್ತುಂಬಿಕೊಳ್ಳುವುದು ಮತ್ತು ಅದರ ಬಗ್ಗೆ ಒಂದೆರಡು ಒಳ್ಳೆಯ ಮಾತಾಡುವುದು ನಮ್ಮೆಲ್ಲರ ಕರ್ತವ್ಯ.
19 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ರೇಷ್ಮಾ ಔರ್ ಶೇರಾ' 3 ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿದೆ. ವಹೀದಾ ರೆಹಮಾನ್ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಈ ಚಿತ್ರದಲ್ಲಿನ ಅತ್ಯಂತ ಮೆಚ್ಚುಗೆ ಪಡೆದ ಅಭಿನಯಕ್ಕಾಗಿ ಪಡೆದರು. ಜೈದೇವ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ರಾಮಚಂದ್ರರಿಗೆ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ರೇಷ್ಮಾ ಔರ್ ಶೇರಾ ಚಿತ್ರದ ಸುಂದರ ಗೀತೆಗಳಲ್ಲಿ "ಏಕ್ ಮೀಠಿಸಿ ಜುಬಾನ್, ಏಕ್ ಥಂಡಿಸಿ ಅಗನ್" (ಉಧವ್ ಕುಮಾರ್ ಅವರ ಸಾಹಿತ್ಯ) ಮತ್ತು "ತು ಚಂದಾ ಮೈ ಚಾಂದನಿ" (ಬಾಲಕವಿ ಬೈರಾಗಿ ಅವರ ಸಾಹಿತ್ಯ) ನಂತಹ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧಿಪಡೆದಿತ್ತು.
ಏಕ್ ಮೀಠಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಆಜ್ ಪವನ್ ಮೇ ಪಾವು
ಏಕ್ ಮೀಠಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಮನ್ ಹೀ ಮನ್ ಮೇ ನಾಚ್ ರಹೀ ಹೂ
'ರೇಷ್ಮಾ ಔರ್ ಶೇರ ಚಿತ್ರ ಕಥೆ' :
ರಾಜಸ್ಥಾನದ ಜನಜೀವನದ ಹಿನ್ನಲೆಯಲ್ಲಿ, ರೇಷ್ಮಾ (ವಹೀದಾ ರೆಹಮಾನ್) ಮತ್ತು ಶೇರಾ (ಸುನಿಲ್ ದತ್) ತಮ್ಮ ಜಾತಿಗಳ ಮಧ್ಯೆ, ಬಹಳ ಹಿಂದಿನಿಂದ ನಡೆದುಕೊಂಡು ಬಂದ ಹಿಂಸಾತ್ಮಕ ದ್ವೇಷಗಳ ಮಧ್ಯೆಯೂ ಪರಸ್ಪರ ಪ್ರೀತಿಸುತ್ತಾರೆ. ಅದು ಮುಂದುವರೆದು ಮದುವೆಯಾಗುವ ಮಟ್ಟಕ್ಕೆ ಹೋದಾಗ, ಶೇರಾನ ತಂದೆ ಸಗತ್ ಸಿಂಗ್, (ಜಯಂತ್) ಇದನ್ನು ಕಟುವಾಗಿ ವಿರೋಧಿಸುತ್ತಾನೆ. ಚೋಟು (ಅಮಿತಾಭ್ ಬಚ್ಚನ್), ಶೇರಾರವರ ತಮ್ಮ ; ಬಾಲ್ಯದಿಂದಲೂ ಮೂಕನಾಗಿದ್ದು ಮಾತಾಡಲು ಅಸಮರ್ಥ. ಅವನ ತಂದೆ, ಸಗತ್ ಸಿಂಗ್ (ಜಯಂತ್) ರೇಷ್ಮಾಳ ತಂದೆ (ಕೆ. ಎನ್. ಸಿಂಗ್) ಯನ್ನು ಮತ್ತು ಇತ್ತೀಚೆಗೆ ವಿವಾಹವಾದ ಅವರ ಮಗ ಗೋಪಾಲ್ (ರಂಜೀತ್) ರನ್ನು ಕೊಲ್ಲಲು ಆದೇಶ ನೀಡುತ್ತಾನೆ.
ಗೋಪಾಲ್‌ನ ಹೆಂಡತಿ (ರಾಖೀ) ಪತಿಯ ಮರಣದಿಂದ ದುಃಖವನ್ನು ಸಹಿಸಲಾಗದೆ ಶೇರಾ ತನ್ನ ಸ್ವಂತ ತಂದೆಯ ಪ್ರಚೋದನೆಯಿಂದ ಈ ಅನರ್ಥವಾಯಿತೆಂದು ನೊಂದುಕೊಳ್ಳುತ್ತಾಳೆ. ಈ ದುರಂತದ ನಂತರ, ರೇಷ್ಮಾ ಮತ್ತು ಶೇರಾ ಅವರ ಕುಟುಂಬದ ವೈಷಮ್ಯವು ಹೆಚ್ಚುತ್ತಾ ಹೋಗಿ, ದುರಂತದಲ್ಲಿ ಕೊನೆಗೊಳ್ಳುತ್ತದೆ, ಏಕೆಂದರೆ, ತಪ್ಪು ತಿಳುವಳಿಕೆಗಳು, ಎರಡೂ ಕುಲಗಳ ನಡುವೆ ಹೆಚ್ಚು ರಕ್ತಪಾತಕ್ಕೆ ಕಾರಣವಾಗುತ್ತದೆ.
ಶೇರಾ, ರೇಷ್ಮಾಳ ಕುಟುಂಬದ ಹೀನ ಕಗ್ಗೊಲೆಗೆ ತನ್ನ ತಮ್ಮ ಚೋಟುವೇ ಕಾರಣನೆಂದು ಚೋಟುವನ್ನು ಕೊಂದು, ರೇಷ್ಮಾಳ ಕುಟುಂಬವನ್ನು ರಕ್ಷಿಸುವುದಾಗಿ ಶಪಥ ಮಾಡುತ್ತಾನೆ. ಅದನ್ನು ತಿಳಿದ ಚೋಟು, ರೇಷ್ಮಾಳ ಮನೆಯಲ್ಲಿ ಅಡಗಿಕೊಂಡು ಅವಳಿಂದ ರಕ್ಷಣೆ ಪಡೆಯುತ್ತಿರುತ್ತಾನೆ. ಶೇರಾ, ಚೋಟುವಿನಮೇಲೆ ಪ್ರತಿಕಾರ ಮಾಡಲು ಎಲ್ಲೆಡೆಯೂ ಹುಡುಕುತ್ತಾನೆ. ಕೊನೆಗೆ ರೇಷ್ಮಾ ಅವನಿಗೆ ರಕ್ಷಣೆ ಕೊಟ್ಟಿರುವುದು ತಿಳಿಯುತ್ತದೆ. ಚೋಟುವನ್ನು ಕೊಲ್ಲಲು ಶೇರಾ ರೇಷ್ಮಾಳ ಮನೆಯ ಹೊರಗೆ ಕಾಯುವುದು, ಈ ಚಿತ್ರದ ಕ್ಲೈಮ್ಯಾಕ್ಸ್ ಎಂದು ಹೇಳಬಹುದು. ಈ ಸಮಯದಲ್ಲಿ, ಮನೆಯಿಂದ ಹೊರಗೆ ಚೋಟು ಮತ್ತು ರೇಷ್ಮಾ ವಿವಾಹಿತ ದಂಪತಿಗಳಂತೆ ಬರುವುದು ಶೇರನಿಗೆ ವಿಸ್ಮಯ ಹಾಗೂ ವಿರೋಧಾಭಾಸವೆನ್ನಿಸುತ್ತದೆ. ಶೇರಾ, ರೇಷ್ಮಾಳ ಹಣೆಯ ಮೇಲೆ ಸಿಂಧೂರವನ್ನು ಗಮನಿಸುತ್ತಾನೆ. ಈಗ ತಮ್ಮ ಚೋಟು, ವರಸೆಯಲ್ಲಿ ರೇಷ್ಮಾಳ ಪತಿಯಾಗುವುದರಿಂದ ಅವನನ್ನು ಕೊಲ್ಲಲು ಸಾಧ್ಯವೇ ? ಈ ಕಟು ಸತ್ಯವನ್ನು ಅರಿತ ಶೇರ, ಮುಂದಿನ ರಕ್ತಪಾತಕ್ಕೆ ಎಡೆಮಾಡಿ ಕೊಡುವುದಿಲ್ಲ. ಅತ್ಯಂತ ಗೊಂದಲಕ್ಕೀಡಾಗಿ, ದುಃಖಿತನಾದ ಶೇರಾ, ತನ್ನ ರೈಫಲ್ ಅನ್ನು ಬಳಸಿ ತನ್ನ ತಲೆಗೆ ಗುಂಡು ಹೊಡೆದುಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸುತ್ತಾನೆ.
ಅವಗಢದಿಂದಾಗಿ ಮನೆಯಲ್ಲಿ ಆಪ್ತರನ್ನೆಲ್ಲಾ ಕಳೆದುಕೊಂಡು ಗೊಂದಲ, ಸಂಕಟದಿಂದ ಪರಿತಪಿಸುತ್ತಿದ್ದ ರೇಷ್ಮಾ ತನಗೆ ಜೀವಿಸಲು ಇಷ್ಟವಿಲ್ಲ. "ಓ ದೇವರೇ ನನ್ನ ಪ್ರಾಣವನ್ನೂ ತೆಗೆದುಕೋ" ಎಂದು ಆಕಾಶದ ಕಡೆಗೆ ಮುಖಮಾಡಿ ಆರ್ತಳಾಗಿ ಬೇಡುತ್ತಿರುವಂತೆ ಮೂರ್ಛೆ ಹೋಗುತ್ತಾಳೆ. ಪ್ರಾಣ ಕಳೆದುಕೊಂಡು ಭೂಮಿಯಮೇಲೆ ಕುಸಿದು ಬೀಳುತ್ತಾಳೆ. ಮತ್ತೆ ಇಬ್ಬರೂ ಪ್ರೇಮಿಗಳು ಒಂದಾದಂತೆ, ಆಕೆಯ ಮೃತ ದೇಹವು, ಶೇರಾನ ಶವದ ಮೇಲೆ ಬೀಳುತ್ತದೆ. ಅಗಲಿದ ಇಬ್ಬರು ಪ್ರೇಮಿಗಳು, ಮರುಭೂಮಿಯಲ್ಲಿ ಮತ್ತೆ ಒಂದಾಗುತ್ತಾರೆ. ರಭಸದಿಂದ ಬೀಸುತ್ತಿದ್ದ ಬಿರುಗಾಳಿ ಮರಳಿನ ದಟ್ಟವಾದ ಧೂಳಿನ ದೊಡ್ಡ ಅಲೆಗಳು ಅವರಿಬ್ಬರ ಮೃತದೇಹಗಳನ್ನು ಮರಳಿನೊಳಗೆ ಹೂತುಹಾಕುತ್ತವೆ. ಎಲ್ಲರ ಕಣ್ಣಿನ ಮುಂದೆಯೇ ಇಬ್ಬರು ಪ್ರೇಮಿಗಳ ಹೆಣಗಳು ಮಣ್ಣಾಗುತ್ತವೆ.
ಅಮಿತಾಭ್ ಬಚ್ಚನ್ ತಮ್ಮ ಕೆರಿಯರ್ ನಲ್ಲಿ ಕಲಿತ ಪಾಠ :
'ಷೋ ಬಿಸಿನೆಸ್' ನಲ್ಲಿ ಏಳು-ಬೀಳುಗಳು ಸಾಮಾನ್ಯ. ಅವನ್ನೆಲ್ಲ ಸಮಾನ ಮನಃ ಸ್ಥಿತಿಯಿಂದ ಎದುರಿಸಿ, ಅವಕಾಶಗಳಿಗಾಗಿ ಕಾಯುವ ವ್ಯಕ್ತಿಮಾತ್ರ ಒಂದು ದಿನ ಸಿದ್ಧಿಯನ್ನು ಗಳಿಸಲು ಸಾಧ್ಯ. ಅದಲ್ಲದೆ ಆತ/ಆಕೆಗೆ ತನ್ನ ಕೆಲಸದಲ್ಲಿ ಸಂಪೂರ್ಣ ಸ್ಥೈರ್ಯ, ಆತ್ಮ ವಿಶ್ವಾಸವಿರಬೇಕು. ಕಷ್ಟಸಹಿಷ್ಣುವಾಗಿರಬೇಕು. ತನ್ನ ತೃಟಿಗಳನ್ನು ಸದಾ ಒರೆಹಚ್ಚಿಕೊಂಡು ಅದರ ವಿರುದ್ಧ ಸಿದ್ಧತೆಗಳನ್ನು ಮಾಡಿಕೊಂಡು ಗಟ್ಟಿಮನಸ್ಸನ್ನು ಹೊಂದಿಮುಂದೆ ಹೆಜ್ಜೆ ಹಾಕುತ್ತಿರಬೇಕು.
ರಾಜಸ್ಥಾನ್ ರಾಜ್ಯದ ಜೈಸಲ್ ಮೆರ್ ನ ಬಿಸಿಲಿನ ಬಿಸಿಮರಳಿನಮೇಲೆ ಗುಡಾರಗಳಲ್ಲಿ ಟೆಂಟ್ ಗಳನ್ನು ಕಟ್ಟಿ ಅದರಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆಯಬೇಕಾಯಿತು. ಒಳಗೆ ಯಾವ ಸಾಮಾನ್ಯವಾದ ಜೀವನ-ಮೂಲ ಸೌಲಭ್ಯಗಳೂ ಇರದೇ ಬಹಳ ಕಷ್ಟವಾಗುತ್ತಿತ್ತು. ಕ್ರ್ಯುನ ನಾಲ್ಕುಜನರ ಜತೆ ಕಳೆಯಬೇಕಾಗಿತ್ತು. ೧೯೬೮-೬೯ ರಲ್ಲಿಯೇ ಕಾಸ್ಟಿಂಗ್ ನಡೆದರೂ ಇನ್ನು ಸಾತ್ ಹಿಂದುಸ್ಥಾನಿ ಚಿತ್ರ ನಿರ್ಮಾಣವಾಗಿರಲಿಲ್ಲ. ಅಮಿತಾಭ್ ರ ನಟನೆಯನ್ನು ಜನ ಇನ್ನು ಪರದೆಯಮೇಲೆ ನೋಡಿರಲಿಲ್ಲ; ಅವರ ೧೯೭೧ ರಲ್ಲಿ ರಿಲೀಸ್ ಆಯಿತು. ಅಮಿತಾಬ್ ಗೆ ಈ ಚಿತ್ರದಲ್ಲಿ ಕೆಲಸಮಾಡಲು ಯಾರ ಪರಿಚಯವೂ ಇರಲಿಲ್ಲ. ಆದರೆ ಶ್ರೀಮತಿ ಇಂದಿರಾ ಗಾಂಧಿಯವರ ಒಂದು ಹಸ್ತಲಿಖಿತ ಪತ್ರವನ್ನು ನರ್ಗಿಸ್ ದತ್ ರಿಗೆ ಬರೆದು "ನನಗೆ ಅಮಿತಾಭ್ ಬಚ್ಚನ್ ಎನ್ನುವ ಹುಡುಗ ಚೆನ್ನಾಗಿ ಗೊತ್ತು. ಒಳ್ಳೆ ಸ್ವಭಾವದ ವ್ಯಕ್ತಿ ; ಕೆಲವು ಡ್ರಾಮಾಗಳಲ್ಲಿ ನಟಿಸಿದ್ದಾನೆ. ಅವನಿಗೆ ನಟನೆಯಲ್ಲಿ ತೀವ್ರ ಆಸಕ್ತಿ ಇದೆ. ನಿಮ್ಮಲ್ಲಿ ಯಾವುದಾದರು ಪಾತ್ರ ಮಾಡಲು ಅವನಿಗೆ ಅವಕಾಶಮಾಡಿ ಕೊಡುವಿರೆಂದು ನಂಬುತ್ತೇನೆ". ನರ್ಗಿಸ್, ತಮ್ಮ ಪತಿಗೆ ಆ ಪತ್ರ ತೋರಿಸಿದರು. ಆಗ ಸುನಿಲ್ ದತ್ ಅಮಿತಾಭ್ ರನ್ನು ಕರೆದು, ನಿಮಗೆ ಸಿನಿಮಾದಲ್ಲಿ ಮಾಡಿ ಅಭ್ಯಾಸವಿಲ್ಲವೆಂದು ಹೇಳುತ್ತಿದ್ದೀರಿ. ನೀವು ಅಂದುಕೊಂಡಿರುವಂತೆ ನಿಮ್ಮ ಯಾವ ಕೌಶಲವನ್ನು ಮನಗಂಡಿದ್ದಿರಿ, ಹೇಳಿ. ಎಂದು ಕೇಳಿದಾಗ, ಆಗ ಅಮಿತಾಭ್, ನಿಜವಾಗಿ ಹೇಳಬೇಕೆಂದರೆ, ನನ್ನ ಧ್ವನಿಯೇ ನನ್ನ ಬಂಡವಾಳ' ವೆಂದು ಹೇಳಿದರು. ಆದರೆ, ಸುನಿಲ್ದತ್ , ಏನುಮಾಡುವುದು ; ನಾವು ಒಬ್ಬ ಮೂಕ ವ್ಯಕ್ತಿಯ ಪಾತ್ರ ನಿಭಾಯಿಸುವ ವ್ಯಕ್ತಿಯ ಹುಡುಕಾಟದಲ್ಲಿದ್ದೇವೆ. ಇದನ್ನು ನಿರ್ವಹಿಸಲು ನಿಮಗೆ ಸಾಧ್ಯವೇ ? ಎಂದು ಪ್ರಶ್ನಿಸಿದಾಗ, ಅಮಿತಾಭ್ ಒಪ್ಪಿಕೊಂಡರು.
ಸುನಿಲ್ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ನಟನ ಭೂಮಿಕೆಯನ್ನು ಮುಂದುವರೆಸಿದ್ದರು. ಕೇವಲ ೧೫ ದಿನಗಳಲ್ಲಿ ಶೂಟಿಂಗ್ ಮುಗಿಸುವ ಸನ್ನದ್ಧತೆಯಲ್ಲಿದ್ದೇವೆ ಎಂದು ಕ್ರೂ ಮುಂದೆ ಬಿನ್ನವಿಸಿಕೊಂಡರು. ಆದರೆ ಸಂಪೂರ್ಣವಾಗಿ ಚಿತ್ರ ಪೂರ್ತಿಯಾಗಲು ಎರಡು ತಿಂಗಳಿಗಿಂದ ಮಿಗಿಲಾದ ಸಮಯ ತೆಗೆದುಕೊಂಡಿತು. ಚಿತ್ರೀಕರಣ ಮಾಡುವಷ್ಟು ದಿನ ಸಾಮಾನ್ಯವಾದ ದಪ್ಪ ಬಟ್ಟೆ- ಗುಡಾರವೆಂದು ನಾವು ಕರೆಯುವ ಟೆಂಟ್ ನಲ್ಲಿ ವಾಸಮಾಡಬೇಕಾಗಿತ್ತು. ಜೈಸಲ್ ಮೆರ್ ನಿಂದ ಸ್ವಲ್ಪ ಮುಂದೆ ಮರಳುಗಾಡಿನ ಉರಿಬಿಸಿಲಿನಲ್ಲಿ ಶೂಟಿಂಗ್ ಮಾಡಬೇಕಿತ್ತು. ಹೊಸನಟ ರಂಜೀತ್, ಮತ್ತು ಕಥಾ ಲೇಖಕ ಅಲಿ ರಜಾ, (ಮದರ್ ಇಂಡಿಯಾ ಚಿತ್ರಕ್ಕೆ ಕತೆ ಬರೆದವರು) ಸಹಾಯಕ ನಿರ್ದೇಶಕ, ಬಿ. ಎಸ್. ಥಾಪ ಸಹಿತ ಅವರ ಜತೆಯಲ್ಲಿ ಟೆಂಟ್ ನಲ್ಲಿದ್ದರು. ಅಮಿತಾಭ್ ಗೆ ಮೊದಲಿನಿಂದಲೂ ಪ್ರತಿದಿನವೂ ತಮ್ಮ ದಿನಚರಿ ಬರೆಯುವ ಅಭ್ಯಾಸವಿತ್ತು. ಈಗ ಅವರು ಬರೆದ ದಿನಚರಿ ತಂದೆ-ತಾಯಿಯನ್ನು ಕುರಿತು ಫಿಲಂ ಶೂಟಿಂಗ್ ಸಮಯದ ತಮ್ಮ ಅನುಭವಗಳನ್ನು ತಿಳಿಸಿದ್ದಾಗಿತ್ತು. ಆದರೆ ಆ ಮಾಹಿತಿಯನ್ನು ಅಂಚೆಯಲ್ಲಿ ಅವರಿಗೆ ಕಳಿಸಲಾಗುತ್ತಿರಲಿಲ್ಲ. ದಿನಚರಿಯ ದಾಖಲೆಗಳ ಪುಸ್ತಕದ ತರಹ ಬರೆದು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಆದರೆ ಪ್ರತಿದಿನವೂ ಶೂಟಿಂಗ್ ಗೆ ಹೋಗುವ ಮೊದಲು ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಪುಸ್ತಕದಿಂದ ಪಠಿಸುತ್ತಿದ್ದರು. ಮುಂದೆ ಅವರು ತಮ್ಮ ವೃತ್ತಿಜೀವನದಲ್ಲಿ ಜನಪ್ರಿಯತೆಯ ಮೆಟ್ಟಿಲುಗಳನ್ನು ಏರಿದಮೇಲೂ, ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರೋ ತಿಳಿಯದು. ತಮ್ಮಪಾತ್ರದ ಸಮಯ ಬರುವವರೆಗೆ, ಸುನಿಲ್ ದತ್ ರ ಅಪ್ಪಣೆ ಪಡೆದು ಅಮಿತಾಭ್, ದೆಹಲಿಗೆ ಹೋಗಿ ತಮ್ಮ ತಂದೆ-ತಾಯಿಯರಿಗೆ ಎಲ್ಲಾ ಮಾಹಿತಿಗಳನ್ನೂ ಒಪ್ಪಿಸಿ, ಅವರ ಆಶೀರ್ವಾದ ಪಡೆದು ವಾಪಸ್ ಬರುತ್ತಿದ್ದರು.
'ಚಿತ್ರೀಕರಣದ ಸಮಯದಲ್ಲಿ ಒಂದು ಘಟನೆ ':
ಒಮ್ಮೆ ಅಮಿತಾಭ್ ಬಚ್ಚನ್ ದೆಹಲಿಯಿಂದ ಅಂಬಾಸಿಡರ್ ಕಾರಿನಲ್ಲಿ ರಂಜೀತ್ ಜೊತೆಗೆ , ಒಬ್ಬ ಡ್ರೈವರ್ ನೆರವಿನಿಂದ ಜೈಸಲ್ಮೇರ್ ಗೆ ವಾಪಸ್ ಬರುವಾಗ, ಕುಡುಕ ಡ್ರೈವರ್ ಕಾರನ್ನು ಒಂದು ಗುಂಡಿಯಮೇಲೆ ಚಲಾಯಿಸಿ ಕೆಡವಿದ್ದ. ಆ ಖಡ್ಡದಿಂದ ಕಾರನ್ನು ಹೊರಗೆಳೆಯಲು ಬಹಳ ಕಷ್ಟ ಪಡಬೇಕಾಯಿತು. ಈಗ ಡ್ರೈವಿಂಗ್ ಮಾಡಲು ಅಮಿತಾಭ್ ಪ್ರಾರಂಭಿಸಿದರು. ಆ ಉರಿಬಿಸಿಲಿನ ಝಳದಲ್ಲಿ ಜೈಸಲ್ಮೇರ್ ನಿಂದ ಸ್ವಲ್ಪ ದೂರದಲ್ಲಿದ್ದ ಶೂಟಿಂಗ್ ಜಾಗವನ್ನು ತಲುಪಲು ಬಹಳ ಕಷ್ಟಪಡಬೇಕಾಯಿತು.
ನಿರ್ಮಾಪಕ ಸುನಿಲ್ ದತ್, ತಮ್ಮ ತನು-ಮನ-ಧನಗಳನ್ನು ಮುಡಿಪಾಗಿರಿಸಿ, ರೇಷ್ಮಾ ಔರ್ ಶೇರಾ ಚಿತ್ರನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಷ್ಟೆಲ್ಲಾ ಕಷ್ಟಪಟ್ಟು ತಮ್ಮ ಸೃಜನಶೀಲತೆಯ ಪುಂಜಿಯನ್ನೆಲ್ಲಾ ಧಾರೆಯೆರೆದು ನಿರ್ಮಿಸಿದ ಚಿತ್ರ ಬಾಕ್ಸ್ ಆಫೀಸಿನಲ್ಲಿ ತೀರಾ ನೆಲಕಚ್ಚಿತು. ನರ್ಗಿಸ್ ದತ್, ಹಾಗು ಕ್ರ್ಯು ಸದಸ್ಯರೆಲ್ಲ ಬಹಳ ನೊಂದುಕೊಂಡರು. ಸುನಿಲ್ ಹಿತೈಷಿಗಳು ಮತ್ತು ಗೆಳೆಯರು, 'ನೀವು ದಿವಾಳಿಯಾಗಿದ್ದೀರಿ ಎಂದು ಘೋಷಿಸಿಕೊಳ್ಳಿ' ಎಂದು ಸಲಹೆ ಕೊಟ್ಟರು. ಆದರೆ ಸುನಿಲ್ದತ್ ಹಾಗೆ ಸುಲಭವಾಗಿ ಒಪ್ಪುವರೇ ? ಸಾಲದ ಹಣವನ್ನು ಪಾವತಿಮಾಡಲು ತಮ್ಮ ಕಾರುಗಳು, ಸಂಪತ್ತು ಮತ್ತು ತಮ್ಮ ಬಂಗಲೆಯನ್ನೂ ಮಾರಬೇಕಾಗಿ ಬಂತು. ಅಮಿತಾಬ್ ರ, ತಂದೆ, ಹರಿವಂಶರಾಯ್ ಬಚ್ಚನ್, ತಾಯಿ, ತೇಜಿ ಬಚ್ಚನ್, ಮತ್ತು ಅವರ ಗೆಳತಿ ಇಂದಿರಾಗಾಂಧಿ ಚಿತ್ರದ ಅಸಫಲತೆಯನ್ನು ಕೇಳಿ ಬಹಳ ಬೇಸರಪಟ್ಟುಕೊಂಡರು. ೧೨ ವರ್ಷದ ಬಾಲಕ, ಸುನಿಲ್ ದತ್ ಮಗ ಸಂಜಯ್ ದತ್ ಕವ್ವಾಲಿ ಹಾಡುವವರ ಗುಂಪಿನಲ್ಲಿ ಹಾಡುತ್ತಿರುವುದು ನೋಡಲು ಚೆನ್ನಾಗಿದೆ. ಗಮನ ಹರಿಸಬೇಕಾದ ಸಂಗತಿಯೇನೆಂದರೆ, ರೇಷ್ಮಾ ಔರ್ ಶೇರ ಚಿತ್ರದ ಟೀಮಿಗೆ ಮೂರು ನ್ಯಾಷನಲ್ ಅವಾರ್ಡ್ ಗಳು ಲಭ್ಯವಾದವು.
೧. ಅತ್ಯುತ್ತಮ ಸಂಗೀತಕ್ಕಾಗಿ ಹೆಸರಾಂತ ಸಂಗೀತ ನಿರ್ದೇಶಕ ಜೈದೇವ್ ರವರಿಗೆ
೨. ಅತ್ಯುತ್ತಮ ಅಭಿನಯಕ್ಕೆಂದು ಜನಪ್ರಿಯ ಅಭಿನೇತ್ರಿ, ವಹೀದಾ ರೆಹಮಾನ್ ರಿಗೆ
೩. ಅತ್ಯುತ್ತಮ ಸಿನಿಮಾಟೋಗ್ರಫಿಗಾಗಿ ರಾಮಚಂದ್ರರವರಿಗೆ,
ರೇಷ್ಮಾ ಔರ್ ಶೇರಾ ಚಿತ್ರದ ಬಗ್ಗೆ , ಅಮಿತಾಭ್ ಬಚ್ಚನ್ :
ಅಮಿತಾಭ್ ಬಚ್ಚನ್ ಬೋಲ್ತಿ ಬಂದಾಗಿತ್ತು. ಸಿನಿಮಾದಲ್ಲಿ ಮತ್ತು ನಂತರವೂ ಅವರು ಏನೂ ಹೇಳಲು ಅಸಮರ್ಥರಾಗಿದ್ದರು. ಕಾರಣ, ಅವರು ತಮ್ಮ ಕೆರಿಯರ್ ನ ಪ್ರಾರಂಭಿಕ ಹಂತದಿಂದ ಸಾಗುತ್ತಿದ್ದರಿಂದ ಮೂಕನ ಪಾತ್ರವಹಿಸಿ ಯಾವ ಹೇಳಿಕೆಯನ್ನೂ ಕೊಡುವ ಸ್ಥಿತಿಯಲ್ಲಿರಲಿಲ್ಲ.
ಖ್ಯಾತ ಗಾಯಕ/ಕಿಯರು ಹಾಡಿದ ಗೀತೆಗಳು :
"ತೂ ಚಂದಾ, ಮೈ ಚಾಂದನಿ-"ಲತಾ ಮಂಗೇಶ್ಕರ್ "ತು ಚಂದಾ" (ಬಾಲಕವಿ ಬೈರಾಗಿ ಅವರ ಸಾಹಿತ್ಯ) ನಂತಹ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧಿಪಡೆದಿತ್ತು.
"ಮೈ ಆಜ್ ಪವನ್ ಮೇ -ಲತಾ ಮಂಗೇಶ್ಕರ್
"ತೋಬಾ ತೋಬಾ ಮೇರೀ ತೋಬಾ "-ಆಶಾ ಬೋನ್ಸ್ಲೆ,
"ಜಬ್ಸೇ ಲಗನ್ ಲಗಾಯಿ ರೇ "-ಆಶಾ ಬೋನ್ಸ್ಲೆ,
"ಝಾಲಿಮ್ ಮೇರೀ ಶರಾಬ್ " -ಮನ್ನಾಡೆ,
"ನಫ್ರತ್ ಕೀ ಏಕ್ ಹೀ ಥೋಕರ್- ಮನ್ನಾಡೆ
"ಏಕ್ ಮೀಠಿಸಿ ಚುಬನ್"-ಲತಾ ಮಂಗೇಶ್ಕರ್
ಏಕ್ ಥಂಡಿಸಿ ಅಗನ್" (ಉಧವ್ ಕುಮಾರ್ ಅವರ ಸಾಹಿತ್ಯ)
ಏಕ್ ಮೀಠಿಸಿ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಆಜ್ ಪವನ್ ಮೇ ಪಾವು
ಏಕ್ ಮೀಠಿಸಿ ಸೀ ಚುಭನ್, ಏಕ್ ಥಂಡಿ ಸೀ ಅಗನ್
ಮೈ ಆಜ್ ಪವನ್ ಮೇ ಪಾವು, ಮನ್ ಹೀ ಮನ್ ಮೇ ನಾಚ್ ರಹೀ ಹೂ
ರೇಷ್ಮಾ ಮತ್ತು ಶೇರಾ ಚಲನ ಚಿತ್ರದ ಕೆಲವು ಸತ್ಯಾ-ಸತ್ಯಗಳನ್ನು ಇಲ್ಲಿ ದಾಖಲಿಸುವುದು ಅನಿವಾರ್ಯವೆಂದು ನನ್ನ ಅನಿಸಿಕೆ :
೧. ಅಮಿತಾಭ್ ಬಚ್ಚನ್ ತಮ್ಮ ಕಂಠಶ್ರೀ ಒಂದೇ, ತಮ್ಮ ಎಲ್ಲಾ ಸಫಲತೆಗಳಿಗೆ ಕಾರಣವೆಂದು ತಮ್ಮ ಸಿನಿಮಾ ವೃತ್ತಿ ಜೀವನದ ಕೊನೆಯವೇಳೆಗೆ ಸಾಬೀತುಮಾಡಿದರು. ಆದರೂ ಇದು ಅವರು ಹೇಳಿದಷ್ಟು ಸುಲಭವಾದ ಸತ್ಯವಾಗಿರಲಿಲ್ಲ. ರೇಷ್ಮಾ ಔರ್ ಶೇರ ಅವರ ಮೊದಲ ಕಮರ್ಷಿಯಲ್ ಚಿತ್ರವೆಂದು ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಸಿಕ್ಕಿದ್ದು ಮೂಕನ ಪಾತ್ರ. ಅವರ ಸೃಜನಶೀಲತೆಯನ್ನು ತೋರಿಸಲು ಈ ಮಾಧ್ಯಮ ಯಾವ ಉಪಯೋಗಕ್ಕೂ ಬರಲಿಲ್ಲ. ಅದಕ್ಕೆ ಕಾರಣವನ್ನು ಕೆಲವು ಸಿನಿಮಾ ತಜ್ಞರು ಹೀಗೆ ಕೊಡುತ್ತಾರೆ.
೨. ಮೊದಲು ಮಾತು ಬರದವನ ಪಾತ್ರ ಅವರದಾಗಿರಲಿಲ್ಲ. ನಿಜಹೇಳಬೇಕೆಂದರೆ. ಸುಮಾರು ೨೫ ಪುಟಗಳ ಸ್ಕ್ರಿಪ್ಟ್ ಅವರಿಗೆ ಬಾಯಿಪಾಠ ಮಾಡಲು ಕೊಡಲಾಗಿತ್ತು. ಬಚ್ಚನ್ ಬಹಳ ನಿಷ್ಠೆಯಿಂದ ಬೆಳಗಿನಿಂದಲೇ ಅದನ್ನು ಉರುಹೊಡೆಯುತ್ತಿದ್ದರು. ಆದರೆ ಮಧ್ಯೆ, ಅವರಿಗೆ ಗೊಂದಲವಾಗಿ ಸಾಲುಗಳು ಹಿಂದು-ಮುಂದಾಗುತ್ತಿತ್ತು. ಇದನ್ನು ಗಮನಿಸಿದ, ಚಲನ ಚಿತ್ರ ನಟಿ, ರಾಖಿಯವರು ಚಿತ್ರ ನಿರ್ಮಾಪಕ, ಸುನಿಲ್ ದತ್ ಮುಂದೆ ಇದನ್ನು ಪ್ರಸ್ತಾಪಮಾಡಿದಾಗ, ಅವರು 'ಅಮಿತಾಭ್ ಗೆ ತೊಂದರೆಕೊಡುವುದು ಬೇಡ. ಅವರ ಪಾತ್ರವನ್ನು ಮೂಕನಂತೆ ಪರಿವರ್ತಿಸೋಣ'. ಚಿತ್ರದಲ್ಲಿ ಆತನ ಕೆಲಸವೆಂದರೆ ಒಮ್ಮೆ ಪಿಸ್ತೂಲ್ ನಿಂದ ಶೂಟ್ ಮಾಡಿ ಒಂದಿಬ್ಬರನ್ನು ಕೊಲ್ಲುವುದು ಮಾತ್ರ. 'ಪಾಪ, ಮೊದಲಬಾರಿಗೆ ಕೆಲಸಮಾಡಲು ಬಂದಿದ್ದಾರೆ. ಹೋಗಲಿ ಬಿಡಿ' ಎಂದು ಹೇಳಿದರು.
೩. ಸುಮಾರು ವಾರಗಟ್ಟಲೆ ನಡೆದ ಶೂಟಿಂಗ್ ನೋಡಲು ಅಮಿತಾಭ್ ತಾಯಿ, ತೇಜಿ ಮೇಡಂ ಗೆ ಕುತೂಹಲವಾಗಿ ಅವರು ಒಮ್ಮೆ ತಾವೇ ಕಣ್ಣಾರೆ ತಮ್ಮ ಮಗನ ನಟನಾ ಕೌಶಲವನ್ನು ಕಾಣುವ ಆಸೆಯಿಂದ ದೆಹಲಿಯಿಂದ ಜೈಸಲ್ಮೇರ್ ಗೆ ಹೋದರು. ಆದರೆ ಒಂದು ಸೀನ್ ನಲ್ಲಿ ವಹೀದಾ ರೆಹಮಾನ್ ಭೋಲಾ ಗೆ ಕಪಾಲ ಮೋಕ್ಷಮಾಡುವ ಸೀನ್ ನಿರ್ವಹಿಸಬೇಕಾಗಿತ್ತು. ಇದನ್ನು ಮೊದಲೇ ಕೇಳಿ ತಿಳಿದುಕೊಂಡ ತೇಜಿಬಚ್ಚನ್ ರವರು ತಕ್ಷಣ ನಿರ್ದೇಶಕರನ್ನು ಸಂಪರ್ಕಿಸಿ, 'ಕತೆಯ ಪ್ರಕಾರ ಕೆನ್ನೆಗೆ ಬಾರಿಸುವ ಸಂದರ್ಭವಿದ್ದರೆ ಹೊಡೆಯಲಿ. ಆದರೆ ತಮ್ಮ ಮುನ್ನಾಗೆ (ಅವರು ಮಗನಿಗೆ ಮುನ್ನ ಎನ್ನುತ್ತಿದ್ದರು) ಸ್ವಲ್ಪ ಮೆತ್ತಗೆ ಹೊಡೆಯಲು' ತಮ್ಮ ಬೇಡಿಕೆ ಸಲ್ಲಿಸಿದರು.
೪. ಆಗಿನ ಸಮಯದಲ್ಲಿ ಚಿತ್ರನಿರ್ಮಾಣ ಮಾಡುವಾಗ ಹೊಡೆದಾಟ ಬಡಿದಾಟಗಳನ್ನು ಡಮ್ಮಿಗಳನ್ನು ಬಳಸದೆ, ಸ್ವತಃ ನಟರೇ ಮಾಡಲು ಇಷ್ಟ ಪಡುತ್ತಿದ್ದರು. (ಕೂಲಿ ಚಿತ್ರದಲ್ಲಿಯೂ ಹಾಗೆಯೇ)
೫. ಕಂಪ್ಯೂಟರ್ ಗ್ರಾಫಿಕ್ಸ್ ಯುಗವಾದ ಇವತ್ತು, ಎಲ್ಲಾ ಸೀನ್ ಗಳನ್ನೂ ರಾಜಾಸ್ಥಾನದ ಮರಳುಗಾಡಿನಲ್ಲಿ ಮಾಡಬೇಕಾದ ಅವಶ್ಯಕತೆ ಇಲ್ಲವೆನ್ನಿಸುತ್ತದೆ. ಆದರೆ ೭೦ ರ ದಶಕದಲ್ಲಿ ಆ ಸವಲತ್ತು ಇರಲಿಲ್ಲ. ಚಿತ್ರದ ಎಲ್ಲಾ ಕಲಾವಿದರೂ ಮತ್ತು ಕ್ಯಾಮರಾಮನ್ ಸುಡುವ ಬಿಸಿಲಿನಲ್ಲಿ ಬಹಳ ಸಮಯ ಕಷ್ಟವನ್ನು ಅನುಭವಿಸಬೇಕಾಗುತ್ತಿತ್ತು.
೬. ಉದಯೋನ್ಮುಖ ಕಲಾವಿದ ಅಮಿತಾಭ್, ವಹೀದಾ ರೆಹ್ಮಾನ್ ತರಹದ ಸೆಲೆಬ್ರಿಟಿಗಳ ಜತೆ ಪಾತ್ರ ನಿರ್ವಹಿಸಲು ಕನಸುಕಾಣುತ್ತಿದ್ದರು. (ಲೆಜೆಡ್ ದಿಲೀಪ್ ಕುಮಾರ್ ಜತೆ ಅಭಿನಯಿಸುವ ಸುಯೋಗ ಅವರಿಗೆ ಶಕ್ತಿ ಚಿತ್ರದಲ್ಲಿ ಸಿಕ್ಕಿತು) ಅದು ಯಾವ ಅಡಚಣೆಯೂ ಇಲ್ಲದೆ ಸುಲಭವಾಗಿ ದೊರೆಯಿತು. ಅಲ್ಲದೆ ಚಿತ್ರದಲ್ಲಿ ವಹೀದಾ ಜತೆ ವಿವಾಹವಾಗುವ ಸನ್ನಿವೇಶವನ್ನೂ ಅಮಿತಾಭ್ ಇಂದಿಗೂ ಸ್ಮರಿಸುತ್ತಾರೆ. ತಮ್ಮ ಪ್ರಥಮ ಚಿತ್ರದಲ್ಲೇ ಮದುವೆಯಾಗುವ ಸುಯೋಗ ಅವರಿಗೆ ಲಭಿಸಿತ್ತು.
-ಇಂಟರ್ನೆಟ್ ಮತ್ತು ಇತರ ಆಧಾರಗಳಿಂದ
-ಎಚ್ಚಾರೆಲ್